
ಬೆಂಗಳೂರು:ವೈದ್ಯೆ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಪ್ರಕರಣದ ಹೊಣೆಗಾರಿಕೆ ಹೊತ್ತು ಪಶ್ಚಿಮ ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆಗೆ ನೀಡಬೇಕು ಎಂದು ಬಿಜೆಪಿ ರಾಷ್ಟೀಯ ವಕ್ತಾರ ಶೆಹಜಾದ್ ಪೂನಾವಾಲಾ ಆಗ್ರಹಿಸಿದ್ದಾರೆ.ಸುದ್ದಿಗೋಷ್ಠಿಲ್ಲಿ ಮಾತನಾಡಿ, ಗುಂಡಾ ಸರ್ಕಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿಗೆ ಮುಖ್ಯಮಂತ್ರಿಯಾಗಿ ಒಂದು ನಿಮಿಷವೂ ಮುಂದುವರೆಯಲು ನೈತಿಕತೆ ಇಲ್ಲ. ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸಿದರು.ಕೋಲ್ಕತ್ತ- ಕರ್ನಾಟಕ- ಕನೌಜ್ ನಡುವೆ ಇಂಡಿಯನ್ನು ಒಗ್ಗೂಡಿಸುವುದು ಅತ್ಯಾಚಾರಿಗಳನ್ನು ಬಚಾವೋ ಕಾರ್ಯಕ್ರಮವಾಗಿದೆ. ಆರೇಳು ಸಾವಿರ ಜನರನ್ನು ಕಳಿಸಿ ಹಿಂಸೆ, ಆಸ್ಪತ್ರೆಯನ್ನು ಧ್ವಂಸ ಮಾಡಲಾಗಿತ್ತು. ಆಸ್ಪತ್ರೆಯಲ್ಲಿ ನಡೆದ ಟ್ರೆನಿ ಬನಿ ವೈದ್ಯೆ ಮೇಲಿನ ಅತ್ಯಾಚಾರ ಇಡೀ ದೇಶವನ್ನೇ ಕಂಗೆಡಿಸಿದೆ. ಈ ವಿಚಾರದಲ್ಲಿ ನಾವೆಲ್ಲರೂ ಯೋಚಿಸಬೇಕಿದೆ ಎಂದು ತಿಳಿಸಿದರು.
ಪ್ರಾಯೋಜಿತ ಹಿಂಸಾಚಾರಕೊಲ್ಕತ್ತದಲ್ಲಿ ಆ.14ರ ಮಧ್ಯರಾತ್ರಿ ಮಹಿಳಾ ಪ್ರತಿಭಟನಾಕಾರರು, ವೈದ್ಯರ ಮೇಲೆ ಟಿಎಂಸಿ ಪ್ರಾಯೋಜಿತ ಸಾವಿರಾರು ಗೂಂಡಾಗಳು ಹಲ್ಲೆ ನಡೆಸಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ವೈದ್ಯೆಯ ಸ್ಥಿತಿ ಇತರರಿಗೂ ಆಗಲಿದೆ ಎಂದು ಮಹಿಳಾ ವೈದ್ಯರಿಗೆ ಬೆದರಿಕೆ ಒಡ್ಡಲಾಗಿದೆ ಸಾಕ್ಷ್ಯನಾಶಕ್ಕಾಗಿಯೇ ಮೆಡಿಕಲ್ ಕಾಲೇಜಿನಲ್ಲಿ ಈ ಹಲ್ಲೆ, ಹಿಂಸಾಚಾರ ನಡೆದಿದೆ. ಇದು ಪಶ್ಚಿಮ ಬಂಗಾಲದ ರಾಜ್ಯ ಸರ್ಕಾರ ಪ್ರಾಯೋಜಿತ ಹಿಂಸಾಚಾರ ಎಂದು ಶೆಹಜಾದ್ ಪೂನಾವಾಲಾ ಅವರು ಟೀಕಿಸಿದರು.ಇಡೀ ಪ್ರಕರಣದ ಬಗ್ಗೆ ರಾಹುಲ್‌ಗಾಂಧಿ ಒಂದು ಟ್ವೀಟ್ ಮಾತ್ರ ಮಾಡಿದ್ದಾರೆ. ಆದರೆ ಸಿಎಂ ಮಮತಾ ಬ್ಯಾನರ್ಜಿ ರಾಜೀನಾಮೆ ಕೇಳಿಲ್ಲ. ಇದು ಎ- ಅಪರಾಧಿ ಬಚಾವೋ, ಬಿ- ಬ್ಲೇಮ್ ಗೇಮ್ ಎಂದೂ ದೂರಿದರು.
ನಿಮ್ಮ ನಿಲುವೇನು?ಪಶ್ಚಿಮ ಬಂಗಾಲದ ಸಂದೇಶ್‌ಖಲಿ ಅತ್ಯಾಚಾರ, ವೈದ್ಯೆ ಮೇಲಿನ ಅತ್ಯಾಚಾರ, ಆಪ್ ಮುಖಂಡರಾದ ಸ್ವಾತಿ ಮಲಿವಾಲ್ ಮೇಲೆ ಹಲ್ಲೆ ಪ್ರಕರಣದಲ್ಲಿ ನಿಮ್ಮ ನಿಲುವೇನು ಎಂದು ತಿಳಿಸಿ ಎಂದು ರಾಹುಲ್, ಪ್ರಿಯಾಂಕ ವಾಧ್ರಾ ಅವರನ್ನು ಪ್ರಶ್ನಿಸಿದ ಅವರು, ಇಂಡಿ ಪಕ್ಷಗಳು ಕೂಡ ಈ ವಿಷಯದಲ್ಲಿ ತಮ್ಮ ನಿಲುವನ್ನು ತಿಳಿಸಬೇಕಿದೆ ಎಂದು ಆಗ್ರಹಿಸಿದರು.ಸಮಾಜವಾದಿ ಪಕ್ಷದ ಮೊಯಿದ್ ಖಾನ್, ನವಾಬ್ ಯಾದವ್ ಮೇಲಿನ ಅತ್ಯಾಚಾರ ಪ್ರಕರಣದಲ್ಲೂ ಅತ್ಯಾಚಾರಿಗಳನ್ನು ರಕ್ಷಿಸುವ ಪ್ರಯತ್ನ ನಡೆದಿತ್ತು ಎಂದು ಟೀಕಿಸಿದರು.ರಾಜ್ಯ ಮುಖ್ಯ ವಕ್ತಾರ ಅಶ್ವಥನಾರಾಯಣ್, ರಾಜ್ಯ ವಕ್ತಾರರಾದ ಪ್ರಕಾಶ್, ಡಾ. ನರೇಂದ್ರ ರಂಗಪ್ಪ, ವೆಂಕಟೇಶ್ ದೊಡ್ಡೇರಿ, ಕು. ಸುರಭಿ ಹೊದಿಗೆರೆ ಮೊದಲಾದವರು ಇದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:five × 5 =
Remember me
