ಮೇಷ:ಗುರು- ಸೂರ್ಯನ ಸಂಯೋಗ ಇದ್ದು, ಆತಂಕ ದೂರವಾಗಿ ಒಳ್ಳೆಯ ಫಲ ಲಭ್ಯ. ಈ ಹಿಂದೆ ಕುಜ ಶನಿ ಕುಂಭದಲ್ಲಿದ್ದಾಗ ಘರ್ಷಣೆಯಾಗಿ ದೇಶದ ಶಾಂತಿ ಕದಡಿದೆ. ರಾಹು ಮೀನ ರಾಶಿಯಲ್ಲಿ, ಕೇತು ಕನ್ಯಾ ರಾಶಿಯಲ್ಲಿದ್ದಾಗ ಕಾಳಿರೂಪದ ಸೀತಾಮಾತೆ, ಮನುಷ್ಯರು ತಪ್ಪು ಮಾಡಿದರೆ ಬಿಡುವುದಿಲ್ಲ. ಮೇ 1ರಿಂದ ಅದೃಷ್ಟದ ಬಾಗಿಲು ತೆರೆಯಲಿದೆ.
ವೃಷಭ:ನೀವು ಬೇಡದ ಹೊಣೆ ಹೊತ್ತುಕೊಂಡು ಮನಸ್ಸನ್ನು ಕೆಡಿಸಿಕೊಳ್ಳುವವರು. ಉಪಕಾರ, ಅಪಕಾರ ಮಾಡಿದವರಿಬ್ಬರಿಗೂ ತಲೆಯಾಡಿಸುವವರು. ಕೈಲಾದಷ್ಟು ಉಪಕಾರ ಮಾಡಿ. ಗುರು 12ನೇ ಮನೆ ಬಿಟ್ಟು ಬರಬೇಕಾದರೆ ರಾಜಯೋಗ ತರುತ್ತಾನೆ. ಜೀವನದಲ್ಲಿ ಮುನ್ನಡೆಸಲು ದತ್ತ ಎಂಬ 2 ಅಕ್ಷರಗಳೇ ಸಾಕು.
ಮಿಥುನ:ಗುರುವಿನ ಒಳ್ಳೆಯ ಕಾಲ ಮುಗಿಯುತ್ತ ಬಂದಿದೆ. ದಶಮಕ್ಕೆ ಶನಿ ಇದ್ದು ದೈವ ಬಲ ಕುಗ್ಗಿ ಹೋಗುತ್ತದೆ. ನಿರಂತರವಾಗಿ ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಿಷ್ಣುವೇ ನಿಮ್ಮನ್ನು ಸುರಕ್ಷಿತವಾಗಿ ನಡೆಸುತ್ತಾನೆ. ಆಸೆ-ನಿರಾಸೆ ಎರಡನ್ನೂ ಮುಂದೆಯೂ ಕಾಣುತ್ತಿರುತ್ತೀರಿ.
ಕಟಕ:ಏಕಾದಶಕ್ಕೆ ಗುರು ಬರುತ್ತಾನೆ. ಬಲವಂತವಾಗಿ ದೇಹದಂಡನೆ ಮಾಡಬೇಡಿ. ದೇವರು ಕೊಟ್ಟ ಅಂಗಾಂಗಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ. 11ರ ಗುರು ಆರೋಗ್ಯ ಕೊಟ್ಟು ಖುಷಿಯ ಬೆಟ್ಟವನ್ನೇ ನಿಮ್ಮ ಮುಂದಿಡುತ್ತಾನೆ. ಉಮಾಮಹೇಶ್ವರನನ್ನು ಪೂಜಿಸಿ, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ.
ಸಿಂಹ: 9ರ ಗುರು ಏನು ಕೊಟ್ಟಿದ್ದಾನೆಂಬುದು ನಿಮಗೆ ತಿಳಿದಿದೆ. ಬೇಕಾದ್ದನ್ನು ಗಳಿಸಿಯೇ ಗಳಿಸುತ್ತೀರಿ. ದೃಢಸಂಕಲ್ಪ ನಿಮ್ಮದು. ರಾಮನು ಗುರಿ ಇಟ್ಟ ಬಾಣ ರಾವಣನ ಸಂಹಾರ ಮಾಡಿ ಬತ್ತಳಿಕೆಗೆ ಮರಳಿತು. ಆದಿತ್ಯ ಹೃದಯ, ಶನಿ ಅಷ್ಟೋತ್ತರ ಪಠಿಸಿ. ಎಚ್ಚರದಿಂದ ಓಡಾಡಿ.
ಕನ್ಯಾ:6ರಲ್ಲಿ ಶನಿ, ಮೇ 1ರಿಂದ ಗುರು ನವಮಕ್ಕೆ ಬಂದು ಸುಖವಾದ ಜೀವನ ನಡೆಸಲು ಧನವನ್ನು ಕೊಟ್ಟು ಹರಸುತ್ತಾನೆ. ಕೊಡಬೇಕಾದವರಿಗೆ ಕೊಟ್ಟು ನೀವು ಉಂಡರೆ ಮಾತ್ರ ಗುರು ಶುಭ ಗ್ರಹನಾಗುತ್ತಾನೆ. ಪ್ರದೋಷದಲ್ಲಿ ಈಶ್ವರನ ದೇವಸ್ಥಾನದಲ್ಲಿ ರುದ್ರಾಭಿಷೇಕವನ್ನು ಮಾಡಿಸಿ.
ತುಲಾ:ಧನಕ್ಕೆ ಕೊರತೆ ಇಲ್ಲ. ಲಾಭ ಕುಗ್ಗುವುದೂ ಇಲ್ಲ. ದೈವ ಯತ್ನ ನಿರಂತರ ಸಾಗಿದೆ. ಗುರು ಅಷ್ಟಮಕ್ಕೆ ಹೋದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು. ನಿಮ್ಮ ಅಪ್ಪಟ ಬಂಗಾರದ ಶುದ್ಧ ಆತ್ಮವೇ ನಿಮ್ಮ ಚಿನ್ನದಂಥ ಮನಸ್ಸನ್ನು ದುರ್ಗೆ ಕಾಪಾಡುತ್ತಾಳೆ. ‘ಹಮ್ ಹನುಮತೇ ನಮಃ’ ಎಂಬ ಮಂತ್ರವನ್ನು ಪಠಿಸಿ.
ವೃಶ್ಚಿಕ:ಕತ್ತಲು ಸರಿದು ಬೆಳಕು ಹರಿದು ಗುರುವು ಸಪ್ತಮಕ್ಕೆ ಸೇರಲಿದ್ದಾನೆ. ‘ಸಪ್ತಮಂ ಬಹು ಕಾಂಚನಂ. ಮಾಹಾಧೈರ್ಯಂ ಮಹಾ ಸಾಧನಂ. ಆರೋಗ್ಯ ಸಂಪದಂ. ಇಚ್ಛಿತ ಕಾರ್ಯ ಸಾಧನಂ.’ 6 ಮುಖ 12 ಕೈಗಳಿರುವ ಷಣ್ಮುಖನನ್ನು ಪ್ರಾರ್ಥಿಸಿ.
ಧನಸ್ಸು:ಗುರು ಷಷ್ಠಕ್ಕೆ ಬಂದರೂ ನಿಮಗೆ ಯಾವ ಅಡ್ಡಿ ಆತಂಕಗಳಿಲ್ಲ. ಧನುರ್ ರಾಶಿಯವರಿಗೆ ಜನ್ಮತಃ ಗುರು ಬಲ ಇರುತ್ತದೆ. ನಿಮ್ಮ ಮನೋ ಅಂತರಾಳದಲ್ಲಿ ನಿಮಗೆ ಬೇಕಾಗಿರುವ ಜಾಗ ತೋರಿಸಿ ಕೂರಿಸುತ್ತಾನೆ. ಗುರು ದತ್ತಾತ್ರೇಯನ ಚರಣ ಹಿಡಿಯಿರಿ. ನಿಮ್ಮನ್ನು ಕಾಪಾಡಿ ಆರೋಗ್ಯ ಆಯುಷ್ಯ ಧನ ಸಂಪತ್ತನ್ನು ಕೊಡುತ್ತಾನೆ.
ಮಕರ:ಮಕರ ರಾಶಿಗೆ ಪಂಚಮಕ್ಕೆ ಗುರು ಬರಲಿದ್ದಾನೆ. ಪಂಚಮ ಗ್ರಹ ಸ್ಥಿರಂ ಅತಿ ಲಾಭಂ, ಋಣ ಪರಿಹಾರಂ, ದುಃಖಂ ದೂರಂ. ಶಾಂತಿಯುತ ಜೀವನಂ. ನೂತನ ಮಾರ್ಗಂ, ಅಖಿಲ ಐಶ್ವರ್ಯ, ಇಷ್ಟಾರ್ಥ ಸಿದ್ಧಿ ಭವೇತ್. ಶನಿ ಪ್ರಾರ್ಥನೆಯನ್ನು ಮರೆಯದಿರಿ. ಹನುಮಾನ್ ಚಾಲೀಸಾ ಪಠಿಸಿ.
ಕುಂಭ: ಜನ್ಮದಲ್ಲಿ ಶನಿ ಇದ್ದಾನೆ. ಗುರು 3ರಿಂದ ಚತುರ್ಥಕ್ಕೆ ಹೋಗುತ್ತಾನೆ. ಶನಿ ಸ್ವಕ್ಷೇತ್ರದಲ್ಲಿದ್ದು ಯಾವ ಕೆಡಕೂ ಉಂಟಾಗದು. ಮನುಷ್ಯನಿಗೆ ಸಾಡೇ ಸಾತಿ ಶನಿ ಬರುವುದು ಜೀವನದಲ್ಲಿ ಪಾಠವನ್ನು ಕಲಿಸಲು. ದೈವ ಬಲವನ್ನು ಹೃದಯ ಮಂದಿರದಲ್ಲಿ ಸಂಪಾದಿಸಿ ಇಟ್ಟುಕೊಳ್ಳಿ. ಶನಿಗಾಗಿ ಪ್ರಾರ್ಥನೆಯಲ್ಲಿ ಶನಿ ಅಷ್ಟೋತ್ತರ ಪಠಿಸಿ.
ಮೀನ:ಗುರು ಮೂರನೇ ಮನೆಗೆ ತೆರಳುತ್ತಾನೆ. ಶನಿ 12ರಲ್ಲಿ ಇದ್ದರೂ, ಉಪಟಳ ಕೊಟ್ಟರೂ ಅದನ್ನು ಯಾವ ರೀತಿ ಪರಿವರ್ತನೆ ಮಾಡುವುದು ಎಂಬುದು ನಿಮ್ಮ ಕೈಲಿದೆ. ಕನ್ನಡಿಯಲ್ಲಿ ನಮ್ಮ ಮುಖವನ್ನು ನೋಡಿಕೊಂಡರೆ ಹೇಗೆ ಕಾಣುತ್ತದೆಯೋ ಹಾಗೆಯೇ ಶುದ್ಧವಾದ ಭಕ್ತಿಯಿಂದ ದೇವರನ್ನು ನೋಡಿದರೆ ಪರಮಾತ್ಮನನ್ನೇ ಕಾಣುತ್ತೀರಿ. ಸ್ವಾರ್ಥವಿಲ್ಲದ ನಿಷ್ಕಲ್ಮಶವಾದ ಮನಸ್ಸಿನಿಂದ ದೈವ ಬಲ ಸಂಪಾದಿಸಿ ಮುನ್ನಡೆಯಿರಿ. ಕೃಷ್ಣಂ ವಂದೇ ಜಗದ್ಗುರು. ಗುರುವಾಯೂರಿನಲ್ಲಿ ನೆಲೆಸಿರುವ ಶ್ರೀಕೃಷ್ಣನನ್ನು ಪೂಜಿಸಿ, ಪ್ರಾರ್ಥಿಸಿ.


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − ten =
Remember me
