| ದೇವರಾಜ್ ಎಲ್. ಬೆಂಗಳೂರು
ಕರೊನಾ ಛಾಯೆಯಿಂದ ಶೈಕ್ಷಣಿಕ ವರ್ಷವೇ ತಲೆಕೆಳಗಾಗಿರುವುದರಿಂದ ಈ ವರ್ಷ ಹೊಸದಾಗಿ ಪಿಯು ಕಾಲೇಜು ಆರಂಭಿಸಲು ಅತಿ ಕಡಿಮೆ ಅರ್ಜಿಗಳು ಸಲ್ಲಿಕೆಯಾಗಿವೆ.
2020-21ನೇ ಸಾಲಿಗೆ ಪಿಯು ಕಾಲೇಜು ಪ್ರಾರಂಭಿಸಲು ಕೇವಲ 122 ಅರ್ಜಿಗಳು ಬಂದಿವೆ. ಪ್ರತಿ ವರ್ಷ ಅರ್ಜಿಗಳ ಸಂಖ್ಯೆ 400ಕ್ಕೂ ಹೆಚ್ಚು ಇರುತ್ತಿತ್ತು. ಈ ವರ್ಷ ಕರೊನಾ ಸಂಕಷ್ಟ ಎದುರಾಗಿದ್ದು, ಭೌತಿಕವಾಗಿ ಕಾಲೇಜುಗಳ ಆರಂಭವಾಗುವುದರ ಬಗ್ಗೆ ಯಾವುದೇ ಖಚಿತತೆ ಇಲ್ಲದಿರುವುದರಿಂದ ಹೊಸದಾಗಿ ಕಾಲೇಜು ಆರಂಭಿಸಲು ಶಿಕ್ಷಣ ಉದ್ಯಮಿಗಳು ಹಿಂದೇಟು ಹಾಕಿದ್ದಾರೆ.
2019ರಲ್ಲಿ 425, 2018ರಲ್ಲಿ 360 ಅರ್ಜಿಗಳು ಸಲ್ಲಿಕೆಯಾಗಿದ್ದವು. ಈ ವರ್ಷ ಅರ್ಧದಷ್ಟು ಅರ್ಜಿಗಳೂ ಇಲ್ಲ. ಇದರಿಂದ ಪದವಿ ಪೂರ್ವ ಶಿಕ್ಷಣ ಇಲಾಖೆಗೆ ಆರ್ಥಿಕ ನಷ್ಟ ಕೂಡ ಉಂಟಾಗಲಿದೆ. ಇಲಾಖೆಗೆ ಕಾಲೇಜುಗಳ ಮಾನ್ಯತೆ ನವೀಕರಣ ಮತ್ತು ಹೊಸ ಕಾಲೇಜುಗಳಿಗೆ ಮಾನ್ಯತೆಗೆ ಅನುಮತಿ ನೀಡುವುದರಲ್ಲಿ ಹೆಚ್ಚಿನ ಹಣ ಬರುತ್ತಿತ್ತು. ಆದರೆ, ಈ ವರ್ಷ ಅರ್ಜಿಗಳ ಸಂಖ್ಯೆಯೇ ಕಡಿಮೆ ಇದ್ದು, ಇವುಗಳ ದಾಖಲೆಗಳನ್ನು ಪರಿಶೀಲಿಸಿ ಮಾನ್ಯತೆಗೆ ಅಂಗೀಕಾರ ಮಾಡುವ ವೇಳೆ ಅಂಕಿಗಳಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ. ಇದರಿಂದ ಹೆಚ್ಚಿನ ಆದಾಯ ಸಿಗುವುದಿಲ್ಲ.
ಕಡಿಮೆ ಏಕೆ?:ಪ್ರತಿ ವರ್ಷದಂತೆ ಈ ವರ್ಷ ಕೂಡ ಜೂನ್​ನಲ್ಲಿ ಕಾಲೇಜು ಆರಂಭವಾಗಿದ್ದರೆ, ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗುತ್ತಿದ್ದವು. ಕಾಲೇಜುಗಳ ಸಂಖ್ಯೆಯೂ ಹೆಚ್ಚುತ್ತಿತ್ತು. ಆದರೆ, ಫೆಬ್ರವರಿಯ ಅವಧಿಯಲ್ಲೇ ರಾಜ್ಯದಲ್ಲಿ ಕರೊನಾ ಕಾಣಿಸಿಕೊಂಡಿದ್ದು, ಈವರೆಗೆ ಭೌತಿಕವಾಗಿ ಕಾಲೇಜುಗಳನ್ನು ಆರಂಭಿಸಲು ಸಾಧ್ಯವಾಗಿಲ್ಲ. ವಿದ್ಯಾರ್ಥಿಗಳು ಕಲಿಕೆಯಲ್ಲಿ ಹಿಂದುಳಿಯಬಾರದು ಎಂಬ ಕಾರಣಕ್ಕೆ ಆನ್​ಲೈನ್​ನಲ್ಲಿ ತರಗತಿಗಳನ್ನು ನಡೆಸುತ್ತಿದ್ದರೂ ಪ್ರತಿ ವರ್ಷ ಸಂಗ್ರಹವಾಗುತ್ತಿದ್ದ ಶುಲ್ಕ ಈ ವರ್ಷ ಸಂಗ್ರಹವಾಗಿಲ್ಲ.ಇದನ್ನೂ ಓದಿ:Web Exclusive: 21ರಿಂದ ಕಿಚ್ಚುಗುತ್ತಿ ಮಾರಮ್ಮನ ದರ್ಶನ; ವಿಷ ಪ್ರಸಾದ ಕೇಸ್​​ನಿಂದ ಬಂದ್ ಆಗಿದ್ದ ದೇಗುಲ
ಪರಿಸ್ಥಿತಿ ಈ ರೀತಿ ಇರುವಾಗ ದೊರೆಯುವ ಅತ್ಯಲ್ಪ ಶೈಕ್ಷಣಿಕ ಅವಧಿಗೆ ಸಂಪೂರ್ಣ ವರ್ಷದ ಮಾನ್ಯತೆ ಶುಲ್ಕ ಪಾವತಿಸುವುದು ಏಕೆ? ಹಾಗೂ ಆರಂಭಿಸಿದರೂ ನಿರೀಕ್ಷಿತ ಮಟ್ಟದಲ್ಲಿ ಪ್ರವೇಶ ಪಡೆಯುವುದು ಕಷ್ಟವಾಗಿರುವುದರಿಂದ ಆರಂಭಿಸದೇ ಇರುವುದೇ ಸೂಕ್ತ ಎಂದು ಶಿಕ್ಷಣ ಉದ್ಯಮಿಗಳು ನಿರ್ಧರಿಸಿದ್ದಾರೆ.
ಪದವಿ ಪೂರ್ವ ಶಿಕ್ಷಣ ಇಲಾಖೆಯು ಹೊಸ ಕಾಲೇಜು ಆರಂಭಕ್ಕೆ ಅರ್ಜಿ ಆಹ್ವಾನಿಸಿದ್ದೇ ಆಗಸ್ಟ್​ನಲ್ಲಿ. ಪ್ರತಿ ವರ್ಷ ಜನವರಿಯಲ್ಲೇ ಈ ಪ್ರಕ್ರಿಯೆ ಆರಂಭಿಸುತ್ತಿತ್ತು. ಅರ್ಜಿ ಸಂಖ್ಯೆ ಕ್ಷೀಣಕ್ಕೆ ಇದು ಸಹ ಕಾರಣವಾಗಿದೆ.
ಹೆಚ್ಚು-ಕಮ್ಮಿ:ರಾಜ್ಯದಲ್ಲಿ ಅತಿ ಹೆಚ್ಚು ಅರ್ಜಿಗಳು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿದರೆ, ಅತಿ ಕಡಿಮೆ ಸಾಲಿನಲ್ಲಿ ಬೆಳಗಾವಿ, ಮೈಸೂರು, ಉಡುಪಿ, ಶಿವಮೊಗ್ಗ(ತಲಾ ಒಂದು ಅರ್ಜಿ) ಜಿಲ್ಲೆಗಳಿವೆ. ಬೆಂ.ದಕ್ಷಿಣ-10, ವಿಜಯಪುರ-9, ಬೆಂ.ಉತ್ತರ-8, ಬಾಗಲಕೋಟೆ-7, ಬೀದರ್-6 ಅರ್ಜಿಗಳು ಬಂದಿದ್ದು, ಅತಿ ಹೆಚ್ಚು ಅರ್ಜಿ ಬಂದಿರುವ ಟಾಪ್ 5 ಜಿಲ್ಲೆಗಳಾಗಿವೆ.ಇದನ್ನೂ ಓದಿ:Web Exclusive|’ಕಣ್ಣೀರುಳ್ಳಿ’- ಅನ್ನದಾತ ಕಂಗಾಲು, ಗ್ರಾಹಕನಿಗೂ ಸಂಕಷ್ಟ
2017-18ನೇ ಸಾಲಿನಲ್ಲಿ 1,230 ಸರ್ಕಾರಿ ಪಿಯು ಕಾಲೇಜುಗಳಿದ್ದು, ಇದು 2018-19ನೇ ಸಾಲಿಗೆ 1,232ಕ್ಕೆ ಏರಿಕೆಯಾಗಿದೆ. ಆದರೆ, ಖಾಸಗಿ ಕಾಲೇಜುಗಳು ವೇಗಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದ್ದು, 2010-11ರಲ್ಲಿ 1,737 ಇದ್ದ ಪಿಯು ಕಾಲೇಜುಗಳು 2018-19ನೇ ಸಾಲಿಗೆ 3,194 ಕಾಲೇಜುಗಳಿಗೆ ಏರಿಕೆಯಾಗಿದೆ.
2020-21ನೇ ಸಾಲಿಗೆ ಹೊಸ ಶಾಲೆ ಆರಂಭಿಸಲು 220 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ವರ್ಷ 467 ಅರ್ಜಿಗಳು ಬಂದಿದ್ದವು. ಇಲ್ಲಿ ಕೂಡ ಅರ್ಜಿಗಳ ಸಂಖ್ಯೆ ಅರ್ಧಕ್ಕೆ ಇಳಿಕೆಯಾಗಿದೆ. ಈ ಬಾರಿ ಶಾಲೆಗಳ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಹೊಸ ಶಾಲೆ ಆರಂಭಕ್ಕೆ ಅನುಮತಿ ನೀಡುವುದಕ್ಕೆ ಶಿಕ್ಷಣ ಇಲಾಖೆ ಸದ್ಯ ತಡೆ ನೀಡಿದೆ.
Web Exclusive: ಠಾಣೆ ಡ್ಯೂಟಿಗೆ ಗೃಹರಕ್ಷಕರ ಪೈಪೋಟಿ; ಅಧಿಕಾರಿಗಳಿಗೆ ನಿಯೋಜನೆ ತಲೆನೋವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
