ಮಂಜುನಾಥ ಕೋಳಿಗುಡ್ಡ
ಬೆಳಗಾವಿ:ರೈತರ ನಿರಾಸಕ್ತಿ, ಗ್ರಾಹಕರ ಕೊರತೆ ಇನ್ನಿತರ ಕಾರಣಗಳಿಂದಾಗಿ‘ಭಾನುವಾರದ ಮಾರುಕಟ್ಟೆ’ ಯೋಜನೆ ನನೆಗುದಿಗೆ ಬಿದ್ದಿದೆ. ರೈತರು ಬೆಳೆದ ತರಕಾರಿ, ಹಣ್ಣುಗಳು ಮತ್ತು ಅವರು ತಯಾರಿಸಿದ ಉಪ ಉತ್ಪನ್ನಗಳಿಗೆ ನೇರವಾಗಿ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 2015-16ನೇ ಸಾಲಿನ ಬಜೆಟ್​ನಲ್ಲಿ ಭಾನುವಾರದ ಮಾರುಕಟ್ಟೆ ಯೋಜನೆ ಘೊಷಿಸಿತ್ತು. ಯೋಜನೆಯಡಿ ತಲಾ 1 ಕೋಟಿ ರೂ. ಅನುದಾನ ನೀಡಿತ್ತು. ಕೆಲ ಕಡೆ ಸ್ಥಳದ ಅಭಾವ ಮತ್ತು ಹಣಕಾಸಿನ ಕೊರತೆ ಮತ್ತಿತರ ಕಾರಣಗಳಿಂದ ಭಾನುವಾರದ ಮಾರುಕಟ್ಟೆಗಳು ಆರಂಭಗೊಂಡಿಲ್ಲ.
ಏನೇನು ಮಾರಾಟ ಮಾಡಬಹುದಿತ್ತು?
ಸಣ್ಣ ಮತ್ತು ಅತಿ ಸಣ್ಣ ರೈತರು ತಮ್ಮ ಜಮೀನುಗಳಲ್ಲಿ ಬೆಳೆದ ತರಕಾರಿ, ಹಣ್ಣು-ಹಂಪಲು ಹಾಗೂ ಅವರು ತಯಾರಿಸುವ ಸಜ್ಜೆ, ಜೋಳದ ರೊಟ್ಟಿ, ತುಪ್ಪ, ಬೆಣ್ಣೆ, ಉಪ್ಪಿನಕಾಯಿ, ಹಪ್ಪಳ ಮತ್ತಿತರ ಬಗೆಯ ಚಟ್ನಿ, ಉಪ ಉತ್ಪನ್ನಗಳನ್ನು ಭಾನುವಾರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅವಕಾಶವಿತ್ತು. ಇಲ್ಲಿ ಮಧ್ಯವರ್ತಿಗಳ ಪ್ರವೇಶಕ್ಕೆ ಆಸ್ಪದ ಇರಲಿಲ್ಲ. ಆದರೆ, ಗ್ರಾಹಕರು ಮಾರುಕಟ್ಟೆ ಬರುತ್ತಿರಲಿಲ್ಲ ಇದರಿಂದ ನಷ್ಟವಾಗುತ್ತಿತ್ತು ಎಂದು ತರಕಾರಿ ಬೆಳೆಗಾರ ಮುತ್ತಪ್ಪ ಎಸ್.ನಾಯಕ, ಮಾರುತಿ ಎಸ್.ನಿಂಗಗೋಳ ತಿಳಿಸಿದ್ದಾರೆ.
ರಾಜ್ಯದಲ್ಲಿ ಅತಿ ಹೆಚ್ಚು ವ್ಯಾಪಾರ-ವಹಿವಾಟು ಹೊಂದಿರುವ ಮತ್ತು ನೆರೆಯ ರಾಜ್ಯದ ಸಂಪರ್ಕ ಹೊಂದಿರುವ ಬೆಳಗಾವಿ, ಮೈಸೂರು, ಹುಬ್ಬಳ್ಳಿ, ಉಡುಪಿ, ಕಲಬುರಗಿ, ಬಳ್ಳಾರಿ, ದಾವಣಗೆರೆ ಎಪಿಎಂಸಿಗಳ ಪ್ರಾಂಗಣಗಳಲ್ಲಿ ‘ಭಾನುವಾರದ ಮಾರುಕಟ್ಟೆಗಳನ್ನು ನಿರ್ವಿುಸಲಾಗಿತ್ತು. ಆರಂಭದಲ್ಲಿ ಮಾರುಕಟ್ಟೆ ಕುಂಟುಂತ ಸಾಗಿತು. ಬಳಿಕ ರೈತರು ಮತ್ತು ಗ್ರಾಹಕರು ಬಾರದಿರುವ ಕಾರಣ ಭಾನುವಾರದ ಮಾರುಕಟ್ಟೆ ಅಸ್ತಿತ್ವ ಕಳೆದುಕೊಂಡು ಬಂದ್ ಆಗಿದ್ದವು.
ಇದನ್ನೂ ಓದಿ:ಮುಂಬೈ ವಿರುದ್ಧದ ಸೋಲಿನ ಬೆನ್ನಲ್ಲೇ ಡೆಲ್ಲಿ ತಂಡಕ್ಕೆ ಎದುರಾಯಿತು 2 ಆಘಾತ!
ರಾಜ್ಯದಲ್ಲಿ ಸುಮಾರು 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಕೊತ್ತಂಬರಿ, ಪುಂಡಿಪಲ್ಲೆ, ಮೆಂತೆ, ಸಬ್ಬಸಗಿ, ಬೀನ್ಸ್, ಕ್ಯಾಬೀಜ್, ಹೂಕೋಸು, ಹಸಿ ಮೆಣಸಿನಕಾಯಿ, ಚವಳಿಕಾಯಿ, ಬೆಂಡೆ, ಸೌತೆ, ಬದನೆ, ಅವರೆ ಇನ್ನಿತರ ತರಕಾರಿ ಹಾಗೂ ಹಣ್ಣಿನ ಪದಾರ್ಥಗಳನ್ನು ಬೆಳೆಯಲಾಗುತ್ತಿದೆ. ನಿತ್ಯ ನೂರಾರು ಟನ್ ತರಕಾರಿ, ಹಣ್ಣು ಪಂಪಲ ನೆರೆಯ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ರೈಲ್ವೆ ಮೂಲಕ ದೆಹಲಿಗೆ ಸರಬರಾಜು ಆಗುತ್ತಿದೆ.
ಇದನ್ನೂ ಓದಿ:ಸವದತ್ತಿ ಯಲ್ಲಮ್ಮ ದೇವಸ್ಥಾನದ ಬಳಿ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್ ತಡೆ
ತರಕಾರಿ, ಹಣ್ಣು ಬೆಳೆಯುವ ಸಣ್ಣ ಮತ್ತು ಮಧ್ಯಮ ಗಾತ್ರದ ರೈತರಿಗೆ ಸೂಕ್ತವಾದ ಬೆಲೆ ಸಿಗದೆ ಮಧ್ಯವರ್ತಿಗಳು ನಿಗದಿಪಡಿಸುವ ಅಗ್ಗದ ದರಕ್ಕೆ ಮಾರಾಟ ಮಾಡುತ್ತಿದ್ದರು. ಇದರಿಂದ ಮಧ್ಯವರ್ತಿಗಳಿಗೆ ಲಾಭವಾಗುತ್ತಿವೆ ವಿನಃ ರೈತರು ಮತ್ತು ಗ್ರಾಹಕರಿಗೆ ಲಾಭವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ರಜೆ ಇರುವ ಹಿನ್ನೆಲೆಯಲ್ಲಿ ಸರ್ಕಾರಿ, ಖಾಸಗಿ ನೌಕರರು ಇನ್ನಿತರ ಅನುಕೂಲಕ್ಕಾಗಿ ಸರ್ಕಾರವು ನಗರ ಪ್ರದೇಶಗಳಲ್ಲಿ ಭಾನುವಾರದ ಮಾರುಕಟ್ಟೆ ನಿರ್ವಿುಸಿತ್ತು. ಆದರೆ, ಗ್ರಾಹಕರ ಕೊರತೆ, ರೈತರ ನಿರಾಸಕ್ತಿಯಿಂದ ಮಾರುಕಟ್ಟೆ ಬಂದ್ ಆಗಿದೆ ಎನ್ನುತ್ತಾರೆ ಎಪಿಎಂಸಿ ಅಧಿಕಾರಿಗಳು.
ಇದನ್ನೂ ಓದಿ:ಸಿ.ಕೆ.ನಾಣು ಪಕ್ಷ ಸಂಘಟನೆ ನಿರ್ಲಕ್ಷಿಸಿದ್ರು ಅಂತ ಕೇರಳ ಜೆಡಿಎಸ್ ಘಟಕವನ್ನೇ ವಜಾಗೊಳಿಸಿದ್ರು ದೇವೇಗೌಡ್ರು..
ಪತ್ರಕರ್ತ ಸಿದ್ಧಿಕ್ ಬಂಧನ ಅಕ್ರಮವೆಂದ ಕೆಯುಡಬ್ಲ್ಯುಜೆ; ಪಿಎಫ್​ಐ ನಂಟಿನ ಸಿದ್ಧಿಕ್ ಇರೋದು ಎಂದ ಪೊಲೀಸರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 16 =
Remember me
