ಬೆಂಗಳೂರು:ಸೆ.29 ರಂದು ನಡೆಯಲಿರುವ ಕರ್ನಾಟಕ ಬಂದ್​ಗೆ ಕನ್ನಡ ಚಿತ್ರರಂಗದ ಸಂಪೂರ್ಣ ಬೆಂಬಲಿ ಇದೆಯಾ? ಎಂಬ ಪ್ರಶ್ನೆ ಹಲವು ಕನ್ನಡ ಪರ ಸಂಘಟನೆಗಳಲ್ಲಿ ಮೂಡಿತ್ತು. ಕಾವೇರಿ ವಿಚಾರ ಕುರಿತು ಮಾಡಲಿರುವ ಹೋರಾಟಕ್ಕೆ ಹಿರಿಯ ನಟ ಶಿವರಾಜ್​ಕುಮಾರ್​ ಹೇಳುವುದೇನು ಎಂಬುದನ್ನು ತಿಳಿಯಲು ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ನಟನ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ:ಚಾರ್ಜ್​ಗಿಟ್ಟು ಹೆಡ್​ಫೋನ್​ನಲ್ಲಿ ಮಾತನಾಡುವಾಗ ಸ್ಫೋಟಗೊಂಡ ಮೊಬೈಲ್​: ಸ್ಥಳದಲ್ಲೇ ಯುವತಿ ಸಾವು
ಶಿವರಾಜ್‌ಕುಮಾರ್ ನಿವಾಸಕ್ಕೆ ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ಭೇಟಿ ನೀಡಿದ್ದು, ಶಿವರಾಜ್​ಕುಮಾರ್​ ಅವರೊಂದಿಗೆ ಮಾತುಕತೆ ಮಾಡಿದರು. ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಎನ್. ಸುರೇಶ್, “ಶಿವಣ್ಣ ಅವರ ನಿವಾಸಕ್ಕೆ ನಾವು ಪದಾಧಿಕಾರಿಗಳು ಬಂದಿದ್ದೆವು. ಶುಕ್ರವಾರ ನಡೆಯಲಿರುವ ಕರ್ನಾಟಕ ಬಂದ್‌ಗೆ ಚಿತ್ರರಂಗದ ಬೆಂಬಲವಿದೆ” ಎಂದು ಹೇಳಿದರು.
“ಶಿವಣ್ಣ ಮೊದಲಿಗೆ ಈ ಬಂದ್​ ಏಕೆ ಎಂದು ಪ್ರಶ್ನಿಸಿದರು. ರೈತರ ಹೋರಾಟಕ್ಕೆ ನಮ್ಮ ಪ್ರತಿಭಟನೆ ಎಂದು ಹೇಳಿದ ನಂತರ ಅವರು, ಖಂಡಿತಾ ಬರುತ್ತೇನೆ ಎಂದು ಒಪ್ಪಿಗೆ ಸೂಚಿಸಿದರು. ನಾಳೆ ಶಿವರಾಜ್​ಕುಮಾರ್​ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಬೆಳಗ್ಗೆ 10 ಗಂಟೆಗೆ ಗುರುರಾಜ ಕಲ್ಯಾಣ ಮಂಟಪದಲ್ಲಿ ಹೋರಾಟ ಪ್ರಾರಂಭವಾಗಲಿದೆ” ಎಂದು ಹೇಳಿದರು.
ಇದನ್ನೂ ಓದಿ:8 ವರ್ಷದ ಮಗನಿಂದ ತಂದೆಗೆ ಬೆದರಿಕೆಯ ಪತ್ರ; ‘ಐರನ್ ಮ್ಯಾನ್’ ಸಿನಿಮಾ ವೀಕ್ಷಿಸಲು ಅನುಮತಿ ನೀಡದೆ ಹೋದಲ್ಲಿ ನಿಮ್ಮ ಸಾವು ಖಚಿತ..!
“ಸ್ಥಳಕ್ಕೆ ಚಿತ್ರರಂಗದ ಹಲವು ನಟ-ನಟಿಯರು ಆಗಮಿಸಲಿದ್ದಾರೆ. ಕಲಾವಿದರಾದ ಶಿವಣ್ಣ, ರವಿಚಂದ್ರನ್, ಪ್ರೇಮ್, ಧ್ರುವ ಸರ್ಜಾ, ವಿಜಯ್ ರಾಘವೇಂದ್ರ, ಶ್ರೀಮುರುಳಿ ಸೇರಿದಂತೆ ಎಲ್ಲರನ್ನೂ ಆಹ್ವಾನಿಸಿದ್ದೇವೆ. ಪ್ರತಿಭಟನೆಯನ್ನು ಹಬ್ಬದ ರೀತಿಯಲ್ಲಿ ಮಾಡಲಾಗುವುದು. ನಮ್ಮದು ರೈತರ ಪರ ಹೋರಾಟವಾಗಿದ್ದು, ಬಂದ್‌ಗೆ ಇಡೀ ಚಿತ್ರೋದ್ಯಮದ ಬೆಂಬಲವಿದೆ” ಎಂದು ಎನ್.ಎಂ. ಸುರೇಶ್ ಹೇಳಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 5 =
Remember me
