ಶಿವಮೊಗ್ಗ:ಇತ್ತೀಚಿನ ದಿನಗಳಲ್ಲಿ ನಿಶ್ಚಿತಾರ್ಥ, ಮದುವೆ ಮುಂತಾದ ಶುಭ ಸಮಾರಂಭಗಳನ್ನು ವಿಶಿಷ್ಟ ರೀತಿಯಲ್ಲಿ ಆಯೋಜಿಸುವ ಪರಿಪಾಠ ಆರಂಭವಾಗಿದೆ. ಆಮಂತ್ರಣ ಪತ್ರಿಕೆಯೂ ವೈವಿಧ್ಯಮಯವಾಗಿರುತ್ತೆ. ಈ ಸಾಲಿನಲ್ಲಿ ಇಲ್ಲೊಂದು ಮದುವೆ ಆಹ್ವಾನ ಪತ್ರಿಕೆ ವಿಭಿನ್ನವಾಗಿದೆ.
ಶಿವಮೊಗ್ಗದ ಪ್ರಸಿದ್ಧ ವರ್ತಕ, ನಾಣ್ಯ ಸಂಗ್ರಾಹಕರೂ ಆದ ಎಚ್​.ವಿ.ಪಂಚಾಕ್ಷರಪ್ಪ ಅವರು ತಮ್ಮ ಪುತ್ರಿ ಶಿವಾಲಿ ವಿವಾಹಕ್ಕೆ ಆಮಂತ್ರಣ ಪತ್ರಿಕೆಯೊಂದಿಗೆ 676 ಲೇಖನಗಳುಳ್ಳ ‘ವಿವಾಹ ಸಂಗಮ’ ಎಂಬ ಹೊತ್ತಗೆ ಮುದ್ರಿಸಿ ಹಂಚುತ್ತಿದ್ದಾರೆ.
ವಿವಾಹ ಸಂಗಮದಲ್ಲಿನ ಎಲ್ಲ ಲೇಖನಗಳು, ಕವನಗಳನ್ನು ಎಚ್​.ವಿ.ಪಂಚಾಕ್ಷರಪ್ಪ ಅವರೇ ಬರೆದಿರುವುದು ವಿಶೇಷ. ವಿವಾಹಕ್ಕೆ ಬರುವ ಅತಿಥಿಗಳಿಗೆ ವಿವಾಹ ಸಂಗಮ ಹೊತ್ತಗೆ ನೀಡಲು ನಿರ್ಧರಿಸಿದ್ದಾರೆ. ತಮ್ಮ ಮನೆಯ ಗೃಹಪ್ರವೇಶ ಸಂದರ್ಭದಲ್ಲಿ 500 ಪುಟಗಳ ಹೊತ್ತಗೆ ಪ್ರಕಟಿಸುವ ಮೂಲಕ ಇವರು ಗಮನ ಸೆಳೆದಿದ್ದರು.
ವಿಭಿನ್ನ ಪದ್ಧತಿಯ ವಿವಾಹಗಳು, ನಮ್ಮ ಸಂಸ್ಕೃತಿಯಲ್ಲಿ ವಿವಾಹದ ಪ್ರಾಮುಖ್ಯತೆ, ಸಪ್ತಪದಿ, ಸೀಮಂತ ಮುಂತಾದ ಷೋಡಶ ಸಂಸ್ಕಾರಗಳ ಬಗ್ಗೆ ವಿವಾಹ ಸಂಗಮದಲ್ಲಿ ವಿವರಣೆಗಳಿವೆ. ನ.19 ರಂದು ಪಂಚಾಕ್ಷರಪ್ಪ ಅವರ ಪುತ್ರಿ ಶಿವಾಲಿ ಮತ್ತು ಧರಣೇಶ್​ ಹಸೆಮಣೆ ಏರಲಿದ್ದಾರೆ. ಇವರ ಮದುವೆ ಆಹ್ವಾನ ಪತ್ರಿಕೆಯ ಕೆಲ ಪುಟಗಳ ಫೋಟೋ ಪ್ರತಿ ಇಲ್ಲಿದೆ ನೋಡಿ.
ಸಿಎಂ ಆದೇಶಕ್ಕೆ ಭುಗಿಲೆದ್ದ ಅಸಮಾಧಾನ, ಒಕ್ಕಲಿಗರಿಂದಲೂ ಬಂತು ಡಿಮಾಂಡ್​ !

ಧ್ರುವ ಸರ್ಜಾ ಪ್ರೀತಿಯಿಂದ ತಂದ ತೊಟ್ಟಿಲಲ್ಲಿ ಜೂ.ಚಿರುವನ್ನು ಹಾಕದ ಮೇಘನಾ! ಬೇರೆ ತೊಟ್ಟಿಲು ತರಿಸಿದ್ದೇಕೆ?

ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
Sign in to your account
Please enter an answer in digits:five + 14 =
Remember me
