ಬೆಂಗಳೂರು:ರಾಜ್ಯದ ಜನರು ಹಾಗೂ ಆಡಳಿತ ಯಂತ್ರದ ನೆಮ್ಮದಿ ಕೆಡಿಸಿದ ಕರೊನಾವನ್ನು ಬಗ್ಗು ಬಡಿಯಲು ಹರಸಾಹಸ ಪಡುತ್ತಿರುವ ರಾಜ್ಯ ಸರ್ಕಾರ, ಒಂದು ವಾರದ ಮಟ್ಟಿಗಿನ ಲಾಕ್​ಡೌನ್ ಅವಧಿಯಲ್ಲಿ ತಾನೇನು ಮಾಡಬೇಕೆಂದು ಸ್ಪಷ್ಟ ಮಾಡಿಕೊಳ್ಳುತ್ತಿದೆ. ಕೇವಲ ಜನರನ್ನು ಬೀದಿಗೆ ಬಾರದಂತೆ ತಡೆದರೆ ಕರೊನಾ ನಿಯಂತ್ರಣ ಸಾಧ್ಯವಿಲ್ಲ, ಲಾಕ್​ಡೌನ್ ಮುಗಿಯುತ್ತಿದ್ದಂತೆ ಮತ್ತೆ ಪ್ರಕರಣ ಹೆಚ್ಚಾಗುತ್ತದೆ. ಈ ಹಿನ್ನೆಲೆಯಲ್ಲಿ ಪರಿಸ್ಥಿತಿ ನಿಯಂತ್ರಿಸಲು ಯೋಜನಾಬದ್ಧ ತಯಾರಿ ನಡೆಸಿದೆ.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅಧಿಕಾರಿಗಳ ಸಭೆ ನಡೆಸಿದ್ದು, ತಮಗೆ ನೀಡಿರುವ ಜವಾಬ್ದಾರಿಯಲ್ಲಿ ಆಗಿರುವ ವ್ಯತ್ಯಾಸಗಳನ್ನು ಸರಿಪಡಿಸಲು ಸೂಚನೆ ನೀಡಿದ್ದಾರೆ. ಸೋಂಕು ವ್ಯಾಪಕತೆ ವಿಚಾರದಲ್ಲಿ ವಿಶ್ವದ ಬೇರೆ ಬೇರೆ ಮಹಾನಗರ ಮತ್ತು ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಮತ್ತು ಬೆಂಗಳೂರಿನ ಸ್ಥಿತಿ ಮಾದರಿ ಎನ್ನುವಂತಿತ್ತು. ಕಳೆದ 10 ದಿನಗಳಲ್ಲಿ ಚಿತ್ರಣವೇ ಬದಲಾಯಿತು. ಹೀಗಾಗಿ ಮೊದಲು ಬೆಂಗಳೂರು ಮತ್ತು ಹೆಚ್ಚು ಪ್ರಕರಣಗಳಿರುವ ರಾಜ್ಯದ ಪ್ರಮುಖ ನಗರಗಳಿಗೆ ಸರ್ಕಾರ ಹೆಚ್ಚಿನ ಗಮನ ನೀಡಲು ಸರ್ಕಾರಿ ಆಡಳಿತ ಯಂತ್ರವನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳಲಾಗುತ್ತಿದೆ.
ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ರ್ಯಾಂಡಮ್ ಟೆಸ್ಟ್ ಹೆಚ್ಚಿಸುವುದು, ರ್ಯಾಪಿಡ್ ಟೆಸ್ಟ್ ಮಾಡುವುದು, ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ, ಅವರ ಪ್ರಥಮ ಮತ್ತು ದ್ವಿತೀಯ ಸಂರ್ಪತರನ್ನು ಕ್ವಾರಂಟೈನ್ ಮಾಡುವುದಕ್ಕೆ ಒತ್ತು ನೀಡಲಾಗುತ್ತದೆ. ಇನ್ನು ಆಸ್ಪತ್ರೆ, ಆಂಬುಲೆನ್ಸ್ ವ್ಯವಸ್ಥೆ ಬಗ್ಗೆ ಸರ್ಕಾರ ಸಾಕಷ್ಟು ಮುಜುಗರಕ್ಕೆ ಒಳಗಾಯಿತು. ಸ್ವಪಕ್ಷೀಯರಿಂದಲೇ ಟೀಕೆ ಎದುರಿಸಬೇಕಾಯಿತು. ಅಧಿಕಾರಿಗಳು- ಆಸ್ಪತ್ರೆ- ಆಂಬುಲೆನ್ಸ್ ನಡುವಿನ ಸಂವಹನ ಕೊರತೆಯಿಂದ ಹತ್ತು ಹಲವು ಮಂದಿ ಪ್ರಾಣ ಬಿಡಬೇಕಾಯಿತು.
ಇನ್ನು ಮುಂದೆ ಈ ಪ್ರಕರಣ ಮರುಕಳಿಸಿದಂತೆ ನೋಡಿಕೊಳ್ಳಲು ರಿಯಲ್ ಟೈಮ್ ಮಾಹಿತಿ ವ್ಯವಸ್ಥೆ ಜಾರಿ ಮಾಡಲಾಗುತ್ತಿದ್ದು, ಈಗಾಗಲೆ ಒಟ್ಟು ದಾಖಲೆ ಸಂಗ್ರಹಿಸಿ ಜನರ ಗಮನಕ್ಕೆ ತರುವ ಪ್ರಯತ್ನ ರಾಜ್ಯ ಕೋವಿಡ್ ವಾರ್ ರೂಂ ಕಡೆಯಿಂದ ನಡೆದಿದೆ. ಇದು ಇನ್ನೊಂದು ವಾರದಲ್ಲಿ ಇನ್ನಷ್ಟು ಸ್ಟ್ರೀಮ್ೈನ್ ಆಗಲಿದೆ. ಯಾವ ಆಸ್ಪತ್ರೆಯಲ್ಲಿ ಅಥವಾ ಕೋವಿಡ್ ಕೇರ್ ಸೆಂಟರ್​ಗಳಲ್ಲಿ ಎಷ್ಟು ಬೆಡ್ ಖಾಲಿ ಇದೆ, ಆಂಬುಲೆನ್ಸ್ ವ್ಯವಸ್ಥೆ ಎಲ್ಲವನ್ನು ಟ್ರಾ್ಯಕ್ ಮಾಡಿ ಜನರಿಗೆ ನಿಜ ದರ್ಶನ ಮಾಡಿಸಲಾಗುತ್ತದೆ.
ಬಿಬಿಎಂಪಿ ನಿರ್ವಹಣೆಯಲ್ಲಿ ಎಡವಿರುವುದನ್ನು ಗಮನಿಸಿದ ಸರ್ಕಾರ, ತಾನೇ ಮೇಲ್ವಿಚಾರಣೆ ಆರಂಭಿಸಿದೆ. ಖುದ್ದು ಮುಖ್ಯಕಾರ್ಯದರ್ಶಿ ಪರಿಸ್ಥಿತಿ ಗಮನಿಸುತ್ತಿದ್ದು, ಅಗತ್ಯತೆಗಳನ್ನು ತಕ್ಷಣವೇ ಪೂರೈಸಲು ತೀರ್ವನಿಸಿದ್ದಾರೆ. ಈಗಾಗಲೇ ಎಂಟು ವಲಯಗಳಿಗೆ ಐಎಎಸ್ ಅಧಿಕಾರಿಗಳು, ಸಚಿವರಿಗೆ ಉಸ್ತುವಾರಿ ನೀಡಿದ್ದು ಅವರು ಸಭೆಗಳನ್ನು ನಡೆಸಿ ಓರೆ ಕೋರೆಗಳನ್ನು ಸರಿಪಡಿಸುವ ಕೆಲಸ ಆರಂಭಿಸಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ಮನೆ ಮನೆ ಸರ್ವೆ ಮೂಲಕ ಸೋಂಕಿನ ಶಂಕೆ ಇರುವವರನ್ನು ಪತ್ತೆ ಮಾಡಬೇಕೆಂಬ ಆಲೋಚನೆ ಇದ್ದು, ಆಶಾ ಕಾರ್ಯಕರ್ತರ ಕೊರತೆ ನೀಗಿಸಲು ಸ್ವಯಂ ಸೇವಕರನ್ನು ಬಳಸಿಕೊಳ್ಳಲಾಗುತ್ತದೆ. ಬೆಂಗಳೂರು ನಗರದಲ್ಲಿ ಸಾವಿನ ಪ್ರಮಾಣ ಮಿತಿ ಮೀರುತ್ತಿದ್ದು, ಅದನ್ನು ನಿಯಂತ್ರಿಸಲು ಈ ಒಂದು ವಾರದಲ್ಲಿ ಆದ್ಯತೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇನ್ನೊಂದು ಮಹತ್ವ ಸಂಗತಿ ಎಂದರೆ, ತಜ್ಞರ ಅಭಿಪ್ರಾಯದಂತೆ ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಆಸ್ಪತ್ರೆಗಳನ್ನು ಸಜ್ಜುಗೊಳಿಸುವುದು, ಕೇರ್ ಸೆಂಟರ್ ನಿರ್ವಣದಂತಹ ಕಾರ್ಯವನ್ನು ಈ ವಾರದಲ್ಲಿ ಸಿದ್ಧಮಾಡಿಕೊಳ್ಳಲಾಗುತ್ತದೆ.
ಊರಲ್ಲಿ ಇಲ್ಲದವರ ಹೆಸರೂ ಸೋಂಕಿತರ ಪಟ್ಟಿಯಲ್ಲಿ
ಶಹಾಪುರ: ಜಿಲ್ಲೆಯಲ್ಲಿ ದಿನೇದಿನೆ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮಂಗಳವಾರ ಹುರಸಗುಂಡಗಿ ಗ್ರಾಮದಲ್ಲಿ ಅಚ್ಚರಿ ವಿಷಯ ಬೆಳಕಿಗೆ ಬಂದಿದ್ದು, ಗ್ರಾಮದಲ್ಲೇ ಇರದ ಮೂವರ ಹೆಸರು ಕರೊನಾ ಪಾಸಿಟಿವ್ ಇದ್ದವರ ಪಟ್ಟಿಯಲ್ಲಿ ಬಂದಿದೆ. ಮೂರ್ನಾಲ್ಕು ದಿನ ಹಿಂದೆ ಗ್ರಾಮಸ್ಥರ ಗಂಟಲ ದ್ರವದ ಮಾದರಿ ಸಂಗ್ರಹಿಸಲಾಗಿತ್ತು. ಈ ಪೈಕಿ 23 ಜನರಿಗೆ ಪಾಸಿಟಿವ್ ದೃಢಪಟ್ಟಿದ್ದು, ಆರೋಗ್ಯಾಧಿಕಾರಿಗಳು ಅವರನ್ನು ಕರೆತರಲು ಗ್ರಾಮಕ್ಕೆ ತೆರಳಿದರು. ಆದರೆ ಪಾಸಿಟಿವ್ ಬಂದ ಹೆಸರಲ್ಲಿರುವ ಮೂವರು ಐದು ತಿಂಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದರೂ ಅವರ ಮನೆ ಹುಡುಕಲು ಮುಂದಾದರು. ಅಸಲಿಗೆ ಅವರು ಗ್ರಾಮಕ್ಕೆ ಬರದೆ ಐದಾರು ತಿಂಗಳಾಗಿದೆ. ಹೀಗಿರುವಾಗ ಪಾಸಿಟಿವ್ ಲಿಸ್ಟ್​ನಲ್ಲಿ ಹೆಸರು ಬಂದಿರುವುದು ಕ್ಷಣಕಾಲ ಗ್ರಾಮಸ್ಥರು ಸೇರಿ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ದಂಗು ಬಡಿಸುವಂತೆ ಮಾಡಿತು. ಈ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡ ಗ್ರಾಮಸ್ಥರು, ಬೇಕಂತಲೇ ಜನರನ್ನು ಭಯಗೊಳಿಸುವ ಷಡ್ಯಂತ್ರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಾವಿರದ ಗಡಿ ದಾಟಿದ ಚೇತರಿಕೆ ಸಂಖ್ಯೆ; ರಾಜ್ಯದಲ್ಲಿ 1,142 ಜನರು ಆಸ್ಪತ್ರೆಯಿಂದ ಡಿಸ್ಚಾರ್ಜ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 15 =
Remember me
