ಉಡುಪಿ:ಜಗತ್ತು ಕರೊನಾ ಸಂಕಟದಲ್ಲಿ ಮುಳುಗಿದೆ. ಕಳೆದ ಒಂದು ತಿಂಗಳಿನಿಂದ ರಾಜ್ಯ ಲಾಕ್​ಡೌನ್ ಆಗಿದೆ. ಎಲ್ಲಾ ಚಟುವಟಿಕೆಗಳಂತೆ ಮೀನುಗಾರಿಕಾ ಚಟುವಟಿಕೆಗಳು ಕೂಡ ಸಂಪೂರ್ಣ ಸ್ಥಗಿತಗೊಂಡಿದೆ. ಸದ್ಯ ಆಳಸಮುದ್ರ ಬೋಟ್ ಗಳು ಕಡಲಿಗೆ ಇಳಿಯುತ್ತಿಲ್ಲ. ಹಾಗಾಗಿ ಯಾಂತ್ರಿಕ‌ಬೋಟುಗಳ ಗೌಜು ಗದ್ದಲವಿಲ್ಲದೆ ಕಡಲು ಕೂಡ ಶಾಂತವಾಗಿದೆ.
ಸದ್ಯ ಪ್ರಶಾಂತ ಕಡಲಿನಲ್ಲಿ ತೇಲಿಬಂದ ಭಾರಿ ಗಾತ್ರದ ತಿಮಿಂಗಿಲ ಮೀನು ದಡ ಸೇರಿದೆ. ಉಡುಪಿಯ ಕುತ್ಪಾಡಿ ಗ್ರಾಮದ ಪಡುಕೆರೆ ಕಡಲತೀರದಲ್ಲಿ ಪತ್ತೆಯಾದ ಮೀನು ಕಂಡು ಜನರು ಬೆಚ್ಚಿಬಿದ್ದಿದ್ದಾರೆ. ತೀರ ಪ್ರದೇಶಕ್ಕೆ ಬಂದ ತಿಮಿಂಗಿಲಕ್ಕೆ ಈಜಲು ನೀರು ಸಾಲದೆ ಅಸುನೀಗಿದೆ.
ಸುಮಾರು 25 ಅಡಿ ಉದ್ದದ ಮೀನು ತೀರ ಪ್ರದೇಶಗಳಲ್ಲಿ ಕಾಣ ಸಿಗುವುದು ತುಂಬಾನೇ ಅಪರೂಪವೆಂದು ಹೇಳಬಹುದು. ತಿನ್ನಲು ಯೋಗ್ಯವಲ್ಲದ ಈ ತಿಮಿಂಗಿಲವನ್ನು, ವಿಲೇವಾರಿ ಮಾಡಲು ಸ್ಥಳೀಯ ಪಂಚಾಯತಿಯವರು ಹರಸಾಹಸವನ್ನೇ ಪಡಬೇಕಾಯಿತು. ಜೆಸಿಬಿಯನ್ನು ತಂದು ಕಡಲ ತೀರ ಪ್ರದೇಶದಲ್ಲಿ ಹೊಂಡ ಮಾಡಿ ಈ ಬೃಹತ್ ಗಾತ್ರದ ತಿಮಿಂಗಿಲ ವನ್ನು ಹೂಳಲಾಯಿತು.(ದಿಗ್ವಿಜಯ ನ್ಯೂಸ್​)
ಹಿಂದುಗಳು ಸ್ಪೂರ್ತಿಗೊಂಡಾಗ ಸಾಧುಗಳಾಗ್ತಾರೆ ವಿನಃ ಇತರರಂತೆ ಉಗ್ರರಾಗಲ್ಲವೆಂದು ನಿತ್ಯಾನಂದ ಕಿಡಿಕಾರಿದ್ದೇಕೆ?

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:eleven − 5 =
Remember me
