ತುಮಕೂರು:ಶಿರಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆ ರೆಡ್ ಕಾರ್ಪೆಟ್ ಹಾಕಿ ಮತದಾರರನ್ನು ಸ್ವಾಗತಿಸಲಾಗಿದೆ!
ಹೌದು, ಆರ್​ ಆರ್​ ನಗರ ಮತ್ತು ಶಿರಾ ಕ್ಷೇತ್ರಕ್ಕೆ ಸೋಮವಾರ ಬೈ ಎಲೆಕ್ಷನ್​ ನಡೆಯುತ್ತಿದೆ. ಈ ಎರಡೂ ಕ್ಷೇತ್ರಗಳ ಪೈಕಿ ಶಿರಾ ನಗರದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದ ಮತಗಟ್ಟೆ ಕೇಂದ್ರ ಆಕರ್ಷಿತವಾಗಿದೆ. ಮತದಾನಕ್ಕೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತಿಸಲಾಯಿತು. ಈ ಮತ ಕೇಂದ್ರದಲ್ಲಿ ಮಹಿಳೆಯರು ಮತ್ತು ಪುರುಷರು ಪ್ರತ್ಯೇಕವಾಗಿ, ಅಂಗವಿಕಲರಿಗೆ ಪ್ರತ್ಯೇಕ ಸಾಲಿನ ವ್ಯವಸ್ಥೆ ಮಾಡಲಾಗಿತ್ತು. ಮತದಾನಕ್ಕೆ ಬರುವವರಿಗೆ ರೆಡ್ ಕಾರ್ಪೆಟ್ ಸುಸ್ವಾಗತವನ್ನು ಕೋರಲಾಯಿತು. ಬಲೂನ್​ಗಳಿಂದ ಅಲಂಕಾರಿಸಲಾಗಿದೆ. ಅಲ್ಲದೆ ಮತಗಟ್ಟೆ ಆರಣದಲ್ಲಿ ಸೆಲ್ಫಿ ಫೋಟೋ ತೆಗೆದುಕೊಳ್ಳಲೂ ಅವಕಾಶ ಕಲ್ಪಿಸಲಾಗಿದ್ದು, ಫೋಟೋ ಪಾಯಿಂಟ್​ ನಿರ್ಮಿಸಲಾಗಿತ್ತು.
ಸಿರಾ ಉಪಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಮಾದರಿ ಮತ ಕೇಂದ್ರವನ್ನಾಗಿ ಮಾಡಿರೋದು ಈ ಚುನಾವಣೆಯ ವಿಶೇಷ. ಮತ ಹಾಕಲು ಬರುವವರಿಗೆ ಮಾಸ್ಕ್, ಸ್ಯಾನಿಟೇಜರ್ ನೀಡಲಾಯಿತು. ಸಹಾಯವಾಣಿ ಕೇಂದ್ರವನ್ನೂ ತೆರೆಯಲಾಗಿತ್ತು. ವೋಟ್​ ಮಾಡಲು ಬಂದ ಮತದಾರರು ಇಲ್ಲಿನ ಸಿಂಗಾರ ಕಂಡು ಬೆರಗುಗಣ್ಣಿನಿಂದ ನೋಡುತ್ತ ಕೆಲಕ್ಷಣ ಹಾಗೆ ನಿಲ್ಲುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಈ ಮತದಾನ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ರಾಕೇಶ್ ಕುಮಾರ್, ಇಲ್ಲಿನ ವಿಶೇಷ ವ್ಯವಸ್ಥೆ ಕಂಡು ಸಂತಸ ವ್ಯಕ್ತಪಡಿಸಿದರು. ಇಲ್ಲಿನ ಸಿಬ್ಬಂದಿ ಪಿಪಿಇ ಕಿಟ್ ಧರಿಸಿಕೊಂಡು ಕೆಲಸ ನಿರ್ವಹಿಸಿದರು.
VIDEO| ಸಮಾವೇಶದಲ್ಲೇ ಕುಸಿದುಬಿದ್ದ ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 9 =
Remember me
