ಬೆಂಗಳೂರು:ಕನ್ನಡ ಚಿತ್ರರಂಗದ ರಿಯಲ್​ ಸ್ಟಾರ್​ ಉಪೇಂದ್ರ ವಿರುದ್ಧ ಸಿ.ಕೆ. ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾತಿ ನಿಂದನೆ ಆರೋಪದಡಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದರು. ಆದರೆ ವಿಚಾರಣೆಗೂ ಹಾಜರಾಗದೇ ಉಪೇಂದ್ರ ನೇರವಾಗಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅರ್ಜಿಯಲ್ಲಿ ಉಪೇಂದ್ರ ಹೇಳಿರುವ ಹೇಳಿಕೆಯಲ್ಲಿ ದಲಿತರನ್ನು ನಿಂದಿಸುವ ಉದ್ದೇಶ ಇರಲಿಲ್ಲ ಎಂದು ಬರೆಯಲಾಗಿದ್ದು, ಇನ್ನೂ ಇತರ ವಿಚಾರಗಳು ಉಲ್ಲೇಖವಾಗಿವೆ.
ಎಫ್​ಐಆರ್​ಗೆ ಕಾರಣ, ನಟ ಉಪೇಂದ್ರ ಅವರು ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಹೇಳಿಕೆಯೊಂದು ಸಾಮಾಜಿಕ ಜಾಲಾತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ಈ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರು ಎಂದು ಉಲ್ಲೇಖಿಸಿ ದೂರು ನೀಡಲಾಗಿತ್ತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಿಂದ ದೂರು ಸ್ವೀಕರಿಸಿದ ಪೊಲೀಸರು, ನಟನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದರು.
ದೂರು ದಾಖಲು, ಎಫ್‌ಐಆರ್ ಮತ್ತು ನೋಟಿಸ್‌ನಿಂದ ಅರ್ಜಿದಾರರು ನೊಂದಿದ್ದಾರೆ. ಅರ್ಜಿದಾರರು ಬೇರೆ ಯಾವುದೇ ಪರ್ಯಾಯ ಮತ್ತು ಪರಿಣಾಮಕಾರಿ ಪರಿಹಾರವನ್ನು ಹೊಂದಿಲ್ಲ. ಅದೇ ಕಾರಣದ ಮೇಲೆ ಯಾವುದೇ ಇತರ ವಿಚಾರಣೆಯನ್ನು ಸಲ್ಲಿಸಿಲ್ಲ. ಇತರ ಆಧಾರಗಳ ನಡುವೆ ಈ ಕೆಳಗಿನ ರಿಟ್ ಅರ್ಜಿಯ ಮೆಮೊರಾಂಡಮ್‍ಗೆ ಆದ್ಯತೆ ನೀಡುತ್ತಾರೆ:
ಆದ್ದರಿಂದ, ಅರ್ಜಿದಾರರು ಗೌರವಯುತವಾಗಿ ಈ ಗೌರವಾನ್ವಿತ ನ್ಯಾಯಾಲಯವು 1ನೇ ಪ್ರತಿವಾದಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆ (ಅನುಬಂಧ ಬಿ) ರವರು ದಾಖಲಿಸಿದ ದಿನಾಂಕ 13.08.2023 ರ ಸಂಖ್ಯೆ.0241/2023 ರ ಎಫ್ಐಆರ್ ಅನ್ನು ರದ್ದುಪಡಿಸಿ; ಮತ್ತು ನಂ.ಸಿಕೆಎ/ಪಿ.ಎಸ್/ಅಪರಾಧ ನಂ.241/2023 ರ ದಿನಾಂಕ 13.8.2023 ರ ಅಸಿಸ್ಟೆಂಟ್ ಕಮಿಷನರ್ ಆಫ್ ಪೋಲೀಸ್, ವಿಶ್ವೇಶ್ವರಪುರಂ ಉಪ-ವಿಭಾಗ, ಉಪವಿಭಾಗ, ಬೆಂಗಳೂರು, 3ನೇ ಪ್ರತಿವಾದಿ (ಅನುಬಂಧ ಸಿ) ರವರು ಹೊರಡಿಸಿದ ನೋಟೀಸ್ ಮತ್ತು ನ್ಯಾಯಯುತವಾದ ಇತರ ಪರಿಹಾರಗಳನ್ನು ನೀಡಬೇಕೆಂದು ಪ್ರಾರ್ಥಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
