ಬಳ್ಳಾರಿ:ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಸೆಂಟ್ರಲ್​ ಜೈಲಿಗೆ ಶಿಫ್ಟ್​ ಆಗಿರುವ ನಟ ದರ್ಶನ್​ರನ್ನು ನೋಡಲು ಶನಿವಾರ (ಆಗಸ್ಟ್​ 31) ಪತ್ನಿ ವಿಜಯಲಕ್ಷ್ಮೀ ಆಗಮಿಸಿದ್ದರು. ಪತಿಯನ್ನು ನೋಡಲು ಬಂದಾಗ ಮೂರು ಬ್ಯಾಗುಗಳಲ್ಲಿ ಅಗತ್ಯೆ ವಸ್ತುಗಳನ್ನು ತಂದಿದ್ದರು. ವಿಜಯಲಕ್ಷ್ಮಿ ಅವರನ್ನು ಒಳಗೆ ಬಿಡುವ ಮುನ್ನ ಪೊಲೀಸರು ಪರಿಶೀಲನೆ ಮಾಡಿ, ಅವರು ತಂದ ವಸ್ತುಗಳನ್ನು ಸಹ ಪರಿಶೀಲನೆ ಮಾಡಿದರು. ಆದರೆ ಒಂದು ವಸ್ತುವನ್ನು ಮಾತ್ರ ವಾಪಸ್​ ಕಳುಹಿಸಿದ್ದಾಗಿ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಿಸನ್​ ಡಿಐಜಿ ಟಿ. ಶೇಷ ಅವರು, ವಿಜಯಲಕ್ಷ್ಮಿ ಅವರು ದರ್ಶನ್​ಗಾಗಿ ಡ್ರೈ ಫ್ರೂಟ್ಸ್, ಸೋಪು, ಶಾಂಪು, ಪೇಸ್ಟುಗಳನ್ನು ತಂದಿದ್ದರು. ಬಟ್ಟೆಗಳನ್ನು ಸಹ ತಂದಿದ್ದರು. ಒಂದು ಬ್ಲಾಂಕೆಟ್ ತಂದಿದ್ದರು ಅದನ್ನು ನಾವು ವಾಪಸ್ ಕಳುಹಿಸಿದ್ದೇವೆ. ಬೆಡ್​ಶೀಟ್​ ಹಾಸಿಗೆಗಳನ್ನು ಹೊರಗಿನಿಂದ ಕೊಡುವಂತಿಲ್ಲ. ಜೈಲಿನ ಹಾಸಿಗೆ ಬೆಡ್​​ಶೀಟ್​ಗಳನ್ನೇ ಬಳಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜೈಲಿನಲ್ಲಿ ಇಂಡಿಯನ್ ಟಾಯ್ಲೆಟ್ ಇದೆ. ಬೆನ್ನೆಲುಬು ಸಮಸ್ಯೆ ಇರುವ ಕಾರಣ ಶೌಚಕ್ಕೆ ಕಷ್ಟವಾಗುತ್ತದೆ ಎಂದು ದರ್ಶನ್​ ಹೇಳಿದ್ದಾರೆ. ಈ ಬಗ್ಗೆ ಮೆಡಿಕಲ್​ ರೆಕಾರ್ಡ್​ ನೋಡಿ ವೆಸ್ಟ್ರನ್ ಕಮೋಡ್ ಒದಗಿಸಿಕೊಡುವ ಬಗ್ಗೆ ಪರಿಶೀಲಿಸಲಾಗುತ್ತದೆ. ಜೈಲಿನ ವೈದ್ಯರು ಅದನ್ನು ಪರಿಶೀಲಿಸಿ ವರದಿ ನೀಡಿದ ಬಳಿಕ ಅದನ್ನು ಒದಗಿಸುತ್ತೇವೆ. ಇದ್ದರೆ ದರ್ಶನ್​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುತ್ತೇವೆ. ಸಾಮಾನ್ಯ ಕೈದಿಗೆ ಹೇಗೆ ಚಿಕಿತ್ಸೆ ಕೊಡಿಸುತ್ತೇವೆಯೋ ಅದರಂತೆ ದರ್ಶನ್​ಗೂ ಕೊಡಿಸುತ್ತೇವೆ ಎಂದು ಪ್ರಿಸನ್​ ಡಿಐಜಿ ಶೇಷ ಅವರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
