ಬೆಂಗಳೂರು:ಅಂತಾರಾಷ್ಟ್ರೀಯ ಯೋಗ ದಿನ ನಿಮಿತ್ತ ರಾಜ್ಯ ಸರ್ಕಾರದ ಕಾರಾಗೃಹಗಳು ಮತ್ತು ಸುಧಾರಣಾ ಸೇವಗಳ ಇಲಾಖೆ ಸಹಭಾಗಿತ್ವದಲ್ಲಿ ಇಶಾ ಫೌಂಡೇಷನ್, ಶುಕ್ರವಾರ “ಯೋಗಕ್ಷೇಮ’ ಕಾರ್ಯಕ್ರಮ ಪ್ರಾರಂಭಿಸಿದೆ.
ಉಪಕ್ರಮದಡಿ ಜೈಲು ಪರಿಸರ ವ್ಯವಸ್ಥೆಯಲ್ಲಿ ಕೈದಿಗಳಿಗೆ ಯೋಗಾಭ್ಯಾಸ ಮೂಲಕ ದೈಹಿಕ, ಮಾನಸಿಕ, ಭಾವನಾತ್ಮಕ ಆರೋಗ್ಯ ಹೆಚ್ಚಿಸುವುದು ಉದ್ದೇಶವಾಗಿದೆ. ಯೋಗಕ್ಷೇಮ ಮೂಲಕ ನೀಡಲಾಗುವ ಎಲ್ಲ ಯೋಗಾಭ್ಯಾಸಗಳನ್ನು ಇಶಾ ಫೌಂಡೇಷನ್​ ವಿನ್ಯಾಸಗೊಳಿಸಿದೆ. ಆರಂಭದಲ್ಲಿ 16 ಜೈಲುಗಳಲ್ಲಿನ ಕೈದಿಗಳನ್ನು ಸೇರಿಸಲಾಗಿದೆ. ಐಪಿಎಸ್​ ಅಧಿಕಾರಿ ಮಾಲಿನಿ ಕೃಷ್ಣಮೂರ್ತಿ ಇದಕ್ಕೆ ಸಹಕಾರ ನೀಡಿದ್ದಾರೆ.ಕಾರಾಗೃಹ ಇಲಾಖೆಯ ಉಪಕ್ರಮದ ಭಾಗವಾಗಿ ರಾಜ್ಯಾದ್ಯಂತ 54 ಜೈಲುಗಳಲ್ಲಿ ದೈಹಿಕ, ಭಾವನಾತ್ಮಕ ಯೋಗಕ್ಷೇಮಕ್ಕಾಗಿ ಯೋಗ, ಧ್ಯಾನ, ಕೌಶಲ ಅಭಿವೃದ್ಧಿ ಕಾರ್ಯಕ್ರಮಗಳನ್ನು ನೀಡುತ್ತಿದೆ.
ದೇಶದ ಸಂಸ್ಕೃತಿ, ಪರಂಪರೆಯ ಪ್ರತೀಕ ಯೋಗಮೊದಲ ಹಂತದಲ್ಲಿ ಫೌಂಡೇಷನ್​, 10 ಸ್ಥಳಗಳಲ್ಲಿ 1,100 ಕೈದಿಗಳನ್ನು ಒಳಗೊಂಡಿದೆ. ಕೈದಿಗಳಿಗೆ ಮತ್ತು ಸಿಬ್ಬಂದಿಗೆ ಒಂದು ಗಂಟೆ ಕಾಲ ಯೋಗವನ್ನು ಹೇಳಿಕೊಡಲಾಗುತ್ತದೆ. ಯೋಗದಿಂದ ದೇಹ ಮತ್ತು ಮನಸ್ಸಿಗೆ ಸಮತೋಲನ, ಸ್ಥಿರತೆ ತರಲಿದೆ. ಬೆನ್ನುಮೂಳೆ ಬಲಪಡಿಸುವ ಜತೆಗೆ ಶ್ವಾಸಕೋಶದ ಸಾಮಥ್ಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಯೋಗದಲ್ಲಿ ಒಬ್ಬರ ಸೂಕ್ಷ್ಮ ಕ್ಷಮತೆ, ಗ್ರಹಿಕೆ ಮತ್ತು ಜೀವನದ ಅನುಭವ ಹೆಚ್ಚಿಸುವ ಸಾಮರ್ಥ್ಯಕ್ಕಾಗಿ ಮಾನವ ಅಂಗರಚನಾಶಾಸ್ತ್ರದ ಮಹತ್ವ ಭಾಗವೆಂದು ಪರಿಗಣಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
