| ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದಲ್ಲಿರುವ ಬ್ರಹ್ಮಗಿರಿ ಬೆಟ್ಟ ಕುಸಿತಕ್ಕೆ ಈಗ ವಿಭಿನ್ನ ವ್ಯಾಖ್ಯಾನ ಹೊರಹೊಮ್ಮಿದೆ. ಬೆಟ್ಟದಲ್ಲಿ ಅವೈ್ಞಾನಿಕವಾಗಿ ಇಂಗá-ಗುಂಡಿ ನಿರ್ಮಾಣ ಮಾಡಿದ್ದೇ ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಕಳೆದ ಆಗಸ್ಟ್​ನಲ್ಲಿ ಇದೇ ಬೆಟ್ಟದಲ್ಲಿ ಬಿರುಕು ಬಿಟ್ಟಿತ್ತು. ಅದೇ ಭೂಭಾಗ ಈ ವರ್ಷ ಕೊಚ್ಚಿಕೊಂಡು ಹೋದ ಪರಿಣಾಮ ಅರ್ಚಕ ಟಿ.ಎಸ್. ನಾರಾಯಣಾಚಾರ್ ಸೇರಿ ಐವರು ಭೂಸಮಾಧಿ ಆಗಿದ್ದಾರೆ.
2012-13ರಲ್ಲಿ ಬಿಜೆಪಿಯ ಹಿರಿಯ ಮುಖಂಡ ಎಂ.ಬಿ. ದೇವಯ್ಯ ನೇತೃತ್ವದಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರಿಗೆ ಗಮನ ಸೆಳೆಯುವ ಪತ್ರ ಬರೆಯಲಾಗಿತ್ತು. ಕಾವೇರಿ ನದಿ ಉಗಮ ಸ್ಥಳದಲ್ಲಿ ನೀರಿನ ತೇವಾಂಶ ಕಡಿಮೆಯಾಗುತ್ತಿದೆ. ತಲಕಾವೇರಿಯ ಸುತ್ತಮುತ್ತಲಿನ ಬೆಟ್ಟಗಳಲ್ಲಿ ಇಂಗು ಗುಂಡಿ ತೆಗೆಯುವಂತೆ ಕೋರಿದ್ದರು. ತದನಂತರ ರಾಜ್ಯ ಸರ್ಕಾರ ಅರಣ್ಯ ಇಲಾಖೆಗೆ ಬಿಡುಗಡೆ ಮಾಡಿದ ಅನುದಾನ ಬಳಸಿಕೊಂಡು, ಜೆಸಿಬಿ ಮೂಲಕ ಬೆಟ್ಟದಲ್ಲಿ ಇಂಗು ಗುಂಡಿ ತೆಗೆಯಲಾಯಿತು. ಗಜಗಿರಿ ಬೆಟ್ಟದ ಒಡಲನ್ನು ಜೆಸಿಬಿ ಯಂತ್ರಗಳು ಬಗೆದು ಬ್ರಹ್ಮಗಿರಿ ತಪ್ಪಲಿನವರೆಗೂ ಅವೈಜ್ಞಾನಿಕವಾಗಿ ಇಂಗುಗುಂಡಿ ತೋಡಿದವು. ಕಂದಾಯ ಇಲಾಖೆ ಜಾಗದಲ್ಲಿ ಅರಣ್ಯ ಇಲಾಖೆಯವರು ಈ ಕಾರ್ಯಾಚರಣೆ ಕೈಗೊಂಡರು. ಆ ಮೂಲಕ ಸ್ವಾಭಾವಿಕವಾಗಿ ನೀರು ಹರಿಯುವ ದಿಕ್ಕನ್ನೇ ಬದಲಿಸಿದರು. ಇತ್ತ ಲೋಕೋಪಯೋಗಿ ಇಲಾಖೆಯವರು ರಸ್ತೆಯ ಬದಿಯಲ್ಲಿ ಚರಂಡಿ ಶುಚಿಗೊಳಿಸದೆ ನೀರಿನ ಸರಾಗ ಹರಿಯುವಿಕೆಗೆ ಬೇಕಾದ ಕಾರ್ಯ ಮಾಡಲಿಲ್ಲ. ಇನ್ನು ಕೆಲವರು ಪರಿಸರ ಸಂರಕ್ಷಣೆ ಹೆಸರಿನಲ್ಲಿ ಬೆಟ್ಟ ಅಗೆದು ಗಿಡ ನೆಟ್ಟರು. ತಲಕಾವೇರಿಯ ಪರಿಸರದಲ್ಲಿ ಯಾವ ರೀತಿಯ ಗಿಡ ಬೆಳೆಯಬೇಕೆಂಬುದು ಪ್ರಕೃತಿಗೆ ಗೊತ್ತಿದೆ. ತನ್ನಿಂದ ತಾನೇ ಅದರ ಇಷ್ಟಕ್ಕೆ ಗಿಡ ಮರಗಳು ಬೆಳೆಯುತ್ತದೆ. ಇದರ ಜ್ಞಾನವಿಲ್ಲದವರು ಪ್ರಕೃತಿಯ ವಿರುದ್ಧವಾಗಿ ನಡೆದುಕೊಂಡಿದ್ದಾರೆಂಬ ಟೀಕೆ ಭಕ್ತ ಸಮೂಹದಿಂದ ವ್ಯಕ್ತವಾಗಿದೆ.
ನೂರಾರು ಮನೆಗಳು ಜಲಾವೃತ
ಕೊಡಗು ಜಿಲ್ಲೆಯಲ್ಲಿ ಶುಕ್ರವಾರವೂ ಮಳೆಯ ಆರ್ಭಟ ಮುಂದುವರಿದಿದ್ದು, ಕಾವೇರಿ ನದಿ ಪ್ರವಾಹ ಹೆಚ್ಚಳದಿಂದ ನೂರಾರು ಮನೆಗಳು ಜಲಾವೃತವಾಗಿವೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ 180 ಮಿ.ಮೀ. ಸರಾಸರಿ ಮಳೆಯಾಗಿದೆ. ಭಾಗಮಂಡಲ ವ್ಯಾಪ್ತಿಯಲ್ಲಿ ಬರೋಬ್ಬರಿ 400 ಮಿ.ಮೀ. ಮಳೆಯಾಗಿದೆ. ಪರಿಣಾಮ, ಶ್ರೀ ಭಗಂಡೇಶ್ವರ ದೇವಾಲಯ ಒಳಭಾಗಕ್ಕೂ ನೀರು ನುಗ್ಗಿದೆ. ಕಾವೇರಿ ನದಿ ಪ್ರವಾಹದಿಂದಾಗಿ ಚೆರಿಯಪರಂಬು, ಕರಡಿಗೋಡು, ಬೆಟ್ಟದಕಾಡು, ಕೂಡುಗದ್ದೆ, ಕುಂಬಾರಗುಂಡಿ ಸೇರಿ ಹಲವು ಪ್ರದೇಶಗಳು ಜಲಾವೃತವಾಗಿವೆ.
ಮಹಾ ಸಂಕಷ್ಟ ತಡೆಗೆ ಅಧಿಕಾರಿಗಳ ನೇಮಕ
ಬೆಳಗಾವಿ: ಸಂಭವನೀಯ ಪ್ರವಾಹ ನಿಯಂತ್ರಿಸಲು ಹಾಗೂ ಮಹಾರಾಷ್ಟ್ರ ರಾಜ್ಯಗಳ ಜಲಾಶಯಗಳ ಮಾಹಿತಿ ಸಂಗ್ರಹಿಸಲು ರಾಜ್ಯದ ಓರ್ವ ಅಧಿಕಾರಿಯನ್ನು ನೇಮಿಸಲಾಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮಾಹಿತಿ ನೀಡಿದರು. ಉಭಯ ರಾಜ್ಯಗಳು ಈ ಹಿಂದೆ ಸಭೆ ನಡೆಸಿದ್ದಾಗಲೂ ಇದೇ ವಿಚಾರವಾಗಿ ಚರ್ಚೆ ನಡೆಸಿದ್ದೆವು. ಅದರಂತೆ ರಾಜ್ಯದ ಓರ್ವ ಅಧಿಕಾರಿಯನ್ನು ಮಹಾರಾಷ್ಟ್ರದ ಜಲಾಶಯಗಳಿಗೆ ಮತ್ತು ಮಹಾರಾಷ್ಟ್ರದ ಓರ್ವ ಅಧಿಕಾರಿಯನ್ನು ಕರ್ನಾಟಕದಲ್ಲಿ ನಿಯೋಜಿಸಲಾಗಿದೆ ಎಂದರು. ಮಹಾರಾಷ್ಟ್ರದ ಜಲಾಶಯಗಳಲ್ಲಿ ನೀರಿನ ಪ್ರಮಾಣ ಮತ್ತು ನೀರು ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಇಬ್ಬರೂ ಅಧಿಕಾರಿಗಳು ಸಮನ್ವಯತೆ ಸಾಧಿಸಿ, ಸಂಭವನೀಯ ಪ್ರವಾಹ ನಿಯಂತ್ರಿಸಲು ಯತ್ನಿಸಲಿದ್ದಾರೆ ಎಂದು ತಿಳಿಸಿದರು.
ತುಂಗಭದ್ರಾ ನದಿ ಮಧ್ಯೆ ಸಿಲುಕಿದ ಕಪಿಗಳು
ತುಂಗಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದ್ದು ಪ್ರವಾಹದ ಬಿಸಿ ಕೋತಿಗಳಿಗೂ ತಟ್ಟಿದೆ. ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ರಾಜನಹಳ್ಳಿ ಬಳಿ ಹೊಳೆಯ ಮಧ್ಯೆ ಇರುವ ಮರದಲ್ಲಿ 60ಕ್ಕೂ ಹೆಚ್ಚು ಮುಷ್ಯಗಳು ಸಿಕ್ಕಿ ಹಾಕಿಕೊಂಡಿವೆ. ಅವುಗಳಿಗೆ ಎರಡು ದಿನಗಳಿಂದ ಆಹಾರವಿಲ್ಲದಂತಾಗಿದೆ. ಸ್ಥಳಕ್ಕೆ ಧಾವಿಸಿದ ಅರಣ್ಯ ಇಲಾಖೆ ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಕಪಿಗಳ ರಕ್ಷಣೆಗೆ ಕಾರ್ಯಾಚರಣೆ ನಡೆಸಿದರು. ಬೋಟ್​ನಲ್ಲಿ ತೆರಳಿದ ಸಿಬ್ಬಂದಿ ಕೋತಿಗಳನ್ನು ಮರದಿಂದ ಇಳಿಸಲು ಪ್ರಯತ್ನಿಸಿದಾಗ ಅವು ಬೇರೆ ಮರಗಳಿಗೆ ಜಿಗಿದವು. ಆ ಪ್ರಯತ್ನ ವಿಫಲವಾಯಿತು. ಬಲೆಹಾಕಿದರೂ ಸಿಗಲಿಲ್ಲ.
ಕಾರವಾರದಲ್ಲಿ ಗುಡ್ಡಕುಸಿತ, 200 ಮರಗಳು ನಾಶ
ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆ ಕಾರಣಕ್ಕೆ ಕಾರವಾರ ತಾಲೂಕು ದೇವಳಮಕ್ಕಿ ಗ್ರಾಪಂ ವ್ಯಾಪ್ತಿಯ ನಗೆ ಗ್ರಾಮದಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿದ್ದರಿಂದ ಅರಣ್ಯ ಪ್ರದೇಶದಲ್ಲಿನ ಸುಮಾರು 200 ಮರಗಳು ನಾಶವಾಗಿವೆ. ಸುಮಾರು 6 ಎಕರೆ ಕಾಡಿದ್ದು, ಮಣ್ಣು ಸುಮಾರು 1 ಕಿಮೀ ದೂರವರೆಗೂ ಗುಡ್ಡ ಕುಸಿದಿದೆ. ಮಣ್ಣಿನ ರಾಶಿ ಗುಡ್ಡದ ಬುಡದ ಹಳ್ಳದ ಸಮೀಪ ಬಂದು ತುಂಬಿಕೊಂಡಿದೆ. ಹಳ್ಳದ ನೀರು ಮಣ್ಣು ಮಿಶ್ರಿತವಾಗಿ ಗದ್ದೆಗಳಿಗೆ ನುಗ್ಗುತ್ತಿದ್ದು, ಜನ ಆತಂಕಕ್ಕೆ ಒಳಗಾಗಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 4 =
Remember me
