|ವಿಲಾಸ ಮೇಲಗಿರಿ
ಉಪವಾಸ ಎಂಬ ಪದಕ್ಕೆ ಭಾರತದಲ್ಲಿ ಅದರದ್ದೇ ಆದ ವೈಶಿಷ್ಟ್ಯವಿದೆ. ಸಾಮಾಜಿಕ, ರಾಜಕೀಯವಾಗಿ ನಡೆಯುವ ಉಪವಾಸಗಳು ಒಂದು ಬಗೆಯಲ್ಲಿ ಪ್ರಭಾವ ಬೀರಿದರೆ, ಧಾರ್ವಿುಕವಾಗಿ ನಡೆಯುವ ಉಪವಾಸ ನಮ್ಮನ್ನು ದೇವರಿಗೆ ಹತ್ತಿರವಾಗಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ. ಉಪವಾಸ ಮಾಡುವುದು ಸನಾತನ ಕಾಲದಿಂದಲೂ ಭಾರತೀಯರಲ್ಲಿ ರೂಢಿಯಲ್ಲಿದೆ. ಹಿಂದು, ಮುಸ್ಲಿಂ, ಜೈನ, ಕ್ರೖೆಸ್ತ, ಪಾರ್ಸಿ ಎಲ್ಲ ಧರ್ಮದಲ್ಲೂ ಉಪವಾಸ ತನ್ನದೇ ಆದ ಮಹತ್ವ ಹೊಂದಿದೆ. ಹಬ್ಬ ಹರಿದಿನಗಳಲ್ಲಿ ಮತ್ತು ತಿಥಿಗಳನ್ನಾಚರಿಸುವಾಗ ಉಪವಾಸ ಮಾಡುವುದು ನಡೆದುಕೊಂಡು ಬಂದಿದೆ. ಆದರೆ ಉಪವಾಸ ವ್ರತದ ಫಲವನ್ನು ಕರುಣಿಸುವುದು ಮಾತ್ರವಲ್ಲ, ಬದಲಾಗಿ ವೈಜ್ಞಾನಿಕವಾಗಿ ನಮ್ಮ ದೇಹ ಮತ್ತು ಮನಸ್ಸನ್ನು ಕೂಡ ನಿಯಂತ್ರಿಸುತ್ತದೆ ಎಂಬುದು ವಿಶೇಷ.
ಹಿಂದುಗಳಂತೂ ವರ್ಷದುದ್ದಕ್ಕೂ ಒಂದಲ್ಲ ಒಂದು ಹಬ್ಬ, ವ್ರತ ಆಚರಿಸುತ್ತಾರೆ. ಆ ಆಚರಣೆಗಳಲ್ಲೇ ಸಡಗರ ಸಂಭ್ರಮ ಕಾಣುತ್ತಾರೆ. ಆದರೆ ಶಿವರಾತ್ರಿ ಶಿವಭಕ್ತರ ಪಾಲಿಗೆ ಮಂಗಳಕರ ರಾತ್ರಿ. ಹಗಲು ಉಪವಾಸವಿದ್ದು, ರಾತ್ರಿ ಜಾಗರಣೆ ಮಾಡಿ, ಶಿವನ ಕೃಪೆ ಬಯಸುವ ಶುಭದಿನ. ಆ ದಿನ ಮಠ, ಮಂದಿರ ಅಷ್ಟೇ ಅಲ್ಲ, ಮನೆ-ಮನೆಗಳಲ್ಲಿ ಭಜನೆಗಳು, ದೇವರ ಆರಾಧನೆಗಳು ನಡೆಯುತ್ತವೆ. ಈ ಹಬ್ಬದಂದು ಇಡೀ ದಿನ ಉಪವಾಸವಿದ್ದು, ಇಡೀ ರಾತ್ರಿ ಜಾಗರಣೆ ನಿಯಮ ಪಾಲಿಸುತ್ತಾರೆ. ಇದು ದೈಹಿಕ, ಮಾನಸಿಕ ಸಮತೋಲನಕ್ಕೆ ಸಹಕಾರಿಯಾಗಿದೆ. ಉಪವಾಸವು ದೇಹ ಮತ್ತು ಮನಸ್ಸಿನ ಹತೋಟಿಗೆ ಉಪಯುಕ್ತವಾಗಿದೆ. ಒಂದು ದಿನ ಊಟ ಬಿಟ್ಟರೆ ಅದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಜೀರ್ಣಾಂಗಗಳಿಗೆ ವಿಶ್ರಾಂತಿ ದೊರೆಯುತ್ತದೆ. ಜೀರ್ಣಕ್ರಿಯೆ ಸಮಸ್ಯೆಗಳು ದೂರವಾಗುತ್ತವೆ. ಧಾರ್ವಿುಕವಾಗಿ ಆತ್ಮಶುದ್ಧಿ, ಆತ್ಮಶಕ್ತಿ ಲಭಿಸುತ್ತದೆ. ಉಪವಾಸದಿಂದ ಇತರರ ಹಸಿವಿನ ಸಂಕಟ ಅರ್ಥ ಮಾಡಿಕೊಳ್ಳಲು ಸಹಕಾರಿಯಾಗುತ್ತದೆ.
ಶಿವರಾತ್ರಿಯಲ್ಲಿ ಅಡಗಿದೆ ವಿಜ್ಞಾನ:ಶಿವರಾತ್ರಿ ಬರೀ ಹಬ್ಬವಷ್ಟೇ ಅಲ್ಲ. ಅದರಲ್ಲಿ ವಿಜ್ಞಾನವು ಅಡಗಿದೆ. ಈ ಸಂದರ್ಭದಲ್ಲಿ ಹವಾಮಾನ ವೈಪರೀತ್ಯದಿಂದ ಉಸಿರಾಟ ತೊಂದರೆ ಕಾಣಿಸಿಕೊಳ್ಳುವುದು ಸಾಮಾನ್ಯ. ಕೆಮ್ಮು, ನೆಗಡಿ, ಶೀತ ಮಾಮೂಲು. ಇಂತಹ ಸಂದರ್ಭದಲ್ಲಿ ದೇಹ ಸಮತೋಲನದಲ್ಲಿಡಲು ಉಪವಾಸ ಮಾಡಬೇಕಾಗುತ್ತದೆ. ದೇಹದ ಉಷ್ಣ ಹೆಚ್ಚಿಸಲು ಜಾಗರಣೆ ಸಹಕಾರಿಯಾಗುತ್ತದೆ. ಶಿವನ ಪೂಜೆಗೆ ಉಪಯೋಗಿ ಸುವ ಬಿಲ್ವ ಪತ್ರೆಯಿಂದ ಪ್ರಾಣವಾಯು ಹೊರ ಬರುತ್ತದೆ. ಲಿಂಗಾಷ್ಟಕ, ಓಂಕಾರ ಪಠಣಗಳಿಂದ ಶ್ವಾಸಕಾಂಗಗಳಿಗೆ ವ್ಯಾಯಾಮ ಸಿಗುತ್ತದೆ. ಆದ್ದರಿಂದ ಉಪವಾಸ ಅನೇಕ ಪ್ರಯೋಜನಗಳನ್ನು ಉಂಟು ಮಾಡುತ್ತದೆ.
ಉಪವಾಸ ಒಂದು ಶ್ರೇಷ್ಠ ಔಷಧ:ಲಂಘನಂ ಪರಮೌಷಧಂ ಎಂಬುದು ಸಂಸ್ಕೃತದಲ್ಲಿ ಉಲ್ಲೇಖವಾಗಿದೆ. ಉಪವಾಸವು ಒಂದು ಶ್ರೇಷ್ಠ ಔಷಧ ಎಂದು ಅದರ ಅರ್ಥ. ಪ್ರಾಚೀನ ಭಾರತೀಯರು ಉಪವಾಸವನ್ನು ಧಾರ್ವಿುಕ ಆಚರಣೆಯಾಗಿ ಆಚರಿಸುತ್ತಿದ್ದರು. ಋಷಿಗಳು, ಸಂತರು ಉಪವಾಸಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದರು. ಅನೇಕ ಧರ್ಮಗಳಲ್ಲಿ ಧಾರ್ವಿುಕ ಆಚರಣೆಯ ಒಂದು ಭಾಗವಾಗಿ ಉಪವಾಸವನ್ನು ಆಚರಿಸಲಾಗುತ್ತದೆ. ದೇಹ, ಮನಸ್ಸು, ಬುದ್ಧಿ ಶುದ್ಧೀಕರಿಸಲು ಶಿವರಾತ್ರಿ ಸಹಕಾರಿಯಾಗಲಿದೆ. ಹಾಗಾಗಿ ಶಿವರಾತ್ರಿಯನ್ನು ಶರೀರ ಶುದ್ಧೀಕರಣ ಮಾಡುವ ದಿನ ಎಂದು ಪರಿಗಣಿಸಲಾಗುತ್ತಿದೆ.
ಉಪವಾಸವು ಆರೋಗ್ಯ ರಕ್ಷಣೆಯ ಪ್ರಮುಖ ಅಸ್ತ್ರವಾಗಿದೆ. ಉಪವಾಸದಿಂದ ದೈಹಿಕ, ಮಾನಸಿಕ ಶಕ್ತಿ ವರ್ಧಿಸುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದೇಹದ ಅಂಗಗಳು ಚೈತನ್ಯ ಪಡೆದು ಕೊಳ್ಳುತ್ತವೆ. ದೇಹ ಮತ್ತು ಮನಸ್ಸನ್ನು ನಿಗ್ರಹಿಸುವ ಶಕ್ತಿ ಉಪವಾಸಕ್ಕಿದೆ.
|ಸಿ.ಬಿ.ಶೈಲಾ ಜಯಕುಮಾರ್ವಿಶ್ರಾಂತ ಉಪನ್ಯಾಸಕಿ, ಚಿತ್ರದುರ್ಗ.
ಯಾರು ಬೇಕಾದರೂ ಉಪವಾಸ ಮಾಡಬಹುದು. ಈ ಸಮಯದಲ್ಲಿ ಕೆಲವರು ಇಡೀ ದಿನ ಒಂದು ಲೋಟ ನೀರೂ ಕುಡಿಯದೆ ಉಪವಾಸ ಆಚರಿಸುತ್ತಾರೆ. ಅಂತಹವರ ಆರೋಗ್ಯದಲ್ಲಿ ಏರುಪೇರಾಗುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಜಾಗ್ರತೆವಹಿಸಬೇಕು.
ಕೋವಿಶೀಲ್ಡ್ ಕೊಡಬಾರದಿತ್ತು, ಭಾರತದಲ್ಲಿನ್ನು ವ್ಯಾಕ್ಸಿನ್​ ಅನಗತ್ಯ; ಲಸಿಕೆ ಅಡ್ಡಪರಿಣಾಮಗಳ ಕುರಿತು ದನಿ ಎತ್ತಿದ ಡಾಕ್ಟರ್​

ಕಾಲೇಜು ವಿದ್ಯಾರ್ಥಿಗಳೇ.. ವೀರ್ಯಾಣು ದಾನ ಮಾಡಿ: ಸ್ಪರ್ಮ್ ಬ್ಯಾಂಕ್​ಗಳಿಂದ ಹೀಗೊಂದು ಮನವಿ; ಎಲ್ಲಿ, ಏಕೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − three =
Remember me
