ಮೇಷ:ಮೇಷ ರಾಶಿಯಲ್ಲಿ ಕುಳಿತಿದ್ದ ರಾಹು ಗುರುವನ್ನು ಬಿಟ್ಟು ಮೀನ ರಾಶಿಗೆ ಬಂದಿದ್ದು, ಮಾನಸಿಕವಾಗಿ ಚೇತರಿಕೆ ಇರುತ್ತದೆ. ಎಲ್ಲ ಗ್ರಹಗಳು ಯಾವಾಗಲೂ ಸೋಲನ್ನು, ನಕಾರಾತ್ಮಕ ಚಿಂತನೆಯನ್ನು ಇಟ್ಟಿರುವುದಿಲ್ಲ. ಎಲ್ಲೋ ಒಂದು ಕಡೆ ಸಂತೋಷವನ್ನು ಕೊಟ್ಟೇ ಕೊಡುತ್ತಾರೆ. ಮೇಷ ರಾಶಿ ಅಧಿಪತಿ ಯಾದ ಸುಬ್ರಮಣ್ಯ ದೇವರನ್ನು ಪೂಜಿಸಿ. ಸ್ಥಿರವಾದ, ಶುದ್ಧವಾದ ದೈವಬಲಕ್ಕಾಗಿ ಗುರುದತ್ತಾತ್ರೇಯನನ್ನು ಪೂಜಿಸಿ. 2024 ಮೇ 1ರ ನಂತರ ಎಲ್ಲ ಕೆಲಸಗಳಲ್ಲಿ ಜಯವನ್ನು ಕಾಣುವಿರಿ.
ವೃಷಭ:ಏಕಾದಶ ರಾಹು ಅರ್ಧಭಾಗದಷ್ಟು ಯಶಸ್ಸನ್ನು ಕೊಟ್ಟರೂ, ದ್ವಾದಶ ಗುರುವು ಪರಿಪೂರ್ಣ ಜಯ ಕೊಡಲು ಅವನು 12ನೇ ಮನೆಯನ್ನು ದಾಟಲೇಬೇಕು. ಶನಿ ಒಂಬತ್ತರಲ್ಲಿ ಸ್ವಕ್ಷೇತ್ರದಲ್ಲಿ ಇರುವುದರಿಂದ ನಕಾರಾತ್ಮಕ ಚಿಂತನೆಗಳನ್ನು ದೂರವಿಟ್ಟು ಕಾರ್ಯಗಳನ್ನು ಸಾಧಿಸಿಕೊಳ್ಳಬಹುದು. ಶತ್ರುಗಳನ್ನು ಕಟ್ಟಿ ಹಾಕಬೇಕಾದರೆ ಧೈರ್ಯ ಹಾಗೂ ನಿಮ್ಮ ಕಾರ್ಯವೈಖರಿ ಕಾರಣವಾಗಬೇಕು. ದುರ್ಗೆಯನ್ನು ಸದಾ ಪೂಜಿಸಿ, ಪ್ರಾರ್ಥಿಸಿ.
ಮಿಥುನ:ಲಗ್ನಾಧಿಪತಿ ಬುಧನು ಶನಿ ಮತ್ತು ಸೂರ್ಯನ ಜೊತೆ ಕುಳಿತಿ ದ್ದಾನೆ. ಬುಧನು ಶನಿ ಮತ್ತು ಸೂರ್ಯನಿಗೆ ಮಿತ್ರಗ್ರಹನಾಗಿದ್ದು, ಅವರು ಕೊಡುವ ಶುಭಫಲಗಳಿಗೆ ಸಹಾಯಕನಾಗಿರುತ್ತಾನೆ. 9ರಲ್ಲಿ ತ್ರಿಗ್ರಹ ಇರುವುದರಿಂದ ನಿಮ್ಮ ಕೆಲಸಕಾರ್ಯಗಳು ಉತ್ತಮ ರೀತಿಯಲ್ಲಿ ಸಾಗುತ್ತವೆ. 11ರ ಗುರುವಿನ ಅನುಗ್ರಹಕ್ಕಾಗಿ ಸದ್ಗುರು ಬ್ರಹ್ಮಚೈತನ್ಯರನ್ನು ಪೂಜಿಸಿ ಸಿದ್ಧಿಸಿಕೊಳ್ಳಿ.
ಕಟಕ:ದೇವರದೇವ ಮಹಾದೇವನು ಗಂಗೆಯನ್ನು ತಲೆಯ ಮೇಲೆ ಹೊತ್ತು ಹೆಣ್ಣಿಗೆ ಶ್ರೇಷ್ಠವಾದ ಸ್ಥಾನಮಾನ ಕೊಟ್ಟಿದ್ದಾನೆ. ಹೆಣ್ಣನ್ನು ಗೌರವದಿಂದ ಕಂಡರೆ ದಶಮ ಗುರುವು ಸತ್ಪಲವನ್ನು ನೀಡುತ್ತಾನೆ. ಕಟಕ ರಾಶಿಯವರು ಸುಖವಾಗಿ, ಆರೋಗ್ಯವಾಗಿರಲು ಉಮಾ ಮಹೇಶ್ವರನ ಅನುಗ್ರಹ ಬೇಕೇ ಬೇಕು. ಉಮಾಮಹೇಶ್ವರನನ್ನು ಪೂಜಿಸಿ, ಪ್ರಾರ್ಥಿಸಿ.
ಸಿಂಹ:ಗುರು 9ರಲ್ಲಿ ಇದ್ದು ಸಪ್ತಮದಲ್ಲಿ ಶನಿ ಯಾವ ಕೆಟ್ಟ ಫಲವನ್ನೂ ಕೊಡುವುದಿಲ್ಲ. ಶನಿಯನ್ನು ಪೂಜಿಸಿ, ಅವನು ಯಾವ ಕೆಡಕನ್ನೂ ಮಾಡುವುದಿಲ್ಲ. ಆದರೆ ನಿಮ್ಮನ್ನು ಉಪಯೋಗಿಸಿಕೊಂಡು ಕಾರ್ಯಸಾಧನೆಯನ್ನು, ಧನವನ್ನು ಮಾಡಿಕೊಂಡು ಓಡಿ ಹೋಗುವವರನ್ನು ದೇವರೇ ನಿಮ್ಮ ಬಳಿಗೆ ಮತ್ತೆ ಕರೆತರುತ್ತಾನೆ. ಇಂಥವರ ಬಗ್ಗೆ ಪರಿಪೂರ್ಣವಾಗಿ ಅಧ್ಯಯನ ನಡೆಸಿ ಮುಂದುವರಿಯುವುದು ಉತ್ತಮ.
ಕನ್ಯಾ:
ಅಷ್ಟಮ ಗುರುವು 2 ತಿಂಗಳ ನಂತರ ನವಮಕ್ಕೆ ತೆರಳುತ್ತಾನೆ. ಶನಿಯು ಶಷ್ಟದಲ್ಲಿ ಇದ್ದು, ಅವನು ಕೊಡುತ್ತಿರುವ ಶುಭಫಲಗಳನ್ನು ಉಳಿಸಿಕೊಂಡು ನೀವು ಧನವನ್ನು ಕೊಡಬೇಕಾದವರಿಗೆ ಕೊಟ್ಟು ಋಣಮುಕ್ತರಾಗಿ ಬಾಳುವುದು ಉತ್ತಮ. 9ರ ಗುರುವಿನ ಬರುವಿಕೆಗಾಗಿ ಕಾದಿರಿ. ಒಳ್ಳೆಯ ಯೋಗಗಳು ಬರಲಿವೆ.
ತುಲಾ:ನದಿಗಳಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿದಾಗ ನೀರಿನ ಒಳಹರಿವಿಗೆ ಬಾಗಿಲು ಮುಚ್ಚಿ ಜನರ ಹಿತಕ್ಷೇಮಕ್ಕಾಗಿ ಸ್ಥಳಾಂತರ ಮಾಡುತ್ತಾರೆ. ಅದೇ ತತ್ವದಲ್ಲಿ ನೀವು ಯೋಜನೆಯನ್ನು ಬದಲಿಸಿ ಕೊಂಡು ನ್ಯಾಯಸಮ್ಮತವಾಗಿ ದುಡಿದ ಹಣವನ್ನು ಖರ್ಚು ಮಾಡುವಾಗ ಯೋಚನೆ ಮಾಡಿ ಮುಂದೆ ಹೆಜ್ಜೆ ಇಡಬೇಕು. ಪ್ರತಿಮಾಸದ ಬಹುಳ ಅಷ್ಟಮಿಯಂದು ಕಾಲಭೈರವ ನನ್ನು ಪೂಜಿಸಿ, ಕಾಲಭೈರವಷ್ಟಕವನ್ನು ಪಾರಾಯಣ ಮಾಡಿ.
ವೃಶ್ಚಿಕ:ಮನುಷ್ಯ ನೀರು ಕುಡಿದಾಗ ಅವನ ಬಾಯಾರಿಕೆ ನಿವಾರಣೆಯಾಗಿ ಅಲ್ಪ ಪ್ರಾಣವು ಮಹಾಪ್ರಾಣವಾಗಿ ಉತ್ಪನ್ನವಾಗುತ್ತದೆ. ನೀವು ಕಷ್ಟಪಟ್ಟು ಹಣವನ್ನು ಹೂಡಿದಾಗ ನೀವು ಕಾಣಲೇಬೇಕೆಂದುಕೊಂಡಿರುವ ಲಾಭವನ್ನು ಕಾಣುವ ಕಾಲ ಇನ್ನೂ ಬಂದಿಲ್ಲ. ದೈವ ಪ್ರಾರ್ಥನೆ ಇರಲಿ. 2024ರ ಮೇ 1ರ ನಂತರ ಒಳ್ಳೆಯ ಕಾಲವು ಬರಲಿದೆ. ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ಪೂಜಿಸಿ, ಅರ್ಚಿಸಿ.
ಧನುಸ್ಸು:ಪಂಚಮದಲ್ಲಿ ಗುರು, ತೃತೀಯದಲ್ಲಿ ಶನಿ ಇರುವುದು ಅತ್ಯಂತ ಶುಭಕಾಲವಾಗಿರುತ್ತದೆ. ಶುಭಾಶುಭಗಳನ್ನು ಕೊಡುವವನು ಭಗವಂತನೊಬ್ಬನೇ. ನಿಮ್ಮ ವಿಚಾರಧಾರೆಯಲ್ಲಿ ಹಾಗೂ ಮಾಡುವ ಕೆಲಸದಲ್ಲಿ ಅಭಿವೃದ್ಧಿ ಕಾಣುವ ಸಮಯವಿದು. ಯಾರೊಂದಿಗೂ ಹರಿತವಾದ ಮಾತಿನ ಪ್ರಯೋಗ ಬೇಡ. ಎಲ್ಲವೂ ನಿಮ್ಮದೇ ಆಗಿರುವಾಗ ಸಂತೋಷದ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. ಎಲ್ಲರಿಗೂ ಬೇಕಾದವರಾಗಿ ಬಾಳಿ. ತೃತೀಯ ಶನಿಯ ಫಲವನ್ನು ಹೆಚ್ಚಾಗಿ ಪಡೆಯಲು ನರಸಿಂಹನನ್ನು ಶ್ರದ್ಧೆಯಿಂದ ಪೂಜಿಸಿ.
ಮಕರ:ರಾಶ್ಯಾಧಿಪತಿ ದ್ವಿತೀಯದಲ್ಲಿ ಇದ್ದು, ಅಲ್ಲೇ ರವಿ, ಬುಧರು ಇದ್ದಾರೆ. ಶನಿಯು ಕುಂಭಕ್ಕೆ ಬಂದಿರುವುದರಿಂದ ಸಮಸ್ಯೆಗಳಿಗೆ ಪರಿಹಾರ ಕೊಡುತ್ತಾನೆ ಹಾಗೂ ಧನದ ಕೊರತೆ ಇರುವುದಿಲ್ಲ. ಆದರೆ ಈಗಲೇ ಆಕಾಶವನ್ನು ಮುಟ್ಟಲು ಹೋಗಿ ಏಣಿಯಿಂದ ಬೀಳುವ ಕೆಲಸ ಮಾಡದಿರಿ. 2025ರಲ್ಲಿ ಶನಿಯು ಮುಂದಕ್ಕೆ ಸಾಗಲಿದ್ದಾನೆ. ಸಂತೋಷ, ಸುಖ, ಸಮೃದ್ಧಿ, ಲಾಭವನ್ನು ಕಾಣುತ್ತೀರಿ.
ಕುಂಭ:ಶ್ರೀಕೃಷ್ಣ ಪರಮಾತ್ಮನು ಕೌಂಡಿನ್ಯ ಋಷಿಗೆ ಲಕ್ಷ್ಮಿಸಹಿತ ಅನಂತ ಪದ್ಮನಾಭನ ಪುಣ್ಯಕಥೆಯನ್ನು ಹೇಳಿ ಅವನಿಗೆ ಒಳ್ಳೆಯ ಹೆಂಡತಿ, ಸಂಸಾರ ಭೋಗಭಾಗ್ಯಗಳನ್ನು ಕರುಣಿಸುತ್ತಾನೆ. ‘ನಾನು’ ಎಂಬ ಅಹಂಕಾರವನ್ನು ಅವನು ತೋರಿದಾಗ ಅವನನ್ನು ಶೂನ್ಯಗೊಳಿಸುತ್ತಾನೆ. ಪಶ್ಚಾತಾಪ ಪಟ್ಟ ಋಷಿಗೆ ತನ್ನ ವಿಶ್ವರೂಪ ದರ್ಶನ ಕೊಡುತ್ತಾನೆ. ಇದನ್ನು ಜ್ಞಾಪಕದಲ್ಲಿ ಇರಿಸಿಕೊಂಡು, ಅನಂತ ಪದ್ಮನಾಭ ವ್ರತಕಥೆಯನ್ನು ಓದಿರಿ. ನಿಮ್ಮ ಕಷ್ಟಕರ ದಾರಿ ಸುಗಮವಾಗುತ್ತದೆ. ಚಿಂತೆ ಇಲ್ಲದೆ ಜೀವನ ಮುಂದಕ್ಕೆ ಸಾಗುತ್ತದೆ.
ಮೀನ:ಶನಿಯು ಸ್ವಕ್ಷೇತ್ರವಾದ ಕುಂಭ ರಾಶಿಯಲ್ಲಿ ದ್ವಾದಶದಲ್ಲಿ ಇದ್ದರೂ, ಎರಡನೇ ಮನೆಯಲ್ಲಿ ಕುಟುಂಬ ಸ್ಥಾನದಲ್ಲಿ ಗುರು ಇರುವುದರಿಂದ ನಿಮ್ಮ ಕುಟುಂಬವು ಚೆನ್ನಾಗಿದ್ದರೆ ಏನನ್ನೂ ಸಾಧಿಸಬಹುದು. ನಿಮ್ಮ ಸಂಸಾರವನ್ನು ಕಾಪಾಡಿಕೊಳ್ಳಲು ಗುರುಚರಿತ್ರೆಯ ಸರ್ವ ಸಂಕಟ ಪರಿಹಾರ ಹದಿನಾಲ್ಕನೇ ಅಧ್ಯಾಯವನ್ನು ಪಾರಾಯಣ ಮಾಡಿ. ಅನಂತ ಕಷ್ಟಗಳನ್ನು ಕಳೆದು ದತ್ತಾತ್ರೇಯನು ಸುಖವನ್ನು ನೀಡುತ್ತಾನೆ. ಸಂಜೆಯ ಸಮಯದಲ್ಲಿ ತುಪ್ಪದ ದೀಪ ಬೆಳಗಿ ದತ್ತಾತ್ರೇಯ ಅಷ್ಟೋತ್ತರವನ್ನು ಪಾರಾಯಣ ಮಾಡಿ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − nine =
Remember me
