
ಬೆಂಗಳೂರು:ಪಶ್ಚಿಮಘಟ್ಟದ ಉಳಿವಿಗೆ ಮತ್ತು ಅಲ್ಲಿನ ಜೀವಲೋಕದ ರಕ್ಷಣೆಗೆ ಪ್ರೊ.ಮಾಧವ ಗಾಡ್ಗೀಳ್ ಸಮಿತಿಯ ವರದಿ ಜಾರಿ ಇಂದಿನ ತುರ್ತಾಗಿದೆ ಎಂದು ಪರಿಸರವಾದಿಗಳು ಪ್ರತಿಪಾದಿಸಿದ್ದಾರೆ.ಪರಿಸರಕ್ಕಾಗಿ ನಾವು ಸಂಘಟನೆ ಗಾಂಧಿ ಭವನದಲ್ಲಿ ಏರ್ಪಡಿಸಿದ್ದ ಪ್ರೊ.ಮಾಧವ ಗಾಡೀಳ್ ಜೊತೆಗಿನ ಸಂವಾದದಲ್ಲಿ ಈ ಬಗ್ಗೆ ನಿರ್ಣಯ ಅಂಗೀಕರಿಸಲಾಗಿದ್ದು, ಈ ವರದಿ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಲಾಗಿದೆ.ವರದಿಯ ಸಂಕ್ಷಿಪ್ತ ಹಾಗೂ ಸರಳ ಕನ್ನಡಾನುವಾದಕ್ಕೆಂದು ಐವರು ಸದಸ್ಯರ ಸಮಿತಿಯನ್ನು ಸರ್ಕಾರ ನೇಮಕ ಮಾಡಬೇಕು. ಸಮಿತಿಯ ಎಲ್ಲ ಸದಸ್ಯರೂ ಕನ್ನಡಿಗರಾಗಿರಬೇಕು. ಅದರಲ್ಲಿ ಒಬ್ಬ ಸರ್ಕಾರಿ ಅಧಿಕಾರಿ, ಒಬ್ಬ ಪರಿಸರ ವಿಜ್ಞಾನಿ, ಒಬ್ಬ ಸರ್ಕಾರೇತರ ಸಂಸ್ಥೆಯ ಪ್ರತಿನಿಧಿ, ಒಬ್ಬ ಶಾಸಕ ಮತ್ತು ಒಬ್ಬ ಪತ್ರಕರ್ತ ಇರಬೇಕು ಎಂದು ಸಲಹೆ ನೀಡಲಾಗಿದೆ.ವರದಿ ಬಗ್ಗೆ ತಾಲ್ಲೂಕು ಮಟ್ಟದಲ್ಲಿ ಸಾಧ್ಯವಾದಷ್ಟೂ ಹೆಚ್ಚು ಗ್ರಾಮ ಪಂಚಾಯತ್ ಸದಸ್ಯರ ಸಮ್ಮುಖದಲ್ಲಿ ಡಿಸೆಂಬರ್ ಹೊತ್ತಿಗೆ ಬಿಡುಗಡೆಯಾಗಿ ಚರ್ಚೆಯಾಗುವಂತೆ ಮಾಡಿಕೊಡಬೇಕು. ಅದರ ಪ್ರತಿಗಳು ಪ್ರತಿ ಪಂಚಾಯತ್ ಕಚೇರಿಯಲ್ಲೂ ಲಭ್ಯವಿರಬೇಕು ಎಂದು ತಿಳಿಸಲಾಗಿದೆ.ಪಶ್ಚಿಮಘಟ್ಟದ ವ್ಯಾಪ್ತಿಯಲ್ಲಿರುವ ಎಲ್ಲ ಸರ್ಕಾರಿ ಕಚೇರಿಗಳಲ್ಲೂ ಕಡ್ಡಾಯ ಬಿಸಿಲುಕೊಯ್ದು ಮತ್ತು ಮಳೆಕೊಯ್ಲಿನ ವ್ಯವಸ್ಥೆ ಜಾರಿಗೆ ಬರಬೇಕು. ಸಮುದ್ರದಂಚಿಗೆ ’ಕರಾವಳಿ ನಿಯಂತ್ರಿತ ವಲಯ’ (ಸಿಆರ್‌ಝಡ್) ನಿಯಮಗಳ ಮಾದರಿಯಲ್ಲಿ ಪಶ್ಚಿಮಘಟ್ಟಗಳ ಪ್ರಾಂತದಲ್ಲಿ ಹರಿಯುವ ಎಲ್ಲ ನದಿಗಳಿಗೂ ನದಿತಟಾಕ ನಿಯಂತ್ರಣ ವಲಯವನ್ನು (ಆರ್‌ಆರ್‌ಝಡ್) ಗುರುತಿಸಬೇಕು. ಅಲ್ಲಿ ಪರಿಸರವಿರೋಧಿ ವಾಣಿಜ್ಯ ಚಟುವಟಿಕೆಗಳನ್ನು ನಿರ್ಬಂಧಿಸಬೇಕು. ಹೊರರಾಜ್ಯಗಳ ವಲಸಿಗರ ಸಂಖ್ಯೆ ತೀರಾ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಲು ಈಶಾನ್ಯ ರಾಜ್ಯಗಳಲ್ಲಿ ಜಾರಿಯಲ್ಲಿರುವ ಇನ್ನರ್ ಲೈನ್ ಪರ್ಮಿಟ್ ಮಾದರಿಯನ್ನು ಪಶ್ಚಿಮಘಟ್ಟಗಳಲ್ಲೂ ಜಾರಿಗೆ ತರಬೇಕು ಎಂದು ಒತ್ತಾಯಿಸಲಾಗಿದೆ.ಮರಗಳನ್ನು ಉಳಿಸಿ, ಬೆಳೆಸಲು ಕೇಂದ್ರ ಸರ್ಕಾರ ಪಂಜಾಬ್‌ನಲ್ಲಿ ಜಾರಿಗೆ ತಂದ ’ಕಾರ್ಬನ್ ಕ್ರೆಡಿಟ್ ಮಾದರಿ ಕರ್ನಾಟಕಕ್ಕೂ ಬರಬೇಕು. ಮರಗಳನ್ನು ಕಡಿಯದೇ ಉಳಿಸಿಕೊಂಡವರಿಗೆ ಸರ್ಕಾರ ಪ್ರೋತ್ಸಾಹ ಧನವನ್ನು ನೀಡಬೇಕು. ಈ ಸರ್ಕಾರಿ ಯೋಜನೆ ರಾಜ್ಯದ ಇತರ ಪ್ರದೇಶಗಳಿಗೂ ಮಾದರಿಯಾಗುವಂತೆ ಮೊದಲಿಗೆ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜಾರಿಗೆ ಬರಬೇಕು ಎಂದು ನಿರ್ಣಯಿಸಲಾಗಿದೆ.ರಾಷ್ಟ್ರೀಯ ಅರಣ್ಯ ನೀತಿಯ ಪ್ರಕಾರ ಗುಡ್ಡಗಾಡು ಪ್ರದೇಶಗಳಲ್ಲಿ ಶೇ. 66ರಷ್ಟು ಅರಣ್ಯ ಪ್ರದೇಶಗಳಿರಬೇಕು. ನೆಡುತೋಪುಗಳನ್ನೂ ಸೇರಿ ಅದು ಈಗ ಶೇ.021ಕ್ಕೆ ಕುಸಿದಿದೆ. ಅದು ಕನಿಷ್ಠ ಶೇ.33ರಷ್ಟು ಆಗುವವರೆಗೆ ಯಾವ ಕಾರಣಕ್ಕೂ ಅರಣ್ಯ ಪ್ರದೇಶವನ್ನು ಅರಣೇತರ ಉದ್ದೇಶಗಳಿಗೆ ಬಳಸಲು ಅನುಮತಿ ನೀಡಬಾರದು. ಪಶ್ಚಿಮಘಟ್ಟ ಪ್ರದೇಶಗಳಲ್ಲಿರುವ ವಿದ್ಯುತ್ ಚಾಲಿತ ಶವಾಗಾರಗಳು ಇನ್ನು ಹತ್ತು ವರ್ಷಗಳಲ್ಲಿ ಜೈವಿಕ ಅನಿಲ ಮತ್ತು ಅಥವಾ ಸೌರವಿದ್ಯುತ್ತಿನಂಥ ಬದಲೀ ಶಕ್ತಿಯಿಂದ ಚಾಲನೆ ಪಡೆಯುವಂತಾಗಬೇಕು. ಆ ನಿಟ್ಟಿನಲ್ಲಿ ವಿಜ್ಞಾನ ತಂತ್ರಜ್ಞಾನ ಸಂಬಂಧೀ ಸಂಶೋಧನೆಗಳಿಗೆ ಈಗಲೇ ಸರ್ಕಾರ ಚಾಲನೆ ನೀಡಬೇಕು ಎಂದು ನಿರ್ಣಯಿಸಲಾಗಿದೆ.
ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಬರುವ ನಗರ/ಪಟ್ಟಣಗಳಲ್ಲಿ ಮಳೆನೀರನ್ನು ಇಂಗಿಸುವ ವ್ಯಾಪಕ ವ್ಯವಸ್ಥೆ ಜಾರಿಗೆ ಬರಬೇಕು. ಕೊಳವೆ ಬಾವಿಗಳ ಅಗತ್ಯವೇ ಇಲ್ಲದಂಥ ಮಾದರಿ ಎಲ್ಲ ಮುನಿಸಿಪಾಲಿಟಿಗಳಲ್ಲಿ ಜಾರಿಗೆ ಬರಬೇಕು. ಕಾಫಿ/ಟೀ ಎಸ್ಟೇಟ್‌ಗಳಲ್ಲಿ ಕಳೆನಾಶಕ ಕೆಮಿಕಲ್‌ಗಳ ಬಳಕೆ ತೀರಾ ಹೆಚ್ಚುತ್ತಿದೆ. ಅದರ ದುಷ್ಪರಿಣಾಮಗಳು ಜನರಿಗೆ ಮನದಟ್ಟಾಗುವಂತೆ ಮಾಹಿತಿ ನೀಡುವ ಮತ್ತು ಜೈವಿಕ ಕಳೆನಿಯಂತ್ರಣಗಳನ್ನು ಜನಪ್ರಿಯಗೊಳಿಸುವ ಯೋಜನೆ ಜಾರಿಗೆ ಬರಬೇಕು. ಜಲಾಶಯಗಳಲ್ಲಿ ಏಕಜಾತಿಯ ಜಲಚರಗಳ ಸಂಗೋಪನೆಯನ್ನು ಕೈಬಿಡಬೇಕು. ನೀರಿನಲ್ಲಿ ಹಿಂದೆ ಇದ್ದ ಜೀವಿವೈವಿಧ್ಯವನ್ನು ಮರುಸ್ಥಾಪನೆ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಗಿದೆ.ಗಾಡ್ಗೀಳ್ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಪರಿಸರವಾದಿಗಳಾದ ಪರಶುರಾಮೇಗೌಡ, ಕೇಸರಿ ಹರವೂ, ಅನಿತಾ ಕಡಗದ, ಆರ್.ಪಿ.ವೆಂಕಟೇಶಮೂರ್ತಿ, ಆಂಜನೇಯರೆಡ್ಡಿ ಮತ್ತಿತರರು ಹಾಜರಿದ್ದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × 3 =
Remember me
