ಯಾದಗಿರಿ:ಉಡುಪಿ ಕಾಲೇಜು ಹಾಸ್ಟೆಲ್​ನ ಟಾಯ್ಲೆಟ್​ನಲ್ಲಿ ವಿಡಿಯೋ ಮಾಡಿದ್ದ ಪ್ರಕರಣ ಸಂಬಂಧ ರಾಜಕೀಯ ವಾಗ್ದಾಳಿ, ಆರೋಪ-ಪ್ರತ್ಯಾರೋಪಗಳು ಮುಂದುವರಿದಿದ್ದು, ಇಂದು ಅದು ಮತ್ತೊಂದು ಮಜಲಿಗೆ ತಲುಪಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿಧಾನಪರಿಷತ್ ಸದಸ್ಯ ರವಿಕುಮಾರ್ ಪ್ರಿಯಾಂಕ್ ಖರ್ಗೆಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ.
ಇದನ್ನೂ ಓದಿ:ಯಶಸ್ವಿನಿ ಯಾವ ಇವೆಂಟ್​ಗೂ ಪುಗ್ಸಟ್ಟೆ ಬಂದಿಲ್ಲ: ಮಾಸ್ಟರ್ ಆನಂದ್ ಪತ್ನಿ ವಿರುದ್ಧ ನಿಶಾ ನರಸಪ್ಪ ಆರೋಪ
ಯಾದಗಿರಿಯಲ್ಲಿ ಇಂದು ಮಾತನಾಡಿದ ರವಿಕುಮಾರ್, ಪ್ರಿಯಾಂಕ್​ ಖರ್ಗೆ ಬಹಳ ಬುದ್ಧಿವಂತರು. ಅವರಿಗೆ ಪ್ರೂಫ್​ ಏನಿದೆ ಅಂತ ನಾನು ಹೇಳುತ್ತೇನೆ ಎಂದರು. ಕಳೆದ ಒಂದು ವರ್ಷದಿಂದ ನಡೀತಾ ಇದೆ ಅಂತ ವಿದ್ಯಾರ್ಥಿನಿಯರು ಹೇಳಿದ್ದಾರೆ. ತಪ್ಪಾಗಿದೆ ಅಂತ ಆರೋಪಿಗಳು ಕಾಲೇಜ್ ಮ್ಯಾನೇಜ್‌ಮೆಂಟ್​ಗೆ ಪತ್ರ ಬರೆದಿದ್ದಾರೆ, ಇದಕ್ಕಿಂತ ಪ್ರೂಫ್​ ಏನು ಬೇಕು ಪ್ರಿಯಾಂಕ್ ಖರ್ಗೆಗೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ಅದೇ ಹಿಂದೂ ವಿದ್ಯಾರ್ಥಿನಿಯರೇ ಮೂವರು ಅಲ್ಪಸಂಖ್ಯಾತ ವಿದ್ಯಾರ್ಥಿನಿಯರ ವಿಡಿಯೋ ಮಾಡಿದ್ದಿದ್ರೆ ನೀವೇನ್ ಮಾಡ್ತಿದ್ರಿ? ಇಷ್ಟೊಂದು ತುಷ್ಟೀಕರಣ ರಾಜಕಾರಣ ಮಾಡೋದಾ? ಇಷ್ಟೊಂದು ಮತ ಬ್ಯಾಂಕ್ ಓಲೈಕೆ ಮಾಡೋದಾ? ಮಹಿಳೆಯರ ಸುರಕ್ಷತೆ ಬಲಿ ಕೊಟ್ಟು ರಾಜಕಾರಣ ಮಾಡುವುದಾದರೆ ನಿಮ್ಮ ರಾಜಕಾರಣ ರಾಜ್ಯಕ್ಕೆ ಅವಶ್ಯಕತೆ ಇಲ್ಲ ಎಂದು ರವಿಕುಮಾರ್ ಹೇಳಿದರು. ಹಣ ಮತ್ತು ಹೆಣದ ಮೇಲೆ ಕಾಂಗ್ರೆಸ್​ ರಾಜಕಾರಣ ಮಾಡುತ್ತಿದೆ, ಎರಡೇ ತಿಂಗಳಲ್ಲಿ ಕಾಂಗ್ರೆಸ್​ಗೆ ಹಣದ ಅಮಲು ಬಂದಿದೆ ಎಂದೂ ಅವರು ಹೇಳಿದರು.
ಹೆಂಡತಿಗೆ ಹೆದರಿ ಮನೆ ಬಿಟ್ಟು ಒಂದೂವರೆ ವರ್ಷ ನಾಪತ್ತೆಯಾಗಿದ್ದ ಗಂಡ!

ಇದು ನಾಯಿಯಲ್ಲ, ನಾಯಿಯಂತೆ ಕಾಣುವ ಮನುಷ್ಯ: 40 ದಿನಗಳೊಳಗೆ ಆಯ್ತು ರೂಪಾಂತರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + one =
Remember me
