ನವದೆಹಲಿ:ಮೆಟಾ ಸಂಸ್ಥೆ ಅಧೀನದಲ್ಲಿರುವ ವಾಟ್ಸ್ಆ್ಯಪ್​ ಕೆಲ ಗಂಟೆಗಳಿಂದ (ಅ.25) ಸ್ಥಗಿತಗೊಂಡಿತ್ತು. ದೇಶಾದ್ಯಂತ ಬಳಕೆದಾರರು ಈ ಬಗ್ಗೆ ರಿಪೋರ್ಟ್ ಮಾಡಿದ್ದರು. ಸುಮಾರು 12.30ಕ್ಕೆ ನಿಂತುಹೋಗಿದ್ದ ವಾಟ್ಸಪ್​ ಮಧ್ಯಾಹ್ನ 2.16 ಸುಮಾರಿಗೆ ಮತ್ತೆ ಕಾರ್ಯ ನಿರ್ವಹಿಸತೊಡಗಿದೆ.
ಡೌನ್ ಡಿಟೆಕ್ಟರ್​ ಎನ್ನುವ ಸಂಸ್ಥೆ (ವೆಬ್​ಸೈಟ್​) ಪ್ರಕಾರ ಇಂದು ಮಧ್ಯಾಹ್ನ 12.30ರಿಂದ ವಾಟ್ಸ್ಆ್ಯಪ್​​ ಸ್ಥಗಿತಗೊಂಡಿತ್ತು. ಈ ವೆಬ್​ಸೈಟ್​ನ ಮಾಹಿತಿ ಪ್ರಕಾರ ಮುಂಬೈ, ದೆಹಲಿ, ಕೋಲ್ಕತ್ತ, ಬೆಂಗಳೂರು, ಚೆನ್ನೈ, ಹೈದರಾಬಾದ್ ಜೊತೆಗೆ ನಾಗ್ಪುರ ಮತ್ತು ಲಖ್ನೌ ಸೇರಿದಂತೆ ಇತರೆ ನಗರಗಳಲ್ಲಿ ಸಮಸ್ಯೆ ಎದುರಾಗಿತ್ತು.
ಈ ವಿಷಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮೆಟಾ ಸಂಸ್ಥೆಯ ವಕ್ತಾರ ‘ನಾವು ಸಂದೇಶ ಕಳಿಸುವ ವಿಷಯದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ವಾಟ್ಸ್ಆ್ಯಪ್​ ಅನ್ನು ಶೀಘ್ರದಲ್ಲಿಯೇ ಎಲ್ಲರೂ ಬಳಸಲು ಸಾಧ್ಯವಾಗುತ್ತದೆ’ ಎಂದು ಹೇಳಿದ್ದರು. ಈಗ ವಾಟ್ಸಪ್ ಮತ್ತೆ ಸೇವೆ ಪ್ರಾರಂಭಿಸಿದರೂ ಕೆಲವು ಗ್ಲಿಚ್​ಗಳಿವೆ ಎಂದು ಹೇಳಲಾಗುತ್ತಿದೆ.(ಏಜೆನ್ಸೀಸ್)
ವಾಟ್ಸ್​ಆ್ಯಪ್​ಗೆ ಗ್ರಹಣ: ಮೆಸೇಜ್​ ಕಳಿಸಲಾಗದೆ ಪರದಾಡಿದ ಬಳಕೆದಾರರು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
