ಮಂಗಳೂರು: ಕಾರವಾರದ ನೇತ್ರಾಣಿ ದ್ವೀಪ ಹಾಗೂ ಅದರ ಉತ್ತರಕ್ಕೆ ಕಾಣಸಿಗುವ ಅಪರೂಪದ ವೇಲ್ ಶಾರ್ಕ್ ಮೀನನ್ನು ಮಂಗಳೂರು ಸಮುದ್ರದಲ್ಲಿ ರಾಜ್ಯದ ಹಕ್ಕಿವೀಕ್ಷಣಾ ತಂಡದವರು ಪತ್ತೆ ಮಾಡಿದ್ದಾರೆ.
ಮಂಗಳೂರಿನ ಅರಬ್ಬಿ ಸಮುದ್ರದಲ್ಲಿ ಹಮ್ಮಿಕೊಳ್ಳಲಾದ ಸಾಗರ ಪಕ್ಷಿ ವೀಕ್ಷಣಾ ಅಭಿಯಾನದ ವೇಳೆ 15ರಿಂದ 20 ಕಿ.ಮೀನಷ್ಟು ದೂರ ಸಮುದ್ರದಲ್ಲಿ ಸಾಗಿರುವ ತಂಡಕ್ಕೆ ಅಪರೂಪದ ವೇಲ್ ಶಾರ್ಕ್ ಮೀನು ಸಮುದ್ರದ ಮೇಲ್ಮೈ ನೀರಿನಲ್ಲಿ ಈಜುವುದು ಕಂಡುಬಂದಿದೆ. ಐದು ನಿಮಿಷ ಕಾಲ ಅದರ ವಿಡಿಯೋವನ್ನೂ ಈ ತಂಡ ಸೆರೆಹಿಡಿದಿದೆ.
ಮಂಗಳೂರು ಸಮುದ್ರದಲ್ಲಿ ಇದು ಇದ್ದಿರಬಹುದಾದರೂ ನೋಡಲು ಸಿಗುವುದು ಕಡಿಮೆ, ಉಳಿದಂತೆ ಗುಜರಾತ್, ಮಹಾರಾಷ್ಟ್ರ ಸಮುದ್ರ ಹಾಗೂ ನೇತ್ರಾಣಿ ದ್ವೀಪ ಭಾಗದಲ್ಲಿ ಇವು ಕಾಣಸಿಗುತ್ತವೆ ಎಂಬ ಮಾಹಿತಿಯನ್ನು ವೈಲ್ಡ್​ಲೈಫ್ ಟ್ರಸ್ಟ್ ಆಫ್ ಇಂಡಿಯಾದ ಸಾಜನ್ ಜಾನ್ ತಮಗೆ ಸ್ಪಷ್ಟಪಡಿಸಿರುವುದಾಗಿ ಕೋಸ್ಟಲ್ ಬರ್ಡ್ ವಾಚರ್ಸ್ ನೆಟ್​ವರ್ಕ್ ಸದಸ್ಯ ಎಂ. ಶಿವಶಂಕರ್ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twenty =
Remember me
