|ಗುರುಪ್ರಸಾದ್ ತುಂಬಸೋಗೆಮೈಸೂರು
ಪಕ್ಷಿಗಳ ಸ್ವರ್ಗ ಎನಿಸಿಕೊಂಡ ಬಿಳಿಗಿರಿರಂಗನ ಬೆಟ್ಟ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅರಣ್ಯ ಇಲಾಖೆ ವತಿಯಿಂದ ರಾಜ್ಯ ಮಟ್ಟದ ಹಕ್ಕಿಹಬ್ಬ ಆಯೋಜಿಸಲಾಗಿದೆ. ಜನವರಿ 5 ರಿಂದ 7ರವರೆಗೆ ಬಿಆರ್​ಟಿ ಅರಣ್ಯ ಪ್ರದೇಶ ವಿವಿಧ ವನ್ಯಜೀವಿ ವಿಭಾಗಗಳಲ್ಲಿ ಹಕ್ಕಿಹಬ್ಬ ನಡೆಯಲಿದ್ದು, ದೇಶದ ವಿವಿಧೆಡೆಯಿಂದ ಆಗಮಿಸಲಿರುವ ಹಕ್ಕಿ ವೀಕ್ಷಕರು, ಆಸಕ್ತರು, ಸಂಶೋಧಕರು ಸುಮಾರು 50ರಿಂದ 60 ಜನ ಭಾಗವಹಿಸಲಿದ್ದಾರೆ. ಅರಣ್ಯ ಇಲಾಖೆ ಪ್ರತಿವರ್ಷವೂ ಹಕ್ಕಿ ಹಬ್ಬವನ್ನು ಆಚರಿಸುತ್ತಿದ್ದು, ರಂಗನತಿಟ್ಟು, ಬಳ್ಳಾರಿ, ದಾಂಡೇಲಿ ಮತ್ತಿತರ ಕಡೆ ಈಗಾಗಲೇ ಯಶಸ್ವಿಯಾಗಿ ನಡೆದಿರುವ ಹಕ್ಕಿಹಬ್ಬ ಚಾಮರಾಜನಗರ ಜಿಲ್ಲೆಯಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿದೆ.
ವಿಶೇಷ ಅರಣ್ಯ:ಪೂರ್ವ ಮತ್ತು ಪಶ್ಚಿಮ ಘಟ್ಟಗಳನ್ನು ಸಂದಿಸುವ ಬಿಳಿಗಿರರಂಗನಾಥ ಬೆಟ್ಟ ಅರಣ್ಯವು ನಾಲ್ಕು ಬಗೆಯ ಕಾಡನ್ನು ಹೊಂದಿದೆ. ಈ ಅರಣ್ಯದಲ್ಲಿ 80ರಷ್ಟು ಹುಲಿಗಳಿವೆ ಎಂದು ಅಂದಾಜಿಸಲಾಗಿದೆ. ಇನ್ನು ಮನಿಯಾಡಲು, ಮಲಬಾರ್ ಗಿಣಿ, ಕಾಮಳ್ಳಿ ಹಕ್ಕಿಗಳು ಸೇರಿ 274 ವಿವಿಧ ಪ್ರಭೇದದ ಪಕ್ಷಿಗಳಿವೆ. ಇತ್ತೀಚೆಗೆ ಎಪಿಸಿಸಿಎಫ್ ರಾಮಚಂದ್ರ ಅವರು ಬ್ರೌನ್ ಫಿಷ್ ಔಲ್ ಗೂಬೆಯನ್ನು ಗುರುತಿಸಿದ್ದು, ಹೊಸದಾಗಿ ಸೇರ್ಪಡೆಗೊಂಡಿದೆ ಎನ್ನುತ್ತಾರೆ ಬಿಆರ್​ಟಿ ಡಿಸಿಎಫ್ ಸಂತೋಷ್​ಕುಮಾರ್.
ಇದನ್ನೂ ಓದಿ:ಕರೊನಾ ಹೋಗುವುದರೊಳಗೆ ಬಂತು ಮತ್ತೊಂದು ಡೆಡ್ಲಿ ಸೋಂಕು! ದೇಶದ ಹಲವು ಭಾಗಗಳಲ್ಲಿ ಪತ್ತೆ, 9 ಸಾವು!
ಮೂರು ದಿನ ಹಬ್ಬ:ಪಕ್ಷಿವೀಕ್ಷಕರು ಮೂರು ದಿನವೂ ಬಿಆರ್​ಟಿಯ ವ್ಯಾಪ್ತಿಯ ಕೆ.ಗುಡಿ, ಪುಣಜನೂರು, ಚಾ.ನಗರ, ಕೊಳ್ಳೇಗಾಲ, ಯಳಂದೂರು ಮತ್ತು ಬಯಲೂರು ವಲಯಗಳಲ್ಲಿ ಹಕ್ಕಿಗಳ ವೀಕ್ಷಣೆ ಮಾಡಲಿದ್ದಾರೆ. ಎಲ್ಲ ಮಾಹಿತಿ ಸಂಗ್ರಹಿಸಿ ಒಟ್ಟುಗೂಡಿಸಿ, ಡಾಟಾವನ್ನು ಪರಾಮಶಿಸಿ ನಂತರದಲ್ಲಿ ಎಷ್ಟು ಪ್ರಭೇದದ ಹಕ್ಕಿಗಳಿವೆ ಎಂಬ ಪಟ್ಟಿ ಬಿಡುಗಡೆ ಮಾಡಲಾಗುವುದು.
ಹಕ್ಕಿಗಳ ಕುರಿತ ಆಸಕ್ತರಿಗೆ ಹಾಗೂ ಹಕ್ಕಿಗಳ ಬಗ್ಗೆ ಅಧ್ಯಯನಶೀಲರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಮತ್ತು ಪರಿಸರ ಹಕ್ಕಿಗಳ ಬಗ್ಗೆ ಜನರಲ್ಲಿ ಪ್ರೀತಿ ಮೂಡುವಂತಾಗಲಿ ಎಂಬ ಉದ್ದೇಶದಿಂದ ಹಕ್ಕಿ ಹಬ್ಬವನ್ನು ಆಯೋಜಿಸಲಾಗುತ್ತಿದೆ. ಈ ವೇಳೆ ಸಂಪನ್ಮೂಲ ವ್ಯಕ್ತಿಗಳು ಪಕ್ಷಿಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.
ಹಕ್ಕಿಹಬ್ಬಯನ್ನು ಬೇರೆ ಜಿಲ್ಲೆಯಲ್ಲಿ ಆಯೋಜಿಸುವ ಚಿಂತನೆ ನಡೆದಿತ್ತು, ಅದನ್ನು ಚಾಮರಾಜನಗರಕ್ಕೆ ತಂದಿದ್ದೇವೆ. ಇದು ಜಿಲ್ಲೆಗೆ ಹೆಮ್ಮೆ ತರುವ ವಿಷಯವಾಗಿದೆ.
|ಮನೋಜ್​ಕುಮಾರ್ಸಿಸಿಎಫ್ ಚಾಮರಾಜನಗರ
‘ಅಂಬಿ ನಿಂಗೆ ವಯಸ್ಸಾಯ್ತೋ’ ನಂತರ ಪ್ರಜ್ವಲ್​ ಜತೆಗೆ ಗುರುದತ್​

ಕೈಲಾಸಕ್ಕೆ ಕಾಸಿಲ್ಲದೆ ವೀಸಾ ತೆಗೆದುಕೊಂಡು ಬನ್ನಿ! ಭಕ್ತರಿಗೆ ಚಳಿಗಾಲದ ಆಫರ್​ ನೀಡಿದ ನಿತ್ಯಾನಂದ ಸ್ವಾಮಿ!

ಸೆಕ್ಸ್​, ಬೆತ್ತಲೆ ಫೋಟೋ ಕದ್ದುಮುಚ್ಚಿ ನೋಡ್ತೀರಿ, ನನ್ನ ದೇಹಕ್ಕೆ ವಿವಾದ ಯಾಕೆ ಎಂದ ಮಿಲಿಂದ್​

ಎಲ್ಲವನ್ನೂ ಒಪ್ಪಿಸಿ ನಂತ್ರ ರೇಪ್​ಕೇಸ್​ ಹಾಕಿದ್ರೆ ಪ್ರಯೋಜನವಾಗಲ್ಲ- ಹೈಕೋರ್ಟ್​ನ ಈ ತೀರ್ಪು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + eighteen =
Remember me
