| ದೇವರಾಜ್ ಎಲ್. ಬೆಂಗಳೂರು
ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳಲ್ಲಿ ಎಲ್ಲರೂ ಕ್ಲಿನಿಕಲ್ ಕೋರ್ಸ್​ಗಳಾದ ಚರ್ಮರೋಗ, ಮಕ್ಕಳ ರೋಗ, ಸ್ತ್ರೀರೋಗ ಕೋರ್ಸ್​ಗಳಿಗೆ ಡಿಮ್ಯಾಂಡ್ ಇದ್ದು, ಪ್ರೀ-ಪ್ಯಾರಾ ಕ್ಲಿನಿಕಲ್ ಕೋರ್ಸ್​ಗಳಾದ ವಿಧಿ ವಿಜ್ಞಾನ, ರೋಗಶಾಸ್ತ್ರ, ಫಾರ್ವಕಾಲಜಿ, ಮೈಕ್ರೋಬಯೋಲಜಿಯನ್ನು ಕೇಳುವವರೇ ಇಲ್ಲದಂತಾಗಿದೆ.
2020ರ ಸ್ನಾತಕೋತ್ತರ ವೈದ್ಯಕೀಯ ಕೋರ್ಸ್​ಗಳ ಸೀಟು ಹಂಚಿಕೆ ನಡೆದಿದ್ದು, ವೈದ್ಯಕೀಯದಲ್ಲಿ 715 ಮತ್ತು ದಂತವೈದ್ಯಕೀಯದಲ್ಲಿ 264 ಸೀಟುಗಳು ಖಾಲಿ ಉಳಿದಿವೆ. ವೈದ್ಯಕೀಯದಲ್ಲಿ ಉಳಿಕೆಯಾಗಿರುವ ಸೀಟುಗಳೆಲ್ಲಾ ಪ್ರೀ ಮತ್ತು ಫ್ಯಾರಾ ಕ್ಲಿನಿಕಲ್ ಕೋರ್ಸ್​ಳಾಗಿವೆ.ಇದನ್ನೂ ಓದಿ:Web Exclusive: 48 ಲಕ್ಷ ವಾಹನಗಳು ಗುಜರಿಗೆ; 15 ವರ್ಷಕ್ಕಿಂತ ಹಳೆಯ ವಾಹನಗಳೆಲ್ಲ ಸ್ಕ್ರ್ಯಾಪ್​
ಕಳೆದ ಮೂರು ವರ್ಷಗಳಲ್ಲಿ ಉಳಿಕೆಯಾಗುತ್ತಿರುವ ಸೀಟುಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಇದಕ್ಕೆ ಉದ್ಯೋಗವಕಾಶದ ಕುಂಠಿತ ಮತ್ತು ಪ್ರೀ ಮತ್ತು ಫ್ಯಾರಾ ಕ್ಲಿನಿಕಲ್ ಕೊರ್ಸ್​ಗಳಲ್ಲಿ ಪ್ರಾಕ್ಟಿಸ್ ಮಾಡುವುದಕ್ಕೆ ಅವಕಾಶ ಕಡಿಮೆ ಇರುವುದರಿಂದ ವಿದ್ಯಾರ್ಥಿಗಳು ಪ್ರವೇಶ ಪಡೆಯುವುದು ಕೂಡ ಕಡಿಮೆಯಾಗಿದೆ. ಕಳೆದ ಮೂರು ವರ್ಷದ ಅಂಕಿ -ಅಂಶಗಳನ್ನು ಗಮನಿಸಿದಾಗ 1,662 ವೈದ್ಯಕೀಯ ಮತ್ತು 609 ದಂತವೈದ್ಯಕೀಯ ಸೀಟುಗಳು ಉಳಿದಿವೆ.
4 ಬಾರಿ ಕೌನ್ಸೆಲಿಂಗ್:2020ರ ಪಿಜಿ ಕೌನ್ಸೆಲಿಂಗ್ ಅನ್ನು ಇದೇ ಮೊದಲ ಬಾರಿಗೆ ಆನ್​ಲೈನ್ ಮೂಲಕ ನಡೆಸಲಾಯಿತು. ಲಭ್ಯವಿದ್ದ 2,955 ವೈದ್ಯಕೀಯ 924 ದಂತ ವೈದ್ಯಕೀಯ ಕೋರ್ಸ್​ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯಿತು. ಮೇನಲ್ಲಿ ಆರಂಭವಾದ ಪ್ರವೇಶ ಪ್ರಕ್ರಿಯೆ ಆಗಸ್ಟ್ ಕೊನೆಯವಾರದವರೆಗೂ ನಡೆಯಿತು. ಸತತ ಮೂರು ಬಾರಿ ಆನ್​ಲೈನ್ ಕೌನ್ಸೆಲಿಂಗ್ ಹಾಗೂ ಒಂದು ಬಾರಿ ಮುಂದುವರೆದ ಕೌನ್ಸೆಲಿಂಗ್ ನಡೆಸಿ ಸೀಟುಗಳನ್ನು ಕೆಇಎ ಭರ್ತಿ ಮಾಡಿತು.
ಕೋರ್ಸ್​ಗಳು:ಪ್ರೀ-ಕ್ಲಿನಿಕಲ್: ಅನಾಟಮಿ, ಬಯೋ ಕೆಮಿಸ್ಟ್ರಿ, ಸೈಕೋಲಜಿ, ಪ್ಯಾರಾ ಕ್ಲಿನಿಕಲ್: ವಿಧಿ ವಿಜ್ಞಾನ, ಸಮುದಾಯ ಔಷಧ, ರೋಗಶಾಸ್ತ್ರ, ಫಾರ್ವಕಾಲಜಿ, ಮೈಕ್ರೋಬಯೋಲಜಿ.ಇದನ್ನೂ ಓದಿ:WEB EXCLUSIVE|ಪ್ರಕೃತಿ ಶಿಬಿರಗಳು ಜೆಎಲ್​ಆರ್ ತೆಕ್ಕೆಗೆ ?ವನ್ಯಜೀವಿ ಪ್ರಿಯರಿಂದ ಆಕ್ಷೇಪ
ಕ್ಲಿನಿಕಲ್:ಚರ್ಮರೋಗ, ಮಕ್ಕಳ ರೋಗ, ಸ್ತ್ರೀರೋಗ, ಅರವಳಿಕೆ, ಇಎನ್​ಟಿ, ನೇತ್ರಶಾಸ್ತ್ರ, ಮೊಳೆ ಚಿಕಿತ್ಸೆಕರು ಈ ಕೋರ್ಸ್​ಗಳು ಬರಲಿವೆ.
ಬೇಡಿಕೆ ಏಕೆ?:ಪ್ರೀ-ಪ್ಯಾರಾ ಕ್ಲಿನಿಕಲ್​ನಲ್ಲಿ ವ್ಯಾಸಂಗ ಮಾಡಿದವರಿಗೆ ಉದ್ಯೋಗವಕಾಶಗಳು ಕಮ್ಮಿ. ಅಲ್ಲದೆ, ಅವರು ಸ್ವಂತವಾಗಿ ಕ್ಲಿನಿಕಲ್ ಆರಂಭಿಸುವುದು ಕೂಡ ಕಷ್ಟ. ಇದರಿಂದಾಗಿ ಹೆಚ್ಚಿನವರು ವ್ಯಾಸಂಗ ಮಾಡುವುದಿಲ್ಲ. ಕ್ಲಿನಿಕಲ್ ಕೋರ್ಸ್​ಗಳಿಗೆ ಹೆಚ್ಚಿನ ಬೇಡಿಕೆ ಇದೆ. ಖಾಸಗಿ ಆಸ್ಪತ್ರೆಗಳಲ್ಲಿ ಅಪ್ತ ಸಮಾಲೋಚನೆಗೆ 450 ರೂ.ಗಳಿಂದ 800 ರೂ. ಪ್ರತಿ ರೋಗಿಯಿಂದ ವಸೂಲಿ ಮಾಡುತ್ತಿದ್ದಾರೆ. ಈ ಸೀಟುಗಳು ಸಹ ಖಾಸಗಿ ಕಾಲೇಜಿನಲ್ಲಿ ಕೋಟ್ಯಾಂತರ ರೂಪಾಯಿಗಳಿಗೆ ಹರಾಜಾಗುತ್ತದೆ.
2020:ಕೋರ್ಸ್ ಇನ್​ಟೇಕ್ ಭರ್ತಿ ಖಾಲಿ
ವೈದ್ಯಕೀಯ 2955 2240 715
ದಂತವೈದ್ಯಕೀಯ 924 660 264
2019:ವೈದ್ಯಕೀಯ 2600 1958 642
ದಂತವೈದ್ಯಕೀಯ 912 670 242
2018:ವೈದ್ಯಕೀಯ 2275 1970 305
ದಂತವೈದ್ಯಕೀಯ 913 810 103
ಪ್ರತಿ ವರ್ಷ ಈ ಸೀಟು ಪಡೆದುಕೊಳ್ಳುವ ವಿಚಾರದಲ್ಲಿ ಟ್ರೆಂಡ್ ಬದಲಾಗುವುದಿಲ್ಲ. ಪ್ರೀ ಮತ್ತು ಫ್ಯಾರಾ ಕ್ಲಿನಿಕಲ್ ಕೋರ್ಸ್​ಗಳನ್ನು ತೆಗೆದುಕೊಳ್ಳವರೇ ಇಲ್ಲದಂತಾಗಿದೆ.
|ಡಾ.ಸಚ್ಚಿದಾನಂದ,ಕುಲಪತಿ,ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ
ವೃತ್ತಿ ಮಾರ್ಗದರ್ಶನಕ್ಕೆ ಕೆಎಲ್​​ಇ ವಿವಿಯಿಂದ ವೆಬಿನಾರ್; ವಿಜಯವಾಣಿ, ದಿಗ್ವಿಜಯ ನ್ಯೂಸ್​ ಸಹಯೋಗ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − 2 =
Remember me
