ಮೈಸೂರು:ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಆ ಮನೆಯಲ್ಲಿ ಇಂದು(ಬುಧವಾರ) ಮದುವೆ ಸಡಗರ ಮೇಳೈಸುತ್ತಿತ್ತು. ಆದರೆ, ಹಸಮಣೆ ಏರಬೇಕಿದ್ದ ವರ ಮದುವೆಗೂ ಎರಡು ದಿನ ಮೊದಲೇ ವಧುವಿಗೆ ಕೈಕೊಟ್ಟು ಪ್ರೇಯಸಿ ಜತೆ ಪರಾರಿಯಾಗಿದ್ದು, ವಧುವಿನ ಮನೆಯವರು ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾರೆ.
ಈ ಘಟನೆ ಮೈಸೂರಿನ ಸುಣ್ಣದಕೇರಿಯ ಉಮೇಶ್ ಜತೆ ಕೆ.ಆರ್. ಮೊಹಲ್ಲಾದ ಯುವತಿಯ ಮದುವೆಯನ್ನು ಎರಡೂ ಕುಟುಂಬದ ಹಿರಿಯರು ನಿಶ್ಚಯಿಸಿದ್ದರು. ಬುಧವಾರ ಮದುವೆ ನೆರವೇರಬೇಕಿತ್ತು. ಆದರೆ, ಮತ್ತೊಬ್ಬಳನ್ನು ಪ್ರೀತಿಸುತ್ತಿದ್ದ ವರನು ಆಕೆಯೊಂದಿಗೆ ಸೋಮವಾರವೇ ಎಸ್ಕೇಪ್​ ಆಗಿದ್ದ. ಕಂಗಾಲಾದ ಕುಟುಂಬಸ್ಥರು ಮದುವೆಯನ್ನು ರದ್ದು ಮಾಡಿದ್ದರು.
ವಧುವಿನ ಪೋಷಕರು ಉಮೇಶ್​ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅಷ್ಟರಲ್ಲಿ ಮತ್ತೆ ವಾಪಸ್​ ಬಂದ ಉಮೇಶ್, ತನ್ನ ಪ್ರೇಯಸಿಗೆ ಕೆ.ಆರ್. ಪೊಲೀಸ್ ಠಾಣೆ ಸಮೀಪದ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ತಾಳಿ ಕಟ್ಟಿದ್ದಾನೆ.
ಉಮೇಶ್​ಗೆ ಪ್ರೇಯಸಿ ಇದ್ದರೂ ಆತ ಮತ್ತೊಬ್ಬ ಯುವತಿ ಜತೆಗೆ ಮದುವೆ ಎಂಗೇಜ್ಮೆಂಟ್​ ಕೂಡ ಮಾಡಿಕೊಂಡಿದ್ದ.
ಸಾಯುವ ಮುನ್ನ ಅಪ್ಪನಿಗೆ ಊಟ ಬಡಿಸಿದರು, ಆ ನಂತರ ಅಕ್ಕ-ತಂಗಿ ಇಬ್ಬರೂ ನೇಣಿಗೆ ಶರಣಾದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seventeen − 10 =
Remember me
