ಶಿವಮೊಗ್ಗ:ಮುಂಬೈನ ಥಾಣೆಯಿಂದ ಬಂದು ಕ್ವಾರಂಟೈನ್‌ನಲ್ಲಿದ್ದ ದಂಪತಿ ಲಾಡ್ಜ್‌ನಲ್ಲೇ ಸಂಬಂಧಿಕರ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದು, ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಈ ಸಂಬಂಧ ನಾಲ್ವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತಾಲೂಕಿನ ಉಂಬ್ಳೆಬೈಲ್ ಸಮೀಪದ ಕಣಗಲಸರ ಗ್ರಾಮದ ವಿಜಯಕುಮಾರ್ ಮತ್ತು ಜ್ಯೋತಿಗೌಡ ದಂಪತಿ ಇತ್ತೀಚೆಗೆ ಮುಂಬೈನಿಂದ ಬಂದಿದ್ದರು. ಹಾಗಾಗಿ ದಂಪತಿಯನ್ನು ನಗರದ ದುರ್ಗಾ ಲಾಡ್ಜ್‌ನಲ್ಲಿ 14 ದಿನ ಕ್ವಾರಂಟೈನ್‌ಗೆ ಇರಿಸಲಾಗಿತ್ತು. ಈ ವೇಳೆ ವಿಜಯಕುಮಾರ್ ತನ್ನ ಸಹೋದರನ ದಂಪತಿಯನ್ನು ಲಾಡ್ಜ್‌ಗೆ ಕರೆಸಿಕೊಂಡು ಅವರ 3ನೇ ವಿವಾಹ ವಾರ್ಷಿಕೋತ್ಸವ ಆಚರಿಸಿದ್ದರು. ಬಳಿಕ 14 ದಿನದ ಕ್ವಾರಂಟೈನ್ ಮುಗಿಸಿ ಯಾರಿಗೂ ಹೇಳದೇ ಕೇಳದೆ ಲಾಡ್ಜ್‌ನಿಂದ ಮನೆಗೆ ತೆರಳಿದ್ದರು.
ಇದನ್ನೂ ಓದಿರಿತಾತ ಅಜ್ಜಿಯ 66ನೇ ವಿವಾಹ ವಾರ್ಷಿಕೋತ್ಸವಕ್ಕೆ ನಿಖಿಲ್​ ಶುಭಾಶಯ
ಲಾಡ್ಜ್‌ನಲ್ಲಿ ಆಚರಿಸಿಕೊಂಡ ವಿವಾಹ ವಾರ್ಷಿಕೋತ್ಸವದ ಫೋಟೋಗಳನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿಕೊಂಡಿದ್ದರು. ಇದನ್ನು ಗಮನಿಸಿದ ಕೆಲವರು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರಿಗೆ ಫೋಟೋ ಸಮೇತ ದೂರು ನೀಡಿದ್ದರು. ಎಚ್ಚೆತ್ತ ಜಿಲ್ಲಾಡಳಿತ ತಕ್ಷಣವೇ ನಾಲ್ವರ ವಿರುದ್ಧ ದೂರು ದಾಖಲಿಸುವಂತೆ ಸೂಚಿಸಿದೆ. ಈ ಬಗ್ಗೆ ಪಾಲಿಕೆ ಮುಖ್ಯ ಆರೋಗ್ಯ ಅಧಿಕಾರಿ ಠಾಣೆಗೆ ತೆರೆಳಿ ವಿಜಯಕುಮಾರ್-ಜ್ಯೋತಿ ಗೌಡ ಹಾಗೂ ಮತ್ತಿಬ್ಬರ ವಿರುದ್ಧ ದೂರು ನೀಡಿದ್ದಾರೆ.
ಇದನ್ನೂ ಓದಿರಿಹೆದ್ದಾರಿ ಬಿಕೋ ಎನ್ನುತ್ತಿದ್ದರೂ ಹಾಲಿನ ಕ್ಯಾಂಟರ್​ ರೂಪದಲ್ಲಿ ಬಂದ ಜವರಾಯ…
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − 2 =
Remember me
