ಬಳ್ಳಾರಿ:ಪಶ್ಚಿಮ ಬಂಗಾಳದಿಂದ ಕರ್ನಾಟಕದ ಬಳ್ಳಾರಿಗೆ ಕೆಲಸ ಹುಡುಕಿಕೊಂಡು ಬಂದ ವ್ಯಕ್ತಿಯೊಬ್ಬ ಭೀಕರವಾಗಿ ಹತ್ಯೆಗೀಡಾಗಿರುವ ಘಟನೆ ನಡೆದಿದೆ. ಹೆಂಡತಿಯೇ ಗಂಡನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದ. ಕೆಲ ದಿನಗಳ ಹಿಂದೆ ಆಶಿಶ್ ಡೇ (30) ಮತ್ತು ಮಾಲಾ ದಂಪತಿ ತೋರಣಗಲ್ ಗ್ರಾಮದಲ್ಲಿ ಬಾಡಿಗೆ ಮನೆಯೊಂದನ್ನು ಮಾಡಿ ಜೀವನ ನಡೆಸಲು ಆರಂಭಿಸಿದ್ದರು. ತಾವು ಪಶ್ಚಿಮ ಬಂಗಾಳದಿಂದ ಬಂದಿದ್ದು, ಹೋಟೆಲ್​ನಲ್ಲಿ ಕೆಲಸ ಮಾಡುತ್ತಿರುವುದಾಗಿ ಆಶಿಶ್​ ತಿಳಿಸಿದ್ದ. ಆದರೆ ಬಾಡಿಗೆ ಮನೆ ಪಡೆದ ನಾಲ್ಕೇ ದಿನಗಳಲ್ಲಿ ಮನೆಗೆ ಬೀಗ ಹಾಕಿದೆ. ಬಹುಶಃ ಯಾವುದಾದರೂ ಕೆಲಸಕ್ಕೆ ತೆರಳಿರಬೇಕು ಎಂದು ಮನೆಯ ಮಾಲೀಕ ಸುಮ್ಮನಾಗಿದ್ದಾನೆ.
ಆದರೆ ಕೆಲ ದಿನಗಳಾದ ನಂತರ ಆ ಮನೆಯಿಂದ ದುರ್ವಾಸನೆ ಬರಲಾರಂಭಿಸಿದೆ. ಆ ಕಾರಣ ಮನೆಯ ಬಾಗಿಲನ್ನು ತೆರೆದ ಮಾಲೀಕ ಒಳಗೆ ಹೋಗಿ ಪರಿಶೀಲನೆ ನಡೆಸಿದ್ದಾನೆ. ಆಗ ಗಂಟಲು ಸೀಳಿ ಬರ್ಬರವಾಗಿ ಹತ್ಯೆಗೀಡಾದ ಆಶಿಶ್​ ಮೃತದೇಹ ಆತನಿಗೆ ಕಾಣಿಸಿದೆ. ಕೊಲೆಯಾದ ವ್ಯಕ್ತಿಯನ್ನು ಕುರ್ಚಿಗೆ ಕಟ್ಟಿ ಗಂಟಲು ಸೀಳಿರುವುದು ಕಂಡುಬಂದಿದೆ.
ಈ ವಿಚಾರವನ್ನು ಪೊಲೀಸರಿಗೆ ತಿಳಿಸಲಾಗಿದೆ. ಸ್ಥಳಕ್ಕೆ ಬಂದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಮೇಲ್ನೋಟಕ್ಕೆ ಆಶಿಶ್​ನ ಹೆಂಡತಿಯೇ ಆತನ ಕೊಲೆ ಮಾಡಿರುವುದಾಗಿ ಕಂಡುಬಂದಿದೆ. ಕೊಲೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೃತನ ಸಂಬಂಧಿಗಳು ಬಾರದ ಹಿನ್ನೆಲೆಯಲ್ಲಿ ಶವವನ್ನು ವಿಮ್ಸ್ ಆಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದೆ.
ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆ! ಇನ್ನಷ್ಟು ಇಳಿಯುವ ಸಾಧ್ಯತೆ..!

9 ತಿಂಗಳ ಹಿಂದೆ ಫೇಸ್​ಬುಕ್​ನಲ್ಲಿ ಶುರುವಾದ ಪ್ರೀತಿ ದುರಂತ ಅಂತ್ಯ: ಯುವಜೋಡಿಗೆ ಮುಳುವಾಗಿದ್ದೇನು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − ten =
Remember me
