| ದ್ವಾರಕಾನಾಥ್ ಎಲ್. ಬೆಂಗಳೂರು
ಪ್ರಕೃತಿ ಶಿಕ್ಷಣ ಉದ್ದೇಶಕ್ಕೆ ಬಳಕೆಯಾಗಬೇಕಿದ್ದ ಅರಣ್ಯದಲ್ಲಿನ ‘ಪ್ರಕೃತಿ ಶಿಬಿರಗಳು ’ ಈಗ ವಾಣಿಜ್ಯ ಪ್ರವಾಸೋದ್ಯಮ ಚಟುವಟಿಕೆಗೆ ಬಳಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.
ಶಾಲಾ ಮಕ್ಕಳ ಶಿಕ್ಷಣಕ್ಕೆ ಮೀಸಲಾಗಿದ್ದ ಪ್ರಕೃತಿ ಶಿಬಿರ, ಈಗ ಜಂಗಲ್ ಲಾಡ್ಜ್ ಆ್ಯಂಡ್​​ ರೆರ್ಸಾಟ್​ಗಳ (ಜೆಎಲ್​ಆರ್) ತೆಕ್ಕೆಗೆ ಸೇರಿಸಿದ್ದರಿಂದ ಶಾಲಾ ವಿದ್ಯಾರ್ಥಿಗಳಿಗೆ ಪರಿಸರದ ಜಾಗೃತಿ, ಅರಣ್ಯಗಳ/ವನ್ಯಜೀವಿ ಸಂಕುಲಗಳ ಕುರಿತು ದೃಷ್ಟಿಕೋನ ಹರಿಸಲು ಸಾಧ್ಯವಾಗುತ್ತಿಲ್ಲ. ಶೇ.10 ಮಾತ್ರ ಪ್ರಕೃತಿ ಶಿಕ್ಷಣಕ್ಕೆ ಆದ್ಯತೆ ನೀಡಿ ಇನ್ನುಳಿದ ಭಾಗವನ್ನು ವಾಣಿಜ್ಯ ಚಟುವಟಿಕೆಗಳಿಗೆ ಜೆಎಲ್​ಆರ್ ಸಂಸ್ಥೆ ಬಳಸಿಕೊಳ್ಳುತ್ತಿದೆ ಎಂದು ವನ್ಯಜೀವಿ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಲವು ವನ್ಯಜೀವಿಧಾಮಗಳಲ್ಲಿರುವ ಸೀತಾನದಿ, ಭೀಮಘಡ, ಸಕ್ರೆಬೈಲ್, ಅನೆಝುರಿ ಮತ್ತು ಶಿಬಿರಗಳನ್ನುಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನದಲ್ಲಿರುವ ಭಗವತಿ ಪ್ರಕೃತಿ ಶಿಬಿರದ ಹೊರಾಂಗಣ ಕ್ಯಾಂಪ್​ಗಳಿಗೆ ದುಬಾರಿ ದರ ನಿಗಧಿಪಡಿಸಿದ್ದಾರೆ. ಇದು ಹೀಗೆ ಮುಂದುವರೆದರೆ ಮುಂದೊಂದು ದಿನ ವಾಣಿಜ್ಯ ಚಟುವಟಿಕೆಗೆ ಬಳಕೆಯಾಗುವುದರಲ್ಲಿ ಸಂಶಯವಿಲ್ಲ ಎಂಬುದು ಆತಂಕ.
ಶಾಲಾ ಮಕ್ಕಳಿಗೆ ವಂಚನೆ:ಪ್ರಕೃತಿ ಶಿಬಿರಗಳು ವನ್ಯಜೀವಿಧಾಮ ಅಥವಾ ರಾಷ್ಟ್ರೀಯ ಉದ್ಯಾನದೊಳಗೆ ಇರುವುದರಿಂದ ಇಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಅಡಿಯಲ್ಲಿ ರಾಜ್ಯ ವನ್ಯಜೀವಿ ಮಂಡಳಿ ಮತ್ತು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮತಿ ಪಡೆಯುವ ಅಗತ್ಯವಿದೆ. ಅಲ್ಲದೆ, ಗ್ರಾಮೀಣ ಮಕ್ಕಳಿಗೆ ಪ್ರಕೃತಿ ಶಿಕ್ಷಣವನ್ನು ನೀಡಲು, ಸಾರ್ವಜನಿಕ ಹಣವನ್ನು ಬಳಸಿಕೊಂಡು ಈ ಶಿಬಿರಗಳನ್ನು ನಿರ್ವಿುಸಲಾಗಿದೆ. ಇವುಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿರುವುದರಿಂ ಸ್ಥಳೀಯ ಮಕ್ಕಳು ತಮ್ಮ ಸನಿಹದಲ್ಲೇ ಇರುವ ಪ್ರಕೃತಿ ಮತ್ತು ವನ್ಯಜೀವಿಗಳ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗದೆ ಪ್ರಕೃತಿಶಿಬಿರದಿಂದ ವಂಚಿತರಾಗುತ್ತಿದ್ದಾರೆ.ಇದನ್ನೂ ಓದಿ:‘ರಾಗಿಣಿ..ಸಿಂಹಿಣಿ ಇದ್ದ ಹಾಗೆ..ಎಲ್ಲವನ್ನೂ ಗೆದ್ದು ಬರುತ್ತಾಳೆ’
ಪ್ರವಾಸಿಗರಿಗೆ ದುಬಾರಿ ಆತಂಕ:ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿಧಾಮದಲ್ಲಿರುವ ಗೋಪಿನಾಥಂ ಪ್ರಕೃತಿ ಶಿಬಿರ ಬಳಿಯ ಮಿಸ್ಟಿ ಟ್ರೇಲ್ ಕ್ಯಾಂಪ್ ನಿರ್ವಹಣೆಯನ್ನು ಅರಣ್ಯ ಇಲಾಖೆ ಜಂಗಲ್ ಲಾಡ್ಜ್ ಆಂಡ್ ರೆಸಾರ್ಟ್ ಸಂಸ್ಥೆಗೆ ವಹಿಸಲು ನಿರ್ಧರಿಸಿದ್ದು, ಇದರಿಂದ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ದುಬಾರಿಯಾಗಲಿದೆ. ಅರಣ್ಯ ಇಲಾಖೆ ಸರ್ಕಾರದ ನಿಯಮದಂತೆ ಸಾರ್ವಜನಿಕ ಟೆಂಟ್ ಹಾಗೂ ಡಾರ್ವೆಂಟೆರಿಗಳನ್ನು ನಿಗದಿತ ಬಾಡಿಗೆ ಪಡೆದು ನೀಡಲಾಗುತ್ತಿತ್ತು. ಕ್ಯಾಂಪ್ ನಿರ್ವಹಣೆಯನ್ನು ಅರಣ್ಯ ಇಲಾಖೆಯೇ ಮುಂದುವರಿಸಿದರೆ ಒಳಿತು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಒಪ್ಪಂದ ಹಿಂಪಡೆಯಲು ಒತ್ತಾಯ:ಗೋಪಿನಾಥಂ ಶಿಬಿರವನ್ನು ಹಸ್ತಾಂತರಿಸಲು ಜೆಎಲ್​ಆರ್ ಜೊತೆಗಿನ ಒಪ್ಪಂದವನ್ನು ಅರಣ್ಯ ಇಲಾಖೆ ತಕ್ಷಣವೇ ರದ್ದುಗೊಳಿಸಬೇಕು. ಜೆಎಲ್​ಆರ್​ಗೆ ನೀಡಲಾದ ಎಲ್ಲಾ ಪ್ರಕೃತಿ ಶಿಬಿರಗಳನ್ನು ಹಿಂದಕ್ಕೆ ಪಡೆದು ಪ್ರಕೃತಿ ಶಿಕ್ಷಣ ಉದ್ದೇಶಗಳಿಗಾಗಿ, ವಿಶೇಷವಾಗಿ ಗ್ರಾಮೀಣ ವಿದ್ಯಾರ್ಥಿಗಳಿಗಾಗಿ ಮಾತ್ರ ಬಳಸಬೇಕು ಎಂಬುದು ವನ್ಯಜೀವಿ ಪ್ರಿಯರ ಒತ್ತಾಯವಾಗಿದೆ.
ನಮ್ಮ ವನ್ಯಜೀವಿಧಾಮ, ರಾಷ್ಟ್ರೀಯ ಉದ್ಯಾನಗಳಲ್ಲಿರುವ ನಿಸರ್ಗ ಶಿಬಿರಗಳು ಇರುವುದು ಮಕ್ಕಳಿಗಾಗಿ .ಅದರಲ್ಲೂ ಕಾಡಂಚಿನ, ಗ್ರಾಮೀಣ ಪ್ರದೇಶಗಳ ಮಕ್ಕಳಿಗೆ ಈ ಸೌಲಭ್ಯಗಳಿರುವುದು ಬಹು ಮುಖ್ಯ. ಎಲ್ಲಾ ಪ್ರದೇಶಗಳನ್ನು ಮತ್ತು ಸೌಕರ್ಯಗಳನ್ನು ನಾವು ಪ್ರವಾಸೋದ್ಯಮದ ದೃಷ್ಟಿಕೋನದಿಂದ ನೋಡುವುದು ಒಳಿತಲ್ಲ.ವನ್ಯಜೀವಿ ಸಂರಕ್ಷಣೆಯ ಲಾಭವನ್ನು ಪ್ರವಾಸೋದ್ಯಮದಂತಹ ಚಟುವಟಿಗೆಗಳ ಮೂಲಕ ಕೇವಲ ನಗರವಾಸಿಗಳು ಮತ್ತು ಅದರ ವೆಚ್ಚವನ್ನು ಭರಿಸಲು ಸಾಧ್ಯವಾಗುವವರು ಮಾತ್ರ ಪಡೆಯುವುದು ನ್ಯಾಯವಲ್ಲ.
| ಯೋಗಾನಂದ್ವನ್ಯಜೀವಿ ತಜ್ಞ
ಗೋಪಿನಾಥಂ ಪ್ರಕೃತಿ ಶಿಬಿರಗಳನ್ನು ಜೆಎಲ್​ಆರ್​ಗೆ ನಿರ್ವಹಣೆಗೆ ವಹಿಸಿಲ್ಲ. ಹೊರಾಂಗಣದ ಭಾಗದಲ್ಲಿ ಪ್ರವಾಸೋದ್ಯಮ ಇಲಾಖೆಯು ತಾತ್ಕಾಲಿಕ ಟೆಂಟ್​ಗಳನ್ನು ಅಳವಡಿಸಿದೆ. ಇದನ್ನು ಜೆಎಲ್​ಆರ್ ನಿರ್ವಹಣೆ ಮಾಡುತ್ತಿದ್ದು, ಪ್ರವಾಸಿಗರು ಅದನ್ನು ಬಳಸಬಹುದಷ್ಟೇ. ಮಕ್ಕಳ ಪ್ರಕೃತಿ ಶಿಕ್ಷಣಕ್ಕೆ ಇದುವರೆಗೂ ಯಾವುದೇ ರೀತಿಯ ತೊಂದರೆಯಾಗಿಲ್ಲ. ಏಕೆಂದರೆ ಅರಣ್ಯ ಇಲಾಖೆಯಿಂದಲೇ ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ. ಜೆಎಲ್​ಆರ್ ತಾತ್ಕಾಲಿಕ ಟೆಂಟ್​ಗಳ ನಿವರ್ಹಣೆ ವೈಫಲ್ಯದಿಂದ ಕೆಲ ದಿನ ಮುಚ್ಚಿಲಾಗಿದೆ. ಹೀಗಾಗಿ ಗೋಪಿನಾಥಂ ಪ್ರಕೃತಿ ಶಿಬಿರವನ್ನು ಜೆಎಲ್​ಆರ್​ಗೆ ನಾವು ವಹಿಸುವುದಿಲ್ಲ. ಅರಣ್ಯ ಇಲಾಖೆಯೇ ನಿರ್ವಹಣೆ ಮಾಡುತ್ತದೆ.
| ಮನೋಜ್ ಕುಮಾರ್,ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಚಾಮರಾಜನಗರ
ಡ್ರಗ್ಸ್ ಆರೋಪಿ ಆದಿತ್ಯ ಆಳ್ವನ ‘ಹೌಸ್​ ಆಫ್​ ಲೈಫ್’ ನೋಡಿದ್ರೆ ಬೆಚ್ಚಿಬೀಳ್ತೀರಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 1 =
Remember me
