ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಕಾಂಗ್ರೆಸ್​​ ಅತೀ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಜಯಭೇರಿ ಭಾರಿಸಿದೆ.
ಕಾಂಗ್ರೆಸ್​​ 136 ಸ್ಥಾನ, ಬಿಜೆಪಿ 65, ಜೆಡಿಎಸ್ ​19 ಕ್ಷೇತ್ರಗಳಲ್ಲಿ ಹಾಗೂ ಇತರರು 4 ಸ್ಥಾನಗಳಲ್ಲಿ ಗೆದ್ದಿದ್ದಾರೆ. ಕಾಂಗ್ರೆಸ್​​ ಹೆಚ್ಚಿನ ಸ್ಥಾನಗಳನ್ನು ತನ್ನದಾಗಿಸಿಕೊಳ್ಳುವ ಮೂಲಕ ಮುಂದಿನ ಐದು ವರ್ಷಗಳ ಕಾಲ ರಾಜ್ಯದ ಚುಕ್ಕಾಣಿ ಹಿಡಿಯಲು ಈಗಾಗಲೇ ತಯಾರಿ ನಡೆಸಿದೆ.
ಬಿಜೆಪಿಯ ಘಟಾನುಘಟಿ ನಾಯಕರುಗಳನ್ನು ಕಾಂಗ್ರೆಸ್​ ಅಭ್ಯರ್ಥಿಗಳು ಹಲವು ಕ್ಷೇತ್ರಗಳಲ್ಲಿ ಹೀನಾಯವಾಗಿ ಸೋಲಿಸಿದ್ದಾರೆ. ಕೈ ಜೋಡೆತ್ತುಗಳಾದ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಒಗ್ಗಟ್ಟಿನ ಹೋರಾಟದ ಫಲ ಈ ಫಲಿತಾಂಶ ಎಂಬುದು ನಿಸ್ಸಂಶಯ. ಇದರ ಜತೆಗೆ ಬಿಜೆಪಿ ವಿರುದ್ಧದ ಪ್ರಬಲವಾದ ಆಡಳಿತ ವಿರೋಧಿ ಏಲ್ ಕೂಡ ಇಂತಹ ಫಲಿತಾಂಶ ಬರಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಹಾಗಾದರೆ ನಿರ್ದಿಷ್ಟವಾಗಿ ಕಾಂಗ್ರೆಸ್ ಪಕ್ಷಕ್ಕೆ ಗೆಲುವು ತಂದುಕೊಟ್ಟ ಅಂಶಗಳು ಯಾವುವು ಎಂಬುದರ ವಿವರ ಇಲ್ಲಿದೆ.
ಕಾಂಗ್ರೆಸ್ ಗೆಲುವಿನ ಕಾರಣಗಳು:– 40% ಕಮಿಷನ್ ಆರೋಪ, ಪೇ ಸಿಎಂ ಅಭಿಯಾನ ತೀವ್ರ ಪ್ರಚಾರ– ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆ ಕಾಂಗ್ರೆಸ್ಸಿಗೆ ವರದಾನ– ಗ್ಯಾಸ್ ಸಿಲಿಂಡರ್ ಕೈ ಮುಗಿದು ಮತ ಹಾಕಿ ಎಂದು ಅಭಿಯಾನ– ಅಗತ್ಯ ವಸ್ತುಗಳ ಬೆಲೆ ಏರಿಕೆ ಕೂಡ ಕೈಗೆ ವರದಾನ– ಬೆಲೆ ಏರಿಕೆ ಬಗ್ಗೆ ನಿರಂತರ ಪ್ರಚಾರ ಮಾಡಿದ್ದ ಕಾಂಗ್ರೆಸ್– ಬಿಜೆಪಿ ವಿರೋಧಿ ಅಲೆ ಯಶಸ್ವಿಯಾಗಿ ಬಳಕೆ– ರಾಜ್ಯದಾದ್ಯಂತ ಬಿರುಸಿನ ಪ್ರಚಾರ ಮಾಡಿದ್ದ ಕಾಂಗ್ರೆಸ್– ಬಿಜೆಪಿ ಭ್ರಷ್ಟಾಚಾರವನ್ನೆ ಮೊದಲ ಅಸ್ತ್ರ ಮಾಡಿದ್ದ ಕಾಂಗ್ರೆಸ್– ಸಂಘಟಿತ ಹೋರಾಟ ಮಾಡಿದ್ದ ಕೈ ನಾಯಕರು– ಕೊನೆಯವರೆಗೂ ಒಗ್ಗಟ್ಟು ಪ್ರದರ್ಶನ– ಡಿಕೆಶಿ, ಸಿದ್ದರಾಮಯ್ಯ ನಡುವೆ ಮುನಿಸಿದ್ದರೂ ಒಗ್ಗಟ್ಟು ಪ್ರದರ್ಶನ– ಶಿಸ್ತು ಬದ್ಧವಾಗಿ ಟಿಕೆಟ್ ಹಂಚಿಕೆ– ಮೊದಲ ಮತ್ತು ಎರಡನೇ ಪಟ್ಟಿಯಲ್ಲಿ ಎಚ್ಚರಿಕೆಯಿಂದ ಅಭ್ಯರ್ಥಿಗಳ ಆಯ್ಕೆ– ಮೊದಲ ಪಟ್ಟಿಯಲ್ಲಿ 124, ಎರಡನೇ ಪಟ್ಟಿಯಲ್ಲಿ 42 ಅಭ್ಯರ್ಥಿಗಳ ಆಯ್ಕೆ– ಕಾಂಗ್ರೆಸ್ಸಿಗೆ ವರದಾನವಾದ ಗ್ಯಾರಂಟಿಗಳ ಘೋಷಣೆ– ಐದು ಗ್ಯಾರಂಟಿಗಳ ಬಗ್ಗೆ ಹೆಚ್ಚೆಚ್ಚು ಪ್ರಚಾರ ಮಾಡಿದ್ದ ಕಾಂಗ್ರೆಸ್– ಕೊನೆ ಹಂತದಲ್ಲಿ ಐದು ಗ್ಯಾರಂಟಿಗಳನ್ನು ಮೊದಲ ಕ್ಯಾಬಿನೆಟ್​​ನಲ್ಲಿ ಜಾರಿ ಭರವಸೆ– ಅಬ್ಬರದ ಪ್ರಚಾರದ ಜತೆಗೆ ಡೋರ್ ಟೂ ಡೋರ್ ಪ್ರಚಾರ– ಅಧಿಕಾರ ಪಡೆಯಲು ಎರಡು ಮತ್ತು ಮೂರನೇ ಹಂತದ ನಾಯಕರ ಹೋರಾಟ– ಪ್ರಚಾರದಲ್ಲಿ ಹೈಕಮಾಂಡ್ ನಾಯಕರ ಜತೆಗೆ ರಾಜ್ಯ ನಾಯಕತ್ವಕ್ಕೆ ಮನ್ನಣೆ
ಚುನಾವಣೆಯಲ್ಲಿ ಜಯಗಳಿಸಿದ ಕಾಂಗ್ರೆಸ್​ಗೆ ಅಭಿನಂದನೆಗಳು; ಟ್ವೀಟ್ ಮಾಡಿ ಹಾರೈಸಿದ ಪ್ರಧಾನಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − seven =
Remember me
