ಬೆಂಗಳೂರು:ಗಾಂಜಾ ಬೆಳೆಯುವುದಕ್ಕೆ ಪಶ್ಚಿಮಘಟ್ಟ ತಾಣಗಳೇ ಫೆವರಿಟ್. ಅತಿ ಹೆಚ್ಚು ಪ್ರಕರಣಗಳು ಮಲೆನಾಡು ಸೆರಗಿನ ಪ್ರದೇಶಗಳಲ್ಲಿ ಹಿಂದಿನಿಂದಲೂ ವರದಿಯಾಗುತ್ತಿವೆ.
ಜೀವ ಭಯದ ಕಾರಣಕ್ಕೆ ದಟ್ಟ ಕಾಡಿನೊಳಗೆ ಯಾವ ಅಧಿಕಾರಿಗಳು ಬರುವುದಿಲ್ಲ ಎನ್ನುವ ಕಾರಣಕ್ಕೆ ದಂಧೆಕೋರರು, ಇಂಥಹ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಪೊಲೀಸ್ ಮತ್ತು ಅರಣ್ಯ ಇಲಾಖೆಯ ಲೋಪಗಳು ದಂಧೆಕೋರರಿಗೆ ವರದಾನವಾಗಿವೆ. ಇನ್ನು ಅರೆ ಮಲೆನಾಡು ಮತ್ತು ಬಯಲು ಸೀಮೆ ಪ್ರದೇಶಗಳಲ್ಲಿ ಅಲ್ಲೊಂದು, ಇಲ್ಲೊಂದು ಪ್ರಕರಣ ವರದಿಯಾಗುತ್ತಿದ್ದರೂ, ಗಂಭೀರ ಸ್ವರೂಪದ್ದಾಗಿರಲಿಲ್ಲ. ಆದರೆ, ಪೊಲೀಸರು ನಿರ್ಲಕ್ಷ್ಯದಿಂದ ಗಾಂಜಾ ದಂಧೆ ದೊಡ್ಡ ಪ್ರಮಾಣಕ್ಕೆ ಬೆಳೆದಿದೆ ಎಂಬುದು ಸಾರ್ವಜನಿಕರ ಆರೋಪ.
ಪತ್ತೆ ಹಚ್ಚುವುದು ಕಷ್ಟ: ಬೆಳೆಗಳ ನಡುವೆ ಗಾಂಜಾ ಬೆಳೆದರೆ ಅದನ್ನು ಪತ್ತೆ ಹಚ್ಚುವುದು ಕಷ್ಟದ ಕೆಲಸ. ಎಷ್ಟೋ ಬಾರಿ ಏನೋ ರೈತ ಹೊಲ ಹಾಳು ಬಿಟ್ಟಿದ್ದಾನೆ, ಅದಕ್ಕೆ ಅಲ್ಲಿ ಕಾಂಗ್ರೆಸ್ ಗಿಡ ಬೆಳೆದಿದೆ ಎಂದು ನಿರ್ಲಕ್ಷಿಸಿರುವ ಪ್ರಕರಣಗಳು ಸಾಕಷ್ಟಿವೆ. ಆದರೆ, ಈ ನಿರ್ಲಕ್ಷ್ಯ ದಂಧೆಕೋರರಿಗೆ ಲಾಭ ಮಾಡಿಕೊಡುತ್ತಿದೆ. ಈಗಲಾದರೂ ಪೊಲೀಸರು ಕಟ್ಟು ನಿಟ್ಟಿನ ಕ್ರಮ ಕೈಗೊಂಡು, ಗಾಂಜಾಗೆ ಕಡಿವಾಣ ಹಾಕಲು ಮುಂದಾಗಬೇಕಿದೆ.
ರಾಗಿಣಿಗೆ ಸಿಸಿಬಿ ನೋಟಿಸ್
ಸ್ಯಾಂಡಲ್​ವುಡ್ ಡ್ರಗ್ಸ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಸಿಬಿ ಪೊಲೀಸರು, ನಟಿ ರಾಗಿಣಿ ದ್ವಿವೇದಿಗೆ ಗುರುವಾರ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ತೊಡಗಿರುವ ಆರೋಪದ ಮೇಲೆ ರಾಗಿಣಿ ಆಪ್ತ ಮತ್ತು ಜಯನಗರದ ಆರ್​ಟಿಒ ಕಚೇರಿ ದ್ವಿತೀಯ ದರ್ಜೆ ಸಹಾಯಕ ರವಿಶಂಕರ್​ನನ್ನು ಬುಧವಾರ ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈತನ ಹೇಳಿಕೆ ಮೇರೆಗೆ ನಟಿಗೂ ನೋಟಿಸ್ ಕೊಟ್ಟಿದ್ದು, ತನಿಖೆಯಿಂದ ಮತ್ತಷ್ಟು ನಟ-ನಟಿಯರಿಗೂ ಕಂಟಕ ಕಾದಿದೆ. ಮತ್ತೊಂದೆಡೆ ಎನ್​ಸಿಬಿಗೆ ಸೆರೆಸಿಕ್ಕ ದೆಹಲಿ ಮೂಲದ ಎಫ್.ಅಹಮದ್, ಹೇಳಿಕೆ ಮೇರೆಗೆ ಕೆಲ ಕಲಾವಿದರ ಮೇಲೆ ನಿಗಾವಹಿಸಲಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 16 =
Remember me
