|ರೇವಣಸಿದ್ದಪ್ಪ ಪಾಟೀಲ್ಬೀದರ್
ಕೇಂದ್ರ ಸರ್ಕಾರದ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಯಲ್ಲಿ ಪ್ರಸಕ್ತ ವರ್ಷ ಉದ್ದು, ಹೆಸರು, ಸೋಯಾಬಿನ್, ತೊಗರಿ ಖರೀದಿಗೆ ಅವಕಾಶ ನೀಡಿದರೂ ರೈತರು ಮಾತ್ರ ಕೇಂದ್ರಗಳತ್ತ ಬರುತ್ತಿಲ್ಲ. ಬೆಂಬಲ ಬೆಲೆಗಿಂತ ಮಾರುಕಟ್ಟೆಯಲ್ಲಿ ಉತ್ತಮ ಧಾರಣೆ ಇರುವ ಕಾರಣ ಅನ್ನದಾತರು ಇತ್ತ ಚಿತ್ತ ಹರಿಸುತ್ತಿಲ್ಲ.
ಈ ಋತುವಿನ ಮುಂಗಾರು ಹಾಗೂ ಹಿಂಗಾರು ಬೆಳೆಗಳ ಮಾರಾಟಕ್ಕೆ ಬೆಂಬಲ ಬೆಲೆಯ ವ್ಯವಸ್ಥೆ ಮಾಡಲಾಗಿತ್ತು. ಮುಂಗಾರು ಬೆಳೆಯಾದ ಹೆಸರು, ಉದ್ದು, ಸೋಯಾಬಿನ್​ನ ಒಂದು ಕಾಳು ಸಹ ಖರೀದಿ ಕೇಂದ್ರದಲ್ಲಿ ಮಾರಾಟವಾಗಿಲ್ಲ. ಇದೀಗ ತೊಗರಿ ಸಹ ಬಂದಿಲ್ಲ. ಇನ್ನು ಕಡಲೆ ನೋಂದಣಿ, ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಈ ಧಾನ್ಯ ಸಹ ಎಂಎಸ್ಪಿಯಲ್ಲಿ ಖರೀದಿಗೆ ಬರುವುದು ಅನುಮಾನ.
ಮಾರುಕಟ್ಟೆಯಲ್ಲಿ ಬೆಲೆ ಕಮ್ಮಿ ಆಗಬಾರದು ಎಂಬ ಕಾರಣಕ್ಕೆ ಕೇಂದ್ರ ಸರ್ಕಾರ ಎಂಎಸ್ಪಿ ಜಾರಿಗೆ ತಂದಿದೆ. ಕೆಲ ವರ್ಷಗಳಿಂದ ನಿರಂತರ ಬೆಂಬಲ ಬೆಲೆ ಯೋಜನೆ ಜಾರಿಯಲ್ಲಿದೆ. ಮಾರುಕಟ್ಟೆಗಿಂತ ಬೆಂಬಲ ಬೆಲೆ ಯೋಜನೆಯಲ್ಲಿ ಉತ್ತಮ ದರವಿರುವ ಕಾರಣ ದಾಖಲೆಯಲ್ಲಿ ರೈತರು ಖರೀದಿ ಕೇಂದ್ರದ ಕಡೆಗೆ ಬರುತ್ತಿದ್ದರು. ಆದರೆ ಈ ವರ್ಷ ತೊಗರಿ ಸೇರಿ 5 ಧಾನ್ಯಗಳಿಗೆ ಬೆಂಬಲ ಬೆಲೆಯಲ್ಲಿ ಅವಕಾಶ ನೀಡಿದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇರುವ ಕಾರಣ ಇತ್ತ ಹಣಕಿ ಹಾಕುತ್ತಿಲ್ಲ.
ಜಿಲ್ಲೆಯಲ್ಲಿ ಉದ್ದು, ಹೆಸರು ಹಾಗೂ ಸೋಯಾಬಿನ್ ಖರೀದಿಗೆ ತಲಾ 65 ಕೇಂದ್ರಗಳನ್ನು ತೆಗೆಯಲಾಗಿತ್ತು. ಸೋಯಾಬಿನ್​ಗಾಗಿ ಒಬ್ಬರು ಸಹ ನೋಂದಣಿ ಮಾಡಿಕೊಂಡಿರಲಿಲ್ಲ. ಉದ್ದು ಮಾರಾಟಕ್ಕೆ 73, ಹೆಸರಿಗೆ 1525 ರೈತರು ನೋಂದಣಿ ಮಾಡಿಕೊಂಡಿದ್ದರು. ಆದರೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಿಲ್ಲ.
ಇತ್ತೀಚೆಗೆ ತೊಗರಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಮುಕ್ತಾಯಗೊಂಡಿದೆ. ಕ್ವಿಂಟಾಲ್ ತೊಗರಿಗೆ 6 ಸಾವಿರ ರೂ. ಬೆಂಬಲ ಬೆಲೆಯಲ್ಲಿ ಖರೀದಿಗೆ ದರ ನಿಗದಿಪಡಿಸಲಾಗಿತ್ತು. ಆದರೆ ಮುಕ್ತ ಮಾರುಕಟ್ಟೆಯಲ್ಲಿ ಇದಕ್ಕಿಂತ ಹೆಚ್ಚು ಧಾರಣೆ ಸಿಗುತ್ತಿರುವುದರಿಂದ ರೈತರು ಖರೀದಿ ಕೇಂದ್ರದ ಬದಲಾಗಿ ಮಾರುಕಟ್ಟೆಯತ್ತ ಚಿತ್ತ ಹರಿಸಿದ್ದಾರೆ.
ತೊಗರಿ ಖರೀದಿಗೆ ಜಿಲ್ಲಾದ್ಯಂತ 125 ಕೇಂದ್ರಗಳನ್ನು ತೆರೆಯಲಾಗಿತ್ತು. 25,128 ರೈತರು ನೋಂದಣಿ ಮಾಡಿಸಿದ್ದರು. ಮಾ.14ಕ್ಕೆ ಖರೀದಿ ಪ್ರಕ್ರಿಯೆ ಮುಕ್ತಾಯವಾಗಿದೆ. ಪ್ರಕ್ರಿಯೆ ಪೂರ್ಣಗೊಂಡರೂ ಒಬ್ಬ ರೈತನೂ ಕೇಂದ್ರಕ್ಕೆ ಬಂದಿಲ್ಲ. ಮಾರುಕಟ್ಟೆಯಲ್ಲಿ ಕ್ವಿಂಟಾಲ್​ಗೆ 6600ರಿಂದ 7000 ರೂ.ವರೆಗೆ ಬೆಲೆ ಸಿಗುತ್ತಿದೆ. ಹೀಗಾಗಿ ರೈತರು ಖರೀದಿ ಕೇಂದ್ರಗಳತ್ತ ಮುಖ ಮಾಡಿಲ್ಲ.
ಬೀದರ್, ಕಲಬುರಗಿ, ಯಾದಗಿರಿ ಸೇರಿ ರಾಜ್ಯದ 9 ಜಿಲ್ಲೆಗಳಲ್ಲಿ ತೊಗರಿ ಖರೀದಿಗಾಗಿ ಅನುಮತಿ ನೀಡಲಾಗಿತ್ತು. ಎಲ್ಲ ಜಿಲ್ಲೆಗಳಿಂದ 2,10,000 ಮೆಟ್ರಿಕ್ ಟನ್ ಗುಣಮಟ್ಟದ ತೊಗರಿ ಖರೀದಿಗೆ ಗರಿಷ್ಠ ಮಿತಿ ನಿಗದಿಗೊಳಿಸಲಾಗಿದೆ. ಎಕರೆಗೆ 7 ಕ್ವಿಂಟಾಲ್ ಹಾಗೂ ಒಬ್ಬ ರೈತನಿಂದ ಗರಿಷ್ಠ 20 ಕ್ವಿಂಟಾಲ್​ನಂತೆ ತೊಗರಿ ಖರೀದಿಸುವ ಅವಕಾಶ ನೀಡಲಾಗಿದೆ. ಎಂಎಸ್ಪಿಗಿಂತ ಮಾರುಕಟ್ಟೆ ಬೆಲೆಯಲ್ಲಿ ಉತ್ತಮವಾದ ಕಾರಣ ಬಹುತೇಕ ಜಿಲ್ಲೆಗಳಲ್ಲಿ ಖರೀದಿ ಕೇಂದ್ರದತ್ತ ರೈತರು ಬಂದಿಲ್ಲ.
ಮಾರುಕಟ್ಟೆಯಲ್ಲಿ ಬೆಲೆ ಕುಸಿತಗೊಳ್ಳದಂತೆ ನೋಡಿಕೊಳ್ಳುವ ಉದ್ದೇಶದಿಂದ ಸರ್ಕಾರ ಬೆಂಬಲ ಬೆಲೆ ಯೋಜನೆ ಜಾರಿಗೆ ತಂದಿದೆ. ಉದ್ದು, ಹೆಸರು, ಸೋಯಾ, ತೊಗರಿ ಖರೀದಿಗೆ ಎಂಎಸ್ಪಿಯಲ್ಲಿ ಅವಕಾಶ ನೀಡಿದರೂ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಕ್ಕ ಕಾರಣ ಈ ಕಡೆಗೆ ಬಂದಿಲ್ಲ. ಕಡಲೆ ಮಾರಾಟಕ್ಕಾಗಿ ನೋಂದಣಿ, ಖರೀದಿಗೆ ಅವಕಾಶ ಇದೆ. ರೈತರು ಸದುಪಯೋಗ ಪಡೆದುಕೊಳ್ಳಬಹುದು.
|ತುಳಸಿರಾಮ ಲಾಖೆಕೃಷಿ ಮಾರಾಟ ಇಲಾಖೆ ಸಹಾಯಕ ನಿರ್ದೇಶಕ
ಕಡಲೆ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ನಡೆಯುತ್ತಿದೆ. ಕಡಲೆ ಮಾರಾಟ ಮಾಡಬಯಸುವ ರೈತರು ಏ.30ರವರೆಗೆ ಸಮೀಪದ ಖರೀದಿ ಕೇಂದ್ರಗಳಲ್ಲಿ ಹೆಸರು ನೋಂದಣಿ ಮಾಡಬಹುದಾಗಿದೆ. ನೋಂದಣಿ ಕಾರ್ಯದ ಜತೆಯಲ್ಲೇ ಖರೀದಿ ಕಾಲಾವಧಿ ಮೇ 14ರವರೆಗೆ ಸರ್ಕಾರ ನಿಗದಿಪಡಿಸಿದೆ. ರೈತರು ಬೆಂಬಲ ಬೆಲೆ ಯೋಜನೆ ಲಾಭ ಪಡೆಯಬೇಕು.
|ಭಗವಂತರಾಯಶಾಖಾ ವ್ಯವಸ್ಥಾಪಕ, ಸಹಕಾರ ಮಾರಾಟ ಮಹಾಮಂಡಳ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 7 =
Remember me
