ಬೆಂಗಳೂರು:ಫೇಸ್​ಬುಕ್​ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬನಿಗೆ ವಾಟ್ಸ್​ಆ್ಯಪ್​ ವಿಡಿಯೋ ಕರೆ ಮಾಡಿದ್ದ ಯುವತಿ ನಗ್ನವಾಗಿದ್ದಳು. ಕರೆ ಸ್ಥಗಿತಗೊಳಿಸಿದರೂ ಪದೇಪದೆ ಕರೆ ಮಾಡಿದ ಆಕೆಗೆ ಬೆದರಿದ ಆತನೀಗ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದಾನೆ.
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿರುವ 38 ವರ್ಷದ ವ್ಯಕ್ತಿಗೆ ಕೆಲ ದಿನಗಳ ಹಿಂದೆ ಫೇಸ್​ಬುಕ್​ನಲ್ಲಿ ರಿಯಾ ಎಂಬ ಯುವತಿ ಸ್ನೇಹ ಬೆಳೆಸಿದ್ದಳು. ಫ್ಯಾಷನ್​ ಡಿಸೈನರ್​ ಕೆಲಸ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಳು. ವಿನ್ಯಾಸ ಮಾಡಿರುವ ವಸ್ತ್ರಗಳ ಫೋಟೋ ಕಳುಹಿಸುವುದಾಗಿ ಫೋನ್​ ನಂಬರ್​ ಪಡೆದಿದ್ದಳು.
ಅ.28ರಂದು ವ್ಯಕ್ತಿಗೆ ಯುವತಿಯಿಂದ ವ್ಯಾಟ್ಸ್​ಆ್ಯಪ್​ ವಿಡಿಯೋ ಕರೆ ಬಂದಿದ್ದು, ಅದನ್ನು ಸ್ವೀಕರಿಸಿದ್ದರು. ಆ ವೇಳೆ ನಗ್ನವಾಗಿದ್ದ ಯುವತಿ ಅಸಭ್ಯವಾಗಿ ವರ್ತಿಸಿದ್ದಾಳೆ. ಆ ವಿಡಿಯೋವನ್ನು ಆಕೆ ರೆಕಾರ್ಡ್​ ಮಾಡಿಕೊಂಡಿದ್ದಾಳೆ. ಗಾಬರಿಗೊಂಡ ವ್ಯಕ್ತಿ, ವಿಡಿಯೋ ಕರೆಯನ್ನು ಸ್ಥಗಿತಗೊಳಿಸಿದ್ದರು. ಮತ್ತೆ ಕರೆ ಮಾಡಿದ ಯುವತಿ, ಕೂಡಲೇ 21 ಸಾವಿರ ರೂ. ಸಂದಾಯ ಮಾಡಬೇಕು. ಇಲ್ಲವಾದರೆ ಅಶ್ಲೀಲ ವಿಡಿಯೋವನ್ನು ಫೇಸ್​ಬುಕ್​ಗೆ ಅಪ್ಲೋಡ್​ ಮಾಡುವುದಾಗಿ ಬೆದರಿಕೆ ಹಾಕಿದ್ದಳು. ಹಣ ಕೊಡಲು ನಿರಾಕರಿಸಿದಾಗ ವಿಡಿಯೋವನ್ನು ಆತನ ಸ್ನೇಹಿತರಿಗೆ ಕಳುಹಿಸಿದ್ದಳು.
ನಗ್ನವಾಗಿ ಇದ್ದಕೊಂಡು ವಿಡಿಯೋ ಕರೆ ಮಾಡಿ ಅಸಭ್ಯವಾಗಿ ವರ್ತಿಸಿದ್ದಲ್ಲದೆ ಹಣಕ್ಕಾಗಿ ಬ್ಲ್ಯಾಕ್​ಮೇಲ್​ ಮಾಡಿದ ಯುವತಿ ವಿರುದ್ಧ ಖಾಸಗಿ ಕಂಪನಿ ಉದ್ಯೋಗಿ ಕೊಟ್ಟ ದೂರಿನ ಮೇರೆಗೆ ಕೇಂದ್ರ ವಿಭಾಗದ ಸಿಇಎನ್​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ತನ್ನದೇ ಸೆಕ್ಸ್​ ವಿಡಿಯೋ ಮಾರುತ್ತಿದ್ದ ಬಸ್​ ಕಂಡಕ್ಟರ್​! ಪರಸ್ತ್ರೀಯರೊಂದಿಗೂ ಲೈಂಗಿಕ ಸಂಪರ್ಕ, 65 ವಿಡಿಯೋ ವಶ

ತುಂಬಾ ಆಸೆಯೊಂದಿಗೆ ಬಂದ ಗೆಳತಿಯನ್ನು ರಾತ್ರೋರಾತ್ರಿ ಕಾರಿನಿಂದ ಕೆಳಗಿಳಿಸಿ ಮಾಡಬಾರದ್ದನ್ನು ಮಾಡಿದ್ಲು!

ಮಾವ-ಸೊಸೆ ನಡುವೆ ಅಕ್ರಮ ಸಂಬಂಧ, ಗುಟ್ಟು ರಟ್ಟಾಗುತ್ತಿದ್ದಂತೆ ನಡೆಯಿತು ಭೀಕರ ಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 1 =
Remember me
