ಬೆಂಗಳೂರು:ಕಾಡುಗೊಂಡನಳ್ಳಿ (ಕೆ.ಜಿ.ಹಳ್ಳಿ) ಹಾಗೂ ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಗಲಭೆ ಮತ್ತು ಶಾಸಕ ಅಖಂಡ ಶ್ರೀನಿವಾಸ್ ಮನೆ ಧ್ವಂಸ ಪ್ರಕರಣದ ಪ್ರಮುಖ ಆರೋಪಿ, ಮಾಜಿ ಮೇಯರ್ ಸಂಪತ್ ರಾಜ್​ ಅವರನ್ನು ಸಿಸಿಬಿ ಪೊಲೀಸರು ಸೋಮವಾರ ರಾತ್ರಿ ಬಂಧಿಸಿ, ಅಜ್ಞಾತ ಸ್ಥಳದಲ್ಲಿ ಇರಿಸಿದ್ದಾರೆ.
ಈ ಪ್ರಕರಣದಲ್ಲಿ ಹೆಸರು ಕೇಳಿ ಬಂದ ಬಳಿಕ ಸಂಪತ್ ರಾಜ್​ ಏನೇನು ಮಾಡಿದ್ದರು, ಏನೆಲ್ಲ ತಂತ್ರ ಪ್ರಯೋಗಿಸಿದ್ದರು ಎಂಬುದೇ ಕುತೂಹಲದ ವಿಷಯ. ಪ್ರಕರಣದಲ್ಲಿ ಸಿಲುಕಿಕೊಳ್ಳುತ್ತಿದ್ದಂತೆ ಕರೊನಾ ಸೋಂಕಿನ ನೆಪದಲ್ಲಿ ಸೆ. 14ರಂದು ಬ್ಯಾಪ್ಟಿಸ್ಟ್​ ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಅ. 3ರಂದು ಆಸ್ಪತ್ರೆಯಿಂದ ಡಿಸ್​ಚಾರ್ಜ್​ ಆಗಿದ್ದರು.
ಆದರೆ ಪ್ರಕರಣ ಉರುಳಾಗಲಿರುವುದು ಖಚಿತವಾಗುತ್ತಿದ್ದಂತೆ ಮರುದಿನವೇ ಮತ್ತೆ ಆಸ್ಪತ್ರೆಗೆ ತೆರಳಿ ದಾಖಲಾಗಿದ್ದರು. ಬಳಿಕ ಅ. 14ರಂದು ಡಿಸ್​ಚಾರ್ಜ್​ ಆಗಿ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದರು. ಈ ನಡುವೆ ತಕ್ಷಣಕ್ಕೆ ಜಾಮೀನು ಸಿಗುವುದು ಕಷ್ಟ ಎಂದು ಅರಿತ ಸಂಪತ್​, ಎಲ್ಲಿ ಪೊಲೀಸರು ಬಂಧಿಸುತ್ತಾರೋ ಎಂಬ ಭಯದಿಂದ ಅ. 16ರಂದು ಮತ್ತೆ ಬ್ಯಾಪ್ಟಿಸ್ಟ್​ ಆಸ್ಪತ್ರೆಗೆ ದಾಖಲಾಗಿದ್ದರು.
ಸಂಪತ್​ ಅವರ ಅಡ್ಮಿಟ್-ಡಿಸ್​ಚಾರ್ಜ್​ ನಾಟಕವನ್ನು ಗಮನಿಸಿದ ಸಿಸಿಬಿ ಪೊಲೀಸರು, ಸಂಪತ್​ ಅವರನ್ನು ಡಿಸ್​ಚಾರ್ಜ್​ ಮಾಡುವುದಕ್ಕೂ ಮುನ್ನ ತಮಗೆ ಮಾಹಿತಿ ನೀಡಬೇಕು ಎಂದು ಆಸ್ಪತ್ರೆಗೆ ನೋಟಿಸ್ ನೀಡಿದ್ದರು. ಮತ್ತೊಂದೆಡೆ ಸಂಪತ್ ರಾಜ್​ ಅಗತ್ಯ ಇರುವ ಆರೋಪಿ, ಅವರ ಬಂಧನ ಅತ್ಯಗತ್ಯ. ಅವರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಕಾರಣ ಅವರ ಆರೋಗ್ಯ ಪರಿಶೀಲಿಸಿ ವರದಿ ನೀಡುವಂತೆ ಮೆಡಿಕಲ್​ ಬೋರ್ಡ್​ಗೆ ಪೊಲೀಸ್​ ಕಮಿಷನರ್ ಪತ್ರ ಬರೆದಿದ್ದರು. ವೈದ್ಯಾಧಿಕಾರಿಗಳು ಪರಿಶೀಲನೆ ಮಾಡುತ್ತಾರೆ, ನಂತರ ಸರ್ಕಾರಿ ವೈದ್ಯರ ಮಾಹಿತಿ ಮೇರೆಗೆ ಪೊಲೀಸರು ಬಂಧಿಸಬಹುದು ಎಂಬ ಅಂದಾಜು ಸಿಗುತ್ತಿದ್ದಂತೆ ಸಂಪತ್ ರಾಜ್, ಅ. 23ರ ರಾತ್ರಿ ಬ್ಯಾಪ್ಟಿಸ್ಟ್​​ ಆಸ್ಪತ್ರೆಯಿಂದ ಪರಾರಿಯಾಗಿದ್ದರು.
ಸಂಪತ್ ರಾಜ್​ ಪರಾರಿ ಆಗಿ ತಲೆಮರೆಸಿಕೊಂಡ ಬಳಿಕ ಅವರ ಮೊಬೈಲ್​ ಫೋನ್​ ಟವರ್​ ಲೊಕೇಷನ್​ ಜಾಡು ಹಿಡಿದ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕಲು ಆರಂಭಿಸಿದ್ದರು. ಆದರೆ ಸಂಪತ್ ರಾಜ್​ ಈ ಸುಳಿವು ತಿಳಿದು ಪದೇಪದೆ ತಾವಿದ್ದ ಸ್ಥಳ ಬದಲಿಸುತ್ತಿದ್ದರು.ಪರಾರಿಯಾಗಿದ್ದ ಅಷ್ಟೂ ದಿನ ಒಂದೇ ಜಾಗದಲ್ಲಿ ಎರಡು ದಿನಗಳಿಂತ ಹೆಚ್ಚು ಕಾಲ ಇರದ ಸಂಪತ್​, ಕರ್ನಾಟಕ, ಕೇರಳ, ತಮಿಳುನಾಡು ಸೇರಿ ಹಲವೆಡೆ ಓಡಾಡಿಕೊಂಡಿದ್ದರು. ಅದಾಗ್ಯೂ ಸೋಮವಾರ ಬೆಂಗಳೂರಿಗೆ ಮರಳಿ ಸಿಕ್ಕಿಬಿದ್ದಿದ್ದಾರೆ.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 − two =
Remember me
