| ಮಲ್ಲಿಕಾರ್ಜುನ ಕೊಚ್ಚರಗಿ ಹಾಸನ
ನಗರದ ಶಕ್ತಿ ದೇವತೆ ಹಾಸನಾಂಬೆಯ ಜಾತ್ರಾ ಮಹೋತ್ಸವಕ್ಕೆ ದಿನ ಗಣನೆ ಪ್ರಾರಂಭವಾಗಿದೆ. ಆದರೆ ಕೋವಿಡ್ ಕಾರಣದಿಂದ ಈ ಬಾರಿ ದೇವಿಯ ದರ್ಶನ ಭಾಗ್ಯವನ್ನು ರದ್ದುಗೊಳಿಸುವ ಸಾಧ್ಯತೆ ಇದೆ.
ಈ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳು ಇತ್ತೀಚೆಗೆ ಸಭೆ ನಡೆಸಿದ್ದು, ಆಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಿಂದ (ನ.5 ರಿಂದ 17ರ ವರೆಗೆ) ಹಾಸನಾಂಬೆ ದೇಗುಲದ ಬಾಗಿಲು ತೆರೆಯಬೇಕಿದೆ. ಜಿಲ್ಲೆ ಮಾತ್ರವಲ್ಲದೆ, ಹೊರ ಜಿಲ್ಲೆಗಳ ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ಹಾಸನಾಂಬೆ ಈ ಬಾರಿ ಸಾರ್ವಜನಿಕರಿಗೆ ದರ್ಶನ ಭಾಗ್ಯ ಕರುಣಿಸುವುದಿಲ್ಲ ಎನ್ನಲಾಗಿದೆ. ಜಿಲ್ಲೆಯಲ್ಲಿ ಕೋವಿಡ್-19 ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಧಾರ್ವಿುಕ ಸಮಾರಂಭಗಳನ್ನು ಸರ್ಕಾರವೇ ರದ್ದುಗೊಳಿಸಿದೆ. ಹೀಗಾಗಿ ಹಾಸನಾಂಬೆ ಜಾತ್ರೆ ಮೇಲೂ ಕರಿನೆರಳು ಬಿದ್ದಿದೆ.ಇದನ್ನೂ ಓದಿ:Web Exclusive: ಪೊಲೀಸರಿಗೆ ಸಿಗುತ್ತಿಲ್ಲ ‘ಆರೋಗ್ಯ ಭಾಗ್ಯ’; ಚಿಕಿತ್ಸೆ ಸಿಗಲ್ಲವೆಂದು ಭಿತ್ತಿಪತ್ರ ಅಂಟಿಸಿದ ಆಸ್ಪತ್ರೆಗಳು
ಜಿಲ್ಲೆಯ ಮಟ್ಟಿಗೆ ಪ್ರತಿವರ್ಷ ಜರುಗುವ ಹಾಸನಾಂಬೆ ಜಾತ್ರೆ ಅದ್ದೂರಿ ಮಹೋತ್ಸವವಾಗಿದೆ. ಸಪ್ತ ಮಾತೃಕೆಯರಲ್ಲಿ ಒಬ್ಬಳಾದ ಹಾಸನಾಂಬೆ ದರ್ಶನ ಪಡೆಯುವುದೇ ಸುದೈವ ಎಂದು ಎಲ್ಲರೂ ನಂಬಿದ್ದಾರೆ. ಕಳೆದ ವರ್ಷ 12 ದಿನ ಮಹೋತ್ಸವ ಜರುಗಿ, 2 ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡಿದ್ದರು. 3.18 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು. ಆದರೆ ಈ ಬಾರಿ ಅಂತಹ ನಿರೀಕ್ಷೆಯನ್ನು ಯಾರೂ ಇಟ್ಟುಕೊಳ್ಳುವಂತಿಲ್ಲ. ಹಾಸನಾಂಬೆ ಜಾತ್ರೆ ನಂಬಿ ಅಲ್ಪಸ್ವಲ್ಪ ಆದಾಯ ಮಾಡಿಕೊಳ್ಳುತ್ತಿದ್ದ ಆಟಿಕೆ ಸಾಮಗ್ರಿ ವ್ಯಾಪಾರಿಗಳು, ಹೋಟೆಲ್ ಮಾಲೀಕರು, ಆಟೋ ಚಾಲಕರು ತೀವ್ರ ನಷ್ಟ ಅನುಭವಿಸುವಂತಾಗಿದೆ.
ಕರೊನಾ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಸನಾಂಬೆಯ ಸಾರ್ವಜನಿಕ ದರ್ಶನ ಬೇಡವೆಂದು ಅಧಿಕಾರಿಗಳು ನಿಶ್ಚಯಿಸಿದ್ದು, ಈ ವಾರದಲ್ಲಿ ಜನಪ್ರತಿನಿಧಿಗಳೊಟ್ಟಿಗೆ ಮತ್ತೊಂದು ಸಭೆ ನಡೆಸಲು ನಿರ್ಧರಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕ ಪ್ರೀತಂ ಜೆ. ಗೌಡ ಸಮ್ಮುಖದಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸುವ ಕುರಿತು ಅಂತಿಮ ನಿರ್ಧಾರ ಪ್ರಕಟವಾಗಲಿದೆ. ವರ್ಷದಲ್ಲಿ ಒಮ್ಮೆ ಮಾತ್ರ ನೆರವೇರುವ ಜಾತ್ರೆಗೆ ಕರೊನಾ ಅಡ್ಡಿಯಾಗಬಾರದು. ಪರಸ್ಪರ ಅಂತರ ಪಾಲನೆ, ದಿನಕ್ಕೆ ಇಂತಿಷ್ಟು ಭಕ್ತರಿಗೆ ಪ್ರವೇಶ ಕಲ್ಪಿಸುವ ವ್ಯವಸ್ಥೆ ರೂಪಿಸಬೇಕೆಂಬ ಒತ್ತಾಯ ಮತ್ತೊಂದೆಡೆ ಕೇಳಿಬಂದಿದೆ. ಆದರೆ ಅಂತಿಮ ತೀರ್ಮಾನ ಜಿಲ್ಲಾ ಉಸ್ತುವಾರಿ ಸಚಿವರದ್ದೇ ಆಗಿದೆ.ಇದನ್ನೂ ಓದಿ:Web Exclusive: ಬಂಜರು ಭೂಮಿಗೆ ನ್ಯಾಯ ನೀಡಿದ ವಕೀಲ; ಬಂಗಾರದ ಬೆಳೆ ತೆಗೆದ ಸಾಧಕ
ದೇವಿ ದರ್ಶನಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ಭಕ್ತರ ನಡುವೆ ಪರಸ್ಪರ ಅಂತರ ಕಾಪಾಡುವುದು ಕಷ್ಟದ ಕೆಲಸ ಎಂಬುದನ್ನು ಜಿಲ್ಲಾಡಳಿತ ಅರಿತಿದೆ. ಹಾಸನಾಂಬೆ ದೇವಸ್ಥಾನಕ್ಕೆ ಸಾರ್ವಜನಿಕರು ಮಾತ್ರವಲ್ಲದೆ ಸಿನಿಮಾ ನಟ/ನಟಿಯರು, ರಾಜಕೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅಂತಹ ಸಂದರ್ಭ ಹಾಗೂ ನೈವೇದ್ಯ ಸಮಯದಲ್ಲಿ ಸಾರ್ವಜನಿಕ ಪ್ರವೇಶ ಸಂಪೂರ್ಣ ನಿಷೇಧಿಸಲಾಗಿರುತ್ತದೆ. ಆಗ ಸಾರ್ವಜನಿಕ ದಟ್ಟಣೆ ಹೆಚ್ಚಾಗಿ ಪರಸ್ಪರ ಅಂತರ ಪಾಲನೆ ಕಷ್ಟವಾಗುತ್ತದೆ. ಹೀಗಾಗಿ ಸರಳ ಮಹೋತ್ಸವಕ್ಕೆ ನಿರ್ಧರಿಸಲಾಗಿದೆ.
ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಹಾಸನಾಂಬೆ ಜಾತ್ರೆಯನ್ನು ಸರಳವಾಗಿ ಆಚರಿಸಲು ನಿರ್ಧರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಗುವುದು. ನ. 5ರಿಂದ 17ರ ವರೆಗೆ ದೇವಾಲಯದ ಗರ್ಭಗುಡಿ ಬಾಗಿಲು ತೆರೆಯಲಿದ್ದು, ಅರ್ಚಕರು ಪೂಜೆ ಸಲ್ಲಿಸುತ್ತಾರೆ.
| ಶಿವಶಂಕರಪ್ಪತಹಸೀಲ್ದಾರ್ ಹಾಸನ
ಕರೊನಾ ನೆಪದಿಂದ ಜನರ ಧಾರ್ವಿುಕ ನಂಬಿಕೆಗೆ ಧಕ್ಕೆ ತರುವುದು ಬೇಡ. ಪರಸ್ಪರ ಅಂತರ ಪಾಲನೆ, ಮಾಸ್ಕ್ ಬಳಕೆಯನ್ನು ಕಡ್ಡಾಯಗೊಳಿಸಿ ಜಿಲ್ಲೆಯ ಜನರಿಗಾದರೂ ದರ್ಶನಕ್ಕೆ ಅವಕಾಶ ಕಲ್ಪಿಸಬೇಕು. ಹೊರ ಜಿಲ್ಲೆಯ ಜನರು ಈ ವರ್ಷ ಬಾರದಂತೆ ಈಗಿನಿಂದಲೇ ಪ್ರಚಾರ ಮಾಡಬೇಕು.
| ಪ್ರದೀಪ್ದುದ್ದ ನಿವಾಸಿ
Web Exclusive: ಕಬ್ಬು ಕಟಾವಿಗೂ ಕರೊನಾ ಕಂಟಕ; ‘ಕಾರ್ವಿುಕರ ಗ್ಯಾಂಗ್’ ಬರಲು ಹಿಂದೇಟು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + nine =
Remember me
