ಬೆಂಗಳೂರು :ಹಿಂದೆ ಹಳ್ಳಿಗಳಲ್ಲಿದ್ದ ವಿವಿಧ ವರ್ಗದವರ ಮನೆ, ಹಿಂದಿನ ಶಾಲೆ, ಪಂಚಾಯಿತಿ ಕಟ್ಟೆ, ನೀರು ಸೇದುವ ಬಾವಿ, ಎಡೆಮಟ್ಟೆಯಾಟ, ಯಕ್ಷಗಾನ ಹೀಗೆ ರಾಜ್ಯದ ಹಳ್ಳಿಗಳ ಬದುಕನ್ನು ಕಣ್ಣಿಗೆ ಕಟ್ಟುವಂತೆ ಕಟ್ಟಿಕೊಡುವ ಪ್ರಯತ್ನವೊಂದು ಬೆಂಗಳೂರಿನಲ್ಲಿ ನಡೆದಿದೆ. ನಗರದ ಒತ್ತಡದ ಜೀವನದಲ್ಲಿರುವವರಿಗೆ ಗ್ರಾಮೀಣ ಸಂಸ್ಕೃತಿ ಹಾಗೂ ರೈತರ ಬದುಕನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಸರ್ಕಾರ ಮಾಡಿರುವ ಪ್ರಯತ್ನ ಶುಕ್ರವಾರ (ನ.13) ಅನಾವರಣವಾಗಲಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆಯ ವ್ಯಾಪ್ತಿಯ ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆ 13.24 ಕೋಟಿ ರೂ. ವೆಚ್ಚದಲ್ಲಿ ಜಕ್ಕೂರಿನಲ್ಲಿ ಮಾದರಿ ಪಾರಂಪರಿಕ ಗ್ರಾಮವನ್ನು ನಿರ್ವಿುಸಿದೆ.
ಏನಿದು ಪಾರಂಪರಿಕ ಗ್ರಾಮ?:ಹಿಂದೆ ಇದ್ದ ಗ್ರಾಮೀಣ ಸಂಸ್ಕೃತಿ ಮತು ್ತ ಸ್ವಾವಲಂಬನೆಯ ಬದುಕಿನ ಪರಿಚಯವನ್ನು ಮತ್ತೊಮ್ಮೆ ಕಲಾರೂಪದಲ್ಲಿ ತೋರಿಸುವ ಪ್ರಯತ್ನ ಇದಾಗಿದೆ. ರಾಜ್ಯದಲ್ಲಿ ಇದು ಮೊದಲ ಪಾರಂಪರಿಕ ಗ್ರಾಮ ಎನಿಸಿಕೊಳ್ಳಲಿದ್ದು, ಬೆಂಗಳೂರಿನ ಪ್ರವಾಸಿತಾಣವೂ ಆಗಲಿದೆ.
ಏನೇನು ಇದೆ?:ರಾಜ್ಯದ ಗ್ರಾಮಗಳಲ್ಲಿರುವ ಅಗಸಿ ಬಾಗಿಲು, ಅಕ್ಕಪಕ್ಕದಲ್ಲಿ ಕುರಿ- ಆಡುಗಳು, ದನಕರು ಸಾಕಾಣಿಕೆ, ಬುಡಬುಡಿಕೆ ಹೇಳುವವ, ಹಳ್ಳಿ ವೈದ್ಯೆ, ಕಿರಾಣಿ ಅಂಗಡಿಗಳಿವೆ. ಒಕ್ಕಲಿಗ, ಸಿಂಪಿಗ, ಪತ್ತಾರ, ಬ್ರಾಹ್ಮಣ, ಶಾನಭೋಗ, ಗೌಡ, ತೊಟ್ಟಿ ಮನೆ, ಗಾಣಿಗೇರ, ಮಾಳಿಗೆ ಮನೆ, ಶಾವಿಗೆ ಮಾಡುವವರ ಮನೆ, ಕುರುಬರ ಮನೆಗಳಿವೆ. ಅಗಸ, ಶಿಲ್ಪಕಾರ, ಆಟಿಕೆ ನಿರ್ವಿುಸುವವರು, ಕುಂಬಾರ, ಬಳೆಗಾರ, ಕಂಬಾರ, ಮೀನಗಾರ, ಬಡಿಗರ ಮನೆ ಮಾದರಿಗಳಿವೆ. ಕೊಡಗು ಮನೆ, ಶಾಲಿ ಗುಡಿ, ಪಂಚಾಯತಿ ಕಟ್ಟೆ, ನೀರು ಸೇದುವ ಬಾವಿ, ಸುಣಗಾರ ಬಟ್ಟಿ ನಿರ್ವಣ, ಚಮ್ಮಾರರ ಮನೆ, ಲಂಬಾಣಿಗರ ಮನೆ, ಚಕ್ಕಡಿ ಬಂಡಿ, ಗ್ರಾಮೀಣ ಮಕ್ಕಳ ಕ್ರೀಡೆ ಇತ್ಯಾದಿ ನೋಡಬಹುದಾಗಿದೆ. ಸಾಂಪ್ರದಾಯಿಕ ಬೇಸಾಯ ಪದ್ಧತಿಯಲ್ಲಿರುವ ರಂಟೆ, ಕುಂಟೆ, ಉಳುಮೆ, ಬಿತ್ತುವ ಸನ್ನಿವೇಶಗಳನ್ನು ಕಣ್ತುಂಬಿಕೊಳ್ಳಬಹುದು. ದನಗಳ ಸಂತೆ, ರೈತರ ಸಂತೆ, ದೇಸಿ ಕುಸ್ತಿ ಕಣ, ಕಪಲಿ ಬಾವಿ, ಕಣ, ತೂರುವ ಸನ್ನಿವೇಶಗಳು ಇಲ್ಲಿರಲಿವೆ.
ಜಾನಪದ ಪ್ರಕಾರಗಳುರಾಜ್ಯದ ಬೇರೆ ಬೇರೆ ಪ್ರಾಂತ್ಯದ ಜಾನಪದ ಪ್ರಕಾರಗಳ ಮತು ್ತ ಜಾನಪದ ವೇಷಗಳ ಭೂಷಣಗಳ ಮಾದರಿ, ಶಿಲ್ಪಕಲಾಕೃತಿಗಳಿವೆ. ಅವುಗಳೆಂದರೆ ದೊಡ್ಡಾಟ, ಯಕ್ಷಗಾನ, ಮೂಡಲಪಾಯ ಬಯಲಾಟ, ಹುಲಿವೇಷ, ಜಗ್ಗಲಿಗೆ, ಕರಡಿ ಮಜಲು, ವೀರಗಾಸೆ, ರಣ ಹಲಗಿ, ಬುರ್ರಕಥಾ, ನಗಾರಿ, ಗೊಂದಲಿಗರು, ಕಿನ್ನರಿ ಜೋಗಿ, ಕರಗ, ಪೂಜಾ ಕುಣಿತ, ಸೋಮನ ಕುಣಿತ, ನಂದಿಕೋಲು ಕುಣಿತ, ಜೋಗತಿ-ಚೌಡಕಿ, ಕಂಸಾಳೆ, ಗೊರವರ- ಕರಡಿ ಗೊರವರ ಕುಣಿತ, ಉತ್ತರಿ, ಆಟಿಕಳಂಜ, ಕೀಲುಕುದುರೆ ಕುಣಿತ, ಕುಡುಬಿಯರ ಕುಣಿತ, ಕೊರಗರ ಡೋಲು ಕುಣಿತ, ಸಿದ್ದಿಯರ ಪುಗಡಿ ಕುಣಿತ, ಹಾಲಕ್ಕಿ ಒಕ್ಕಲಿಗರ ಗಮಟೆ ಪಾಂಗ್, ಗೌಳಿಗೆರ ಕುಣಿತ, ಕಾಡು ಗೊಲ್ಲರ ಗಣೇಪದ, ಲಂಬಾಣಿಗರ ಕುಣಿತ, ಬಹುರೂಪಿ- ವೇಷಗಾರರು, ಪಾರಿಜಾತ, ಸೂತ್ರದ ಗೊಂಬೆಯಾಟ, ಮಾಂಕಾಳಿ ಕುಣಿತ, ಕಾವಡಿ ಕುಣಿತ, ಗೊಂಡರ ಮಂಡರ, ಭೂತಾರಾಧನೆ, ಪಾಳೆಗಾರ ವೇಷ, ಸುಡುಗಾಡು ಸಿದ್ಧ, ಮಳೆರಾಯಣ ಪೂಜೆ- ಗುರ್ಜಿ, ಕೊಂಡಾ ಮಾಮಾ (ಕುರಕುರ ಮಾಮಾ), ಗಾರುಡಿ ಗೊಂಬೆ ಕುಣಿತದ ಮಾದರಿಗಳನ್ನು ಇಲ್ಲಿ ನಿರ್ವಿುಸಲಾಗಿದೆ.
ಗ್ರಾಮೀಣ ಕ್ರೀಡೆಗಳುರಾಜ್ಯದ ಗ್ರಾಮೀಣ ಕ್ರೀಡೆಗಳಾದ ಬುಗರಿ, ಚಮಚೆ ಲಿಂಬು, ಬಳಿ ಚುಕ್ಕ, ಎಡೆ ಮಟ್ಟೆ, ಕಣ್ಣಾಮುಚ್ಚಾಲೆ, ಕಪ್ಪೆ ಜಿಗಿತ, ಗುಬ್ಬಿ ಮನೆ, ಮೂರು ಕಾಲಿನ ಓಟದಾಟ, ಹಗ್ಗ ಜಿಗಿಯುವ ಆಟ, ಚೋರಿ-ಚೋರರ ಆಟ, ನಂದಿಕೋಲು, ಜಕ್-ಬುಕ್ , ಗಡಿಗೆ ಒಡೆಯುವಾಟ, ಮುಷ್ಟಿ ಬಗ್ಗಿಸುವ ಆಟ, ಜಡೆಯ ಲಿಂಗದ ಆಟ ಹೀಗೆ ಇನ್ನೂ ಹಲವು ಸನ್ನಿವೇಶಗಳನ್ನು ನಿರ್ವಿುಸಲಾಗಿದೆ.
ಇನ್ನಷ್ಟು ಮಾಹಿತಿ* ಎಲ್ಲ ಜಿಲ್ಲೆಗಳ ಸಂಸ್ಕೃತಿಯ ಪರಿಚಯ* ಎಲ್ಲ ಜಿಲ್ಲೆಗಳ ಭಾಷಾ ವೈವಿಧ್ಯ ಅನಾವರಣ* ಎಲ್ಲ ಜಾನಪದ ಕಲೆಗಳ ಪ್ರಸ್ತುತಿ* ಕಂಬಳ, ಕುಸ್ತಿ ಸೇರಿ ಜಾನಪದ ಕ್ರೀಡೆಗಳ ದರ್ಶನ* ರೈತರ ಸಂತೆ, ದನಗಳ ಸಂತೆಗಳ ವಿನಿಮಯ ಕೇಂದ್ರದ ಮಾದರಿ* ಕೃಷಿಕರ ಬದುಕು ಕಟ್ಟಿಕೊಡುವ ಪ್ರಯತ್ನ* ಜಾತ್ಯತೀತ, ಕಸಬುಗಳ ಆಧಾರಿತ ಜೀವನ* ಗ್ರಾಮ ಆಡಳಿತ, ಗ್ರಾಮವೈದ್ಯ, ವೈದಿಕತೆ, ವ್ಯಾಪಾರ ವಿನಿಮಯ ಕೊಡುಕೊಳ್ಳುವಿಕೆ ಪರಿಚಯ* ಕೈಕಸುಬು, ಸ್ವಸಹಾಯ ಪದ್ಧತಿಗಳ ಅನಾವರಣ* ಗ್ರಾಮೀಣ ಶೈಲಿಯ ಉಪಾಹಾರ ಗೃಹ
ಒಂದಷ್ಟು ವಿವರ* ಒಟ್ಟು 3.5 ಎಕರೆ ಪ್ರದೇಶ* 2018 ಮಾರ್ಚ್​ನಲ್ಲಿ ಕಾಮಗಾರಿ ಆರಂಭ, 2020 ಮೇನಲ್ಲಿ ಮುಕ್ತಾಯ* 13.24 ಕೋಟಿ ರೂ. ವೆಚ್ಚ* ಪರಿಕಲ್ಪನೆ: ಸಲಬಕ್ಕನವರ್ ಮತ್ತು ತಂಡ
ಎಲ್ಲಿದೆ?ಮಹಾತ್ಮಾ ಗಾಂಧಿ ಗ್ರಾಮೀಣ ಇಂಧನ ಮತ್ತು ಅಭಿವೃದ್ಧಿ ಸಂಸ್ಥೆಶ್ರೀರಾಮಪುರ ಕ್ರಾಸ್, ಜಕ್ಕೂರು
ವಸತಿ ರಿಯಲ್​ಎಸ್ಟೇಟ್ ಕ್ಷೇತ್ರಕ್ಕೆ ಉಡುಗೊರೆ- ಬಿಲ್ಡರ್​ಗಳಿಗೂ, ಮನೆ ಖರೀದಿದಾರರಿಗೂ ತೆರಿಗೆ ವಿನಾಯಿತಿ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nine − 2 =
Remember me
