ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಹೊರಬೀಳುತ್ತಿದ್ದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಮುಂದೇನು ಎಂಬ ಬೃಹದಾಕಾರದ ಪ್ರಶ್ನೆ ಉದ್ಬವಿಸುತ್ತದೆ. ಯಥೇಚ್ಛವಾಗಿರುವ ಅವಕಾಶಗಳ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಮೂಡುತ್ತದೆ. ಮಕ್ಕಳ ಭವಿಷ್ಯಕ್ಕೆ ಯಾವುದು ಉತ್ತಮ? ಎನ್ನುವುದರ ಕುರಿತುವಿಜಯವಾಣಿಮತ್ತುದಿಗ್ವಿಜಯ ನ್ಯೂಸ್ 24/7ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕಜಿ.ಎಂ. ಗಣಾಚಾರಿ,ಇಲಾಖೆಯ ಜಂಟಿ ನಿರ್ದೇಶಕ (ಶೈಕ್ಷಣಿಕ)ಎನ್.ರಾಜು, ತಾಂತ್ರಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕಡಾ.ವೈ.ಎನ್.ದೊಡ್ಡಮನಿಭಾಗವಹಿಸಿ ವಿದ್ಯಾರ್ಥಿಗಳು ಮತ್ತು ಪಾಲಕರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.
ಪ್ರಶ್ನೆ:ನಾನು ಪಿಸಿಎಂಬಿ ವಿಭಾಗದಲ್ಲಿ ಪ್ರಥಮ ಪಿಯುಸಿಯಲ್ಲಿ ಉತ್ತೀರ್ಣಳಾಗಿದ್ದು, ಭವಿಷ್ಯದಲ್ಲಿ ವೈದ್ಯಳಾಗಬೇಕೆಂದು ಕನಸು ಕಂಡಿದ್ದೇನೆ. ಯಾವ ವಿಷಯದಲ್ಲಿ ಕಲಿತರೆ ಉತ್ತಮ?-ಅಮೃತಾ ಗೋಕರ್ಣಉತ್ತರ:ಮುಂದೆ ನೀಟ್ ಪರೀಕ್ಷೆ ಎದುರಿಸಿ ಎಂಬಿಬಿಎಸ್ ಓದಬೇಕು. ಇದಲ್ಲದೇ, ಬಿಡಿಎಸ್, ಹೋಮಿಯೋಪತಿ, ಯೋಗ, ಮೆಡಿಸೀನ್​ಗೆ ಸಂಬಂಧಿಸಿದ ಸಾಕಷ್ಟು ಕೋರ್ಸ್​ಗಳು ಇವೆ.
ಪ್ರಶ್ನೆ:ಬಿಎಸ್​ಸ್ಸಿಯಲ್ಲಿ ಸಿಬಿಝೆಡ್ ಮಾಡಿದರೆ ಮುಂದೆ ಯಾವ ಕ್ಷೇತ್ರದಲ್ಲಿ ಸಾಮಾನ್ಯವಾಗಿ ಕೆಲಸ ಸಿಗುತ್ತದೆ?–ಖುಷಿ, ಉತ್ತರ ಕನ್ನಡಉ:ಸಿಬಿಝೆಡ್​ನಲ್ಲಿ ಪದವಿ ಪಡೆದ ಬಳಿಕ ವೆಟರ್​ನರಿ, ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶಗಳಿವೆ. ಸಿಬಿಝೆಡ್ ವಿಭಾಗದಲ್ಲಿ ಪ್ರಾಣಿಶಾಸ್ತ್ರ ಮತ್ತು ಸಸ್ಯಶಾಸ್ತ್ರ ವಿಷಯಗಳಿರುತ್ತದೆ. ಸಿಬಿಝೆಡ್ ತೆಗೆದುಕೊಂಡು ಬಿ.ಎಡ್ ಮಾಡಿದರೆ ಶಿಕ್ಷಕರಾಗಬಹುದು.
ಪ್ರಶ್ನೆ:ನನ್ನ ಮಗಳು ಎಸ್ಸೆಸ್ಸೆಲ್ಸಿಯಲ್ಲಿ ಶೇ.58 ಅಂಕಗಳು ಬಂದಿದೆ. ಮುಂದೆ ಕಾಮರ್ಸ್ ವಿಭಾಗದಲ್ಲಿ ಪಿಯುಸಿ ವ್ಯಾಸಂಗ ಅಥವಾ ಡಿಪ್ಲೊಮಾ ಮಾಡಲು ಮುಂದಾಗಿದ್ದಾಳೆ. ಈ ಎರಡರಲ್ಲಿ ಯಾವ ಕ್ಷೇತ್ರದಲ್ಲಿ ಮುಂದೆ ಒಳ್ಳೆಯ ಉದ್ಯೋಗವಕಾಶ ಸಿಗಬಹುದು?-ದೀಪಾ, ತುಮಕೂರುಉ:ಇತ್ತೀಚೆಗೆ ಕಾಮರ್ಸ್​ಗೂ ಹೆಚ್ಚಿನ ಬೇಡಿಕೆಯಿದೆ. 3 ವರ್ಷದ ಡಿಪ್ಲೊಮಾ ಕೋರ್ಸ್​ಗೆ ಈಗಾಗಲೇ ನೇಮಕಾತಿ ಆರಂಭವಾಗಿದೆ. ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್ ಸೇರಿ ಹಲವು ವಿಭಾಗದಲ್ಲಿ ಕಲಿಯಯಲು ಅವಕಾಶಗಳಿವೆ. ಮುಂದೆ ಕೆಲಸಕ್ಕೆ ಹೋಗಬಹುದು ಅಥವಾ ದ್ವಿತೀಯ ವರ್ಷದ ಇಂಜಿನಿಯರಿಂಗ್​ನಲ್ಲಿ (ಬಿಇ) ಶಿಕ್ಷಣ ಮುಂದುವರಿಸಲೂ ಅವಕಾಶವಿದೆ.
ಪ್ರಶ್ನೆ:ಸದ್ಯ ಪಿಯುಸಿಯಲ್ಲಿ ಪಿಸಿಎಂಸಿ ವಿಭಾಗದಲ್ಲಿ ಕಲಿಯುತ್ತಿದ್ದೇನೆ. ಮುಂದೆ ಕಂಪ್ಯೂಟರ್ ಸಂಬಂಧಿತ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಕೋರ್ಸ್ ಮಾಡಬಹುದು?-ತೇಜಸ್, ಬೆಂಗಳೂರು.ಉ:ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ (ಬಿಸಿಎ) ತೆಗೆದುಕೊಂಡರೆ ಉತ್ತಮ. ಇದರಲ್ಲಿ ಎಂಸಿಎ ಮಾಡಲು ಅವಕಾಶಗಳಿವೆ. ಕಾಮರ್ಸ್ ವಿಷಯದಲ್ಲಿ ಕಂಪ್ಯೂಟರ್ ಉಪಯೋಗಿಸಿ ಚಾರ್ಟೆಡ್ ಎಕೌಂಟ್ ವ್ಯಾಸಂಗ ಮಾಡಿದರೂ ಹೆಚ್ಚಿನ ಬೇಡಿಕೆಯಿದೆ.
ಪ್ರಶ್ನೆ:ಕಲಾ ವಿಭಾಗದಲ್ಲಿ (ಎಚ್​ಇಪಿಎಸ್) ದ್ವಿತೀಯ ಪಿಯುಸಿ ಮುಗಿಸಿದ್ದು, ಮುಂದೆ ಯಾವ ಕೋರ್ಸ್ ಮಾಡಬೇಕೆಂಬ ಗೊಂದಲಗಳಿವೆ. ಇದಕ್ಕೆ ಪರಿಹಾರ ಸೂಚಿಸಬಹುದೇ?-ಲಲಿತಾಉ: ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಿಮ್ಮ ಆಸಕ್ತಿ ಇರುವ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳಿ. ಬಿಎ ವ್ಯಾಸಂಗ ಮಾಡುವುದರ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಬರೆಯಬಹುದು. ಬಿಎ ಮಾಡಿ ಬಿ.ಎಡ್ ಮಾಡಿದರೆ ಶಿಕ್ಷಕರಾಗಬಹುದು.
ಪ್ರಶ್ನೆ:ನನ್ನ ಮಗಳು ಪಿಸಿಎಂಬಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಇಂಜಿನಿಯರಿಂಗ್ ಮೇಲೆ ಆಸಕ್ತಿ ಇದೆ. ಮುಂದೆ ಯಾವ ಕೋರ್ಸ್ ಆಯ್ಕೆ ಮಾಡಿದರೆ ಉತ್ತಮ ?-ಅಂಬಿಕಾ, ಹೊಸಕೋಟೆಉ:ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರೆ ಸುಲಭವಾಗಿ ಇಂಜಿನಿಯರಿಂಗ್ ಸೀಟು ಸಿಗುತತ್ದೆ. ಇಂಜಿನಿಯರಿಂಗ್​ನಲ್ಲಿ 30ಕ್ಕೂ ಅಧಿಕ ಕೋರ್ಸ್​ಗಳು ಇವೆ. ಇದಲ್ಲದೇ, ಪಿಯುಸಿ ಮುಗಿಸಿದವರು 2ನೇ ವರ್ಷದ ಡಿಪ್ಲೊಮೋಗೆ ಹೋಗಲು ಅವಕಾಶಗಳಿವೆ.

ಪ್ರಶ್ನೆ:ನನ್ನ ಮಗ ಪಿಸಿಎಂಸಿ ಓದುತ್ತಿದ್ದು, ಈ ವಿಷಯದಲ್ಲಿ ಮುಂದೆ ಯಾವ ಕೋರ್ಸ್ ತೆಗೆದುಕೊಳ್ಳಬಹುದು?-ರಶ್ಮಿ, ಕಲಬುರಗಿಉ:ಸಿಇಟಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದರೆ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಬಿಇ ಮಾಡಬಹುದು. ಸೆಕ್ಯೂರಿಟಿ ಸಾಫ್ಟ್​ವೇರ್ ಇಂಜಿನಿಯರಿಂಗ್​ನಲ್ಲೂ ಒಳ್ಳೆಯ ಅವಕಾಶಗಳಿವೆ.
ಪ್ರಶ್ನೆ:ಮಗ ದ್ವಿತೀಯ ಪಿಯುಸಿ ಮುಗಿಸಿದ್ದು, ಏರ್​ಫೋರ್ಸ್ ಉದ್ಯೋಗಕ್ಕೆ ಸಂಬಂಧಿಸಿದಂತೆ ಯಾವ ಕೋರ್ಸ್ ಮಾಡಬಹುದು?-ಸಿದ್ದೇಗೌಡ, ಮಂಡ್ಯಉ:ನ್ಯಾಷನಲ್ ಡಿಫೆನ್ಸ್ ಅಕಾಡೆಮಿ (ಎನ್​ಡಿಎ) ಪರೀಕ್ಷೆ ಬರೆದು ಈ ಕ್ಷೇತ್ರದಲ್ಲಿ ವ್ಯಾಸಂಗ ಮಾಡಬಹುದಾಗಿದೆ.
ಪ್ರಶ್ನೆ:ನನ್ನ ಮಗ ಎಸ್ಸೆಸ್ಸೆಲ್ಸಿ ಮುಗಿಸಿದ್ದು, ಇಆಂಡ್​ಸಿ ವಿಭಾಗದಲ್ಲಿ ಡಿಪ್ಲೊಮೋಗೆ ಸೇರಿಸಲು ಮುಂದಾಗಿದ್ದೇನೆ. ಮುಂದೆ ಯಾವ ಕ್ಷೇತ್ರದಲ್ಲಿ ಉದ್ಯೋಗ ಅವಕಾಶ ಸಿಗಬಹುದು?-ಬೀರಪ್ಪ, ರಾಯಚೂರುಉ:ಸರ್ಕಾರದ ಅಧೀನದ ಬೆಸ್ಕಾಂ ಸೇರಿ ಇನ್ನೀತರ ವಿಭಾಗದಲ್ಲಿ ಜೂನಿಯರ್ ಇಂಜಿನಿಯರ್, ಅಸಿಸ್ಟೆಂಟ್ ಇಂಜಿನಿಯರ್ ಹಾಗೂ ಖಾಸಗಿ ಕಂಪನಿಗಳಲ್ಲೂ ಹೇರಳವಾದ ಅವಕಾಶಗಳಿವೆ.
ಪ್ರಶ್ನೆ:ಡಿಪ್ಲೊಮಾ ಕೋರ್ಸ್​ಗಳ ಕುರಿತು ವಿವರಿಸಬಹುದೇ? ಹೊಸದಾಗಿ ಏನೆಲ್ಲ ಬದಲಾವಣೆಗಳಾಗಿವೆ?-ನಿಖಿಲ್ ಪ್ರಸಾದ್ಉ:ಈ ವರ್ಷದಿಂದ ಡಿಪ್ಲೊಮಾ ಕೋರ್ಸ್​ಗಳಲ್ಲಿ ಪ್ರಾಯೋಗಿಕ ವಿಷಯಕ್ಕೆ ಹೆಚ್ಚಿನ ಒತ್ತು ಕೊಡಲಾಗಿದೆ. 8ಕ್ಕೂ ಅಧಿಕ ವಿಭಾಗಗಳಲ್ಲಿ ಇಂಜಿನಿಯರಿಂಗ್ ಮಾಡಿದರೆ ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ಅವಕಾಶಗಳು ಸಿಗಬಹುದು. ಕಳೆದ ವರ್ಷದಿಂದ ಡಿಪ್ಲೊಮಾ ಪರೀಕ್ಷೆಯಲ್ಲಿ ಇಂಗ್ಲಿಷ್ ಜತೆ ಜತೆಗೆ ಕನ್ನಡವನ್ನು ಬಳಸಲು ಅವಕಾಶ ಕಲ್ಪಿಸಲಾಗಿದೆ. ಇದರಿಂದ ಡಿಪ್ಲೊಮಾ ವ್ಯಾಸಂಗ ಸುಲಭವಾಗಿದೆ.
ಪ್ರಶ್ನೆ:ಪಿಯುಸಿಯಲ್ಲಿ ಕಾಮರ್ಸ್ ವಿಷಯದಲ್ಲಿ ದ್ವಿತೀಯ ವರ್ಷದಯ ಪಿಯುಸಿ ಪರೀಕ್ಷೆ ಬರೆದಿದ್ದು, ಮುಂದೆ ಯಾವ ಅವಕಾಶಗಳಿವೆ?-ಸ್ವಾತಿ ಹಿರೇಮಠ್ ಆರ್.ಸಿ.ಜಿ. ಪಿಯು ಕಾಲೇಜುಉ:ಕಾಮರ್ಸ್ ವಿಷಯದಲ್ಲಿ ವಿಫುಲ ಅವಕಾಶಗಳಿವೆ. ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವಿಷಯಗಳ ಆಯ್ಕೆ ಮಾಡಿಕೊಳ್ಳುವುದು ಸೂಕ್ತ. ಬಿ.ಕಾಂ., ಬಿಬಿಎಂ., ಬಿಬಿಎ., ಬಿಸಿಎಸ್ ಪದವಿ ಮಾಡಬಹುದು. ಬಳಿಕ ಸ್ಪಧಾತ್ಮಕ ಪರೀಕ್ಷೆಗಳನ್ನು ಬರೆಯಬಹುದು. ಹೆಚ್ಚಿನ ಶ್ರಮವಹಿಸಿದರೆ ಸಿಎ ಮಾಡಬಹುದು.
ಪ್ರಶ್ನೆ:ನನ್ನ ತಂಗಿ ಕಾಮರ್ಸ್ ವಿಷಯದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾಳೆ. ಅಕೌಂಟ್ಸ್ ನಲ್ಲಿ ಆಸಕ್ತಿ ಇರುವುದರಿಂದ ಮುಂದೆ ಯಾವ ವಿಷಯದಲ್ಲಿ ಕಲಿತರೆ ಒಳ್ಳೆಯದು?-ಶಿಲ್ಪಾ, ಮೈಸೂರುಉ:ಬಿಕಾಂ., ಬಿಬಿಎಂ., ಬಿ.ಎಡ್ ಮಾಡಬಹುದು. ಅಕೌಂಟ್ಸ್​ನಲ್ಲಿ ಆಸಕ್ತಿ ಇದ್ದರೆ ಮುಂದೆ ಸಿಎ ಮಾಡಲು ಅವಕಾಶವಿದೆ. ನಿಮ್ಮ ಇಚ್ಚೆಗಳನ್ನು ಅವರ ಮೇಲೆ ಹೇರದೆ ಅವರ ಅಸಕ್ತಿಗೆ ಅನುಗುಣವಾಗಿ ಕಲಿಸುವುದು ಒಳ್ಳೆಯದು.
ಪ್ರಶ್ನೆ:10ನೇ ತರಗತಿ ಮುಗಿಸಿದ್ದೇನೆ ಶೇ. 98 ಅಂಕಗಳಿಸಿದ್ದೇನೆ? ನನಗೆ ಗಣಿತ ಮತ್ತು ವಿಜ್ಞಾನದಲ್ಲಿ ಆಸಕ್ತಿ ಇದೆ? ಬಿಸಿಎ ಮಾಡಬಹುದಾ?– ಕೀರ್ತಿ ರಾಯ್ಕರ್, ಗೋಕರ್ಣಉ:ಗಣಿತದಲ್ಲಿ ಆಸಕ್ತಿ ಇರುವವರು ಅದರಲ್ಲೇ ಸಂಶೋಧನೆಯನ್ನೂ ಮಾಡಬಹುದು. ಭಾರತೀಯ ವಿಜ್ಞಾನ ಸಂಸ್ಥೆ, ಟಾಟಾ ಇನ್​ಸ್ಟಿಟ್ಯೂಟ್, ಐಐಟಿ, ಚೆನ್ನೈನ ರಾಮಾನುಜ ಇನ್​ಸ್ಟಿಟ್ಯೂಟ್​ನಲ್ಲಿ ಎಂಎಸ್​ಸಿ ಇಂಟಿಗ್ರೇಟ್ ಕೋರ್ಸ್ ಮಾಡಬಹುದು. ಆಸಕ್ತಿ ಇದ್ದರೆ ಗಣಿತದಲ್ಲಿ ಉತ್ತಮ ಭವಿಷ್ಯ ಇದೆ.
ಪ್ರಶ್ನೆ:ಮಗ ಪಿಯುಸಿಯಲ್ಲಿ ಕಾಮರ್ಸ್ (ಇಬಿಸಿ) ಮಾಡಿದ್ದಾನೆ. ಭವಿಷಯದಲ್ಲಿ ಯಾವ ವಿಷಯ ತೆಗೆದುಕೊಂಡರೆ ಒಳ್ಳೆಯದು? ಪಿಯು ಮೇಲೆ ಯಾವ ಯಾವ ಅವಕಾಶಗಳಿವೆ.– ಭೀಮಪ್ಪ, ದಾವಣಗೆರೆಉ:ಕಾಮರ್ಸ್ ನಂತರ ಬಿಕಾಂ ಮೊದಲ ಆಯ್ಕೆ, ಜತೆಗೆ ಬಿಸಿಎ, ಬಿಬಿಎ, ಬೇರೆ ಬೇರೆ ಅವಕಾಶಗಳು ಇವೆ. ಮಾಡುವ ಛಲವಿದ್ದರೆ ಸಿಎ ಕೂಡ ಇದೆ. ಮಗನ ಆಸಕ್ತಿಗೆ ಪೂರಕವಾಗಿ ಶಿಕ್ಷಣ ಕೊಡಿಸಿ. ಬಿಸಿಎ ಮಾಡಬಹುದು. ಬಳಿಕ ಎಂಸಿಎ ಮಾಡಿದರೆ ಸಿಎ ಮಾಡಿದಷ್ಟೇ ವೇತನ ಪಡೆಯಬಹುದು. ಯಾವುದೇ ಕೋರ್ಸ್ ತೆಗೆದುಕೊಂಡರೂ ಆಕಸ್ತಿಯಿಂದ ಕಲಿಯುವುದು ಮುಖ್ಯವಾಗಿರುತ್ತದೆ. ಕಾಮರ್ಸ್​ನಲ್ಲಿ ಪಿಯು ನಂತರ ಬಿಎ, ಬಿಕಾಂ, ಬಿ.ಎಡ್, ಸ್ಪರ್ಧಾತ್ಮಕ ಪರೀಕ್ಷೆ ಬರೆಯಬಹುದು, ಕೆಎಎಸ್ ಮಾಡಬಹುದು. ಬ್ಯಾಂಕಿಂಗ್ ಪರೀಕ್ಷೆ ಬರೆಯಬಹುದು.
ಪ್ರಶ್ನೆ:ಮಗಳು ಪಿಯುಸಿ ಪ್ರಥಮ ವರ್ಷದ ಪಿಸಿಎಂಬಿ ಯಲ್ಲಿ ಮೂರು ವಿಷಯಗಳಲ್ಲಿ ಫೇಲ್ ಆಗಿದ್ದಾಳೆ. ಮುಂದೇನು ಮಾಡಬೇಕು?-ಕೋಮಲಾಉ:ಫೇಲ್ ಆದ ಕೂಡಲೇ ಆತಂಕ ಪಡುವ ಅಗತ್ಯವಿಲ್ಲ. ಇನ್ನೂ ಸಮಯ ಇದೆ. ಪೂರಕ ಪರೀಕ್ಷೆಯಲ್ಲಿ ಬರೆಯುವ ಅವಕಾಶ ಇದೆ. ಹಾಗಾಗಿ ಯೋಚನೆ ಬಿಟ್ಟು ಈಗಿನಿಂದಲೇ ಅಭ್ಯಾಸ ಮಾಡಿದರೆ ಪರೀಕ್ಷೆ ಬರೆದು ಉತ್ತಮ ಅಂಕಗಳನ್ನು ಪಡೆದು ದ್ವಿತೀಯ ಪಿಯು ತರಗತಿಗೆ ಹೋಗಬಹುದು.
ಪ್ರಶ್ನೆ:ನನ್ನ ಸಹೋದರಿ ವಿಜ್ಞಾನದಲ್ಲಿ ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದಾಳೆ. ಇಂಜಿನಿಯರಿಂಗ್ ಮಾಡಲು ಏನು ಮಾಡಬೇಕು?-ಮಹಮ್ಮದ್ ಆಲಿ, ಬಳ್ಳಾರಿಉ:ಇಂಜಿನಿಯರಿಂಗ್ ಮಾಡಲು ಸಿಇಟಿ ಪರೀಕ್ಷೆ ಬರೆದು ಉತ್ತಮ ಅಂಕ ಗಳಿಸಿದರೆ ಸರ್ಕಾರಿ ಸೀಟು ದೊರೆಯಲಿದೆ. ಜತೆಗೆ ಇಂಜಿನಿಯರಿಂಗ್ ನಲ್ಲಿ ಬಹಳಷ್ಟು ಅವಕಾಶಗಳಿದ್ದು, ಸಿವಿಲ್, ಮೆಕ್ಯಾನಿಕಲ್, ಎಲೆಕ್ಟ್ರಿಕಲ್, ಕಂಪ್ಯೂಟರ್ ಸೈನ್ಸ್ ಸೇರಿ ಹಲವು ಅವಕಾಶಗಳಿವೆ.

ಪ್ರಶ್ನೆ:ಮಗ ಕಲಾ ವಿಭಾಗದಲ್ಲಿ ಪಿಯು ಪರೀಕ್ಷೆ ಬರೆದಿದ್ದಾನೆ. ಕನ್ನಡ ಚೆನ್ನಾಗಿ ಕಲಿತಿರುವುದರಿಂದ ಪದವಿಯಲ್ಲಿ ಎಚ್​ಇಕೆ ವಿಷಯ ತೆಗೆದುಕೊಳ್ಳಲು ಅವರ ಉಪನ್ಯಾಸಕರು ಹೇಳುತ್ತಿದ್ದಾರೆ. ಕನ್ನಡ ವಿಷಯದಲ್ಲಿ ಕಲಿತರೆ ಕರ್ನಾಟಕಕ್ಕೆ ಸೀಮಿತ ಆಗುವುದಿಲ್ಲವೇ?– ಇಮ್ರಾನ್ ಪಾಷಾ, ಅಮರಾವತಿಉ:ಕನ್ನಡ ವಿಷಯದಲ್ಲಿ ಕಲಿಯಬಾರದು ಎಂದಿಲ್ಲ. ಅದರಲ್ಲೂ ವಿಫುಲ ಅವಕಾಶಗಳಿವೆ. ಕನ್ನಡ ವಿಷಯ ಚೆನ್ನಾಗಿ ಕಲಿತಿರುವುದರಿಂದ ಅವರು ಉಪನ್ಯಾಸಕರು ಹಾಗೇ ಸೂಚಿಸಿದ್ದಾರೆ. ವಿದ್ಯಾರ್ಥಿಯ ಆಕಸ್ತಿ ಏನು ಎಂದು ತಿಳಿದು ಅದನ್ನು ಕಲಿಯಲು ಅವಕಾಶ ಮಾಡಿಕೊಡಿ.
ಪ್ರಶ್ನೆ:ನಾನೂ ಈಗ ಹತ್ತನೇ ತರಗತಿಯಲ್ಲಿ ಕಲಿಯುತ್ತಿದ್ದೇನೆ. ನನಗೆ ಗಣಿದಲ್ಲಿ ಆಸಕ್ತಿ ಇರುವುದರಿಂದ ಯಾವ ವಿಷಯ ಆಯ್ಕೆ ಮಾಡಿಕೊಂಡರೆ ಒಳ್ಳೆಯದು?– ಶಾಲಿನಿ, ಬೆಂಗಳೂರುಉ:ಗಣಿತದಲ್ಲಿ ಆಸಕ್ತಿ ಇರುವುದರಿಂದ ಪಿಯುಸಿಯಲ್ಲಿ ಪಿಸಿಎಂಬಿ, ನಂತರ ಬಿಎಸ್​ಸಿ ಹಾಗೂ ಎಂಎಸ್​ಸಿ ಮಾಡಬಹುದು. ಇದರಿಂದ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ, ಚೆನ್ನೈನ ರಾಮಾನುಜ ಇನ್​ಸ್ಟಿಟ್ಯೂಷನ್​ಗಳಲ್ಲಿ ಸಂಶೋಧನೆ ಮಾಡಲು ಒಳ್ಳೆಯ ಅವಕಾಶಗಳಿವೆ.
ಪ್ರಶ್ನೆ:ಸಹೋದರಿ ಎಸ್​ಎಸ್​ಎಲ್​ಸಿಯಲ್ಲಿ ಶೇ. 89.79 ಅಂಕ ಗಳಿಸಿದ್ದಾನೆ. ಊರಿನಲ್ಲೇ ಹೊಸದಾಗಿ ಕಾಮರ್ಸ್ ಕಾಲೇಜು ಪ್ರಾರಂಭ ಆಗುತ್ತಿದೆ. ಹಾಗಾಗಿ ಯಾವ ಕೋರ್ಸ್ ಮಾಡಿಸಿದರೆ ಒಳ್ಳೆಯದು?– ಮಹೇಶ್, ಕೊಪ್ಪಳಉ:ಒಳ್ಳೆಯ ಅಂಕಗಳಿಸಿರುವುದರಿಂದ ವಿಜ್ಞಾನ ಮಾಡಿದರೆ ಒಳ್ಳೆಯದು. ಆವರಿಗೆ ಕಾಮರ್ಸ್​ನಲ್ಲಿ ಆಸಕ್ತಿ ಇರುವುದರಿಂದ ಅದನ್ನೇ ಕಲಿಸಿ. ಕಾಮರ್ಸ್​ನಲ್ಲಿ ಗಣಿತ ತುಂಬಾ ಕಷ್ಟವೇನು ಇರುವುದಿಲ್ಲ. ಡಿಪ್ಲೋಮಾ ಸಹ ಮಾಡಬಹುದು.
ಪ್ರಶ್ನೆ:ಪಿಯುಸಿಯಲ್ಲಿ ವಿಜ್ಞಾನ ಮಾಡಿದ್ದಾರೆ. ಮುಂದೆ ಪ್ಯಾರಾಮೆಡಿಕಲ್ ಮಾಡಿಸಬಹುದಾ?– ಪವಿತ್ರಾ, ಕೊಪ್ಪಳಉ:ಪ್ಯಾರಾ ಮೆಡಿಕಲ್ ಮಾಡಬಹುದು. ಆದರೆ ನಿಮ್ಮ ಹೇರಿಕೆ ಇರಬಾರದು. ವಿದ್ಯಾರ್ಥಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆ ಎಂಬುದನ್ನು ನೋಡಿ ಆ ವಿಷಯದಲ್ಲಿ ಕಲಿಯಲು ಅವಕಾಶ ಮಾಡಿಕೊಡಿ.
ಪ್ರಶ್ನೆ:ಮಗ ಎಸ್​ಎಸ್​ಎಲ್ ಸಿ ಮುಗಿಸಿದ್ದಾರೆ. ವಿಜ್ಞಾನ ಕೊಡಿಸಿದರೆ ಒಳ್ಳೆಯದಾ?– ಮಹೇಶ್, ಚಿತ್ರದುರ್ಗಉ:ವಿಜ್ಞಾನ ಮತ್ತು ಗಣಿತದಲ್ಲಿ ಉತ್ತಮ ಅಂಕ ಗಳಿಸಿದ್ದರೆ. ವಿಜ್ಞಾನ ವಿಷಯ ಕೊಡಿಸಿ. ಇಲ್ಲವಾದರೆ ಅವರ ಆಸಕ್ತಿಗೆ ಅನುಗುಣವಾಗಿ ಕಾಮರ್ಸ್ ಅಥವಾ ಆರ್ಟ್ಸ್ ಇಲ್ಲವೆ ಡಿಪ್ಲೋಮಾ ಮಾಡಬಹುದು.
ಪ್ರಶ್ನೆ:ಮಗ ಎಸ್​ಎಸ್​ಎಲ್​ಸಿಯಲ್ಲಿ ಶೇ. 87 ಅಂಕ ಗಳಿಸಿದ್ದಾನೆ. ಪ್ಯಾರಾಮೆಡಿಕಲ್ ಮಾಡಬೇಕು ಎನ್ನುತ್ತಿದ್ದಾನೆ? ಯಾವ ಕೋರ್ಸ್ ತೆಗೆದುಕೊಳ್ಳಬೇಕು? ಕಾಮರ್ಸ್ ಕೊಡಿಸಬಹುದಾ?ಉ:ಪ್ಯಾರಾಮೆಡಿಕಲ್ ಮಾಡಲು ವಿಜ್ಞಾನ ವಿಷಯದಲ್ಲಿ ಕಲಿತರೆ ಒಳ್ಳೆಯದು. ಇಲ್ಲವೆ ಡಿಪ್ಲೋಮಾ ಕೋರ್ಸ್ ಸಹ ಮಾಡಬಹುದು. ಕಾಮರ್ಸ್ ತೆಗೆದುಕೊಂಡು ಪ್ಯಾರಾಮೆಡಿಕಲ್ ಮಾಡುವುದು ಸೂಕ್ತವಲ್ಲ. ವಿಜ್ಞಾನ ತೆಗೆದುಕೊಳ್ಳುವುದು ಒಳ್ಳೆಯದು. ಇಲ್ಲವೇ ಕಾಮರ್ಸ್ ನಲ್ಲಿ ಬಿ.ಕಾಂ. ಬಿಬಿಎ, ಸಿಎ ಮಾಡಬಹುದು.
ಪ್ರಶ್ನೆ:ಕಾಮರ್ಸ್​ನಲ್ಲಿ ಪಿಯುಸಿ ಪರೀಕ್ಷೆ ಬರೆದಿದ್ದೇನೆ. ನನಗೆ ಈ ವಿಷಯದಲ್ಲಿ ಮುಂದೆ ಓದಲು ಆಸಕ್ತಿ ಇಲ್ಲ. ಹಾಗಾಗಿ ಡಿಪ್ಲೋಮಾ ಮಾಡಬಹುದಾ?– ನವೀನ್, ಶಿವಮೊಗ್ಗಉ:ಪದವಿಯಲ್ಲಿ ಮುಂದುವರೆಯಲು ಆಸಕ್ತಿ ಇಲ್ಲದಿದ್ದರೆ ಎಸ್​ಎಸ್​ಎಲ್​ಸಿ ಅಂಕಗಳ ಆಧಾರದ ಮೇಲೆ ಡಿಪ್ಲೋಮಾ ಮಾಡಬಹುದು. ಹರಿಹರಿ, ಚಿತ್ರದುರ್ಗ, ಹೊಸದುರ್ಗ, ಶಿರಾದಲ್ಲಿ ಸರ್ಕಾರಿ ಡಿಪ್ಲೋಮಾ ಕಾಲೇಜುಗಳಿದ್ದು, ಕಡಿಮೆ ಶುಲ್ಕದಲ್ಲಿ ಕಲಿಯಬಹುದು. ಚೆನ್ನಾಗಿ ಆಸಕ್ತಿಯಿಂದ ಓದಿದರೆ ಉದ್ಯೋಗ ಪಡೆಯಬಹುದು.
ಎಸ್ಸೆಸ್ಸೆಲ್ಸಿ-ಪಿಯುಸಿ ನಂತರ ಮುಂದೇನು? ಒತ್ತಡ ಹೇರಬೇಡಿ, ಅವರಿಚ್ಛೆಯ ಕೋರ್ಸ್​ಗೆ ಸೇರಿಸಿ…

ಮೊದಲ ಪ್ರಯತ್ನದಲ್ಲೇ UPSCಯಲ್ಲಿ 31ನೇ ರ‍್ಯಾಂಕ್ ಪಡೆದ ಕನ್ನಡಿಗ! ಸಾಧನೆ ಬಗ್ಗೆ ಅವಿನಾಶ್​ ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 5 =
Remember me
