ಚಿಕ್ಕಬಳ್ಳಾಪುರ: ಕರೊನಾ ಹಿನ್ನೆಲೆಯಲ್ಲಿ ದೀರ್ಘಕಾಲಿಕ ರಜೆ ಮಂಜೂರಾತಿಗಾಗಿ ತಹಸೀಲ್ದಾರ್ ಕಚೇರಿಯ ಅಧಿಕಾರಿಗೆ ಹವಾ ನಿಯಂತ್ರಣ ಯಂತ್ರ (ಎ.ಸಿ.) ಉಡುಗೊರೆ ನೀಡಬೇಕಂತೆ!ಅದನ್ನು ಆತನೇ ನಾಚಿಕೆಯಿಲ್ಲದೆ ಬಾಯಿಬಿಟ್ಟು ಕೇಳುತ್ತಾನೆ!
ಈ ಭ್ರಷ್ಟಾಚಾರದ ಮಾತುಕತೆಯ ಆಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಧ್ವನಿಮುದ್ರಿಕೆಯಲ್ಲಿ ಯಾರದೂ ಹೆಸರು ಮತ್ತು ಊರಿನ ವಿಚಾರ ಪ್ರಸ್ತಾಪವಾಗದಿದ್ದರೂ ಇದು ಗೌರಿಬಿದನೂರು ತಾಲೂಕು ಆಡಳಿತ ವ್ಯಾಪ್ತಿಗೆ ಸಂಬಂಧಿಸಿದ್ದು ಎಂಬ ಆರೋಪ ಕೇಳಿ ಬಂದಿದೆ.
ಇಲ್ಲಿನ ಕಚೇರಿಯ ದ್ವಿತೀಯ ದರ್ಜೆ ಗುಮಾಸ್ತ ತಿಂಗಳಿಂದ ಅನಧಿಕೃತವಾಗಿ ರಜೆಯಲ್ಲಿದ್ದ. ಅದನ್ನು ಅಧಿಕೃತಗೊಳಿಸಲು ಸಂಬಂಧಪಟ್ಟ ಅಧಿಕಾರಿಗೆ ಕೇಳಿದ್ದ. ಈ ಸಂದರ್ಭದಲ್ಲಿ ಆತ ಇಂತಹುದೊಂದು ಬೇಡಿಕೆ ಇಟ್ಟಿದ್ದಾನೆ. ತನ್ನ ಮನೆಗೆ ಎ.ಸಿ. ಹಾಕಿಸಿಕೊಟ್ಟರೆ ಏ. 28ರವರೆಗೆ ರಜೆ ಮಂಜೂರು ಮಾಡುವುದಾಗಿ ಹೇಳಿದ್ದಾನೆ.ಈ ಆಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾಧಿಕಾರಿ ಆರ್. ಲತಾ ಅವರು ತನಿಖೆಗೆ ಆದೇಶಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಹೀಗಿದೆ ಸಂಭಾಷಣೆ:
ಅಧಿಕಾರಿ: ಅಲ್ಲಾ, ನಿಮಗೆ ಕೆಲಸಾನೆ ಮಾಡಿಲ್ದಂಗೆ ಸಂಬಳ ನಾನು ಕೊಟ್ಟಿದ್ದೀನಿ ಅಲ್ವಾ?ನೌಕರ: ಹೌದು ಸಾರ್, ಕೊಟ್ಟಿದ್ದೀರಿಅಧಿಕಾರಿ: ಒಂದು ಪೆನ್ ಬರೆದಿಲ್ಲ, ಒಂದು ಹಾಳೆ ತಗೊಂಡಿಲ್ಲ, ಒಂದು ಫೈಲ್ ಅಟೆಂಡ್ ಮಾಡಿಲ್ಲನೌಕರ: ಹೌದು ಸರ್, ಆದರೂ ನಿಮ್ಮ ಆಶೀರ್ವಾದಿಂದ ಸಂಬಳ ಬಂದಿದೆ ಸರ್ಅಧಿಕಾರಿ: ಏಯ್, ಅದರಲ್ಲಿ ಆಶೀರ್ವಾದ ಏನ್ರಿ? ಅದಿರಲಿ, ಈಗ ನಾನು ಹೊಸದಾಗಿ ಮನೆ ಮಾಡಿದ್ದೀನಿ, ಗೊತ್ತಲ್ಲ…ನೌಕರ: ಸಾರ್, ಮನೆ ಮಾಡಿದೀರಿ ಅಂತಾ ಖಾದರ್ ಹೇಳಿದ ಸಾರ್ಅಧಿಕಾರಿ: ಈ ಬಿಸಲಲ್ಲಿ ನಾನು ಮಲಗಲಿಕ್ಕೆ ಆಗುತ್ತಾ? ಬಿಸಲಲ್ಲಿ ನನಗೆ ಏನು ಬೇಕಾಗುತ್ತೆ, ಮನೇನಲ್ಲಿ ಮಲಕ್ಕೊಳಕ್ಕೆ…?ನೌಕರ: ಎ.ಸಿ. ಬೇಕಾಗುತ್ತೆ ಸಾರ್ಅಧಿಕಾರಿ: ಹಾ ನೋಡ್ರಿ ಕರೆಕ್ಟಾಗಿ ಹೇಳಿದ್ರಿ, ನಿಮ್ಮ ಮನೆಗಳಲ್ಲಿ ಹಾಕ್ಕೊಂಡಿರ್ತೀರಲ್ಲ ಅದಕ್ಕೆ, ಹಾ, ಸರಿ ನೋಡಿ ಒಂದು ಎ.ಸಿ. ಪ್ರೊವೈಡ್ ಮಾಡಿಕೊಡಿ.ನೌಕರ: ಮಾಡಿಸ್ತೀನಿ ಸರ್ಅಧಿಕಾರಿ: ಮಾಡಿಸ್ಬೇಕ್ರಿ, ನಾಳೀಗಿ ಮಾಡಿಸಿದ್ರೆ ನಿಮಗೆ 28ರವರೆಗೆ ರಜೆ ಕೊಡ್ತೀನಿ ನೋಡ್ರಿ.ನೌಕರ: ಸರ್, ಬೆಳಿಗ್ಗೆ ಬರತೀನಿ, ರಜೆ ಬೇಕುಅಧಿಕಾರಿ: ಬನ್ನಿ, ಓಕೆ
VIDEO| ಆನೆಗಳ ಕಾದಾಟದ ವಿಡಿಯೋ ವೈರಲ್​ ಆಯಿತು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
