ಶಿವಮೊಗ್ಗ:ರಾಜ್ಯದಲ್ಲಿ ಕೇಜ್ರಿವಾಲ್​ ಅವರನ್ನು ನಂಬಿ ಸರ್ಕಾರ ತರಲು ಸಾಧ್ಯವಿದೆಯೇ, ಇಷ್ಟು ಕೆಲಸ ಮಾಡಿದ ನಾವೇ ಏನೂ ಮಾಡಲು ಸಾಧ್ಯವಾಗಲಿಲ್ಲ ಇನ್ನು ಅವರು ದಿಲ್ಲಿಯಿಂದ ಬಂದು ಏನು ಮಾಡಲು ಸಾಧ್ಯ ಎಂದು ಮಾಜಿ ಮುಖ್ಯಮಂತ್ರಿ ಎಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಿನ್ನೆ ಸ್ಟೇಜ್ ನಲ್ಲಿ ಕ್ರೇಜಿವಾಲ್ ಅಕ್ಕಪಕ್ಕ ನಿಲ್ಲಿಸಿಕೊಂಡಿದ್ರಲ್ಲಾ, ಅವರನ್ನು ಕಟ್ಟಿಕೊಂಡು ರಾಜ್ಯದಲ್ಲಿ ಜೀರೋ ಪರ್ಸಂಟ್ ಸರಕಾರ ತರಲು ಆಗುತ್ತದಾ.ರಾಜ್ಯದಲ್ಲಿ ಆಮ್ ಆದ್ಮಿ ಬಂದು ಏನು ಮಾಡುತ್ತದೆ.ಹಲವು ಕೆಲಸ ಕೊಟ್ಟ ನಮ್ಮ‌ ಕೈಯಲ್ಲಿ ಏನು ಮಾಡಲು ಆಗಲಿಲ್ಲ.ಇನ್ನು ದೆಹಲಿಯಿಂದ ಬಂದು ಏನು ಮಾಡಲು ಆಗುತ್ತದೆ ಎಂದರು.
ದೆಹಲಿಯ ರಾಜಕೀಯವೆ ಬೇರೆ, ರಾಜ್ಯದ ರಾಜಕೀಯವೆ ಬೇರೆ.ಈ ಸರಕಾರ ಬಂದ ಮೇಲೆ 100 ಕ್ಕೆ 65 ರೂಪಾಯಿ ಮಧ್ಯವರ್ತಿಗಳಿಗೆ ಹೋಗ್ತಿದೆ.ಕೇವಲ 40 ಪರ್ಸೆಂಟ್ ಅಲ್ಲ 65 ಪರ್ಸೆಂಟ್ ಹೋಗುತ್ತೆ.35 ಪರ್ಸೆಂಟ್ ಕೆಲಸ ಅಗಬಹುದು.ಇದು ಎಲ್ಲರಿಗೂ ಗೊತ್ತಿರುವ ವಿಷಯ.ಗುತ್ತಿಗೆದಾರರು ಒಂದು ವರ್ಷ ಕೆಲಸ ನಿಲ್ಲಿಸಿದರೆ ಸರಿ ಹೋಗುತ್ತದೆ ಎಂದು ಹೇಳಿದರು.
ನನ್ನ ಕಾಲಾವಧಿಯಲ್ಲಿ ಪ್ರತಿ ತಿಂಗಳು ಎಲ್ ಒಸಿ ಬಿಡುಗಡೆ ಮಾಡುತ್ತಿದೆ.2008 ರಲ್ಲಿ ಬಿಜೆಪಿ ಸರಕಾರದಲ್ಲಿ ನಡೆದ ಅಕ್ರಮದ ಬಗ್ಗೆ ಹೋರಾಟ ಮಾಡಿದವರು ನಾವು.ಸಿದ್ದರಾಮಯ್ಯ ಆರಾಮಾಗಿ ಮನೆಯಲ್ಲಿ ಮಲಗಿದ್ದರು.ನಮ್ಮ ಹೋರಾಟದ ಪ್ರತಿಫಲವಾಗಿ ಅವರು ಅಧಿಕಾರಕ್ಕೆ ಬಂದರು ಎಂದು ಹೇಳಿದರು.
ರಾಜ್ಯದಲ್ಲಿ ಕಳೆದ ಒಂದೂವರೆ ಎರಡು ತಿಂಗಳಿನಿಂದ ಅಹಿತಕರ ಘಟನೆ ನಡೆಯುತ್ತಿವೆ.ಸರಕಾರ ಬಿಗಿ ಕ್ರಮ ಕೈಗೊಳ್ಳಬೇಕಿದೆ.ಪ್ರಾರಂಭಿಕ ಹಂತದಲ್ಲೇ ಹಲವು ಬಾರಿ ಸರಕಾರಕ್ಕೆ ಸಲಹೆ ಕೊಟ್ಟಿದ್ದೆ.ಸರಕಾರದ ನಿರ್ಲಕ್ಷ್ಯ ಮನೋಭಾವನೆ ಸಹ ಘಟನೆಗೆ ಕಾರಣ.ಅಹಿತಕರ ಘಟನೆಗೆ ಕಾಣದ ಕೈಗಳು ಕೆಲಸ ಮಾಡುತ್ತಿವೆ.ಸಮಾಜದ ಎಲ್ಲಾ ವರ್ಗದಲ್ಲು ವಿಶ್ವಾಸದ ಕೊರತೆ ಕ್ಷೀಣಿಸುವ ವಾತಾವರಣ ಕಾಣುತ್ತಿದೆ ಎಂದರು.
ಘಟನೆಯಲ್ಲಿ ಯಾರು ಕಾರಣಕರ್ತರು ಇದ್ದಾರೆ. ಜೀಪ್ ಮೇಲೆ ನಿಂತು ಉದ್ರೇಕಗೊಳಿಸುದ ವ್ಯಕ್ತಿಯನ್ನು ಮೊದಲು ಹಿಡಿಯಿರಿ ‌ಎಂದಿದ್ದೆ.ನಿನ್ನೆ ಆ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.ರಾಜ್ಯದಲ್ಲಿ ಸರ್ವ ಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿಯವರು ಬೆಂಕಿ ಹಚ್ಚುತ್ತಿದ್ದಾರೆ.ಕಾಂಗ್ರೆಸ್ ನವರು ಅದಕ್ಕೆ ಪೆಟ್ರೋಲ್ ಸುರಿಯುತ್ತಿದ್ದಾರೆ.ಇದಕ್ಕೆ ನಾಡಿನ‌ ಜನತೆ ಅವಕಾಶ ಕೊಡದೇ ಎಚ್ಚೆತ್ತುಕೊಳ್ಳಬೇಕು.ಈ ವಿಷಯದಲ್ಲಿ ಏನು ಸತ್ಯಾಂಶ ಇದೆ ಅದನ್ನು ಸರ್ಕಾರ ಪ್ರಾಮಾಣಿಕವಾಗಿ ಜನತೆ ಮುಂದೆ ಇಡಬೇಕು ಎಂದು ಒತ್ತಾಯಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + twenty =
Remember me
