| ಯಂಕಣ್ಣ ಸಾಗರ್ ಬೆಂಗಳೂರು
ಕಾನೂನು ಸುವ್ಯವಸ್ಥೆ ನಿರ್ವಹಣೆ ಹಾಗೂ ಅಪರಾಧಕ ಪ್ರಕರಣಗಳ ಪರಿಣಾಮಕಾರಿ ತನಿಖೆ ದೃಷ್ಟಿಯಿಂದ ರಾಜ್ಯದ 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳನ್ನು ಮೇಲ್ದರ್ಜೆಗೇರಿಸಲು ರಾಜ್ಯ ಸರ್ಕಾರ ತೀರ್ವನಿಸಿದೆ. ಮೇಲ್ದರ್ಜೆಗೇರಿಸುವ ಕುರಿತು ಸೆ.14ರ ಮಧ್ಯಾಹ್ನ 12 ಗಂಟೆಯೊಳಗೆ ಡಿಜಿಪಿ ಕೇಂದ್ರ ಕಚೇರಿಗೆ ಅಭಿಪ್ರಾಯ ಕಳಿಸುವಂತೆ ಎಲ್ಲ ಜಿಲ್ಲಾ ಎಸ್​ಪಿಗಳಿಗೆ ಡಿಜಿಪಿ ಪ್ರವೀಣ್ ಸೂದ್ ಸೂಚನೆ ನೀಡಿದ್ದು, ಅಭಿಪ್ರಾಯ ಸ್ವೀಕೃತವಾದ ಬಳಿಕ ಮೇಲ್ದರ್ಜೆಗೇರಿಸುವ ಪ್ರಕ್ರಿಯೆ ಶುರುವಾಗಲಿದೆ.
ಮೇಲ್ದರ್ಜೆಗೇರಿಸಲು ಆಯ್ಕೆಯಾಗಿರುವ ಪೊಲೀಸ್ ಠಾಣೆಗಳಲ್ಲಿ ಸದ್ಯ ಸಬ್ ಇನ್​ಸ್ಪೆಕ್ಟರ್​ಗಳ ಉಸ್ತುವಾರಿ ಇದೆ. ಸರ್ಕಲ್ ಇನ್​ಸ್ಪೆಕ್ಟರ್​ಗಳ ಅಧೀನದಲ್ಲಿ ಕಾರ್ಯನಿರ್ವಹಿಸಬೇಕಿದೆ. ಇನ್​ಸ್ಪೆಕ್ಟರ್​ಗಳ ಅನುಮತಿ ಇಲ್ಲದೆ ಅಥವಾ ಅವರ ಗಮನಕ್ಕೆ ತರದೆ ನೇರವಾಗಿ ಯಾವುದೇ ರೀತಿಯ ನಿರ್ಧಾರ ತೆಗೆದುಕೊಳ್ಳಲು ಸಬ್ ಇನ್​ಸ್ಪೆಕ್ಟ್​ಗಳಿಗೆ ಅಧಿಕಾರವಿಲ್ಲ. ಇದರಿಂದಾಗಿ ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ಪ್ರಕರಣಗಳ ನಿರ್ವಹಣೆ ಪರಿಣಾಮಕಾರಿಯಾಗಿರುವುದಿಲ್ಲ. ಆದ್ದರಿಂದ ಠಾಣೆಗಳನ್ನು ಮೇಲ್ದರ್ಜೆಗೇರಿಸಿ ಇನ್​ಸ್ಪೆಕ್ಟರ್​ಗಳನ್ನು ನಿಯೋಜಿಸಲು ನಿರ್ಧರಿಸಲಾಗಿದೆ.
ಪಿಎಸ್​ಐ ಠಾಣಾಧಿಕಾರಿಗಳಿರುವ ಠಾಣೆಗಳಲ್ಲಿ ಪೊಲೀಸ್ ಇನ್​ಸ್ಪೆಕ್ಟರ್​ಗಳನ್ನು ಠಾಣಾಧಿಕಾರಿಗಳನ್ನಾಗಿಸಿ ಮೇಲ್ದರ್ಜೆಗೇರಿಸಲು ಮಂಡ್ಯ, ಚಾಮರಾಜನಗರ, ಹಾಸನ, ಚಿಕ್ಕಬಳ್ಳಾಪುರ, ಹಾವೇರಿ ಹಾಗೂ ಶಿವಮೊಗ್ಗ ಸೇರಿದಂತೆ 16 ಜಿಲ್ಲೆಗಳ 56 ಪೊಲೀಸ್ ಠಾಣೆಗಳನ್ನು ಗುರುತಿಸಲಾಗಿದೆ ಎಂದು ಎಡಿಜಿಪಿ ಡಾ. ಎಂ.ಎ.ಸಲೀಂ ಮಾಹಿತಿ ನೀಡಿದ್ದಾರೆ.
ಚಿಕ್ಕಬಳ್ಳಾಪುರ
ಹಾಸನ
ಚಾಮರಾಜನಗರ
ಮಂಡ್ಯ
ಹಾವೇರಿ
ಶಿವಮೊಗ್ಗ
ದಕ್ಷಿಣ ಕನ್ನಡ
ಚಿಕ್ಕಮಗಳೂರು
ಉಡುಪಿ
ಬಾಗಲಕೋಟೆ
ಗದಗ
ಧಾರವಾಡ
ವಿಜಯಪುರ
ಬಳ್ಳಾರಿ
ಕೊಪ್ಪಳ
ಮಂಡ್ಯ
ಉತ್ತರ ಕನ್ನಡ
ಶಿವಮೊಗ್ಗ
Web Exclusive: ನವೋದಯ ಪ್ರವೇಶಕ್ಕೆ ಮೀಸಲು ಅಡ್ಡಿ; ನೂತನ ಆದೇಶದಿಂದ ಗೊಂದಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 2 =
Remember me
