| ಭಾರತಿ ಒ.ಚಿತ್ತಯ್ಯ ಪರಶುರಾಮಪುರ (ಚಳ್ಳಕೆರೆ ತಾ.)
ರಾಜ್ಯ ಸರ್ಕಾರ ಕಳೆದ ಏಪ್ರಿಲ್ ತಿಂಗಳಲ್ಲಿ ವೇತನದಲ್ಲಿ ಮಾಡಿರುವ ತಾರತಮ್ಯ ನೀತಿಯಿಂದ ಗೃಹರಕ್ಷಕರನ್ನು ಡ್ಯೂಟಿಗೆ ನಿಯೋಜಿಸುವುದು ಗೃಹರಕ್ಷಕ ದಳದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದೆ.
ಸರ್, ನನಗೆ ಈ ತಿಂಗಳು ಪೊಲೀಸ್ ಠಾಣೆ ಡ್ಯೂಟಿಗೆ ನಿಯೋಜಿಸಿ, ಅಗ್ನಿಶಾಮಕ, ಕೆಎಸ್​ಆರ್​ಟಿಸಿ, ಪ್ರವಾಸೋದ್ಯಮ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಇತ್ಯಾದಿ ಕಡೆ ಹಾಕ್ಬೇಡಿ ಪ್ಲೀಜ್, ಸ್ಟೇಷನ್ ಡ್ಯೂಟಿಗೆ ಹಾಕದಿದ್ರೆ, ಈ ತಿಂಗಳು ಡ್ಯೂಟಿನೇ ಬೇಡ… ಮನೆಯಲ್ಲಿ ಇರುತ್ತೇನೆ ಎಂಬುದು ಗೃಹರಕ್ಷಕರ ಬೇಡಿಕೆ.
ಇದಕ್ಕೆ ಮುಖ್ಯ ಕಾರಣ, ಪೊಲೀಸ್ ಠಾಣೆ ಕರ್ತವ್ಯಕ್ಕೆ ನಿಯೋಜನೆಗೊಳ್ಳುವ ಗೃಹರಕ್ಷಕರಿಗೆ ದಿನದ ವೇತನವನ್ನು 380 ರೂ.ಗಳಿಂದ 750 ರೂ.ಗೆ ಹೆಚ್ಚಿಸಿರುವುದು. ಇದರಿಂದಾಗಿ ಗೃಹರಕ್ಷಕರು ಪೊಲೀಸ್ ಸ್ಟೇಷನ್ ಹೊರತು ಬೇರೆಡೆ ಹೋಗಲು ಮನಸ್ಸು ಮಾಡುತ್ತಿಲ್ಲ. ಠಾಣೆ ಡ್ಯೂಟಿಗೆ ನಿಯೋಜಿಸುವಂತೆ ಜನಪ್ರತಿನಿಧಿಗಳು, ಸಂಬಂಧಿಕರು, ಇತರೆ ಇಲಾಖೆ ಅಧಿಕಾರಿಗಳು ಒತ್ತಡ ಹೇರುತ್ತಿರುವುದು ಸಾಮಾನ್ಯವಾಗಿದೆ.ಇದನ್ನೂ ಓದಿ:Web Exclusive: ಡಾ.ಗಂಗೂಬಾಯಿ ಹಾನಗಲ್ ಸಂಗೀತ ವಿವಿಗಿಲ್ಲ ನಾವಿಕ; ಎರಡೂವರೆ ವರ್ಷದಿಂದಲೂ ಗ್ರಹಣ
ಪ್ರತಿ ತಿಂಗಳ ಕೊನೆಯ ದಿನ ಆಯಾ ತಾಲೂಕು, ಹೋಬಳಿ, ಜಿಲ್ಲಾ ಕೇಂದ್ರಗಳ ಗೃಹರಕ್ಷಕದ ದಳದ ಘಟಕಾಧಿಕಾರಿಗಳು, ವಾರದ ಕವಾಯತಿನಲ್ಲಿ ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿತರಾಗುವವರ ಪಟ್ಟಿಯನ್ನು ಜಿಲ್ಲಾ ಸಮಾದೇಷ್ಠರಿಗೆ ಕೊಡುತ್ತಾರೆ. ಜಿಲ್ಲಾ ಕಚೇರಿ ಪ್ರತಿ ತಿಂಗಳ ಕರ್ತವ್ಯದ ದಾಖಲೆಗಳನ್ನು ಪರಿಶೀಲಿಸಿ ಸರದಿ ಪ್ರಕಾರ ತಿಂಗಳ ಕರ್ತವ್ಯಕ್ಕೆ ನಿಯೋಜಿಸುತ್ತದೆ.
ಸರ್ಕಾರದ ನಿರ್ದೇಶನದಂತೆ ಗೃಹರಕ್ಷಕ ದಳದ ಘಟಕ-ಉಪ ಘಟಕಗಳ ಘಟಕಾಧಿಕಾರಿಗಳ ಮೂಲಕ ಅವರವರ ಸಂಖ್ಯೆಗನುಗುಣವಾಗಿ ಪ್ರತಿ ತಿಂಗಳ ಕರ್ತವ್ಯಕ್ಕೆ ಗೃಹರಕ್ಷಕರನ್ನು ನಿಯೋಜಿಸಲಾಗುತ್ತಿದೆ. ಪೊಲೀಸ್ ಇಲಾಖೆಯಲ್ಲಿ ಮಾತ್ರ ದಿನವೊಂದಕ್ಕೆ 750 ರೂ., ಇತರೆ ಇಲಾಖೆಗಳಲ್ಲಿನ 380 ರೂ. ಕರ್ತವ್ಯ ಭತ್ಯೆ ನೀಡಲಾಗುತ್ತಿದೆ. ವೇತನ ಪರಿಗಣಿಸದೇ ಜಿಲ್ಲೆಯ ಗೃಹರಕ್ಷಕರು ಬಂದೋಬಸ್ತ್ ಕರ್ತವ್ಯ ನಿರ್ವಹಿಸಲೇಬೇಕು.
| ಸಿ.ಕೆ.ಸಂಧ್ಯಾಜಿಲ್ಲಾ ಸಮಾದೇಷ್ಠೆಚಿತ್ರದುರ್ಗ
ವೇತನದಲ್ಲಿ ಇರುವ ವ್ಯತ್ಯಾಸವನ್ನು ಸರ್ಕಾರ ಸರಿಪಡಿಸಿದರೆ, ಪೊಲೀಸ್ ಠಾಣೆ ಡ್ಯೂಟಿಗೆ ಬೇಡಿಕೆ ತಗ್ಗಲಿದೆ, ಸದ್ಯಕ್ಕೆ ಪ್ರತಿಯೊಬ್ಬರಿಗೂ ಠಾಣೆ ಕರ್ತವ್ಯ ದೊರೆಯುವಂತೆ ಪಾಳಿ ಪದ್ಧತಿ ಅನುಸರಿಸಲಾಗುತ್ತಿದೆ.
| ಜಿ.ಎಂ.ಲೋಕೇಶಜಿಲ್ಲಾ ಬೋಧಕ, ಗೃಹರಕ್ಷಕ ದಳ
ವೇತನ ತಾರತಮ್ಯ ನಿವಾರಿಸುವ ಮೂಲಕ ಗೊಂದಲಕ್ಕೆ ತೆರೆ ಎಳೆಯಬೇಕೆಂದು ಘಟಕಾಧಿಕಾರಿಗಳಾದ ಒ.ಚಿತ್ತಯ್ಯ, ಜಗನ್ನಾಥ, ಮಂಜುನಾಥ, ತಿಪ್ಪೇಸ್ವಾಮಿ ಹಾಗೂ ವಿವಿಧ ಘಟಕ-ಉಪ ಘಟಕಗಳ ಗೃಹರಕ್ಷಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
Web Exclusive: 21ರಿಂದ ಕಿಚ್ಚುಗುತ್ತಿ ಮಾರಮ್ಮನ ದರ್ಶನ; ವಿಷ ಪ್ರಸಾದ ಕೇಸ್​​ನಿಂದ ಬಂದ್ ಆಗಿದ್ದ ದೇಗುಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen + sixteen =
Remember me
