| ಪ್ರಕಾಶ್ ಮಂಜೇಶ್ವರ, ಮಂಗಳೂರು
ದಕ್ಷಿಣ ಕನ್ನಡದಲ್ಲಿ ಕೊರಗ ಸಮುದಾಯ ಹಾಗೂ ಮೈಸೂರಿನ ಚಾಮರಾಜನಗರದಲ್ಲಿ ಸೋಲಿಗರ ಸಮುದಾಯದ ಜನರಲ್ಲಿ ಅಪೌಷ್ಟಿಕತೆಯಿಂದ ಮರಣ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅಪಾಯದಿಂದ ಈ ಮಂದಿಯನ್ನು ಹೊರತರಲು ಪೂರಕ ಯೋಜನೆ ಜಾರಿಗೊಳ್ಳುತ್ತಿದೆ.
ಉಭಯ ಸಮುದಾಯಗಳ ಆರೋಗ್ಯ ಸ್ಥಿತಿಗತಿಗಳ ಅಧ್ಯಯನ ಮಾಡಿ, ಅಗತ್ಯ ಮೀನಿನ ಮೌಲ್ಯವರ್ಧಿತ ಉತ್ಪನ್ನಗಳ ಪೌಷ್ಟಿಕ ಆಹಾರವನ್ನು ಅವರಿಗೆ ಒದಗಿಸುವುದು ಈ ಯೋಜನೆ ಉದ್ದೇಶ. ಭಾರತೀಯ ಕೃಷಿ ಸಂಶೋಧನಾ ಪರಿಷತ್ತು(ಐಸಿಎಆರ್) ಕೇಂದ್ರೀಯ ಮೀನುಗಾರಿಕಾ ತಂತ್ರಜ್ಞಾನ ಸಂಸ್ಥೆ(ಸಿಐಎಫ್​ಟಿ) ಮತ್ತು ಕೃಷಿ ವಿಜ್ಞಾನ ಕೇಂದ್ರ ಸಹಯೋಗದಿಂದ ಈ ಕಾರ್ಯಕ್ರಮ ರೂಪಿಸಿದೆ.ಇದನ್ನೂ ಓದಿ:Web Exclusive: ಮಹಿಳಾ ಉದ್ಯಮಿಗಳ ಪಾರ್ಕ್‌ಗೆ ಭೂಕಂಟಕ: ಹಾರೋಹಳ್ಳಿಯಲ್ಲಿ ಆರಂಭವಾಗಬೇಕಿದ್ದ ಯೋಜನೆ ನನೆಗುದಿಗೆ
ಸಮೀಕ್ಷೆ ಶೇ.90 ಪೂರ್ಣ:ಲಾಕ್​ಡೌನ್​ಗೂ ಮೊದಲು ಫೆಬ್ರವರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ದೊರೆತಿದ್ದು, ದಕ್ಷಿಣ ಕನ್ನಡದಲ್ಲಿ ಕೊರಗರು ಹಾಗೂ ಚಾಮರಾಜನಗರದಲ್ಲಿ ಸೋಲಿಗರ ಕುಟುಂಬ ಸದಸ್ಯರ ಸಮೀಕ್ಷೆ ಶೇ.90ರಷ್ಟು ಪೂರ್ಣಗೊಂಡಿದೆ ಎಂದು ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಜೆ.ರಮೇಶ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಸಮೀಕ್ಷೆ ಮೂಲಕ ಉದ್ದೇಶಿತ ಸಮುದಾಯದ ಮೀನು ಖರೀದಿ ಮತ್ತು ಸೇವನೆ ನಡವಳಿಕೆ ಅಧ್ಯಯನ ಮಾಡಲಾಗಿದೆ. ಸಮೀಕ್ಷೆಯಲ್ಲಿ ಕೊರಗ ಮತ್ತು ಸೋಲಿಗರ ಕುಟುಂಬ ಸದಸ್ಯರಲ್ಲಿ ಕೇಳಿದ ಪ್ರಶ್ನೆಗಳಿಂದ ಇದು ಸ್ಪಷ್ಟವಾಗುತ್ತದೆ.
ಸಮೀಕ್ಷೆ ಪ್ರಶ್ನೆಪಟ್ಟಿ
ನೀವು ಮೀನು ಸೇವಿಸುತ್ತೀರ? ಇಲ್ಲವಾದರೆ ಯಾಕೆ? ಎಷ್ಟು ಬಾರಿ ಸೇವಿಸುತ್ತೀರಿ? ಯಾವ ಮೀನು ಖರೀದಿಸುತ್ತೀರಿ? ಹಾಲು, ಬೆಣ್ಣೆ, ಪನೀರ್, ಹಣ್ಣುಗಳನ್ನು ಸೇವಿಸುತ್ತೀರ? ನೂಡಲ್ಸ್, ಚಿಪ್ಸ್, ಬರ್ಗರ್, ಕರಿದ ಕೋಳಿ ಮಾಂಸ ಮುಂತಾದ ಜಂಕ್ ಆಹಾರ ಸೇವಿಸುತ್ತಿದ್ದೀರ? ಸೇವಿಸುತ್ತಿದ್ದರೆ ಎಷ್ಟು ಪ್ರಮಾಣದಲ್ಲಿ? ಮೀನಿನ ಸೂಪ್, ಮೀನಿನ ಹಪ್ಪಳ, ಮೀನಿನ ನೂಡಲ್ಸ್, ಮೀನಿನ ಕಟ್ಲೆಟ್ ಸೇವಿಸಲು ಸಿದ್ದರಿದ್ದೀರ? ಎಂಬಿತ್ಯಾದಿ ಆಯ್ಕೆಗಳು, ಮೀನಿನ ಕುರಿತು ಅವರ ಜ್ಞಾನದ ಮಟ್ಟವನ್ನು ತಿಳಿಯುವ ಪ್ರಶ್ನೆಗಳನ್ನು ಕೇಳಲಾಗಿದೆ.
ಕೊರಗ ಸಮುದಾಯದ ಜನರಲ್ಲಿ ಮರಣ ಪ್ರಮಾಣ ಅಧಿಕವಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಪರಿಷತ್ತು (ಐಸಿಎಆರ್) ಕೇಂದ್ರೀಯ ಮೀನುಗಾರಿಕಾ ತಂತ್ರಜ್ಞಾನ ಸಂಸ್ಥೆ(ಸಿಐಎಫ್​ಟಿ) ಮತ್ತು ಕೆವಿಕೆ ಈ ಯೋಜನೆ ಕೈಗೆತ್ತಿಕೊಂಡಿದೆ. ಯೋಜನೆ ಅನುಷ್ಠಾನ ಕುರಿತ ಸಮೀಕ್ಷೆ ಶೇ.90 ಪೂರ್ಣಗೊಂಡಿದೆ. ಮುಂದಿನ ವಿವಿಧ ಹಂತಗಳಲ್ಲಿ ಸಾಮರ್ಥ್ಯ ವರ್ಧನೆ, ಆರೋಗ್ಯ ಇಲಾಖೆ ನೆರವಿನೊಂದಿಗೆ ಆರೋಗ್ಯ ತಪಾಸಣೆ, ಆಹಾರ ತಯಾರಿ ಪ್ರಾತ್ಯಕ್ಷಿಕೆ ಮತ್ತು ಪೌಷ್ಟಿಕ ಆಹಾರ ಪೂರೈಕೆ ಕಾರ್ಯಕ್ರಮ ನಡೆಯಲಿದೆ.
| ಡಾ.ಟಿ.ಜೆ.ರಮೇಶ್ಮುಖ್ಯಸ್ಥರು, ಕೆವಿಕೆ, ಮಂಗಳೂರು
Web Exclusive: ಶುಶ್ರೂಷಾಧಿಕಾರಿಗಳ ಕೂಗು ಕೇಳುತ್ತಿಲ್ಲ: ಸರ್ಕಾರ ವಿರುದ್ಧ ನರ್ಸ್​ಗಳ ಸಮರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + four =
Remember me
