|ಮಂಜುನಾಥ ಕೋಳಿಗುಡ್ಡ ಬೆಳಗಾವಿ
ಅತಿವೃಷ್ಟಿ, ಕೋವಿಡ್-19ನಿಂದಾಗಿ ಕೃಷಿ ಕ್ಷೇತ್ರ, ಸಕ್ಕರೆ ಉದ್ಯಮ ನಲುಗಿರುವ ಬೆನ್ನಲ್ಲೇ, ಇದೀಗ ಕರೊನಾ ಕಾರಣದಿಂದಾಗಿ ಕಬ್ಬು ಕಟಾವಿಗೆ ಮಹಾರಾಷ್ಟ್ರದಿಂದ ‘ಕಾರ್ವಿುಕರ ಗ್ಯಾಂಗ್’ ಬರಲು ಹಿಂದೇಟು ಹಾಕುತ್ತಿವೆ.
ಈ ಬಾರಿ ಉತ್ತಮ ಮಳೆಯಿಂದಾಗಿ ರೈತರು ಸಮೃದ್ಧವಾಗಿ ಕಬ್ಬು ಬೆಳೆದಿದ್ದಾರೆ. ಆದರೆ, ಮಹಾರಾಷ್ಟ್ರದಲ್ಲಿ ಅತಿಯಾಗಿ ಹಬ್ಬಿರುವ ಕರೊನಾ ವೈರಸ್​ನಿಂದಾಗಿ ಕಾರ್ವಿುಕರು ಕಬ್ಬು ಕಟಾವು ಮಾಡಲು ಇಲ್ಲಿಗೆ ಬರುತ್ತಿಲ್ಲ. ಹೀಗಾಗಿ ಕಟಾವು ವಿಳಂಬವಾಗಿ ಬೆಳೆ ಹಾಳಾಗುವ ಆತಂಕ ಕಬ್ಬು ಬೆಳೆಗಾರರನ್ನು ಕಾಡುತ್ತಿದೆ.ಇದನ್ನೂ ಓದಿ:Web Exclusive: ಬಂಜರು ಭೂಮಿಗೆ ನ್ಯಾಯ ನೀಡಿದ ವಕೀಲ; ಬಂಗಾರದ ಬೆಳೆ ತೆಗೆದ ಸಾಧಕ
ಸ್ಥಳೀಯವಾಗಿ ಕಾರ್ವಿುಕರ ಕೊರತೆ:ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ವ್ಯಾಪ್ತಿಯಲ್ಲಿ 4.36 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕುಳೆ ಕಬ್ಬು, ಹೊಸ ಕಬ್ಬು ತಳಿ ಬೆಳೆಯಲಾಗಿದೆ. ಅಲ್ಲದೆ, ಈ ಜಿಲ್ಲೆಗಳ ವ್ಯಾಪ್ತಿಯ 32 ಸಕ್ಕರೆ ಕಾರ್ಖಾನೆಗಳು ಅಕ್ಟೋಬರ್ ತಿಂಗಳಿನಲ್ಲಿ ಕಬ್ಬು ಕಟಾವು ಹಂಗಾಮು ಆರಂಭಿಸುತ್ತವೆ. ಸ್ಥಳೀಯವಾಗಿ ಕಬ್ಬು ಕಡಿಯಲು ಕಾರ್ವಿುಕರ ಅಭಾವ ಮತ್ತು ಕಬ್ಬು ಕಟಾವು ಯಂತ್ರಗಳ ಕೊರತೆ ಇರುವ ಕಾರಣದಿಂದ ಪ್ರತಿವರ್ಷವೂ ಕಬ್ಬು ಕಡಿಯಲು ಮಹಾರಾಷ್ಟ್ರದ ‘ಕಾರ್ವಿುಕರ ಗ್ಯಾಂಗ್’ ಕರೆಸುತ್ತಾರೆ.
ಇವರಿಗೆಲ್ಲ ಸಕ್ಕರೆ ಕಾರ್ಖಾನೆಗಳು, ಕಬ್ಬು ಸಾಗಿಸುವ ಟ್ರ್ಯಾಕ್ಟರ್​ಗಳ ಮಾಲೀಕರು ಮುಂಗಡವಾಗಿ ಹಣ ಕೊಟ್ಟು ಕರೆಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್-19 ಕಾರಣದಿಂದಾಗಿ ‘ಮಹಾ ಗ್ಯಾಂಗ್’ಗೆ ಬುಕ್ ಮಾಡಲು ಹೆದರುವಂತಾಗಿದೆ. ಕೆಲವು ಕಾರ್ಖಾನೆಗಳು ಬುಕ್ ಮಾಡಿವೆ. ಅದರೆ, ಗ್ಯಾಂಗ್​ಗಳು ಬಂದಿಲ್ಲ. ಹಾಗಾಗಿ ಕಬ್ಬು ಬೆಳೆಗಾರರು ಇನ್ನಷ್ಟು ಆತಂಕಕ್ಕೊಳಗಾಗಿದ್ದಾರೆ.ಇದನ್ನೂ ಓದಿ:Web Exclusive| ಜನಹೃದಯದಲ್ಲಿ ನೆಲೆಗೊಂಡ ವಿಶಿಷ್ಟ ವ್ಯಕ್ತಿತ್ವ: ಸಾಹಿತಿ ಗೊ.ರು.ಚನ್ನಬಸಪ್ಪ ವಿಶೇಷ ಲೇಖನ
ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿವರ್ಷ ಕಬ್ಬು ಕಡಿಯಲು ಮಹಾರಾಷ್ಟ್ರ ಸೇರಿದಂತೆ ವಿವಿಧ ಭಾಗಗಳಿಂದ 2 ಲಕ್ಷದಷ್ಟು ಕಾರ್ವಿುಕರು ಬರುತ್ತಾರೆ. ಇವರಿಗಾಗಿ ಸುಮಾರು 500 ಕೋಟಿ ರೂ. ಖರ್ಚು ಮಾಡಲಾಗುತ್ತದೆ. ‘ಮಹಾ ಗ್ಯಾಂಗ್’ ಬುಕ್ ಮಾಡುವ ಕೆಲಸ ಶುರುವಾಗಿದೆ. ಆದರೆ, ಅಕ್ಟೋಬರ್​ನಲ್ಲಿ ಕೋವಿಡ್-19 ಸ್ಥಿತಿ ಹೇಗಿರುತ್ತದೋ ಏನೋ ತಿಳಿಯದಾಗಿದೆ ಎನ್ನುತ್ತಾರೆ ರೈತ ಸಂಘಟನೆ ಮುಖಂಡರಾದ ಚೂನಪ್ಪ ಪೂಜೇರಿ, ರಾಘವೇಂದ್ರ ನಾಯಕ್.
ಒಂದು ಗ್ಯಾಂಗ್​ಗೆ 8 ಲಕ್ಷ ರೂ..!
ಮಹಾರಾಷ್ಟ್ರದಿಂದ ಕಬ್ಬು ಕಡಿಯಲು ಬರುವ ಇಬ್ಬರು ವ್ಯಕ್ತಿಗಳ ಜೋಡಿಗೆ 1.5 ಲಕ್ಷ ರೂ. ವರೆಗೆ ಕೂಲಿ ನೀಡಬೇಕಾಗುತ್ತದೆ. ಇಂತಹ 12 ಅಥವಾ 15 ಜನರಿರುವ ಒಂದು ಗ್ಯಾಂಗ್​ಗೆ 10 ಲಕ್ಷ ರೂ. ಪಾವತಿಸಲಾಗುತ್ತದೆ. ಒಬ್ಬ ಕಾರ್ವಿುಕ ದಿನಕ್ಕೆ ಒಂದರಿಂದ ಎರಡು ಟನ್ ಕಬ್ಬು ಕಡಿಯುತ್ತಾನೆ. ಹಾಗಾಗಿ ಈ ಗ್ಯಾಂಗ್​ಗಳಿಗೆ ಕರ್ನಾಟಕದಲ್ಲಿ ಭಾರಿ ಬೇಡಿಕೆಯಿಂದೆ. ಪ್ರತಿವರ್ಷ ಸಕ್ಕರೆ ಕಾರ್ಖಾನೆಗಳು ಮತ್ತು ಟ್ರ್ಯಾಕ್ಟರ್ ಮಾಲೀಕರು ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲೇ ಮುಂಗಡವಾಗಿ ಅರ್ಧ ಹಣ ನೀಡಿ ಕಾರ್ವಿುಕರನ್ನು ಬುಕ್ ಮಾಡಿಕೊಳ್ಳುತ್ತಾರೆ. ಈ ವರ್ಷ ಕೋವಿಡ್-19 ಹಿನ್ನೆಲೆಯಲ್ಲಿ ಮಹಾ ಕಾರ್ವಿುಕರನ್ನು ನಾವು ಬುಕ್ ಮಾಡಿಲ್ಲ. ಕೆಲ ಸಕ್ಕರೆ ಕಾರ್ಖಾನೆಗಳು ಗ್ಯಾಂಗ್​ಗಳನ್ನು ಬುಕ್ ಮಾಡಿವೆ. ಈ ವರ್ಷ ಕಾರ್ವಿುಕರು ಬಾರದಿದ್ದರೆ ತೀವ್ರ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ ಎನ್ನುತ್ತಾರೆ ಮೂಡಲಗಿ ತಾಲೂಕಿನ ಕಬ್ಬು ಬೆಳೆಗಾರರಾದ ನಿಂಗಪ್ಪ ಪಾಟೀಲ, ಸುರೇಶ ಎಸ್. ನಾಯಕ್.ಇದನ್ನೂ ಓದಿ:Web Exclusive: 48 ಲಕ್ಷ ವಾಹನಗಳು ಗುಜರಿಗೆ; 15 ವರ್ಷಕ್ಕಿಂತ ಹಳೆಯ ವಾಹನಗಳೆಲ್ಲ ಸ್ಕ್ರ್ಯಾಪ್​
ಕೋವಿಡ್-19 ಹಿನ್ನೆಲೆಯಲ್ಲಿ ಕಬ್ಬು ಕಟಾವಿಗೆ ಕಾರ್ವಿುಕರ ಸಮಸ್ಯೆ ಉಂಟಾಗದಂತೆ ಮುಜಾಗ್ರತಾ ಕ್ರಮವಾಗಿ ಕಬ್ಬು ಕಟಾವು ಯಂತ್ರಗಳನ್ನು ಹೆಚ್ಚು ಬಳಕೆ ಮಾಡುವ ಕುರಿತು ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ರ್ಚಚಿಸಲಾಗಿದೆ. ಈ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಜಿಲ್ಲಾಡಳಿತದಿಂದ ಕ್ರಮ ವಹಿಸಲಾಗುವುದು.
| ಎಂ.ಜಿ. ಹಿರೇಮಠಜಿಲ್ಲಾಧಿಕಾರಿ, ಬೆಳಗಾವಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × one =
Remember me
