|ಕೆ.ಎನ್.ರಾಘವೇಂದ್ರಮಂಡ್ಯ
ಐತಿಹಾಸಿಕ ಧಾರ್ವಿುಕ ತಾಣ ಮೇಲುಕೋಟೆಯಲ್ಲಿರುವ ಹಾಗೂ ದೇಶದಲ್ಲಿಯೇ ಪ್ರಖ್ಯಾತಿ ಹೊಂದಿರುವ ಸರ್ಕಾರದ ಸಂಸ್ಕೃತ ಸಂಶೋಧನಾ ಸಂಸತ್​ಗೆ ಇದೀಗ ಸರ್ಕಾರವೇ ಶತ್ರುವಾಗಿ ಕಾಡುತ್ತಿದೆ. ಗುತ್ತಿಗೆ ಕರಾರಿನ ತಾಂತ್ರಿಕ ಕಾರಣಕ್ಕೆ ಸಂಶೋಧನಾ ಕ್ಷೇತ್ರದಲ್ಲಿ ಹಲವು ವಿಶೇಷತೆಯನ್ನು ಹೊಂದಿರುವ ದೊಡ್ಡ ಸಂಸ್ಥೆಯನ್ನು ತೆರವುಗೊಳಿಸಿ, ಚೆಲುವನಾರಾಯಣಸ್ವಾಮಿ ದೇವಾಲಯದ ವಶಕ್ಕೆ ಪಡೆಯುವಂತೆ ಧಾರ್ವಿುಕ ದತ್ತಿ ಇಲಾಖೆಯ ಅಧೀನ ಕಾರ್ಯದರ್ಶಿ ಫೆ.25ರಂದು ಆದೇಶ ಹೊರಡಿಸಿದ್ದಾರೆ.
ರಾಮಾನುಜಾಚಾರ್ಯರ ತತ್ವ, ಸಿದ್ಧಾಂತ, ವಿಚಾರಧಾರೆಗಳನ್ನು ಜನರಿಗೆ ಪ್ರಚುರಪಡಿಸುವ ಉದ್ದೇಶದಿಂದ ಮೇಲುಕೋಟೆಯಲ್ಲಿ ಸಂಸ್ಕೃತ ಸಂಶೋಧನಾ ಸಂಸತ್ ಸ್ಥಾಪಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಭಾರತದ ಮಾಜಿ ಉಪ ರಾಷ್ಟ್ರಪತಿ ಬಿ.ಡಿ.ಜತ್ತಿಯವರೂ ಬೆಂಬಲ ನೀಡಿದ್ದರು ಎನ್ನುವ ಮಾಹಿತಿ ಇದೆ. ಅದರಂತೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಸೇರಿದ ಸರ್ವೆ ನಂ.5, 6, 8, 9 ಮತ್ತು 12ರಲ್ಲಿನ ಸುಮಾರು 8 ಎಕರೆ ಜಾಗವನ್ನು ವಾರ್ಷಿಕ 300 ರೂ.ನಂತೆ 20 ವರ್ಷದ ಅವಧಿಗೆ ಸಂಶೋಧನಾ ಸಂಸ್ಥೆಗೆ 1978ರಲ್ಲಿ ಸರ್ಕಾರದಿಂದ ಗುತ್ತಿಗೆ ನೀಡಲಾಯಿತು. ಅಂದಿನಿಂದ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆಗೆ ಸರ್ಕಾರವೇ ಅನುದಾನ ನೀಡುತ್ತಿದೆ. ಸಿಬ್ಬಂದಿಗೂ ಸರ್ಕಾರವೇ ವೇತನ ನೀಡುತ್ತಿದೆ. 2014ರಿಂದ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾಗಿ ಬದಲಾಗಿದೆ.
192 ಸಂಶೋಧನಾ ಕೃತಿಗಳು ಪ್ರಕಟ:ಸಂಸ್ಥೆಯಿಂದ ಈವರೆಗೆ 192 ಸಂಶೋಧನಾ ಕೃತಿಗಳನ್ನು ಪ್ರಕಟಿಸಲಾಗಿದೆ. 90 ಸಂಶೋಧನೆಗಳು ಪ್ರಗತಿಯಲ್ಲಿವೆ. ಪ್ರಮುಖವಾಗಿ 10 ಸಾವಿರ ಪ್ರಾಚೀನ ತಾಳೆಗರಿಯನ್ನು ಹೊಂದಿರುವ ಸಂಸ್ಥೆ ಎಂಬ ಹೆಗ್ಗಳಿಕೆ ಹೊಂದಿದೆ. ಸುಮಾರು 32 ಸಾವಿರ ಪ್ರಾಚೀನ ಪುಸ್ತಕಗಳನ್ನು ಸಂಗ್ರಹಿಸಲಾಗಿದೆ. ಎಂಟು ಎಕರೆ ಜಾಗದ ಪೈಕಿ ಎರಡು ಎಕರೆ ಜಾಗದಲ್ಲಿ ಸಂಸ್ಥೆಯ ಕಟ್ಟಡಗಳನ್ನು ನಿರ್ವಿುಸಲಾಗಿದೆ. ಉಳಿದ ಜಾಗವನ್ನು ಸಂರಕ್ಷಣೆ ಮಾಡಿಕೊಳ್ಳಲಾಗಿದೆ.
ವಿವಾದವೇನು?:ಸಂಸ್ಥೆಯ ಗುತ್ತಿಗೆ ಅವಧಿ 1998ಕ್ಕೆ ಮುಕ್ತಾಯವಾಗಿದೆ. ಆದರೆ ಗುತ್ತಿಗೆ ನವೀಕರಣ ಮಾಡಿಕೊಳ್ಳದೆ ಹಾಗೂ ದೇವಾಲಯದ ಜಾಗವನ್ನು ತೆರವು ಮಾಡದೆ, ಬಾಡಿಗೆ ಹಣವನ್ನೂ ನೀಡದೆ ನಿಯಮಬಾಹಿರವಾಗಿ ಸಂಸ್ಥೆಯನ್ನು ಮುಂದುವರಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ 2019ರಲ್ಲಿ ಧಾರ್ವಿುಕ ದತ್ತಿ ಇಲಾಖೆಗೆ ಪತ್ರ ಬರೆದಿದ್ದ ಜಿಲ್ಲಾಡಳಿತ, ಗುತ್ತಿಗೆ ಕರಾರನ್ನು ಮುಂದುವರಿಸುವ ಸಂಬಂಧ ಯಾವುದೇ ಮನವಿ ಪರಿಗಣಿಸದೆ ಕರಾರನ್ನು ರದ್ದುಗೊಳಿಸಿ ಆದೇಶಿಸುವುದರ ಜತೆಗೆ ಕೊಡಬೇಕಾದ ಬಾಡಿಗೆ ಹಣಕ್ಕೆ ಬಡ್ಡಿ ವಿಧಿಸಿ ಪ್ರಸ್ತುತ ಮಾರುಕಟ್ಟೆ ದರದಂತೆ ಹಣವನ್ನು ದೇವಾಲಯಕ್ಕೆ ಪಾವತಿಸಲು ಸೂಚಿಸುವಂತೆ ಕೋರಿತ್ತು.
ಜತೆಗೆ, ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಹಾಗೂ ಪ್ರವಾಸಿಗರಿಗೆ ವಸತಿಗೃಹ, ಶೌಚಗೃಹ, ಲಗೇಜ್ ಕೊಠಡಿ, ವಿಶ್ರಾಂತಿ ಕೊಠಡಿ, ಸ್ನಾನಗೃಹ, ಮುಡಿಕಟ್ಟೆ, ನಿತ್ಯದಾಸೋಹ ಭವನ, ವಾಹನ ರ್ಪಾಂಗ್ ವ್ಯವಸ್ಥೆ ಹಾಗೂ ದೇವಾಲಯಕ್ಕೆ ಸೂಕ್ತ ಆಡಳಿತ ಕಚೇರಿ ನಿರ್ಮಾಣ ಸೇರಿದಂತೆ ಇತರ ಅಭಿವೃದ್ಧಿ ಕಾರ್ಯಗಳಿಗೆ ಎಂಟು ಎಕರೆ ಜಮೀನು ಅಗತ್ಯವಿದೆ ಎಂದು ವಿವರಿಸಿತ್ತು. ಈ ಹಿನ್ನೆಲೆಯಲ್ಲಿ ಪರಿಶೀಲಿಸಿದ ಸರ್ಕಾರದ ಅಧೀನ ಕಾರ್ಯದರ್ಶಿ ಎಂ.ಎಲ್.ವರಲಕ್ಷ್ಮೀ , ಫೆ.25ರಂದು ಹೊರಡಿಸಿರುವ ಆದೇಶದಲ್ಲಿ ಜಮೀನನ್ನು ವಶಕ್ಕೆ ಪಡೆಯುವುದರ ಜತೆಗೆ ಕರ್ನಾಟಕ ಹಿಂದು ಧಾರ್ವಿುಕ ಸಂಸ್ಥೆಗಳು ಹಾಗೂ ಧರ್ವದಾಯ ದತ್ತಿಗಳ ಅಧಿನಿಯಮ 1997ರ ಕಲಂ 34(2) ಹಾಗೂ ನಿಯಮದನ್ವಯ ಸಂಸ್ಥೆಯಿಂದ ಬಾಕಿ ಹಣ ವಸೂಲಿ ಮಾಡುವಂತೆ ಧಾರ್ವಿುಕ ದತ್ತಿ ಇಲಾಖೆ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.
ಪತ್ರ ವ್ಯವಹಾರ ನಡೆದಿದೆ:ಧಾರ್ವಿುಕ ದತ್ತಿ ಇಲಾಖೆ ಹೇಳಿರುವಂತೆ ನವೀಕರಣಕ್ಕೆ ಸಂಸ್ಥೆಯಿಂದ ಹಲವು ಬಾರಿ ಪತ್ರ ವ್ಯವಹಾರ ನಡೆದಿದೆ. ಆದರೆ ಆಗ ಯಾರೊಬ್ಬರೂ ಗಂಭೀರವಾಗಿ ಗಮನಹರಿಸಿಲ್ಲ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.
ನವೀಕರಣಕ್ಕೆ ಸಂಬಂಧಿಸಿದಂತೆ ಸಂಸ್ಥೆಯಿಂದ ಪತ್ರ ವ್ಯವಹಾರ ಮಾಡಲಾಗಿದೆ ಎನ್ನುವ ಮಾಹಿತಿ ಇದೆ. ಇದು ಕೂಡ ಸರ್ಕಾರದ ಸಂಸ್ಥೆಯೇ ಆಗಿದೆ. ಆದ್ದರಿಂದ ನಿಯಮಾನುಸಾರ ಸಮಸ್ಯೆ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಪತ್ರ ವ್ಯವಹಾರ ಮಾಡಲಾಗುವುದು.
|ಪ್ರೊ.ಎಂ.ಕೊಟ್ರೇಶ್ರಿಜಿಸ್ಟ್ರಾರ್, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 6 =
Remember me
