|ಶ್ರೀಧರ ಅಣಲಗಾರಯಲ್ಲಾಪುರ
ಪ್ರಸಕ್ತ ಸಾಲಿನ ರಾಜ್ಯ ಬಜೆಟ್​ನಲ್ಲಿ ಪ್ರಸ್ತಾಪವಾಗಿರುವ ಬೇಡ್ತಿ-ವರದಾ ನದಿ ಜೋಡಣೆ ಯೋಜನೆ ವಿರೋಧಿಸಿ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ಜನ ಸಂಘಟಿತರಾಗುತ್ತಿದ್ದಾರೆ.
ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮುಂದಾಳತ್ವದಲ್ಲಿ ಹೋರಾಟಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಯಲ್ಲಾಪುರದಲ್ಲಿ ಬಹುಕೋಟಿ ವೆಚ್ಚದ ಬೇಡ್ತಿ ಶಾಶ್ವತ ಕುಡಿಯುವ ನೀರಿನ ಯೋಜನೆ ನೀರಿಲ್ಲದೇ ಶಾಶ್ವತವಾಗಿ ಮುಚ್ಚಿ ಹೋದ ನಿದರ್ಶನ ಕಣ್ಮುಂದೆ ಇದ್ದರೂ, ಈಗ ಅದೇ ಬೇಡ್ತಿ ನದಿಗೆ ಇನ್ನೊಂದು ದೊಡ್ಡ ಯೋಜನೆ ಜೋಡಿಸುತ್ತಿರುವುದು ವಿಪರ್ಯಾಸ.
ಪಟ್ಟಣಕ್ಕೆ ಬೇಡ್ತಿ ನದಿಯಿಂದ ಕುಡಿಯುವ ನೀರು ತರುವ ಮಹತ್ವಾಕಾಂಕ್ಷಿ ಯೋಜನೆ 20 ಕೋಟಿ ರೂಪಾಯಿಗಿಂತ ಹೆಚ್ಚಿನ ವೆಚ್ಚದಲ್ಲಿ 2011ರಲ್ಲಿ ಪ್ರಾರಂಭವಾಯಿತು. ಯೋಜನೆಯ ಆರಂಭಕ್ಕೂ ಮುನ್ನವೇ ಅಪಸ್ವರ ಕೇಳಿಬಂದಿತ್ತು. ಬೇಡ್ತಿ ನದಿಯಲ್ಲಿ ವರ್ಷದ ಬಹುಕಾಲ ನೀರೇ ಇರುವುದಿಲ್ಲ. ಬೇಸಿಗೆಯಲ್ಲಿ ನದಿ ಸಂಪೂರ್ಣ ಬತ್ತಿ ಹೋಗುತ್ತದೆ. ನದಿಯ ನೀರು ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ತ್ಯಾಜ್ಯವೇ ಹೊರತು ಶುದ್ಧ ನೀರಲ್ಲ. ಇಷ್ಟೆಲ್ಲದರ ನಡುವೆ ಯಾವ ಪುರುಷಾರ್ಥಕ್ಕೆ ಬೇಡ್ತಿಯ ನೀರನ್ನು ಯಲ್ಲಾಪುರಕ್ಕೆ ತರುತ್ತೀರಿ ಎಂದು ಸಾರ್ವಜನಿಕರು ಈ ಯೋಜನೆಯನ್ನು ವಿರೋಧಿಸಿದ್ದರು. ಬೇಡ್ತಿಗಿಂತ ಕಾಳಿ ನದಿಯ ನೀರನ್ನೇ ಯಲ್ಲಾಪುರಕ್ಕೆ ತರಬೇಕು ಎಂಬ ಪರ್ಯಾಯ ವಾದ ಬಲಗೊಂಡಿತ್ತು. ಆದರೂ ಬೇರೆ ಬೇರೆ ಕಾರಣಗಳಿಗಾಗಿ ಬೇಡ್ತಿ ಯೋಜನೆಯನ್ನು ಜಾರಿಗೊಳಿಸಲಾಗಿತ್ತು.
ಬೇಡ್ತಿ ನೀರನ್ನು ಸವಣಗೇರಿ ಬಳಿ ಹಾಗೂ ಯಲ್ಲಾಪುರದ ವೈಟಿಎಸ್​ಎಸ್ ಆವರಣದಲ್ಲಿರುವ ಶುದ್ಧೀಕರಣ ಘಟಕದಲ್ಲಿ ರಾಸಾಯನಿಕ ಬಳಸಿ ಶುದ್ಧೀಕರಿಸಲಾಗುತ್ತಿತ್ತು. ನೀರು ಸಂಗ್ರಹಕ್ಕಾಗಿ ಬೃಹತ್ ಟ್ಯಾಂಕ್ ನಿರ್ವಿುಸಲಾಗಿತ್ತು. ಯೋಜನೆ ಜಾರಿಯಾದ ನಂತರವೂ ಬೇಡ್ತಿ ನೀರು ಅಶುದ್ಧ ಎಂಬ ದೂರುಗಳು ಪದೇಪದೆ ಕೇಳಿ ಬರುತ್ತಲೇ ಇದ್ದವು. ಯೋಜನೆ ಕೆಲವೆ ವಾರ್ಡ್​ಗಳಲ್ಲಿ ಆರಂಭವಾಗಿದ್ದು, ಇಡೀ ಪಟ್ಟಣಕ್ಕೆ ವಿಸ್ತರಿಸಲು ಸಾಧ್ಯವಾಗಿರಲಿಲ್ಲ. ಅಲ್ಲಿಯೂ ಜನರು ಬೇಡ್ತಿ ನೀರನ್ನು ಉಪಯೋಗಿಸುತ್ತಿರಲಿಲ್ಲ.
ಇಷ್ಟು ದೊಡ್ಡ ಯೋಜನೆಯ ಮೂಲಕ ನೀರು ಪೂರೈಸಲಾಗುತ್ತಿದ್ದರೂ ಬೇಸಿಗೆಯಲ್ಲಿ ನದಿ ಬತ್ತಿ, ಯೋಜನೆ ಸ್ಥಗಿತಗೊಳ್ಳುತ್ತಿತ್ತು. ಆಗ ಜನರು ನೀರಿಗಾಗಿ ಬೋರ್​ವೆಲ್, ಬಾವಿಗಳನ್ನೇ ಅವಲಂಬಿಸಿದ್ದರು. ಯೋಜನೆಯಿಂದ ಪಟ್ಟಣಕ್ಕೆ 3-4 ವರ್ಷ ಸರಿಯಾಗಿ ನೀರು ಪೂರೈಸಲು ಸಾಧ್ಯವಾಗಲಿಲ್ಲ. ಕಳೆದ 5 ವರ್ಷಗಳಿಂದ ಯೋಜನೆ ಸಂಪೂರ್ಣ ಸ್ಥಗಿತಗೊಂಡಿದ್ದು, ಇದಕ್ಕಾಗಿಯೇ ನಿರ್ವಿುಸಿದ ಪ್ರತ್ಯೇಕ ವಿದ್ಯುತ್ ಲೈನ್ ಕಾಡಿನ ನಡುವೆ ಅವಶೇಷವಾಗಿದೆ. ಜಾಕ್​ವೆಲ್, ಶುದ್ಧೀಕರಣ ಘಟಕ, ಯಂತ್ರಗಳು ಎಲ್ಲವೂ ವ್ಯರ್ಥವಾಗಿವೆ.
ಮುಂದಾಲೋಚನೆ ಇಲ್ಲದೇ ಜಾರಿಗೆ ತಂದ ಕೋಟ್ಯಂತರ ರೂ. ಯೋಜನೆ ಸಂಪೂರ್ಣ ಹಳ್ಳ ಹಿಡಿದ ನಿದರ್ಶನ ಕಣ್ಣ ಮುಂದೆ ಇರುವಾಗ ಕಣ್ಣು ಮುಚ್ಚಿದವರಂತೆ ಸರ್ಕಾರ ವರ್ತಿಸುವುದೇಕೆ ಎಂದು ಜನತೆ ಕೇಳುವಂತಾಗಿದೆ. ಪ್ರತಿವರ್ಷ ಫೆಬ್ರವರಿಯಿಂದಲೇ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತ ಬರುತ್ತದೆ. ಬೇಸಿಗೆಯಲ್ಲಂತೂ ನೀರೇ ಇರುವುದಿಲ್ಲ. ನೀರೇ ಇಲ್ಲದ ನದಿಯನ್ನು ಇನ್ನೊಂದು ನದಿ ಜತೆ ಜೋಡಿಸುವುದು ಹೇಗೆ ಎಂಬ ಪ್ರಶ್ನೆ ಮೂಡುತ್ತಿದೆ. ಹೀಗಿದ್ದೂ ಪ್ರಸ್ತಾಪಿತ ಬೇಡ್ತಿ-ವರದಾ ನದಿ ಜೋಡಣೆಯ ಯೋಜನೆ ನೀರಿಲ್ಲದೆ ಮತ್ತೆ ಹಳ್ಳ ಹಿಡಿಯುವುದರಲ್ಲಿ ಸಂಶಯವಿಲ್ಲ. ಇದನ್ನು ಜಾರಿಗೆ ತರುವ ಮುನ್ನ ಎಚ್ಚೆತ್ತುಕೊಳ್ಳುವುದು ಒಳಿತೆಂಬ ಮಾತು ಜನರಿಂದ ಕೇಳಿ ಬರುತ್ತಿದೆ.
ಬೇಡ್ತಿ ನದಿಯನ್ನು ವರದಾ ನದಿಗೆ ಜೋಡಿಸುವ ಕಾರ್ಯ ಮೂರ್ಖತನದ್ದು. ಬೇಸಿಗೆಯಲ್ಲಿ ನೀರು ಸಂಪೂರ್ಣ ಬತ್ತಿ ಹೋಗುತ್ತಿದ್ದು, ನೀರಿಲ್ಲದ ನದಿಯನ್ನು ಜೋಡಿಸಿ ಪ್ರಯೋಜನವಾದರೂ ಏನು? ಯಲ್ಲಾಪುರದ ಜನರಿಗೆ ಕುಡಿಯುವ ನೀರು ಒದಗಿಸುವ ಯೋಜನೆಯೇ ವಿಫಲವಾಗಿದ್ದು, ಸರ್ಕಾರದ ಕೋಟ್ಯಂತರ ರೂಪಾಯಿ ವ್ಯರ್ಥವಾಗಿದೆ. ಹೊಸದಾಗಿ ನೀರಿಲ್ಲದ ನದಿಯನ್ನು ಮತ್ತೊಂದು ನದಿಗೆ ಜೋಡಿಸುವುದರ ಹಿಂದೆ ಅರಣ್ಯ ನಾಶದ ಅಥವಾ ಯಾರದ್ದೋ ಜೇಬು ತುಂಬಿಸುವ ಹುನ್ನಾರ ನಡೆದಿದೆಯೇ ಎಂಬ ಸಂದೇಹ ಕಾಡುತ್ತದೆ.
|ಶ್ಯಾಮ ಹೆಗಡೆಸಾಮಾಜಿಕ ಕಾರ್ಯಕರ್ತ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 14 =
Remember me
