|ಕಿರಣ್ ಮಾದರಹಳ್ಳಿಚಾಮರಾಜನಗರಕರೊನಾ ಹಾವಳಿಯಿಂದ ಬಾಗಿಲು ಮುಚ್ಚಿದ್ದ ಶಾಲೆ, ಕಾಲೇಜುಗಳಲ್ಲಿ ಹಂತ ಹಂತವಾಗಿ ಶೈಕ್ಷಣಿಕ ಚಟುವಟಿಕೆಗಳು ಶುರುವಾಗಿವೆ. ಆದರೆ ಅನಕ್ಷರಸ್ಥರ ಎದೆಗೆ ಅಕ್ಷರ ಬಿತ್ತುವ ವಯಸ್ಕರ ಶಿಕ್ಷಣ ಮಾತ್ರ ಇನ್ನೂ ಆರಂಭವಾಗಿಲ್ಲ. ಜಿಲ್ಲಾ ವಯಸ್ಕ ಶಿಕ್ಷಣ ಇಲಾಖೆಯು ಡಾ.ಡಿ.ಎಂ.ನಂಜುಂಡಪ್ಪ ವರದಿಯನ್ವಯ ಹಿಂದುಳಿದ ತಾಲೂಕುಗಳಲ್ಲಿ ಅನಕ್ಷರಸ್ಥರ ಸಾಕ್ಷರತಾ ಕಾರ್ಯಕ್ರಮದಡಿ ಸಾಕ್ಷರ ಗ್ರಾಮಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿತ್ತು. 2011ರ ಗಣತಿ ಪ್ರಕಾರ (ಮತ್ತೆ ಗಣತಿ ನಡೆದಿಲ್ಲ) ಗ್ರಾಮೀಣ ಮತ್ತು ನಗರದಲ್ಲಿ ಒಟ್ಟು 5,65,279 ಅನಕ್ಷರಸ್ಥರಿದ್ದು, 2018-19ನೇ ಸಾಲಿನಲ್ಲಿ ಗ್ರಾಮೀಣ ಪ್ರದೇಶದಲ್ಲಿ 9,237 ಅನಕ್ಷರಸ್ಥರು ಮತ್ತು ಸ್ತ್ರೀಶಕ್ತಿ ಗುಂಪಿನ 8,288 ಮಹಿಳೆಯರು, ನಗರ ಮತ್ತು ಪಟ್ಟಣ ಪ್ರದೇಶದ 7,240 ಅನಕ್ಷರಸ್ಥರನ್ನು ಕಲಿಕೆಗೆ ಒಳಪಡಿಸಲಾಗಿತ್ತು.
ನಂತರದ ದಿನಗಳಲ್ಲಿ ವಕ್ಕರಿಸಿದ ಕರೊನಾ ವೈರಸ್ ಶಿಕ್ಷಣ ಕ್ಷೇತ್ರವನ್ನೇ ತಬ್ಬಿಬ್ಬುಗೊಳಿಸಿತು. ಲಾಕ್​ಡೌನ್ ಜಾರಿಯಾಗಿ ಶಾಲಾ-ಕಾಲೇಜುಗಳು ಬಂದ್ ಆಗಿ ವಿದ್ಯಾರ್ಥಿಗಳು ಪಾಠ-ಪ್ರವಚನದಿಂದ ವಂಚಿತರಾದರು. ಬಳಿಕ ಆನ್​ಲೈನ್, ಯೂಟ್ಯೂಬ್, ದೂರದರ್ಶನ, ವಿದ್ಯಾಗಮ ಯೋಜನೆ ಜಾರಿಗೆ ಬಂದವು. ಇತ್ತೀಚೆಗೆ ಶೈಕ್ಷಣಿಕ ಚಟುವಟಿಕೆ ತೆರೆದುಕೊಂಡಿದೆ. ಆದರೆ, ಅನಕ್ಷರಸ್ಥರನ್ನು ಸಾಕ್ಷರರನ್ನಾಗಿಸುವ ಕಾರ್ಯಕ್ರಮ ಮಾತ್ರ ಕರೊನಾ ಭಯದಿಂದ ಹೊರಬಂದಿಲ್ಲ ಎನ್ನುವಂತೆ ಕಾಣುತ್ತಿದೆ.
ವಿದ್ಯಾಗಮದಂತೆಯೇ ಇತ್ತು ಸಾಕ್ಷರತಾ ಕಾರ್ಯಕ್ರಮ: ಸಾಕ್ಷರ ಜ್ಯೋತಿ ಬೆಳಗಿಸಿ ಅನಕ್ಷರತೆಯ ಅಂಧಕಾರ ಅಳಿಸಲು ಜಾರಿಯಲ್ಲಿದ್ದ ಕಾರ್ಯಕ್ರಮವೂ ಕರೊನಾ ಹಾವಳಿ ನಡುವೆ ಶಾಲಾ ವಿದ್ಯಾರ್ಥಿಗಳಿಗಾಗಿ ಗ್ರಾಮಗಳಲ್ಲಿ ನಡೆಸುತ್ತಿರುವ ವಿದ್ಯಾಗಮ ಪಾಠ- ಪ್ರವಚನವೂ ಒಂದೇ ರೀತಿ ಇದೆ. ಹಳ್ಳಿಗಳಿಗೆ ಆಗಮಿಸುತ್ತಿದ್ದ ಶಿಕ್ಷಕರು ನಿರ್ದಿಷ್ಟ ಮಕ್ಕಳನ್ನು ದೇವಸ್ಥಾನ ಆವರಣ, ಜಗುಲಿ ಕಟ್ಟೆಗಳ ಮೇಲೆ ಕೂರಿಸಿಕೊಂಡು ಪಾಠ ಮಾಡುತ್ತಿದ್ದರು. ಅದೇ ರೀತಿಯಲ್ಲೇ ಅನಕ್ಷರಸ್ಥರಿಗೂ ಅಕ್ಷರ ಕಲಿಸುವ ಕೆಲಸ ನಡೆದಿತ್ತು. 2011ರಲ್ಲಿ ನಡೆದಿದ್ದ ಗಣತಿ ಪ್ರಕಾರ ಚಾಮರಾಜನಗರ ತಾಲೂಕಿನಲ್ಲಿ 1,93,335, ಗುಂಡ್ಲುಪೇಟೆಯಲ್ಲಿ 1,21,881, ಕೊಳ್ಳೇಗಾಲದಲ್ಲಿ 2,04,318, ಯಳಂದೂರಿನಲ್ಲಿ 45,745 ಸೇರಿ ಒಟ್ಟು 5,65,279 ಅನಕ್ಷರಸ್ಥರನ್ನು ಜಿಲ್ಲೆಯಲ್ಲಿ ಗುರುತಿಸಲಾಗಿತ್ತು.
ಪ್ರತಿ ಗ್ರಾಮಗಳಲ್ಲಿರುವ ಅನಕ್ಷರಸ್ಥರ ಸಂಖ್ಯೆ ಆಧರಿಸಿ 10 ಜನರಿಗೆ ಒಬ್ಬ ಬೋಧಕನನ್ನು ನೇಮಿಸಲಾಗಿತ್ತು. ಇವರು ಹಳ್ಳಿಗಳ ಅನಕ್ಷರಸ್ಥರನ್ನು ಒಂದೆಡೆ ಸೇರಿಸಿ ಅವರನ್ನು ಕಲಿಕೆಗೆ ಹಚ್ಚುತ್ತಿದ್ದರು. ವಯಸ್ಕರ ಶಿಕ್ಷಣ ಇಲಾಖೆ ಸಿದ್ಧಪಡಿಸಿದ್ದ ಬಾಳಿಗೆ ಬೆಳಕು ಎನ್ನುವ ಪಠ್ಯ ಪುಸ್ತಕದ ಮೂಲಕ ಅನಕ್ಷರಸ್ಥರಿಗೆ ಕನಿಷ್ಠ ಓದು, ಬರಹ ಕಲಿಸಲಾಗುತ್ತಿತ್ತು. ಕರೊನಾ ಹಾವಳಿ ಇಟ್ಟ ಕಾರಣಕ್ಕೆ ಅನಕ್ಷರಸ್ಥರ ಸಾಕ್ಷಾರತಾ ಕಾರ್ಯಕ್ರಮ ಸ್ಥಗಿತಗೊಂಡಿದೆ. ರಾಜ್ಯ ಸರ್ಕಾರ ಪ್ರಸ್ತುತ ಈ ಯೋಜನೆಯನ್ನು ಎಲ್ಲ ಜಿಲ್ಲೆಗಳಲ್ಲೂ ಪುನರಾರಂಭಿಸಿದರೆ ಗ್ರಾಮಗಳಲ್ಲಿ ಸಾಕ್ಷರತೆ ಪ್ರಗತಿಯಾಗಿ ಸುಸ್ಥಿರ ಸಮಾಜ ನಿರ್ವಣವಾಗಲಿದೆ. ಶೇ.61.43ರಷ್ಟು (2011ರ ಗಣತಿ ಪ್ರಕಾರ) ಮಾತ್ರ ಸಾಕ್ಷರತೆ ಪ್ರಮಾಣವನ್ನು ಹೊಂದಿರುವ ಗಡಿನಾಡು ಚಾಮರಾಜನಗರ ಸಾಕ್ಷರತಾ ನಾಡು ಆಗಲಿದೆ.
ಜಿಲ್ಲೆಯ ಸಾಕ್ಷರತಾ ಪ್ರಮಾಣ ಹೆಚ್ಚಿಸುವ ಸಲುವಾಗಿ ಅಕ್ಷರೋತ್ಸವ ಎಂಬ ವಿನೂತನ ಯೋಜನೆಯನ್ನು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ರೂಪಿಸಿದ್ದಾರೆ. ಈ ಯೋಜನೆ ಶಾಲೆಯ ಮೆಟ್ಟಿಲು ಹತ್ತದವರಿಗೆ ಮತ್ತು ಕಾಡಂಚಿನ ಗ್ರಾಮಗಳಲ್ಲಿರುವ ಅನಕ್ಷರಸ್ಥರಿಗೆ ಓದಲು ಮತ್ತು ಬರೆಯಲು ಕಲಿಸುವುದಾಗಿದೆ. ಜಿಲ್ಲೆಯಲ್ಲಿ ಅಕ್ಷರೋತ್ಸವ ಜಾರಿಗೊಳಿಸಲು ಸರ್ಕಾರದ ಹಂತದಲ್ಲಿ ಪ್ರಕ್ರಿಯೆಗಳು ನಡೆದಿದ್ದು, ಶೀಘ್ರದಲ್ಲೇ ಅನಕ್ಷರಸ್ಥರು ಅಕ್ಷರೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೋವಿಡ್​ನಿಂದಾಗಿ ಸ್ಥಗಿತಗೊಂಡಿದ್ದ ಅನಕ್ಷರಸ್ಥರ ಓದು, ಬರಹ ಕಲಿಕಾ ಪ್ರಕ್ರಿಯೆಯನ್ನು ಮತ್ತೆ ಶುರು ಮಾಡುವ ಸಂಬಂಧ ಜ.11ರಂದು ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗಿದೆ. ಸದ್ಯದಲ್ಲೇ ಸಾಕ್ಷರತಾ ಕಾರ್ಯಕ್ರಮವನ್ನು ಪುನರಾರಂಭಿಸಲು ಮಾರ್ಗಸೂಚಿ ಬರಲಿದೆ.|ಚಂದ್ರಶೇಖರ್ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ, ಚಾಮರಾಜನಗರ.
ಇದೇನಾದರೂ ಜಾರಿ ಆಯ್ತು ಅಂದ್ರೆ ನೀವು ಟ್ರಾಫಿಕ್​ ರೂಲ್ಸ್ ಬ್ರೇಕ್​ ಮಾಡೋಕೂ ಯೋಚ್ನೆ ಮಾಡ್ತೀರಿ!

ಗಂಡ ಅವನಲ್ಲ, ಅವಳು!: ಗಂಡಸೆಂದು ಬಿಂಬಿಸಿಕೊಂಡು ವಿಧವೆಯನ್ನು ಮದ್ವೆಯಾದ್ಲು; ಆಮೇಲೆ ನಡೆದಿದ್ದೇ ಬೇರೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + 4 =
Remember me
