ಮತ್ತೊಮ್ಮೆ ಲೀಪ್ ಇಯರ್ ಬಂದಿದೆ. ಹೌದು, 2024ರಲ್ಲಿ ಇರುವುದು 365 ದಿನಗಳಲ್ಲ, 366 ದಿನಗಳು! ಪ್ರತಿ ವರ್ಷಕ್ಕಿಂತ ಒಂದು ದಿನ ಹೆಚ್ಚು. ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಫೆಬ್ರವರಿ 29ರ ಇತಿಹಾಸದ ಬಗ್ಗೆ ಸ್ವಾರಸ್ಯಕರ ಸಂಗತಿಗಳಿವೆ. ಆ ಕುರಿತಾದ ಮಾಹಿತಿ ಇಲ್ಲಿದೆ.
ನಮ್ಮಲ್ಲಿ ಸಮಯದ ಅಳತೆಯನ್ನು (ಕಾಲಚಕ್ರ) ವೈಜ್ಞಾನಿಕ ಆಧಾರದ ಮೇಲೆ ರೂಪಿಸಿ, ಅನುಸರಿಸಿಕೊಂಡು ಬರಲಾಗುತ್ತಿದೆ.
ತಿಂಗಳ ಲೆಕ್ಕಾಚಾರ:ಭೂಮಿಯು ಸೂರ್ಯನ ಸುತ್ತ ಸುತ್ತಲು 365.242 (0.242 ದಿನ= 6 ಗಂಟೆ) ದಿನಗಳು ಬೇಕು ಹಾಗೂ ಚಂದ್ರನ ಒಂದು ಸುತ್ತಾಟಕ್ಕೆ 29.5306 ದಿನಗಳು ಬೇಕು. ಅಂದರೆ ಒಂದು ವರ್ಷದಲ್ಲಿ ಸುಮಾರು 12.3687 ತಿಂಗಳುಗಳಿವೆ. ಇದನ್ನು ಒಂದು ಪೂರ್ಣಸಂಖ್ಯೆಯಾಗಿಸಿ, 12 ತಿಂಗಳು ಎಂದು ನಿಗದಿ ಮಾಡಲಾಗಿದೆ. ಪ್ರತಿಯೊಂದು ತಿಂಗಳಲ್ಲಿ ಸರಾಸರಿ ಸುಮಾರು 30.438 ದಿನಗಳು ಬರುತ್ತವೆ. ಪ್ರತಿ ತಿಂಗಳಲ್ಲೂ ದಿನಗಳ ಸಂಖ್ಯೆಗಳೂ ಪೂರ್ಣ ಸಂಖ್ಯೆಗಳಾಗಿರಬೇಕು. ಹಾಗಾಗಿ ಕೆಲವು ತಿಂಗಳುಗಳಲ್ಲಿ 30, ಇನ್ನು ಕೆಲವು ತಿಂಗಳುಗಳಲ್ಲಿ 31 ದಿನಗಳಾಗಿ ಮಾಡಿ, ಕ್ಯಾಲೆಂಡರ್ ರೂಪಿಸಲಾಗಿದೆ. ರೋಮನ್ನರು ಕೆಲವು ತಿಂಗಳುಗಳಿಗೆ ಚಕ್ರವರ್ತಿಗಳ ಹೆಸರುಗಳನ್ನು ಕೊಟ್ಟಿದ್ದಾರೆ.
ಲೀಪ್ ಇಯರ್ ಇರದಿದ್ದರೆ? :ಯೇಸುವಿನ ಜನ್ಮದಿಂದ ಗ್ರೆಗೋರಿಯನ್ ಕ್ಯಾಲೆಂಡರ್​ನ ಬಳಕೆ ಆರಂಭವಾಯಿತು. ಅದರ ನಾಲ್ಕು ವರ್ಷದ ಬಳಿಕ ಮೊದಲ ಲೀಪ್ ಇಯರ್ ಆಚರಿಸಲಾಯಿತು. ನಾಲ್ಕು ವರ್ಷಗಳಿಗೆ ಒಮ್ಮೆ ಕ್ಯಾಲೆಂಡರ್​ನಲ್ಲಿ ಒಂದು ಹೆಚ್ಚುವರಿ ದಿನ ಇರದಿದ್ದರೆ 100 ವರ್ಷಗಳ ನಂತರ ನಾವು 25 ದಿನಗಳಷ್ಟು ಮುಂದೆ ಇರುತ್ತೇವೆ. ಅದರಿಂದ, ಹವಾಮಾನದ ಬದಲಾವಣೆಯನ್ನು ನಿಖರವಾಗಿ ತಿಳಿದುಕೊಳ್ಳಲು ಆಗುವುದಿಲ್ಲ ಮತ್ತು ಹವಾಮಾನಕ್ಕೆ ವ್ಯತಿರಿಕ್ತವಾಗಿ ಜೀವನಶೈಲಿ ರೂಪುಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. 2020ರ ಬಳಿಕ ಈ ವರ್ಷ ಲೀಪ್ ಇಯರ್ ಬಂದಿದೆ. ಮುಂದಿನ ಲೀಪ್ ಇಯರ್ 2028 ಆಗಿರಲಿವೆ.
ರಣಜಿಯಲ್ಲೂ ರಾಜಕೀಯ: ಆಂಧ್ರತಂಡಕ್ಕೆ ಇನ್ನು ಮುಂದೆ ಆಡೋದಿಲ್ಲ ಎಂದ ಹನುಮ ವಿಹಾರಿ !

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × three =
Remember me
