
ಚೆನ್ನೈ:ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಚೆನ್ನೈನ ಕೆಲವು ಭಾಗ ಜಲಾವೃತವಾಗಿದೆ. ಇದರಿಂದಾಗಿ ಜನಜೀವನವೂ ಅಸ್ತವ್ಯಸ್ತವಾಗಿದ್ದು, ಸರ್ಕಾರ ಈಗಾಗಗಲೇ ಕಾಳಜಿ ಕೇಂದ್ರಗಳನ್ನು ಸ್ಥಾಪಿಸಿದೆ. ಇದೀಗ ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿ ರಾಜ್ಯದ ಕೆಲವು ಭಾಗಗಳಲ್ಲಿ ಭಾರೀ ಮಳೆಯಾಗುವು ಮುನ್ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ವಿಪತ್ತು ಪಡೆಯ 2 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಪ್ರವೃತ್ತರಾಗಿದ್ದಾರೆ.
ರಾಜ್ಯದಲ್ಲಿ ವಿಪರೀತ ಮಳೆಯಾಗುತ್ತಿದ್ದ ಕಾರಣದಿಂದ ಹಲವು ಕಾರ್ಯಕ್ರಮಗಳಿಗೆ ತೊಂದರೆಯುಂಟಾಗಿದೆ. ಅದರಲ್ಲೂ ಪುಲಿಯಾಂತೋಪ್​ನಲ್ಲಿರುವ ಆಂಜನೇಯ ದೇವಸ್ಥಾನವಿರುವ ಭಾಗದಲ್ಲಿ ರಾತ್ರಿಯಿಂದ ಸುರಿದ ಮಳೆಯಿಂದಾಗಿ ನಿಗದಿಯಾಗಿದ್ದ, ಹಲವು ವಿವಾಹ ಕಾರ್ಯಕ್ರಮಗಳಿಗೆ ವಿಳಂಬವುಂಟಾಗಿದೆ.
#WATCH| Tamil Nadu: 5 weddings that were scheduled at Anjineyar temple in Pulianthope were delayed due to rainfall today. Couples lined up for wedding ceremonies were drenched as they walked through the water logged inside the temple. These weddings were scheduled months ago.pic.twitter.com/OA96wQEiz2— ANI (@ANI)November 11, 2022
#WATCH| Tamil Nadu: 5 weddings that were scheduled at Anjineyar temple in Pulianthope were delayed due to rainfall today. Couples lined up for wedding ceremonies were drenched as they walked through the water logged inside the temple. These weddings were scheduled months ago.pic.twitter.com/OA96wQEiz2
ಇದಾವುದಕ್ಕೂ ತಲೆಕೆಡಿಸಿಕೊಳ್ಳದ ನವ ಜೋಡಿಗಳು ಮಳೆಯ ನಡುವೆಯೇ ಮದುವೆಯಾಗಿದ್ದಾರೆ. ಸಂಪೂರ್ಣ ಜಲಾವೃತಗೊಂಡ ದೇವಸ್ಥಾನದಲ್ಲಿ ಒಂದೊಂದೇ ಜೋಡಿಗಳು ಸರತಿ ಸಾಲಿನಲ್ಲಿ ಬಂದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಆಗುತ್ತಿದ್ದಂತೆ ಸಾಕಷ್ಟು ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ಅನೇಕರು ನವ ದಂಪತಿಗಳಿಗೆ ಶುಭಾಶಯ ತಿಳಿಸುತ್ತಿದ್ದಾರೆ. ಇನ್ನೊಂದಿಷ್ಟು ಜನ, ಇಷ್ಟೊಂದು ಜೋರಾದ ಮಳೆಯಲ್ಲಿ ಯಾಕೆ ಮದುವೆಯಾಗುತ್ತಿದ್ದೀರಿ? ವಿವಾಹ ಕಾರ್ಯಕ್ರಮವನ್ನು ಮುಂದೂಡಬಹುದಿತ್ತಲ್ಲಾ ಎಂದು ಪ್ರಶ್ನಿಸಿದ್ದಾರೆ(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + nineteen =
Remember me
