ಭಯ ಎಂದರೇನು? ಅದರ ಲಕ್ಷಣಗಳೇನು?. ಭಯವಾದಾಗ ದೇಹದಲ್ಲಿ ತೀವ್ರವಾದ ಸಂವೇದನೆಯು ಉಂಟಾಗುತ್ತದೆ, ಉಸಿರಿನಲ್ಲಿ ನಡುಕವಿರುತ್ತದೆ, ಯಾವುದೋ ಒಂದು ವಿಷಯದಲ್ಲಿ ಸಿಲುಕಿರುವ ಅನುಭವವಿರುತ್ತದೆ. ನಮ್ಮೊಳಗೆ ಏನೋ ಕುಗ್ಗಿದ ಅನುಭವವಾಗುತ್ತದೆ ಮತ್ತು ಖಾಲಿತನ ಅಥವಾ ಒಂಟಿತನದ ಭಾವವು ಮೂಡುತ್ತದೆ. ಈ ಎಲ್ಲಾ ಭಾವಗಳಿಂದ ದೇಹದಲ್ಲಿ ಉಂಟಾಗುವ ತೀವ್ರವಾದ ಸಂವೇದನೆಯೇ ಭಯ. ಈ ಸಂವೇದನೆಯು ನಮ್ಮ ಹೃದಯ ಹಾಗೂ ನಾಭಿಯ ನಡುವೆ ಕಂಡುಬರುತ್ತದೆ.
ಭಯವು ಹೇಗೆ ಉಂಟಾಗುತ್ತದೆ? ಚಿಕ್ಕ ಮಕ್ಕಳಲ್ಲಿ ಭಯವಿರುವುದಿಲ್ಲ. ಅವರು ಬೆಳೆದು ದೊಡ್ಡವರಾಗಿ ಅಹಂಕಾರ ಬೆಳೆದಂತೆ ಭಯವೂ ಹೆಚ್ಚಾಗುತ್ತದೆ, ಏಕೆಂದರೆ ಭಯವು ಅಹಂಕಾರದ ಜೊತೆ ನಿಕಟವಾದ ಸಂಬಂಧವನ್ನು ಹೊಂದಿದೆ. ಅದರಿಂದ ಅಹಂಕಾರ ಬೆಳೆದಂತೆಲ್ಲಾ ಭಯವೂ ಹೆಚ್ಚುತ್ತದೆ.
ಎಚ್ಚರದ ಸ್ಥಿತಿ (ಜಾಗ್ರತ್ ಅವಸ್ಥೆ) ಮತ್ತು ಕನಸು ಕಾಣುವ (ಸ್ವಪ್ನ ಅವಸ್ಥೆ) ಸ್ಥಿತಿಯಲ್ಲಿ ನಮಗೆ ಭಯವು ಕಾಡುತ್ತದೆ. ಆಳವಾದ ನಿದ್ದೆಯಲ್ಲಿದ್ದಾಗ (ಸುಷುಪ್ತಿಯಲ್ಲಿ) ಭಯವಿರುವುದಿಲ್ಲ. ನಮ್ಮಲ್ಲಿ ಭಯವು ಹೆಚ್ಚಾದರೆ ನಿದ್ರಾಹೀನತೆ ಉಂಟಾಗುತ್ತದೆ. ಸಾಮಾನ್ಯವಾಗಿ, ನಾವು ತೀವ್ರವಾದ ಭಯದ ಸಂವೇದನೆಯನ್ನು, ವಸ್ತು ಮತ್ತು ಪರಿಸ್ಥಿತಿಗಳೊಂದಿಗೆ ಗುರುತಿಸಿಕೊಳ್ಳುತ್ತೇವೆ. ಒಂದು ನಿರ್ದಿಷ್ಟ ವಸ್ತು ಅಥವಾ ಪರಿಸ್ಥಿತಿಯಿಂದ ಭಯವು ಉಂಟಾಗುತ್ತಿದೆ ಎಂದುಕೊಳ್ಳುತ್ತೇವೆ. ನಮಗೆ ಎತ್ತರದ ಬಗ್ಗೆ ಭಯವಿದೆ ಎಂದುಕೊಂಡರೆ ನಾವು ಭಯವನ್ನು ಎತ್ತರದ ಸನ್ನಿವೇಶಗಳೊಂದಿಗೆ ಗುರುತಿಸುತ್ತೇವೆ ಮತ್ತು ಆ ರೀತಿಯ ಸನ್ನಿವೇಶಗಳಿಂದ ದೂರವಿರಲು ಬಯಸುತ್ತೇವೆ. ಪರಿಸ್ಥಿತಿ ಅಥವಾ ಸನ್ನಿವೇಶಗಳಿಂದ ದೂರವಿರುವುದರಿಂದ ಭಯವು ದೂರವಾಗುವುದಿಲ್ಲ, ಬದಲಾಗಿ ಅದು ಮುಂದೂಡಲ್ಪಡುತ್ತದೆ ಅಷ್ಟೇ.
ಅರಿವಿನಿಂದ ನೀವು ಭಯವನ್ನು ದೂರ ಮಾಡಬಹುದು. ಭಯದ ಬಗ್ಗೆ ಅರಿವುಂಟಾದಾಗ ನಿಮ್ಮಲ್ಲಿ ಸ್ವೀಕಾರ ಭಾವವು ಮೂಡá-ತ್ತದೆ, ಆಗ ಭಯವು ದೂರವಾಗಿ ನಿಮ್ಮ ಚೈತನ್ಯವು ಪ್ರೀತಿಯ ಕಡೆಗೆ ಹರಿಯುತ್ತದೆ. ಪ್ರೀತಿ, ಭಯ ಮತ್ತು ದ್ವೇಷ, ಈ ಮೂರು ಬೇರೆ ಬೇರೆ ಶಕ್ತಿಗಳಲ್ಲ, ಬದಲಾಗಿ ಒಂದೇ ಶಕ್ತಿಯ ಬೇರೆ ಬೇರೆ ರೂಪಗಳು. ಒಂದೇ ಶಕ್ತಿಯು ಬೇರೆ ಬೇರೆ ಪರಿಸ್ಥಿತಿಯಲ್ಲಿ ಅಭಿವ್ಯಕಿಗೊಂಡಾಗ ಬೇರೆ ಭಾವಗಳಲ್ಲಿ ಹರಿಯುತ್ತದೆ. ಈ ಮೂರರಲ್ಲಿ ಯಾವುದೇ ಭಾವನೆ ಮೂಡಿದರೂ, ನಿಮ್ಮ ದೇಹದ ಹೃದಯ ಮತ್ತು ನಾಭಿಯ ಮಧ್ಯ ಭಾಗದಲ್ಲಿ ಸಂವೇದನೆ ಉಂಟಾಗುತ್ತದೆ.
ಪ್ರೀತಿಯು ತಲೆಕೆಳಗಾದಾಗ ಉಂಟಾಗುವ ಭಾವವೇ ಭಯ ಎಂದು ನಾವು ಹೇಳುತ್ತೇವೆ. ಪ್ರೀತಿಯಿದ್ದಾಗ ಭಯವಿರುವುದಿಲ್ಲ, ಭಯವಿದ್ದಾಗ ಪ್ರೀತಿ ಇರುವುದಿಲ್ಲ. ಒಂದೇ ಸಮಯದಲ್ಲಿ ಅವು ಒಟ್ಟಿಗೇ ಇರಲು ಸಾಧ್ಯವಿಲ್ಲ. ಯಾವ ಮನುಷ್ಯರಲ್ಲಿ ತೀವ್ರವಾದ ಪ್ರೀತಿ ಅಥವಾ ದ್ವೇಷ ಇರುತ್ತದೆಯೋ ಅವರಲ್ಲಿ ಭಯವಿರುವುದಿಲ್ಲ. ಹೇಗೆ ಒಬ್ಬ ಭಯೋತ್ಪಾದಕ ಯಾವುದಕ್ಕೂ ಹೆದರುವುದಿಲ್ಲವೋ ಹಾಗೆ. ಅವನಿಗೆ ತಾನು ಮಾಡುವ ಕೆಲಸದಲ್ಲಿ
ತೀವ್ರವಾದ ಪ್ರೀತಿ (ಪ್ರೀತಿಯ ವಿಕೃತ ರೂಪ) ಅಥವಾ ನಂಬಿಕೆ ಇರುತ್ತದೆ, ಜತೆಗೆ ದ್ವೇಷವೂ ತೀವ್ರವಾಗಿ ಇರುತ್ತದೆ. ಅದರಿಂದ ಅವನಿಗೆ ಭಯ ಇರುವುದಿಲ್ಲ. ಚಿಕ್ಕ ಮಕ್ಕಳಲ್ಲೂ ಪ್ರೀತಿಯು ತುಂಬಿರುತ್ತದೆ, ಅದರಿಂದ ಅವರಿಗೂ ಭಯವಿರುವುದಿಲ್ಲ.
ಬೇರೆ ಬೇರೆ ಸಮಯ ಹಾಗೂ ಸನ್ನಿವೇಶಕ್ಕನುಗುಣವಾಗಿ ನಮ್ಮಲ್ಲಿ ಪ್ರೀತಿ ಹಾಗೂ ಭಯ, ಇವೆರಡೂ ವ್ಯಕ್ತವಾಗುತ್ತಿರುತ್ತವೆ. ಭಯ ಕೂಡ ಜೀವನದಲ್ಲಿ ಆವಶ್ಯಕವಾಗಿದೆ, ಆದರೆ ಅದು ಒಂದು ಮಿತಿಯಲ್ಲಿರಬೇಕು, ಊಟದಲ್ಲಿ ಉಪ್ಪಿನ ರೀತಿ. ನಾವು ವಿಕಾಸವಾದಂತೆ ಅದು ಸಹಜವಾಗಿ ನಮ್ಮಲ್ಲಿ ಬರುತ್ತದೆ.
ನಾವು ಭಯವನ್ನು ಶುದ್ಧ ಪ್ರೀತಿಯ ಕಡೆಗೆ ತಿರುಗಿಸಬಹುದು, ಇದು ಸಾಧ್ಯ ಹಾಗೂ ಆವಶ್ಯಕವೂ ಆಗಿದೆ. ನಾವು ಭಯವನ್ನು ನಿರ್ಲಕ್ಷ್ಯ ಮಾಡಿ, ಅದರ ಬಗ್ಗೆ ಗಮನ ಕೊಡದೆ ಇದ್ದರೆ, ಅದು ನಮ್ಮೊಳಗೆ ಸೇರಿ ನಮ್ಮ ವ್ಯಕ್ತಿತ್ವದ ವಿಕಸನವನ್ನು ತಡೆಯುತ್ತದೆ.
ನೀವು ಸಂತೋಷವಾಗಿದ್ದಾಗ ನಿಮ್ಮಲ್ಲಿ ಏನೋ ವಿಸ್ತಾರವಾದ ಅನುಭವವಾಗುತ್ತದೆ, ನೀವು ದುಃಖದಲ್ಲಿದ್ದಾಗ ಅದೇ ಕುಗ್ಗಿದ ಅನುಭವವಾಗುತ್ತದೆ. ಈ ಅನುಭವಗಳೇ ನಮ್ಮ ಸ್ವಾತಂತ್ರ್ಯವನ್ನು ನಿರ್ಧರಿಸುತ್ತವೆ. ನಮ್ಮ ಮನಸ್ಸಿನಲ್ಲಿ ಆಗುವ ಅನುಭವಗಳ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ, ಹಾಗೆಯೇ ಪ್ರೀತಿ, ಭಯ ಹಾಗೂ ದ್ವೇಷ ಭಾವನೆಗಳ ಮೇಲೆ ಕೂಡ ನಮಗೆ ನಿಯಂತ್ರಣವಿರುವುದಿಲ್ಲ. ನಮ್ಮಲ್ಲಿ ಮೂಡುವ ಈ ಎಲ್ಲಾ ಭಾವನೆಗಳನ್ನು ಗಮನಿಸುವುದು ಒಂದು ಧ್ಯಾನಸ್ಥ ಸ್ಥಿತಿ. ಈ ಧ್ಯಾನಸ್ಥ ಸ್ಥಿತಿಯಿಂದ ನಾವು
ಈ ಎಲ್ಲಾ ಭಾವನೆಗಳಿಂದ ಮೇಲೇಳಬಹುದು, ಹಾಗೆಯೇ ಅವುಗಳನ್ನು ನಿಯಂತ್ರಣದಲ್ಲಿಡಬಹುದು. ನಮ್ಮ ಮನಸ್ಸಿನ ಸ್ಥಿತಿಯು ನಮ್ಮ ಕೈಯಲ್ಲೇ ಇದೆ.
ನೆಲದಡಿಯಲ್ಲಿದೆ ಎರಡಂತಸ್ತಿನ ಮನೆ; ಇದರ ನಿರ್ಮಾಣಕ್ಕೆ ಈತ ತೆಗೆದುಕೊಂಡ ಸಮಯ 12 ವರ್ಷ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 8 =
Remember me
