ಶ್ರೀಕಾಂತ್ ಶೇಷಾದ್ರಿಬೆಂಗಳೂರು:ಕಾಂಗ್ರೆಸ್ ನಿರೀಕ್ಷೆ ಮಾಡದಷ್ಟು ಸ್ಥಾನಗಳನ್ನು ರಾಜ್ಯದ ಜನ ಕರುಣಿಸಿದ್ದಾರೆ. ಇದು ಕಾಂಗ್ರೆಸ್ ಪರವಾದ ಅಲೆ ಎಂದು ಹೇಳುವ ಬದಲು ಬಿಜೆಪಿ ಆಡಳಿತ ವಿರೋಧಿ ಅಲೆ ಎಂಬುದಂತೂ ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಮತದಾನ ಮುಗಿದ ಬಳಿಕ ಬಹುತೇಕ ಕಾಂಗ್ರೆಸ್ ನಾಯಕರ ಬಾಯಲ್ಲಿ, ನಾವು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮುವುದು ಖಚಿತ ಎಂದಷ್ಟೇ ಹೇಳುತ್ತಿದ್ದರು. ಇದೇ ಕಾರಣಕ್ಕೆ ಪಕ್ಷೇತರರನ್ನು ಸಂರ್ಪಸಿ ಅವರನ್ನು ವಿಶ್ವಾಸದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ನಡೆದಿತ್ತು. ಈ ಸಂಖ್ಯೆಯಲ್ಲಿ ಜನ ಆಶೀರ್ವಾದ ಮಾಡುತ್ತಾರೆಂದು ಪ್ರಮುಖ ನಾಯಕರೂ ಊಹಿಸಿರಲಿಲ್ಲ. ಹಾಗೆ ನೋಡುವುದಾದರೆ ಕಾಂಗ್ರೆಸ್​ಗೆ ಸಿಕ್ಕಿರುವ ಈ ಗೆಲುವಿಗೆ ಅನೇಕ ಕಾರಣಗಳನ್ನು ಅಂದಾಜಿಸಬಹುದು.
ಬಿಜೆಪಿ ಸರ್ಕಾರದ ಆಡಳಿತ ವಿರೋಧಿ ಅಲೆಯನ್ನು ತಳಮಟ್ಟದಲ್ಲಿ ಗುರುತಿಸಿ ಅದನ್ನು ನಿರಂತರವಾಗಿ ಜನರ ನಡುವೆ ಪ್ರಸ್ತಾಪಿಸುತ್ತಾ ಬಂದಿದ್ದು, ಜನರನ್ನು ಪದೇ ಪದೆ ಸುಡುತ್ತಿದ್ದ ಬೆಲೆ ಏರಿಕೆಯನ್ನು ಬಳಕೆ ಮಾಡಿಕೊಂಡು ಹೋರಾಟ ನಡೆಸಿ, ಅವರ ಆಕ್ರೋಶಕ್ಕೆ ದನಿಯಾಗಿ ಕಾಣಿಸಿಕೊಂಡು ಪಕ್ಷದ ಸಂಘಟನೆಯನ್ನೂ ಸದಾ ಜಾಗೃತವಾಗಿಡಲಾಗಿತ್ತು. ಮತ್ತೆ ಅಧಿಕಾರ ಸಿಗಲಿದೆ ಎಂದು ಪುನಃ ಪುನಃ ವಿಶ್ವಾಸ ತುಂಬುವ ಕೆಲಸ ಮಾಡುತ್ತಾ ಬರಲಾಗಿತ್ತು. ಇನ್ನೊಂದು ಪ್ರಮುಖ ವಿಚಾರವೆಂದರೆ ಪ್ರಣಾಳಿಕೆ ಅಧಿಕೃತ ಬಿಡುಗಡೆಗೆ ಮುನ್ನ ಗ್ಯಾರಂಟಿ ಭರವಸೆ ಪ್ರಕಟಿಸಿ ಜನರ ಗಮನ ಸೆಳೆದಿದ್ದು, ಅದರಲ್ಲೂ ಮಹಿಳೆಯರು, ಯುವಕರನ್ನು ಗುರಿಯಾಗಿಸಿ ಅವರು ಚರ್ಚೆ ಮಾಡುವಂತೆ ಮಾಡಲಾಯಿತು. ಇದರ ಪರಿಣಾಮ ಚುನಾವಣೆ ಮೇಲೆ ಆಗುವುದಿಲ್ಲ ಎಂದು ಬಿಜೆಪಿ ಕೂಡ ಮೈಮರೆಯಿತು.
ಪಕ್ಷವು ಚುನಾವಣೆ ವಾತಾವರಣಕ್ಕೆ ಹೊರಳುವ ಸಂದರ್ಭದಲ್ಲಿ ನಾಯಕತ್ವಕ್ಕಾಗಿನ ಪೈಪೋಟಿ ಸಾಕಷ್ಟು ಚರ್ಚೆಯಾಗುತ್ತಿತ್ತು. ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಬಗ್ಗೆ ಪೈಪೋಟಿ ಸಹ ನಡೆದಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಬೆಂಬಲಿಗರು ಬಹಿರಂಗವಾಗಿಯೇ ಹೇಳಿಕೆ ನೀಡಿಕೊಂಡು ಬಂದಿದ್ದರು. ಆದರೆ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಮುಂದಿನ ಸಿಎಂ ವಿಚಾರ ಪ್ರಸ್ತಾಪವಾಗದಂತೆ ನೋಡಿಕೊಂಡಿದ್ದಲ್ಲದೇ, ನಾಯಕರ ನಡುವೆ ಕಂದಕ ಇಲ್ಲ ಎಂದು ಸಾಬೀತು ಮಾಡುವ ಪ್ರಯತ್ನ ಮಾಡುತ್ತಲೇ ಬಂದರು.
ಟಿಕೆಟ್ ಹಂಚಿಕೆಯಲ್ಲಿ ಹೆಚ್ಚು ಗೊಂದಲ ಮಾಡಿಕೊಳ್ಳದೇ, ಬಿಜೆಪಿಯ ಜಾತಿ ಸಮೀಕರಣದ ಸೂತ್ರವನ್ನು ತಲೆ ಕೆಳಗುಮಾಡುವಂತೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಗಮನ ಸೆಳೆಯುವ ಸಂಗತಿ. ಬಿಜೆಪಿಯ ಅಭ್ಯರ್ಥಿ ಎಷ್ಟೇ ಪ್ರಬಲನಾಗಿದ್ದರೂ ಸೋಲಲು ಕಾರಣ ಹುಡುಕಿ ಆ ಪ್ರಕಾರ ಅಭ್ಯರ್ಥಿಯನ್ನು ಹೂಡಿ ಎದುರಾಳಿಗಳನ್ನು ಆರಂಭದಲ್ಲೇ ಗಲಿಬಿಲಿಗೊಳಿಸಲಾಯಿತು. ಬಿಜೆಪಿ ಸಹಜವಾಗಿ ಹೂಡುವ ಹಿಂದುತ್ವ ಅಸ್ತ್ರ ಪರಿಣಾಮ ಬೀರದಂತೆ ಹಾಗೂ ಸಾಫ್ಟ್ ಹಿಂದುತ್ವ ಪ್ರದರ್ಶನ ಮಾಡುತ್ತಲೇ, ಲಿಂಗಾಯತರ ವಿಚಾರದಲ್ಲಿ ತನ್ನ ನಿಲುವನ್ನು ಪದೇ ಪದೆ ಪ್ರಸ್ತಾಪಿಸಿ ಬಿಜೆಪಿ ಆತ್ಮಸ್ಥೈರ್ಯ ಕುಗ್ಗಿಸಲಾಯಿತು.
ಬಿಜೆಪಿಯಿಂದ ಲಿಂಗಾಯತರಿಗೆ ಅನ್ಯಾಯವಾಗಿದೆ, ಯಡಿಯೂರಪ್ಪರನ್ನು ಕಣ್ಣೀರು ಹಾಕಿಸಲಾಯಿತು, ಶೆಟ್ಟರ್, ಸವದಿಗೆ ಟಿಕೆಟ್ ಕೊಡದೇ ಅನ್ಯಾಯ ಮಾಡಲಾಯಿತು ಎಂದು ಪುನಃ ಪುನಃ ಬಿಂಬಿಸಲಾಯಿತು. ಇನ್ನು ಪ್ರಮುಖ ಪರಿಣಾಮ ಬೀರಿದ್ದು, ಮುಸ್ಲಿಂ, ಕುರುಬ ಸಮುದಾಯದ ಮತಗಳು ಚದುರದಂತೆ ನೋಡಿಕೊಳ್ಳಲಾಗಿತ್ತು. ಬಜರಂಗದಳ ನಿಷೇಧ ಮಾಡುತ್ತೇವೆಂಬ ಸಂಗತಿಯನ್ನು ಪ್ರಣಾಳಿಕೆಯಲ್ಲಿ ಭರವಸೆ ರೂಪದಲ್ಲಿ ನೀಡುವ ಮೂಲಕ ಮುಸ್ಲಿಂ ಮತ ಅತ್ತಿತ್ತ ಹೋಗದಂತೆ ಮಾಡಿ ಜೆಡಿಎಸ್ ಮತ ಗಳಿಕೆಗೂ ಬ್ರೇಕ್ ಹಾಕಲಾಯಿತು. ಜತೆಗೆ ಬಿಜೆಪಿಯ ಮೀಸಲು ವರ್ಗೀಕರಣ ಚುನಾವಣೆ ಮೇಲೆ ಪರಿಣಾಮ ಬೀರದಂತೆ ಪ್ರತ್ಯೇಕ ಕ್ಯಾಂಪೇನ್ ಕೂಡ ನಡೆದಿತ್ತು. ಒಟ್ಟಾರೆ, ಈ ಎಲ್ಲ ಅಂಶಗಳು ಕಾಂಗ್ರೆಸನ್ನು ಈ ಸ್ಥಿತಿಗೆ ತಂದು ನಿಲ್ಲಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + sixteen =
Remember me
