ಬೆಂಗಳೂರುಖಾಸಗಿ ಶಿಕ್ಷಣ ಸಂಸ್ಥೆಗಳು ಇಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಕೋರ್ಸ್‌ಗಳ ಸೀಟುಗಳನ್ನು ಅನಧಿಕೃತವಾಗಿ ಹೆಚ್ಚಳ ಮಾಡಿಕೊಳ್ಳುವುದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.
ಸಾಕಷ್ಟು ವರ್ಷಗಳಿಂದ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸೀಟು ಹಂಚಿಕೆಯಲ್ಲಿ ಕಳ್ಳಾಟವಾಡುತ್ತಿದ್ದ ಮತ್ತು ಬೇವಾಮಿ ವಿದ್ಯಾರ್ಥಿ ಹೆಸರಿನಲ್ಲಿ ಸೀಟುಗಳನ್ನು ಮನಬಂದಂತೆ ಮಾರಾಟ ಮಾಡುತ್ತಿದ್ದ ಪ್ರಕ್ರಿಯೆಗಳಿಗೆ ಬ್ರೇಕ್ ಹಾಕುವುದಕ್ಕೆ ನಿರ್ಧರಿಸಿದೆ.
ಈ ಸಂಬಂಧ ಆಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (ಎಐಸಿಟಿಇ) ಅಧ್ಯಕ್ಷರಿಗೆ ಉನ್ನತ ಶಿಕ್ಷಣ ಇಲಾಖೆ ಸಚಿವ ಡಾ. ಎಂ.ಸಿ. ಸುಧಾಕರ್ ಪತ್ರ ಬರೆದಿದ್ದು, ಸಾವಿರಾರು ಸೀಟುಗಳು ಸರ್ಕಾರದ ಗಮನಕ್ಕೆ ಬಾರದೆ ಹಂಚಿಕೆಯಾಗುತ್ತಿವೆ. ಇದನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದು, ಸಚಿವರ ಪತ್ರಕ್ಕೆ ಎಐಸಿಟಿಇ ಅಧ್ಯಕ್ಷರು ಕೂಡ ಕ್ರಮದ ಭರವಸೆ ನೀಡಿ ಸ್ಪಂದಿಸಿದ್ದಾರೆ.
ನಿಯಮ ರೂಪಿಸುವಂತೆ ಮನವಿ:
ರಾಜ್ಯದಲ್ಲಿ ಕಳೆದ ಒಂದು ದಶಕದಲ್ಲಿ ಹಲವು ಖಾಸಗಿ ವಿಶ್ವವಿದ್ಯಾಲಯಗಳು/ಶಿಕ್ಷಣ ಸಂಸ್ಥೆಗಳು ಸ್ಥಾಪನೆಯಾಗಿವೆ. ವಿಶೇಷವಾಗಿ ವೃತ್ತಿಪರ ಕೋರ್ಸ್‌ಗಳಾದ ಇಂಜಿನಿಯರಿಂಗ್/ತಾಂತ್ರಿಕ ಶಿಕ್ಷಣದ ಕೋರ್ಸ್‌ಗಳನ್ನು ನಡೆಸಲಾಗುತ್ತಿದೆ. ಆದರೆ, ಸಾವಿರಾರು ಸೀಟುಗಳು ರಾಜ್ಯ ಸರ್ಕಾರದ ಹಿಡಿತವಿಲ್ಲದೆ ಹಂಚಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಇಂಜಿನಿಯರಿಂಗ್/ತಾಂತ್ರಿಕ ಕೋರ್ಸ್ ಬೋಧಿಸುವ ಸಂಸ್ಥೆಗಳನ್ನು ನಿಯಂತ್ರಿಸುವುದಕ್ಕಾಗಿ ಕಠಿಣ ನಿಯಮಗಳನ್ನು ಜಾರಿಗೊಳಿಸುವಂತೆ ಕೋರಿದ್ದಾರೆ.
ಸರ್ಕಾರ ಮತ್ತು ಎಐಸಿಟಿಇ ನಿಯಂತ್ರಣವಿಲ್ಲದೆ, ಸೀಟುಗಳನ್ನು ಹೆಚ್ಚಳ ಮಾಡುವ/ಕಡಿಮೆ ಮಾಡುವಂತಹ ನಿರ್ಣಯಗಳನ್ನು ಆಯಾ ಆಡಳಿತ ಮಂಡಳಿ ವತಿಯಿಂದಲೇ ಕೈಗೊಳ್ಳುತ್ತಿವೆ. ಇತ್ತೀಚಿನ ದಿನಗಳಲ್ಲಿ ಬಹುಮುಖ್ಯವಾಗಿ ಬೇಡಿಕೆ ಇರುವ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಕೋರ್ಸ್‌ಗಳ ಸೀಟುಗಳನ್ನು (ಇನ್ ಟೇಕ್) ಹೆಚ್ಚಳ ಮಾಡುತ್ತಿವೆ.
ನಗರ ಪ್ರದೇಶದಲ್ಲಿ ಆರಂಭವಾಗುವ ಶಿಕ್ಷಣ ಸಂಸ್ಥೆಗಳು 2 ಮತ್ತು 3ನೇ ಹಂತದ ಪಟ್ಟಣಗಳಲ್ಲಿರುವ ಸಂಸ್ಥೆಗಳ ಖಾಖೆಗಳಲ್ಲಿ ಅಗತ್ಯ ಬೋಧನಾ ಸಿಬ್ಬಂದಿಗಳಿಲ್ಲದೆ ಹಲವು ಸವಾಲುಗಳನ್ನು ಎದುರಿಸುತ್ತಿವೆ. ನಿಧಾನವಾಗಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂಬ ಎಚ್ಚರಿಕೆ ನೀಡಿದ್ದಾರೆ.
ಖಾಸಗಿ ವಿವಿ ಗಳು ಆರಂಭಿಸುತ್ತಿರುವ ಅನಿಯಂತ್ರಿತ ಕೋರ್ಸ್‌ಗಳು ಕೈಗಾರಿಕೆಗಳಲ್ಲಿ ಪದವೀಧರ ಉದ್ಯೋಗವಕಾಶಗಳ ಮೇಲೆ ಪರಿಣಾಮ ಬೀರುತ್ತಿದೆ. ತಾಂತ್ರಿಕ ಪದವೀಧರರು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿರುವ ಕಾರಣ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಂತೆ ಒತ್ತಾಯಸಿದ್ದಾರೆ.
ಅನುಮತಿ ನೀಡುವ ವೇಳೆಯಲ್ಲಿ ಮಾನವ ಹಸ್ತಕ್ಷೇಪವನ್ನು ತಪ್ಪಿಸಲಾಗುತ್ತಿದೆ. ಇದಕ್ಕಾಗಿ ಅನುಮೋದನೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಆ್ಲೈನ್‌ನಿಂದ ಆನ್‌ಲೈನ್ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ನೋಟರಿಯಿಂದ ದೃಢೀಕರಿಸಿದ ಬಳಿಕ ಸಂಸ್ಥೆಯ ನೋಂದಣಿ ಮತ್ತು ನವೀಕರಣ ಮಾಡಲಾಗುತ್ತದೆ. ಸೀಟು ಹಂಚಿಕೆಯಲ್ಲಿ ಸಂದೇಹ ಬಂದರೆ ಅಥವಾ ದೂರು ದಾಖಲಿಸಿದರೆ, ಸಂಬಂಧಪಟ್ಟ ಕಾಲೇಜಿನ ಕ್ಯಾಂಪಸ್ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
2023-24 ರ ಅನುಮೋದನೆ ಪ್ರಕ್ರಿಯೆಯ ಕೈಪಿಡಿಯು ರಾಷ್ಟ್ರೀಯ ಶಿಕ್ಷಣ ನೀತಿ-2020) ಅನುಷ್ಠಾನ ಯೋಜನೆಯ ಪ್ರಕಾರ ವ್ಯಾಪಕ ಬದಲಾವಣೆಗಳನ್ನು ತರುತ್ತದೆ ಎಂದು ಹೇಳಿದೆ. ಕರ್ನಾಟಕ ಸರ್ಕಾರವು 2024-25ರ ಶೈಕ್ಷಣಿಕ ವರ್ಷಕ್ಕೆ ಪ್ರಸ್ತಾವಿತ ಪೂರ್ವಭಾವಿಗಳ ಬಗ್ಗೆ ಒಂದು ದೃಷ್ಟಿಕೋನ ಯೋಜನೆಯನ್ನು ಮುಂಚಿತವಾಗಿ ಸಲ್ಲಿಸಬಹುದು. ಆದ್ದರಿಂದ ಅನುಮೋದನೆಗಳ ಮಂಜೂರಾತಿಗಾಗಿ ಪ್ರಕ್ರಿಯೆಯನ್ನು ಪ್ರಾರಂಭಿಸುವಾಗ, ಆ ಅಂಶಗಳಿಗೆ ಬದ್ಧವಾಗಿರಬೇಕು ಎಂದು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 1 =
Remember me
