ಬೆಂಗಳೂರು:ಸ್ಪರ್ಧಾತ್ಮಕ ಯುಗದಲ್ಲಿ ಬಂಡವಾಳ ಹೂಡಿಕೆ, ಉದ್ಯಮಿಗಳ ಆಕರ್ಷಣೆಗೆ ಅನೇಕ ಪ್ರೋತ್ಸಾಹಕ ಹಾಗೂ ರಿಯಾಯಿತಿಗಳನ್ನು ನೀಡುತ್ತೇವೆ. ಇಂತಹ ಸಂದರ್ಭದಲ್ಲಿ ಲಕ್ಷಾಂತರ ಕೋಟಿ ರೂ, ಬಂಡವಾಳ ಹೂಡಿ, ಲಕ್ಷಾಂತರ ಉದ್ಯೋಗ ಸೃಷ್ಟಿಸಿರುವ ಜಿಂದಾಲ್ ಸ್ಟೀಲ್ ವರ್ಕ್ಸ್ ಗೆ ವಿನಾಯಿತಿ ನೀಡಿದರೆ ತಪ್ಪೇನು ? ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೇಳಿದರು.
ಸುದ್ದಿಗಾರರೊಂದಿಗೆ ಶುಕ್ರವಾರ ಮಾತನಾಡಿದ ಅವರು, ಎಕರೆಗೆ 1.22ಲಕ್ಷ ರೂ ಹಾಗೂ 1.50 ಲಕ್ಷ ರೂ.ನಂತೆ ಎರಡು ಪ್ರತ್ಯೇಕ ದರ ವಿಧಿಸಿ ಜಿಂದಾಲ್ ಕಂಪನಿಗೆ ಒಟ್ಟು‌ 3667 ಎಕರೆ ಜಮೀನಿಗೆ ಶುದ್ಧ ಕ್ರಯ ಪತ್ರ ನೀಡುವುದಕ್ಕೆ ಇಲಾಖೆ ಸಲ್ಲಿಸಿದ ಪ್ರಸ್ತಾವನೆ ಸರ್ಕಾರಕ್ಕೆ ಮನದಟ್ಟಾಯಿತು. ಜತೆಗೆ ಹೈಕೋರ್ಟ್ ನಿರ್ದೇಶನವಿದ್ದ ಕಾರಣ ಜಮೀನಿಗೆ ಶುದ್ಧ ಕ್ರಯಪತ್ರ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಸಮರ್ಥಿಸಿಕೊಂಡರು.
ಬಿಜೆಪಿ ಆಡಳಿತಾವಧಿಯಲ್ಲಿ ಉದ್ಯಮಕ್ಕೆ ಉತ್ತೇಜನ, ಜಿಂದಾಲ್ ಸಾಮರ್ಥ್ಯದ ಬಗ್ಗೆ ಸರಿಯಾಗಿ ಮನವರಿಕೆ ಮಾಡಿಕೊಡದ ಕಾರಣ ವಿರೋಧ ಪಕ್ಷದಲ್ಲಿದ್ದಾಗ ಕಾಂಗ್ರೆಸ್ ಪಕ್ಷ ವಿರೋಧಿಸಿದ್ದೆವು. ಈಗ ಮನವರಿಕೆಯಾಗಿದ್ದರಿಂದ ಒಪ್ಪಿಗೆ ನೀಡಿದ್ದೇವೆ ಎಂದು ಜಾಣ ಉತ್ತರ ನೀಡಿದರು.
ಬಂಡವಾಳ ಹೂಡಿಕೆ, ಉದ್ಯಮ ಸ್ನೇಹಿ ನೀತಿ, ವಾತಾವರಣ ಇಲ್ಲದಿದ್ದರೆ ಉದ್ಯಮಿಗಳು ರಾಜ್ಯ ತೊರೆಯುತ್ತಾರೆ. ಆಂಧ್ರ ಪ್ರದೇಶ, ತಮಿಳುನಾಡಿನಂತಹ ರಾಜ್ಯಗಳು ಉಚಿತ ಭೂಮಿ, ವಿದ್ಯುತ್, ನೀರು ಮತ್ತಿತರ ಸೌಲಭ್ಯಗಳನ್ನು ಒದಗಿಸಿ ಸೆಳೆಯಲು ಪೈಪೋಟಿವೊಡ್ಡಿವೆ. ಜಿಂದಾಲ್ ನಂತಹ ದೊಡ್ಡ ಸಂಸ್ಥೆ ಜತೆಗೆ ಸರ್ಕಾರದ ನಡವಳಿಕೆ ಚೆನ್ನಾಗಿರಬೇಕು. ಬಂಡವಾಳ, ಉದ್ಯಮ ಆಕರ್ಷಿಸುವುದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಮುಖ್ಯ ಉದ್ದೇಶವೆಂದು ಡಾ.ಜಿ.ಪರಮೇಶ್ವರ್ ನೆನಪಿಸಿದರು‌.
ಜೆಎಸ್ ಡಬ್ಲ್ತು ಕಂಪನಿಗೆ ನ್ಯಾಯಸಮ್ಮತವಾದ ದರದಲ್ಲಿ ಜಮೀನು ಮಾರಾಟವಾಗಿದೆ. ಇದರಿಂದಾಗಿ ಕಂಪನಿ ಸಾಮರ್ಥ್ಯ ವಿಸ್ತರಿಸಿ ಇನ್ನಷ್ಟು ಹೂಡಿಕೆ ಮಾಡಲಿದೆ. ಅಲ್ಲದೆ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ ಎಂದು ಹೇಳಿದರು.
ಮುಡಾ ಪ್ರಕರಣದ ತನಿಖೆಗೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ದೇಸಾಯಿ ನೇತೃತ್ವದಲ್ಲಿ ಆಯೋಗ ರಚನೆಯಾಗಿದೆ‌. ಮೂಲ ದಾಖಲೆಗಳು ತಿದ್ದಿರುವ ಸಂದೇಹ ಸೇರಿ ಪ್ರಕರಣಕ್ಕೆ ಸಂಬಂಧಿಸಿದ ಯಾವುದೇ ಅಹವಾಲು ಸಲ್ಲಿಕೆಗೆ ಅವಕಾಶವಿದೆ ಎಂದರು.
ಹೈಕಮಾಂಡ್ ಆಹ್ವಾನದ ಮೇರೆಗೆ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ದೆಹಲಿಗೆ ತೆರಳಿದರೆ, ನಾನು ವೈಯಕ್ತಿಕ ಕೆಲಸದ ನಿಮಿತ್ತ ಹೋಗುತ್ತಿರುವೆ ಎಂದು ಡಾ.ಜಿ.ಪರಮೇಶ್ವರ್ ಸ್ಪಷ್ಟಪಡಿಸಿದರು.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:3 × four =
Remember me
