| ಸದೇಶ್ ಕಾರ್ವಡ್ ಮೈಸೂರು
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ದೇವನೂರು ಮೂರನೇ ಹಂತದ ಬಡಾವಣೆ ನಿರ್ವಣಕ್ಕೆ ವಶಕ್ಕೆ ಪಡೆದುಕೊಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸೇರಿದ ಜಮೀನಿಗೆ 62 ಕೋಟಿ ರೂ. ಭೂ ಪರಿಹಾರ ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿರುವುದು ಇದೀಗ ಚರ್ಚೆಯ ವಿಷಯವಾಗಿದೆ.
ದೇವನೂರು ಬಡಾವಣೆ ನಿರ್ವಣಕ್ಕೆ ಕೆಸರೆ ಗ್ರಾಮದಲ್ಲಿದ್ದ 3.16 ಎಕರೆ ಕೃಷಿ ಭೂಮಿಯನ್ನು ಮುಡಾ ವಶಕ್ಕೆ ಪಡೆದುಕೊಂಡು ಬಡಾವಣೆ ನಿರ್ಮಾಣ ಮಾಡಿತ್ತು. ಶೇ.50:50ರ ಅನುಪಾತದಲ್ಲಿ ಪಾರ್ವತಿ ಅವರಿಗೆ ದೇವನೂರು ಬಡಾವಣೆಯಲ್ಲಿ ಪರಿಹಾರ ರೂಪದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕಾಗಿತ್ತು. ಆದರೆ ಅತ್ಯಂತ ಬೆಲೆ ಬಾಳುವ ವಿಜಯನಗರ 4ನೇ ಹಂತದಲ್ಲಿ ಒಟ್ಟು 14 ನಿವೇಶನಗಳನ್ನು (ಒಟ್ಟು 37,190.09 ಚದರ ಅಡಿ) ಹಂಚಿಕೆ ಮಾಡಲಾಗಿದೆ.
ಬದಲಿ ನಿವೇಶನ ಹಂಚಿಕೆಯಲ್ಲಿ ಸಾವಿರಾರು ಕೋಟಿ ರೂ.ಮೊತ್ತದ ಅವ್ಯವಹಾರ ನಡೆದಿರುವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬದಲಿ ನಿವೇಶನ ಹಂಚಿಕೆಯನ್ನು ಸರ್ಕಾರ ರದ್ದುಪಡಿಸಿದೆ. ಹೀಗಾಗಿ ಬದಲಿ ನಿವೇಶನ ನೀಡಲು ಸಾಧ್ಯವಾಗದೆ ಇದ್ದರೆ 3.16 ಎಕರೆಗೆ ಪರಿಹಾರ ರೂಪವಾಗಿ 62 ಕೋಟಿ ರೂ. ಪರಿಹಾರ ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
25 ಲಕ್ಷ ರೂ.ಮೌಲ್ಯದ ಆಸ್ತಿ:ಸಿದ್ದರಾಮಯ್ಯ 2018ರಲ್ಲಿ ಚಾಮುಂಡೇಶ್ವರಿ ಹಾಗೂ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಸಂದರ್ಭ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಕೆಸರೆಯಲ್ಲಿ ಪತ್ನಿ ಹೆಸರಿನಲ್ಲಿದ್ದ 3.16 ಎಕರೆ ಕೃಷಿ ಭೂಮಿಯನ್ನು ಉಲ್ಲೇಖಿಸಿದ್ದು, ಅದರ ಮಾರುಕಟ್ಟೆ ಮೌಲ್ಯ 25 ಲಕ್ಷ ರೂ. ಎಂದಿದ್ದಾರೆ. ಇದೀಗ ಅದೇ ಜಾಗ 62 ಕೋಟಿ ರೂ. ಬೆಲೆ ಬಾಳುತ್ತದೆ. ಹಾಗಾಗಿ 62 ಕೋಟಿ ರೂ. ಪರಿಹಾರ ನೀಡಿ ಎಂಬುದು ಸಿದ್ದರಾಮಯ್ಯ ಅವರ ಒತ್ತಾಯವಾಗಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಸಿದ್ದರಾಮಯ್ಯ ವರುಣ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ ಸಂದರ್ಭ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್​ನಲ್ಲಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೊಂದಿರುವ ಚರ ಮತ್ತು ಸ್ಥಿರ ಆಸ್ತಿಗಳ ವಿವರವನ್ನು ನೀಡಿದ್ದು. ಅದರಲ್ಲಿ ಮುಡಾದಿಂದ ಪರಿಹಾರ ರೂಪದಲ್ಲಿ ದೊರೆತ ನಿವೇಶನಗಳ ವಿವರವನ್ನು ಸಹ ದಾಖಲಿಸಿದ್ದು, ಈ ಆಸ್ತಿಗಳ ಒಟ್ಟು ಮಾರುಕಟ್ಟೆ ಮೌಲ್ಯ 8.33 ಕೋಟಿ ರೂ.ಗಳೆಂದು ಉಲ್ಲೇಖಿಸಿದ್ದಾರೆ.
ಒಟ್ಟು 62 ಕೋಟಿ ರೂ.ಬೆಲೆ ಬಾಳುವ 3.16 ಎಕರೆ ಆಸ್ತಿಗೆ ಪರ್ಯಾಯವಾಗಿ ಪಾರ್ವತಿ ಅವರು ಕೇವಲ 8.33 ಕೋಟಿ ರೂ. ಮೌಲ್ಯದ 37,190.09 ಚದರ ಅಡಿ ವಿಸ್ತೀರ್ಣದ 14 ನಿವೇಶನಗಳನ್ನು ಪಡೆಯಲು ಏಕೆ ಆಸಕ್ತಿ ತೋರಿದರು ಎಂಬುದು ಯಕ್ಷ ಪ್ರಶ್ನೆಯಾಗಿದೆ. ಸಿದ್ದರಾಮಯ್ಯ ಅವರ ಹೇಳಿಕೆ ಪ್ರಕಾರ ನೋಡುವುದಾದರೆ ದೇವನೂರು ಬಡಾವಣೆ ಭೂಮಿ ಅತ್ಯಂತ ಬೆಲೆ ಬಾಳುವ ಭೂಮಿಯಾಗಿದೆ. ಹಾಗಿದ್ದಲ್ಲಿ ದೇವನೂರು ಬಡಾವಣೆಯಲ್ಲಿ ಪಾರ್ವತಿ ಶೇ.50:50 ಅನುಪಾತದಲ್ಲಿ ಪರಿಹಾರ ರೂಪದಲ್ಲಿ ನಿವೇಶನಗಳನ್ನು ಪಡೆಯಲು ಏಕೆ ಆಸಕ್ತಿ ತೋರಲಿಲ್ಲ? ಮುಡಾ ಅಧಿಕಾರಿಗಳು ಪಾರ್ವತಿ ಅವರಿಗೆ ವಿಜಯನಗರ 4ನೇ ಹಂತದಲ್ಲಿ ನಿವೇಶನಗಳನ್ನು ನೀಡಲು ಏಕೆ ಆಸಕ್ತಿ ತೋರಿದರು ಎಂಬ ಪ್ರಶ್ನೆಗಳಿಗೆ ಉತ್ತರ ದೊರೆಯಬೇಕಾಗಿದೆ. ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವವರ ಮಾಹಿತಿ ಪ್ರಕಾರ ವಿಜಯನಗರ 4ನೇ ಹಂತದಲ್ಲಿ ಪ್ರತಿ ಚದರ ಅಡಿಗೆ 5 ರಿಂದ 8 ಸಾವಿರ ರೂ. ಇದ್ದು, ದೇವನೂರು ಬಡಾವಣೆಯಲ್ಲಿ ಪ್ರತಿ ಚದರ ಅಡಿಗೆ 3 ರಿಂದ 6 ಸಾವಿರ ರೂ. ಇದೆ. ಅಲ್ಲದೆ ವಿಜಯನಗರ 4ನೇ ಹಂತ ಮೈಸೂರಿನ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿದೆ.
ಬೆಂಗಳೂರು:ಮುಡಾ ಹಗರಣವನ್ನು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರ ಹುನ್ನಾರ ನಡೆಸಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದರು.

ಇಡೀ ಹಗರಣದ ಸುತ್ತಮುತ್ತ ನಡೆಯುತ್ತಿರುವ ಘಟನೆಗಳು, ಬೆಳವಣಿಗೆಗಳನ್ನು ಗಮನಿಸಿದರೆ ಇದೊಂದು ದೊಡ್ಡ ಹಗರಣ ಎಂದರೆ ತಪ್ಪಲ್ಲ. ಇದು ಅರ್ಕಾವತಿ ರೀಡೂ ಹಗರಣದ್ದಂತೆ ಇದೆ ಎಂದು ದೂರಿದರು. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಹಗರಣವೇ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೆ, ಮೈಸೂರಿಗೆ ವಿಶೇಷ ಹೆಲಿಕಾಪ್ಟರ್​ನಲ್ಲಿ ಹೋಗಿ ಕಂತೆಗಟ್ಟಲೇ ಕಡತ, ದಾಖಲೆಗಳನ್ನು ತುಂಬಿಕೊಂಡು ತಂದವರು ಯಾರು? ಎಂದು ಪ್ರಶ್ನಿಸಿದರು. ಈ ರೀತಿ ನಡೆದೇ ಇಲ್ಲ ಎನ್ನುವುದಾದರೆ ಅಧಿಕಾರಿಗಳನ್ನು ಕಳಿಸಿ ಯಾಕೆ ತನಿಖೆ ಮಾಡುತ್ತಿದ್ದಾರೆ? ದಿಢೀರ್ ವರ್ಗಾವಣೆಗಳು ಯಾಕೆ ಆಗುತ್ತಿವೆ? ವರ್ಗಾವಣೆಗೆ ಗುರಿಯಾದ ಅಧಿಕಾರಿ ಈ ಹಗರಣದ ಬಗ್ಗೆ ಸರ್ಕಾರಕ್ಕೆ ಎಷ್ಟು ಸಲ ದೂರು ನೀಡಿದ್ದರು? ಎಷ್ಟು ಕಡತ, ದಾಖಲೆಗಳನ್ನು ಳಿಸಿದ್ದರು ಎಂಬ ಬಗ್ಗೆ ಹಾದಿಬೀದಿಯಲ್ಲಿ ಚರ್ಚೆ ಆಗುತ್ತಿದೆ ಎಂದು ಹೇಳಿದರು. ತಮ್ಮ ಜಮೀನಿಗೆ ಸಿಎಂ 62 ಕೋಟಿ ರೂ.ಬೆಲೆ ಕಟ್ಟಿಕೊಂಡಿದ್ದಾರೆ. ಅದರ ಬಗ್ಗೆ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅದರ ಬಗ್ಗೆ ನಾನು ಮಾತಾಡಲ್ಲ. ಅವರ ಸಂಪುಟದ ಸದಸ್ಯರೇ ಮಾತನಾಡಲು ರೆಡಿ ಇದ್ದಾರೆ ಎಂದು ಟಾಂಗ್ ಕೊಟ್ಟರು.
ದಿಢೀರ್ ಬಡಾವಣೆ ನಿರ್ವಣ:ನಗರದ ಕೆಸರೆಯ ಸರ್ವೆ ನಂ.464ರಲ್ಲಿ 3.14 ಎಕರೆ ಜಮೀನು ಮಲ್ಲಿಕಾರ್ಜುನಸ್ವಾಮಿ ಎಂಬ ವ್ಯಕ್ತಿಗೆ ಸೇರಿತ್ತು. ಮಲ್ಲಿಕಾರ್ಜುನ ಸ್ವಾಮಿ ಪಾರ್ವತಿ ಅವರ ಸಹೋದರ. ಈ ಜಮೀನನ್ನು 1997ರಲ್ಲಿ ಮುಡಾ ದೇವನೂರು 3ನೇ ಹಂತದ ಬಡಾವಣೆ ಅಭಿವೃದ್ಧಿಗೆ ಅಧಿಸೂಚನೆ ಹೊರಡಿಸಿತ್ತು. ನಂತರ ಅಧಿಸೂಚನೆಯನ್ನು ಕೈಬಿಟ್ಟು ಆದೇಶ ಹೊರಡಿಸಿತ್ತು. ಡಿನೋಟಿಫೈ ಆದ ನಂತರ ಮಲ್ಲಿಕಾರ್ಜುನಸ್ವಾಮಿ ಹೆಸರಿಗೆ 2005ರಲ್ಲಿ ಆ ಜಾಗ ನೋಂದಣಿಯಾಗಿದೆ. ಆ ನಂತರ ಮಲ್ಲಿಕಾರ್ಜುನಸ್ವಾಮಿ ತಂಗಿ ಪಾರ್ವತಿಗೆ 2020ರಲ್ಲಿ ಜಾಗವನ್ನು ದಾನವಾಗಿ ನೀಡಿದರು. ಆದರೆ ನಂತರ ದಿಢೀರಾಗಿ ಆ ಜಾಗದಲ್ಲಿ ಮುಡಾ ದೇವನೂರು 3ನೇ ಹಂತದ ಬಡಾವಣೆ ನಿರ್ಮಾಣ ಮಾಡಿತ್ತು.
ಮುಡಾ ನಮಗೆ 3.16 ಎಕರೆಗೆ ಪರಿಹಾರ ರೂಪದಲ್ಲಿ 62 ಕೋಟಿ ರೂ. ನೀಡಲಿ. ನಮಗೆ ಪರಿಹಾರ ರೂಪದಲ್ಲಿ ದೊರೆತಿರುವ 14 ನಿವೇಶನಗಳ ಬೆಲೆ ಇದಕ್ಕಿಂತ ಕಡಿಮೆ ಇದೆ. ಒಂದು ಎಕರೆಗೆ 44 ಸಾವಿರ ಚದರ ಅಡಿಯಾದರೆ ನಮಗೆ ದೊರೆತಿರುವುದು 37,190.09 ಚದರ ಅಡಿ ಮಾತ್ರ. ನಾವು ಇಂಥದ್ದೇ ಜಾಗದಲ್ಲಿ ನಿವೇಶನ ಬೇಕೆಂದು ಮುಡಾಗೆ ಕೇಳಿಕೊಂಡಿರಲಿಲ್ಲ.
| ಸಿದ್ದರಾಮಯ್ಯ ಮುಖ್ಯಮಂತ್ರಿ
ಮೈಸೂರು:ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಡೆದಿರುವ ಹಗರಣದ ಕುರಿತು ನ್ಯಾಯಾಂಗ ತನಿಖೆ ನಡೆಸುವಂತೆ ರಾಜ್ಯಪಾಲ ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆಯಲಾಗುವುದು ಎಂದು ಶಾಸಕ ಟಿ.ಎಸ್.ಶ್ರೀವತ್ಸ ಹೇಳಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೀಘ್ರವೇ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ನಡೆಸಬೇಕು, ನಿವೃತ್ತ ನ್ಯಾಯಾ ಧೀಶರನ್ನು ಪ್ರಕರಣದತನಿಖೆಗೆ ನೇಮಕ ಮಾಡಬೇಕು ಎಂದು ಕೋರಿಕೊಳ್ಳಲಾಗುವುದು ಎಂದರು.
ಸಿಎಂ ಸಿದ್ದರಾಮಯ್ಯ ಯಾರನ್ನೋ ಬಚಾವ್ ಮಾಡಲು ಹೋಗಿ ತಮ್ಮ ಬುಡಕ್ಕೆ ಸಮಸ್ಯೆ ತಂದು ಕೊಳ್ಳುತ್ತಿದ್ದಾರೆ. ಹಗರಣ ಬೆಳಕಿಗೆ ಬಂದ ತಕ್ಷಣ ಮುಡಾ ಆಯುಕ್ತರನ್ನು ಅಮಾನತುಗೊಳಿಸಬೇಕಾಗಿತ್ತು. ಆದರೆ ಸರ್ಕಾರ ಇದುವರೆಗೆ ಏಕೆ ಅಮಾನತು ಮಾಡಲಿಲ್ಲ? ಆಯುಕ್ತರನ್ನು ವಿಚಾರಣೆಗೆ ಒಳಪಡಿಸಿದರೆ ಹಲವು ವಿಚಾರಗಳು ಬೆಳಕಿಗೆ ಬರುತ್ತವೆ. ಪ್ರಕರಣ ವಿಚಾರಣೆ ಹಂತದಲ್ಲಿರುವಾಗ ಜಿಲ್ಲಾಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಸರಿಯಲ್ಲ. ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಕೈಗೊಳ್ಳುತ್ತಿರುವ ತೀರ್ವನಗಳು ಸರಿ ಇಲ್ಲ. ಅವರು ತಪ್ಪು ಮಾಡುತ್ತಿದ್ದಾರೆ ಎಂದು ಜನಸಾಮಾನ್ಯರು ಮಾತನಾಡಿಕೊಳ್ಳುತ್ತಿದ್ದಾರೆ ಎಂದರು.
ಅಧಿಕಾರಿಗಳ ಮೇಲೆ ನಂಬಿಕೆ ಇಲ್ಲ:ಮುಡಾದಲ್ಲಿ ನಾನು ತೆಗೆದಿರುವ ದಾಖಲೆಗಳ ಪ್ರಕಾರ ಮೂರೂ ಕಾಲು ಲಕ್ಷ ಚದರಡಿಯಷ್ಟು ಹಗರಣ ನಡೆದಿದೆ. ಇದು ಕೇವಲ ಒಂದೂವರೆ ವರ್ಷದಲ್ಲಿ ನಡೆದಿರುವ ಹಗರಣ. ಈ ಬಗ್ಗೆ ಹಿಂದಿನ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಹಾಗಾಗಿ ಸರ್ಕಾರ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕು. ನಮ್ಮಲ್ಲಿ ಲೋಕಾಯುಕ್ತ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಲೋಕಾಯುಕ್ತರಿಗೆ ತನಿಖೆ ಮಾಡಲು ಆಸಕ್ತಿ ಇಲ್ಲದೆ ಇದ್ದರೆ ನಿವೃತ್ತ ನ್ಯಾಯಾಧೀಶರೊಬ್ಬರ ಮೂಲಕ ತನಿಖೆ ನಡೆಸಬೇಕು. ನಮಗೆ ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳು ನಡೆಸುವ ತನಿಖೆಯಲ್ಲಿ ನಂಬಿಕೆ ಇಲ್ಲ ಎಂದು ಹೇಳಿದರು.
ಬೆಲೆ ಬಾಳುವ ಭೂಮಿ ಎಲ್ಲಿದೆ?:ದೇವನೂರು ಬಡಾವಣೆ ನಿರ್ವಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರಿಗೆ ಸೇರಿದ 3.16 ಎಕರೆ ಜಾಗವನ್ನು ಬಳಕೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಭೂ ಪರಿಹಾರವಾಗಿ 64 ಕೋಟಿ ರೂ. ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಎಕರೆಗೆ 20 ಕೋಟಿ ರೂ. ಬೆಲೆ ಬಾಳುವ ಭೂಮಿ ಮೈಸೂರಿನಲ್ಲಿ ಎಲ್ಲಿದೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ಪ್ರಶ್ನಿಸಿದರು. ಸಿಎಂ ಪತ್ನಿ ದೇವನೂರು ಬಡಾವಣೆಯಲ್ಲಿ ಭೂಮಿ ಕಳೆದುಕೊಂಡು ವಿಜಯನಗರದಲ್ಲಿ ನಿವೇಶನ ಪಡೆದಿದ್ದಾರೆ. ಸಿಎಂ ಪತ್ನಿ ಭೂಮಿ ಕಳೆದುಕೊಂಡ ಪಕ್ಕದಲ್ಲೇ ಮತ್ತೊಬ್ಬರೂ 7 ಎಕರೆ ಜಮೀನು ಕಳೆದುಕೊಂಡಿದ್ದಾರೆ. ಹಾಗಾದರೆ ಅವರಿಗೆ 150 ಕೋಟಿ ರೂ. ಪರಿಹಾರ ನೀಡಲು ಸಾಧ್ಯವೇ? ದೇವನೂರು ಬಡಾವಣೆಯಲ್ಲಿರುವ ಪಾರ್ವತಿ ಅವರ ಆಸ್ತಿ 20 ಕೋಟಿ ರೂ. ಬೆಲೆ ಬಾಳುತ್ತದೆಯೇ ಎಂದು ಜರಿದರು.
ಮುಡಾ ನಿವೇಶನ ಹಂಚಿಕೆ ಹಗರಣ ಬಯಲಾಗಿರುವುದರ ಹಿಂದೆ ಡಿ.ಕೆ.ಶಿವಕುಮಾರ್ ಕೈವಾಡವಿದೆ ಎಂದು ಎಚ್.ಡಿ. ಕುಮಾರಸ್ವಾಮಿ ಮಾಡಿರುವ ಆರೋಪ ಆಧಾರರಹಿತ. ಈ ಬಗ್ಗೆ ಖುದ್ದು ಡಿಕೆಶಿ ಸ್ಪಷ್ಟನೆ ನೀಡಿ, ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಹೇಳಿದ್ದಾರೆ.
| ಡಾ. ಜಿ. ಪರಮೇಶ್ವರ ಗೃಹ ಸಚಿವ
ಸ್ವಂತಕ್ಕೆ ಲಾಭ ಮಾಡಿಕೊಳ್ಳುವ ಉದ್ದೇಶದಿಂದ ನಡೆದ ದೊಡ್ಡ ಪ್ರಮಾಣದ ಭ್ರಷ್ಟಾಚಾರ ಇದು. ನಾನೊಬ್ಬ ಸಮಾಜವಾದಿ, ಲೋಹಿಯಾವಾದಿ ಎಂದು ಹೇಳಿಕೊಳ್ಳುವ ಅರ್ಹತೆ ಸಿಎಂ ಸಿದ್ದರಾಮಯ್ಯ ಅವರಿಗೆ ಇಲ್ಲ. ಮುಡಾ ಮತ್ತು ಎಸ್ಸಿ, ಎಸ್ಟಿ ಹಗರಣದಲ್ಲಿ ಸಿಎಂ ನೇರವಾಗಿ ಭಾಗಿಯಾಗಿದ್ದಾರೆ. ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು.
| ಪ್ರಲ್ಹಾದ ಜೋಶಿ ಕೇಂದ್ರ ಸಚಿವ
ಅಯೋಧ್ಯೆಯಂತೆ ಗುಜರಾತ್‌ನಲ್ಲೂ ಬಿಜೆಪಿಯನ್ನು ಸೋಲಿಸುತ್ತೇವೆ: ರಾಹುಲ್ ಗಾಂಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + nine =
Remember me
