ಕೀರ್ತಿನಾರಾಯಣ ಸಿ. ಬೆಂಗಳೂರುಫೇಸ್​ಬುಕ್, ಇನ್​ಸ್ಟಾಗ್ರಾಂ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಗಳ ಹೆಸರಲ್ಲಿ ನಕಲಿ ಖಾತೆಗಳನ್ನು ಸೃಷ್ಟಿಸಿ ಹಣ ಸುಲಿಗೆ ಮಾಡುತ್ತಿದ್ದ ಸೈಬರ್ ವಂಚಕರ ಜಾಲವೀಗ ಹೊಸ ತಂತ್ರದೊಂದಿಗೆ ‘ವಾಟ್ಸ್​ಆಪ್ ಸ್ಕಾ್ಯಮ್ ಶುರುವಿಟ್ಟುಕೊಂಡಿದೆ. ಉನ್ನತ ಹುದ್ದೆಗಳನ್ನು ಅಲಂಕರಿಸಿರುವ ಐಎಎಸ್, ಐಪಿಎಸ್ ಅಧಿಕಾರಿಗಳು ಸೇರಿ ವಿವಿಧ ಇಲಾಖೆಗಳ ಮುಖ್ಯಸ್ಥರ ಫೋಟೋಗಳನ್ನೇ ಕದ್ದು, ಅದನ್ನೇ ವಾಟ್ಸ್​ಆಪ್ ಡಿಪಿಯನ್ನಾಗಿಸಿ (ಡಿಸ್ಪೆ್ಲೕಪಿಕ್ಚರ್) ತುರ್ತು ಅಗತ್ಯದ ಹೆಸರಲ್ಲಿ ಹಣ ವಸೂಲಿ ಮಾಡುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಜಾಸ್ತಿಯಾಗಿವೆ.
ಬೆಂಗಳೂರು ಪೊಲೀಸ್ ಕಮಿಷನರ್ ಬಿ. ದಯಾನಂದ್, ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ.ಎ. ದಯಾನಂದ್, ರಾಷ್ಟ್ರೀಯ ವೈದ್ಯಕೀಯ ಆಯೋಗದ (ಎನ್​ಎಂಸಿ) ಅಧ್ಯಕ್ಷ ಡಾ.ಬಿ.ಎನ್. ಗಂಗಾಧರ್ ಹಾಗೂ ಹಲವು ಜಿಲ್ಲಾ ಎಸ್ಪಿಗಳ ಹೆಸರಲ್ಲಿ ವಾಟ್ಸ್​ಆಪ್ ಖಾತೆ ಸೃಷ್ಟಿಸಿ ಹಣ ವಸೂಲಿ ಮಾಡಿರುವ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರ ಬೆನ್ನಲ್ಲೇ ಇದೀಗ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಎ.ಎಂ. ಯೋಗೀಶ್ ಹೆಸರಲ್ಲಿ ಇಲಾಖೆಯ ಹಲವು ಅಧಿಕಾರಿಗಳಿಗೆ ವಾಟ್ಸ್​ಆಪ್ ಕಾಲ್ ಹಾಗೂ ಸಂದೇಶವನ್ನು ಕಳುಹಿಸಿ ಹಣ ಸುಲಿಗೆಗೆ ಯತ್ನಿಸಿರುವ ಪ್ರಕರಣ ವರದಿಯಾಗಿದೆ.
ಇಲಾಖೆ ಮುಖ್ಯಸ್ಥರ ಹೆಸರು ಹಾಗೂ ಅವರ ಹುದ್ದೆ ವಿವರ ಹಾಗೂ ಫೋಟೋವನ್ನು ವಾಟ್ಸ್​ಆಪ್ ನಕಲಿ ಖಾತೆ ಡಿಪಿ ಮಾಡಿಕೊಳ್ಳುತ್ತಿದ್ದಾರೆ. ಇಲಾಖೆಯ ಕೆಳಹಂತದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಂರ್ಪಸಿ ದೊಡ್ಡಮಟ್ಟದಲ್ಲೇ ಹಣ ಕೇಳುತ್ತಿದ್ದಾರೆ.
30 ಸಾವಿರ ರೂ. ಕೊಡಿ, 1 ಗಂಟೆಯಲ್ಲೇ ಕೊಡ್ತೀನಿ!:ಐಎಎಸ್ ಅಧಿಕಾರಿ ಎ.ಎಂ. ಯೋಗೀಶ್ ಸಭೆಯಲ್ಲಿರುವ ಫೋಟೋ ಸಂಗ್ರಹಿಸಿ, ಅದನ್ನೇ ಡಿಪಿಯನ್ನಾಗಿಸಿದ್ದಾರೆ. ಯೋಗೀಶ್ ಎ.ಎಂ. ಐಎಎಸ್ ಎಂದು ಬರೆದುಕೊಂಡು, 9015403767 ಮೊಬೈಲ್ ನಂಬರ್​ನಿಂದ ಜ.14ರಂದು ಇಲಾಖೆಯ ಹಲವು ಅಧಿಕಾರಿಗಳಿಗೆ ವಾಟ್ಸ್​ಆಪ್ ಕರೆ ಹಾಗೂ ಸಂದೇಶ ಕಳುಹಿಸಿದ್ದಾರೆ. ನಾನೊಂದು ನಂಬರ್ ಕಳುಹಿಸುತ್ತೇನೆ. ತಕ್ಷಣವೇ 30 ಸಾವಿರ ರೂ. ಟ್ರಾನ್ಸ್​ಫರ್ ಮಾಡಿ, ಒಂದೇ ಗಂಟೆಯಲ್ಲಿ ವಾಪಸ್ ಕೊಡುತ್ತೇನೆ ಎಂದು ಸಂದೇಶ ಕಳುಹಿಸಿದ್ದಾನೆ. ಕೆಲವರಿಗೆ ವಾಟ್ಸ್​ಆಪ್ ಕಾಲ್ ಮಾಡಿದ್ದು, ಮರಳಿ ಕರೆ ಮಾಡಿದರೆ ಸ್ವೀಕರಿಸಿಲ್ಲ. ನಂತರ ಹಣ ಕೇಳಿ ಸಂದೇಶ ಕಳುಹಿಸಿದ್ದಾನೆ. ಕೆಲವರಿಗೆ ಅನುಮಾನ ಬಂದು ಆಯುಕ್ತರಿಗೆ ತಿಳಿಸಿದ್ದಾರೆ. ಜ.15ರಂದು ನಂಬರ್ ಪತ್ತೆ ಹಚ್ಚಿದಾಗ ಹಿಮಾಚಲ ಪ್ರದೇಶದ ಮಸ್ಸೂರಿ-ದೆಹಲಿ ಹೆದ್ದಾರಿಯಲ್ಲಿರುವ ಹೋಟೆಲ್​ನಿಂದ ಆಕ್ಟೀವ್ ಆಗಿರುವುದು ಗೊತ್ತಾಗಿದೆ.
ನನ್ನ ಹೆಸರಲ್ಲಿ ಹಣ ಕೇಳಿ ಸಂದೇಶ ಕಳುಹಿಸಿರುವುದನ್ನು ಆರ್​ಟಿಒ ಒಬ್ಬರು ಸ್ಕ್ರೀನ್​ಶಾಟ್ ತೆಗೆದು ಗಮನಕ್ಕೆ ತಂದರು. ಕೂಡಲೇ ಎಲ್ಲ ಅಧಿಕಾರಿಗಳಿಗೆ ತಿಳಿಸಿ, ಆ ನಂಬರ್​ಗೆ ಪ್ರತಿಕ್ರಿಯಿಸಬೇಡಿ ಎಂದು ಸೂಚನೆ ಕೊಟ್ಟೆ. ಆ ನಂಬರ್ ಎಲ್ಲಿಂದ ಕಾರ್ಯಾಚರಣೆ ಆಗುತ್ತಿದೆ ಎಂಬುದನ್ನು ಪತ್ತೆಹಚ್ಚಲಾಗಿದೆ.
| ಎ.ಎಂ.ಯೋಗೀಶ್ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 1 =
Remember me
